ನಾದಬ್ರಹ್ಮ ಖ್ಯಾತಿ ಹಂಸಲೇಖ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1951 ಜೂನ್ 23ರಂದು ಮೈಸೂರಿನಲ್ಲಿ ಜನಿಸಿದ ಹಂಸಲೇಖ ಅವರು 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಇವರ ಮೂಲ ಹೆಸರು ಗಂಗರಾಜು. 1973 ರಲ್ಲಿ ತ್ರಿವೇಣಿ ಚಿತ್ರದ ನೀನಾ ಭಗವಂತ... ಹಾಡಿನ ಮೂಲಕ ಗೀತ ರಚನೆಕಾರರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೆ ಸಂಗೀತ ಹಾಗೂ ಸಾಹಿತ್ಯ ನೀಡಿದ್ದಾರೆ. ತಮ್ಮ ಸಂಗೀತ ದಿಂದಾಗಿಯೇ ಕೋಟ್ಯಂತ ಮಂದಿ ಅಭಿಮಾನಿಗಳನ್ನು ಹೊಂದಿರುವ ಇವರು ಕನ್ನಡ ಚಿತ್ರರಂಗದಲ್ಲಿ ನಾದ ಬ್ರಹ್ಮ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ನಾನು ನನ್ನ ಹೆಂಡತಿ, ಪ್ರೇಮಲೋಕ, ಆಕಸ್ಮಿಕ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ, ಹಿನ್ನಲೆ ಗಾಯಕರಾಗಿ ಹಾಗೂ ಚಿತ್ರ ಸಾಹಿತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರೇನಲೋಕ ಸಿನಿಮಾದ ಮೂಲಕ 1987ರಲ್ಲಿ ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಪರಿಚಯವಾದ ಹಂಸಲೇಖ ಅವರು ಚಿತ್ರರಂಗಕ್ಕೆ ಹೊಸ ಟ್ರೆಂಡ್ ಸೃಷ್ಟಿಸಿದರು. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಕೆಲಸ ಮಾಡಿರುವ ಹಂಸಲೇಖ ಅವರ ಹಾಡುಗಳನ್ನು ಕೇಳುತ್ತಲೇ ಪ್ರೀತಿಯಲ್ಲಿ ಬಿದ್ದವರು ಸಾಕಷ್ಟು ಮಂದಿ ಇದ್ದಾರೆ. ರವಿಚಂದ್ರನ್ ಹಾಗೂ ಹಂಸಲೇಖ ಅವರ ಜೋಡಿ 12 ವರ್ಷಗಳ ಕಾಲ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿತ್ತು.
ಪ್ರೇಮಲೋಕ ಸಿನಿಮಾದಲ್ಲಿ ಅಭಿನಯಿಸಿದರೆ, ಹಂಸಲೇಖ ಸಂಗೀತ ನೀಡಿದ್ದರು, ಬಾಲಸುಬ್ರಹ್ಮಣ್ಯಂ ಹಾಗೂ ಹಂಸಲೇಖ ಅವರ ಮಡದಿ ಲತಾ ಅವರು ಹಾಡು ಹಾಡಿದ್ದಾರೆ. ಇವರು 1990 ರಲ್ಲಿ ಹಿನ್ನಲೆ ಗಾಯಕಿ ಲತಾ ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಆಟ ಶುರು:ಕೈ ಕೈ ಮಿಲಾಯಿಸಿದ ದಿವ್ಯಾ ಉರುಡುಗ-ದಿವ್ಯಾ ಸುರೇಶ್
1986ರಲ್ಲಿ ರಿಲೀಸ್ ಆದ ಹೆಣ್ಣೇ ನಿನಗೇನು ಬಂಧನ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದರು. ಆದರೆ ಅದು ಹಿಟ್ ಆಗಲೇ ಇಲ್ಲ.ನಂತರ 1987ರಲ್ಲಿ ತೆರೆಕಂಡ ಪ್ರೇಮಲೋಕ ಸಿನಿಮಾ ಹಂಸಲೇಖ ಅವರ ಸಾಮರ್ಥ್ಯವನ್ನು ಸಿನಿರಂಗಕ್ಕೆ ತೋರಿಸಿಕೊಟ್ಟಿತ್ತು. ನಂತರ ರವಿಚಂದ್ರನ್ ಹಾಗೂ ಹಂಸಲೇಖ ಅವರ ಜೋಡಿ ರಾಜ್ಯಭಾರ ಮಾಡಿತ್ತು. ರಾಮಚಾರಿ, ರಣಧೀರ, ಹಳಿಮೇಷ್ಟ್ರು ಹೀಗೆ ಹಲವಾರು ಸಿನಿಮಾಗಳಲ್ಲಿ ಈ ಜೋಡಿ ರಂಜಿಸಿತ್ತು.
ಶಾಂತಿ ಕ್ರಾಂತಿಯಲ್ಲಿಅರ್ಧ ರಾತ್ರಿಲಿ ಹೈವೆ ರೋಡಲ್ಲಿ...., ಯುದ್ಧಕಾಂಡ ಸಿನಿಮಾದಲ್ಲಿ ಸೋಲೇ ಇಲ್ಲ.... ಸ್ಪರ್ಶ ಸಿನಿಮಾದಲ್ಲಿ ಚಂದಕಿಂತ ಚಂದ ನೀನೆ ಸುಂದರ, ಪ್ರೀತ್ಸೆ... ಪ್ರೀತ್ಸೆ..., ಯಾರಿಟ್ಟರೀ ಚುಕ್ಕಿ...., ಹಳಿಮೇಷ್ಟ್ರೇ ... ಹಳಿಮೇಷ್ಟ್ರೇ ..., ಕಾಯಿ ಕಾಯಿ ನುಗ್ಗೆಕಾಯಿ.... ಎಳೆ ಹೊಂಬಿಸಿಲೇ... ಒಂದೊಂದು ಹಾಡುಗಳು ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ ಸಂಗೀತ ಪ್ರಿಯರನ್ನು ತೇಲುವಂತೆ ಮಾಡಿತ್ತು.
ಸ್ಯಾಂಡಲ್ವುಡ್ನಲ್ಲಿ ನನ್ನ ಸಿನಿಮಾ ಸಂಗಾತಿ ಕ್ರೇಜಿಸ್ಟಾರ್ ರವಿಚಂದ್ರನ್, ನನ್ನ ಸಂಗೀತದ ಸಂಗಾತಿ ಎಸ್.ಪಿ.ಬಿ ಎಂದು ಹಂಸಲೇಖ ಈ ಹಿಂದೆ ಹೇಳಿಕೊಂಡಿದ್ದರು. ಬಾಲಸುಬ್ರಹ್ಮಣ್ಯಂ ಅವರು ಅಗಲಿದಾಗಲೂ ಅವರಿಲ್ಲದೆ ಉಳಿದ ಜೀವನ ಬದುಕುವುದು ತುಂಬಾ ಕಷ್ಟ ಎಂದಿದ್ದರು ನಾದಬ್ರಹ್ಮ.
ನ್ಯೂಸ್18 ಕನ್ನಡ ಕಳಕಳಿ
ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ