Video Viral: ಅಭಿಮಾನಿಯನ್ನು ವೇದಿಕೆ ಮೇಲೆ ಕರೆದು ಮುಖದ ಮೇಲೆ ಮೂತ್ರ ಮಾಡಿದ ಖ್ಯಾತ ಗಾಯಕಿ!

Sophia Urista: ಸೋಫಿಯಾ ಉರಿಸ್ಟಾ (Sophia Urista) ಪ್ರಸಿದ್ಧ ಗಾಯಕಿ ಮಾತ್ರವಲ್ಲದೆ, ಗೀತರಚನೆಕಾರರು ಕೂಡ ಹೌದು. ಪ್ರದರ್ಶನದ ಸಮಯದಲ್ಲಿ ಅಭಿಮಾನಿಯ ಮುಖದ ಮೇಲೆ ಮೂತ್ರ ವಿಸರ್ಜನೆ (urinated) ಮಾಡಿದ್ದಾರೆ. ಈ ವೀಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗಿದೆ.

ಸೋಫಿಯಾ ಉರಿಸ್ಟಾ

ಸೋಫಿಯಾ ಉರಿಸ್ಟಾ

  • Share this:
    ಖ್ಯಾತ ಗಾಯಕಿಯೊಬ್ಬರು ಅಭಿಮಾನಿಯ ಮುಖದ ಮೇಲೆ ಮೂತ್ರ ಮಾಡಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ (America) ಮೂಲದ ಗಾಯಕಿ (Singer) ಸೋಫಿಯಾ ಉರಿಸ್ಟಾ (Sophia Urista) ಅವರು ಲೈವ್ ಕನ್ಸರ್ಟ್ (live concert) ವೇಳೆ ಅಭಿಮಾನಿಯ ಎದುರು ಕೆಟ್ಟ ವರ್ತನೆ ತೋರಿಸಿದ್ದಾರೆ. ಸದ್ಯ ಎಲ್ಲೆಡೆ ಟೀಕೆಗೆ ಗುರಿಯಾಗಿರುವ ಗಾಯಕಿ ತನ್ನ ಅವಿವೇಕದ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ.

    ಸೋಫಿಯಾ ಉರಿಸ್ಟಾ (Sophia Urista) ಪ್ರಸಿದ್ಧ ಗಾಯಕಿ ಮಾತ್ರವಲ್ಲದೆ, ಗೀತರಚನೆಕಾರರು ಕೂಡ ಹೌದು. ಪ್ರದರ್ಶನದ ಸಮಯದಲ್ಲಿ ಅಭಿಮಾನಿಯ ಮುಖದ ಮೇಲೆ ಮೂತ್ರ ವಿಸರ್ಜನೆ (urinated) ಮಾಡಿದ್ದಾರೆ. ಈ ವೀಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗಿದೆ.

    ಅಭಿಮಾನಿಯನ್ನು ವೇದಿಕೆಯ ಮೇಲೆ ಕರೆದು ಮೂತ್ರ ಮಾಡಿದರು

    ಗಾಯಕಿ ಸೋಫಿಯಾ ಉರಿಸ್ಟಾ ಕೆಲವು ದಿನಗಳ ಹಿಂದೆ ಲೈವ್ ಕನ್ಸರ್ಟ್ ಸಮಯದಲ್ಲಿ ತನ್ನ ಪುರುಷ ಅಭಿಮಾನಿಯೊಬ್ಬರನ್ನು ವೇದಿಕೆಗೆ ಕರೆದರು. ಅವನನ್ನು ಮಲಗಿಸಿದ ನಂತರ ಅವನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದರು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಜನರು ಆಕ್ರೋಶಗೊಂಡು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಇದರ ನಂತರ ಸೋಫಿಯಾ ಅಂತಿಮವಾಗಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.



    ಕ್ಷಮೆ ಕೋರಿದ ಗಾಯಕಿ

    ಸೋಫಿಯಾ ಉರಿಸ್ಟಾ ತನ್ನ ಇನ್ಸ್ಟಾಗ್ರಾಮ್​ನಲ್ಲಿ ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಬರೆದಿದ್ದಾರೆ. ಯಾವಾಗಲೂ ವೇದಿಕೆಯಲ್ಲಿ ತನ್ನ ಮಿತಿಯೊಳಗೆ ಇರುರುವ ಸೋಫಿಯಾ ಆಘಾತಕಾರಿ ವರ್ತನೆಗಳನ್ನು ಮಾಡಲು ಇಷ್ಟಪಡುವುದಿಲ್ಲ. ಆದರೀಗ ಜನರ ಗಮನ ಸೆಳೆಯಲು ಅಭಿಮಾನಿಯನ್ನು ವೇದಿಕೆಗೆ ಕರೆದು ಆತನ ಮುಖದ ಮೇಲೆ ಮೂತ್ರ ಮಾಡಿದ್ದಾಳೆ. ಸೋಫಿಯಾ ತನ್ನ ಸಂಗೀತದ ಮೂಲಕ ಮತ್ತು ಈ ಘಟನೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.



    ಪ್ರಚಾರಕ್ಕೆ ಹೀಗೆಲ್ಲಾ ಮಾಡೋದಾ?

    ಗಾಯಕಿ ಜೊತೆಗಿರುವ ಬ್ಯಾಂಡ್ 'ಬ್ರಾಸ್ ಎಗೇನ್ಸ್ಟ್' ಕೂಡ ಈ ಸಂಪೂರ್ಣ ವಿಷಯದ ಬಗ್ಗೆ ಕ್ಷಮೆಯಾಚಿಸಿದೆ. ಸೋಫಿಯಾ ತುಂಬಾ ಉತ್ಸುಕಳಾಗಿದ್ದರು ಎಂದು ತಂಡ ಹೇಳಿದೆ. ಆದರೆ ಆಕೆಯಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ನಮ್ಮ ಮುಮದಿನ ಪ್ರದರ್ಶನದಲ್ಲಿ ನೀವು ಇಂತಹ ಘಟನೆಯನ್ನು ಎಂದಿಗೂ ನೋಡುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ, ಈ ಸಂಪೂರ್ಣ ಘಟನೆಯು ಅನಿರೀಕ್ಷಿತವಾಗಿದೆ ಎಂದಿದ್ದಾರೆ.
    Published by:Harshith AS
    First published: