ಕಣ್ಣು ಹೊಡಿಯಾಕಾ.. ಮೊನ್ನೆ ಕಲಿತೀನಿ.. ಈ ಹಾಡು(Song) ಕನ್ನಡದಲ್ಲಿ ಕೇಳಿದವರಿಗೆ ಮಂಗ್ಲಿ(Mangli) ಬಗ್ಗೆ ಹೇಳಬೇಕಿಲ್ಲ. ಖ್ಯಾತ ಗಾಯಕಿ ಮಂಗ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ(Kannada) ಮತ್ತು ಬೇರೆಬೇರೆ ಭಾಷೆಯ ಚಿತ್ರಗಳಲ್ಲಿ ಹಾಡುವುದರ ಮೂಲಕ ದೇಶದಲ್ಲಿ ಅಪಾರವಾದ ಅಭಿಮಾನಿ(Fans)ಗಳ ಗಳಿಸಿಕೊಂಡ ಗಾಯಕಿ ಅಂದರೆ ಅದು ಮಂಗ್ಲಿ. ಇತ್ತೀಚೆಗೆ ಪುಷ್ಪ ಕನ್ನಡ ಸಿನಿಮಾದಲ್ಲಿ ಹೂಂ ಅಂತಿಯಾ ಮಾಮಾ.. ಹೂಂ ಹೂಂ ಅಂತಿಯಾ ಅನ್ನುವ ಹಾಡು ಹಾಡಿ ಮತ್ತಷ್ಟು ಸೌಂಡ್(Sound) ಮಾಡುತ್ತಿದ್ದಾರೆ. ತಮ್ಮ ಸುಂದರ ಕಂಠದ ಮೂಲಕ ಮಂಗ್ಲಿ ಸಖತ್ ಫೇಮಸ್ ಆಗಿದ್ದಾರೆ. ಕನ್ನಡಿಗರಿಗೆ ರಾಬರ್ಟ್(Robert) ಚಿತ್ರದ ಹಾಡನ್ನ ಹಾಡುವುದರ ಮೂಲಕ ಹತ್ತಿರವಾಗಿದ್ದರು. ಗಾಯಕಿ ಮಂಗ್ಲಿ ಅವರು ಸದ್ಯ ಕನ್ನಡ ಕೆಲವು ಚಿತ್ರಗಳಿಗೆ ಹಾಡನ್ನ ಹಾಡನ್ನ ಸದ್ಯ ಅವರ ಅಭಿಮಾನಿ ಬಳಗ ಇನ್ನಷ್ಟು ಜಾಸ್ತಿ ಆಗಿದೆ ಎಂದು ಹೇಳಬಹುದು. ಅವರು ಹೋದಲೆಲ್ಲಾ ಅವರ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಒಂದೇ ಒಂದು ಸೆಲ್ಫಿ(Selfie) ತೆಗೆದುಕೊಳ್ಳಲು ಹರಸಾಹಸ ಪಡುತ್ತಾರೆ. ಹೀಗೆ ಮಂಗ್ಲಿ ಅವರನ್ನು ಸೆಲ್ಫಿ ಕೇಳಿಕೊಂಡು ಬಂದ ಯುವಕರು ಕಿರಿಕ್ ಮಾಡಿದ್ದಾರೆ. ಗಾಯಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗೆ ಮಾಡಿದರವನ್ನು ಅಟ್ಟಾಡಿಸಿಕೊಂಡು ಹೋಗಿ ಗಾಯಕಿ ವಾರ್ನಿಂಗ್(Warning) ಕೊಟ್ಟಿದ್ದಾರೆ.
ಸೆಲ್ಫಿಗಾಗಿ ಮಂಗ್ಲಿಗೆ ಕಾಟ ಕೊಟ್ಟ ಯುವಕತು
ಖ್ಯಾತ ಗಾಯಕಿ ಮಂಗ್ಲಿ ಅವರಿಗೆ ಯುವಕರ ಗುಂಪೊಂದು ಟಾರ್ಚರ್ ಕೊಟ್ಟಿದೆ.
ಈ ವರ್ತನೆ ಮಂಗ್ಲಿ ಅವರಿಗೆ ಬಹಳ ಬೇಸರವನ್ನ ಉಂಟುಮಾಡಿದೆ. ಇದು ಮಂಗ್ಲಿ ಅವರ ಕೋಪಕ್ಕೆ ಕಾರಣವಾಗಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಜನರು ಕೂಡ ಇದಕ್ಕೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಮಂಗ್ಲಿ ಅವರಿಗೆ ಅಪಾರವಾದ ಅಭಿಮಾನಿಗಳು ಇದ್ದು ಅವರು ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬೀಳುತ್ತಾರೆ. ಹೀಗೆ ಫೋಟೋ ಕೇಳಿಕೊಂಡು ಬಂದು ಮಂಗ್ಲಿ ಅವರನ್ನು ಯುವಕರ ಗುಂಪು ಸುತ್ತುಕೊಂಡಿದೆ. ಇದಾದ ಬಳಿಕ ಮಂಗ್ಲಿ ಮಾಡಿದ ಕೆಲಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನು ಓದಿ : `ಪುಷ್ಪ’ ಚಿತ್ರದಲ್ಲಿರಬೇಕಿತ್ತಂತೆ ಅಲ್ಲು ಅರ್ಜುನ್ ಬೆತ್ತಲೆ ದೃಶ್ಯಗಳು.. ನಿರ್ದೇಶಕ ಸುಕುಮಾರ್ ಹೀಗೆ ಹೇಳಿದ್ಯಾಕೆ?
ನಿಜಕ್ಕೂ ಅಲ್ಲಿ ನಡೆದಿದ್ದೇನು?
ಮಂಗ್ಲಿ ಅವರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಪಟ್ಟಣಕ್ಕೆ ಕಾರ್ಯಕ್ರಮ ನಿಮಿತ್ತ ತೆರಳಿದಾಗ ಮುಜುಗರದ ಪ್ರಸಂಗವೊಂದು ಜರುಗಿದೆ. ಕಾರ್ಯಕ್ರಮ ಮುಗಿಸಿ ಕಾರು ಹತ್ತಲು ಹೋಗುವಾಗ ಅಲ್ಲಿಯೇ ಇದ್ದ ಯುವಕರ ಗುಂಪು ಸೆಲ್ಫಿಗಾಗಿ ಮಂಗ್ಲಿ ಅವರನ್ನು ಸುತ್ತುವರಿದಿದ್ದಾರೆ. ಯುವಕರ ಗುಂಪು ತುಂಬಾ ಹತ್ತಿರಕ್ಕೆ ಬಂದಿದ್ದರಿಂದ ಅವರು ಮುಜುಗರಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲದೆ ಯುವಕರ ಅಸಭ್ಯ ವರ್ತನೆ ನೋಡಿ ತಾಳ್ಮೆ ಕಳೆದುಕೊಂಡ ಮಂಗಲಿ ಜೋರು ಧ್ವನಿಯಲ್ಲಿ ಕೂಗಾಡಿದ್ದಲ್ಲದೆ, ಕೈಯಿಂದ ಹೊಡೆಯಲು ಯತ್ನಿಸಿದ್ದಾರೆ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಇದನ್ನು ಓದಿ : ಪುಷ್ಪ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಕಣ್ಣೀರಿಟ್ಟ ಅಲ್ಲು ಅರ್ಜುನ್, ಕಾರಣ ಕೇಳಿ ಫ್ಯಾನ್ಸ್ಗೂ ಬೇಜಾರು
ಸಹಾಯಕರ ಮೇಲೂ ಕೂಗಾಡಿದ ಮಂಗ್ಲಿ!
ಇನ್ನು ಈ ಘಟನೆ ನಡೆದ ನಂತರ ಮಂಗ್ಲಿ ತನ್ನ ಡ್ರೈವರ್ ಗೆ ಕರೆಮಾಡಿ ಬೇಗ ಕಾರು ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ. ಮಂಗ್ಲಿ ಅವರು ತನ್ನ ಸಹಾಯಕರನ್ನು ಕೂಗಿ ಅವರ ಮೇಲೂ ಕೂಗಾಡಿದ್ದಾರೆ. ಸದ್ಯ ಈಯುವಕರ ವರ್ತನೆ ನೋಡಿ ಕೋಪಗೊಂಡ ಮಂಗ್ಲಿ ಅವರು ಅವರ ಮೇಲೆ ರೇಗಾಡಿದ್ದಾರೆ. ಕೆಲವರು ಸ್ವಲ್ಪ ತಾಳ್ಮೆಯಿಂದ ಮಾತನಾಡಿ ಮೇಡಂ ಸ್ಟಾರ್ ಅಂದರೆ ಸೆಲ್ಫಿ ಕೇಳುತ್ತಾರೆ. ಅದಕ್ಕೆ ಹೀಗೆ ಮಾಡುವುದಾ ಅಂತ ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ