Bappi Lahiri: ಮಧುರ ಕಂಠದ ಮ್ಯೂಸಿಕ್ ಮಾಂತ್ರಿಕ ಇನ್ನಿಲ್ಲ, ಗಾನ 'ಲಹಿರಿ' ಇನ್ನು ನೆನಪಷ್ಟೇ

ಬಪ್ಪಿ ಲಹಿರಿಯವರ ಮಧುರ ಕಂಠಸಿರಿಯ ಮೋಡಿಗೆ ಒಳಗಾಗದವರೇ ಇಲ್ಲ. ಅದರಲ್ಲೂ ಯುವ ಜನರು ಅವರ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಹೀಗಾಗೇ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಡಿಸ್ಕೋ ರಾಜ’ ಅಂತಾನೇ ಕರೆಯುತ್ತಿದ್ದರು. ಆದರೆ ಡಿಸ್ಕೋ ರಾಜನ ಗಾನ ಲಹರಿ ಇನ್ನು ನೆನಪಷ್ಟೇ...

ಸಂಗೀತ ಲೋಕದ ದಂತಕಥೆ ಬಪ್ಪಿ ಲಹಿರಿ

ಸಂಗೀತ ಲೋಕದ ದಂತಕಥೆ ಬಪ್ಪಿ ಲಹಿರಿ

  • Share this:
ಮುಂಬೈ: 2021 ಕಳೆದು, 2022 ಬಂದರೂ ಆಘಾತಗಳಿಗೇನೂ ಕಡಿಮೆ ಇಲ್ಲ. ನಮ್ಮ ನಡುವೆ ಇದ್ದ ಸಾಧಕರು, ಘಟಾನುಘಟಿಗಳು ತೀರಾ ವಯಸ್ಸಲ್ಲದ ವಯಸಲ್ಲಿ ಜಗತ್ತನ್ನೇ ಬಿಟ್ಟು ಹೋಗುತ್ತಿದ್ದಾರೆ. “ಇನ್ನೂ ನಮ್ಮೊಡನಿರಬೇಕಿತ್ತು” ಎನಿಸುವಂತಹ ಮಹಾನ್ ವ್ಯಕ್ತಿಗಳು ಅಮರರಾಗುತ್ತಲೇ ಇದ್ದಾರೆ. ಬಾಲಿವುಡ್‌ಗಂತೂ (Bollywood) ಈ ವರ್ಷ ಆಘಾತದ ಮೇಲೆ ಆಘಾತ ಎದುರಾಗುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಖ್ಯಾತ ಗಾಯಕಿ (Singer), ಭಾರತರತ್ನ (Bharataratna) ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಕಳೆದುಕೊಂಡು ಬಾಲಿವುಡ್ ಇನ್ನೂ ದುಃಖದಿಂದ ಆಚೆ ಬಂದಿಲ್ಲ. ಇಂತ ಹೊತ್ತಲ್ಲೇ ಸಂಗೀತ ಲೋಕದ(Musical World) ಮತ್ತೊಬ್ಬ ಧ್ರುವ ತಾರೆ ನಮ್ಮನ್ನು ಅಗಲಿದ್ದಾರೆ. ಖ್ಯಾತ ಗಾಯಕ (Singer), ಸಂಗೀತ ಸಂಯೋಜಕ (Composer) , ‘ಡಿಸ್ಕೋ ಕಿಂಗ್’ (Disco King) ಅಂತಾನೇ ಫೇಮಸ್ ಆಗಿದ್ದ ಬಪ್ಪಿ ಲಹಿರಿ (Bappi Lahiri) ಇಂದು ನಿಧನರಾಗಿದ್ದಾರೆ. ಹಾಗಿದ್ರೆ ಈ ಸಂಗೀತ ಮಾಂತ್ರಿಕನಿಗೆ ಆಗಿದ್ದೇನು? ಅವರ ಸಾಧನೆಗಳೇನು? ಅವರು ನಡೆದು ಬಂದ ಹಾದಿ ಹೇಗಿತ್ತು? ಇಲ್ಲಿದೆ ಓದಿ ಅವರ ಬಗ್ಗೆ ಒಂದಿಷ್ಟು ಮಾಹಿತಿ…

 ಮುಂಬೈನಲ್ಲಿ ಕೊನೆಯುಸಿರೆಳೆದ ಖ್ಯಾತ ಗಾಯಕ

 69 ವರ್ಷದ ಖ್ಯಾತ ಗಾಯಕ ಬಪ್ಪಿ ಲಹಿರಿ ಇಂದು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಅಂತ ಅವರ ಕುಟುಂಬದ ಮೂಲಗಳು ದೃಢಪಡಿಸಿವೆ. ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಲಹಿರಿ, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ಡಿಸ್ಚಾರ್ಜ್, ಇಂದು ನಿಧನ!

ಬಪ್ಪಿ ಲಾಹಿರಿ ಅವರು ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಲೇ ಇದ್ದರು. ಆರೋಗ್ಯದಲ್ಲಿ ಕೊಂಚ ಸುಧಾರಿಸಿದ ತಕ್ಷಣ ಮೊನ್ನೆ ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಆದರೆ ನಿನ್ನೆ ಮಂಗಳವಾರ ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು. ಹೀಗಾಗಿ ನಿನ್ನೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಪಂಜಾಬಿ ನಟ, ಕೆಂಪು ಕೋಟೆ ಹಿಂಸಾಚಾರ ಆರೋಪಿ Deep Sidhu ಸಾವು

ಯುವ ಜನರನ್ನು ಮೋಡಿ ಮಾಡಿದ್ದ ‘ಡಿಸ್ಕೋ ರಾಜ’

ಬಪ್ಪಿ ಲಹಿರಿಯವರ ಮಧುರ ಕಂಠಸಿರಿಯ ಮೋಡಿಗೆ ಒಳಗಾಗದವರೇ ಇಲ್ಲ. ಅದರಲ್ಲೂ ಯುವ ಜನರು ಅವರ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಹೀಗಾಗೇ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಡಿಸ್ಕೋ ರಾಜ’ ಅಂತಾನೇ ಕರೆಯುತ್ತಿದ್ದರು.

ಬಪ್ಪಿ ಲಹಿರಿ ಅವರು 1970-80ರ ದಶಕದಲ್ಲಿ 'ಚಲ್ತೇ ಚಲ್ತೆ', 'ಡಿಸ್ಕೋ ಡ್ಯಾನ್ಸರ್' ಮತ್ತು 'ಶರಾಬಿ' ನಂತಹ ಹಲವಾರು ಚಲನಚಿತ್ರಗಳಲ್ಲಿ ಜನಪ್ರಿಯ ಹಾಡುಗಳನ್ನು ನೀಡಿದ್ದಾರೆ. 2020ರಲ್ಲಿ ತೆರೆಕಂಡ 'ಬಾಘಿ-3' ಚಿತ್ರಕ್ಕಾಗಿ ಅವರು ಕೊನೆಯದಾಗಿ ಹಾಡಿದ್ದರು.

ಬಾಲ್ಯದಲ್ಲೇ ಸಂಗೀತದ ಕಡೆ ಸೆಳೆತ

ಬಪ್ಪಿ ಲಹಿರಿ ನವೆಂಬರ್ 27, 1952ರಲ್ಲಿ ಬಂಗಾಳದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ಅಲೋಕೇಶ್ ಲಾಹಿರಿ . ಬಾಲಿವುಡ್‌ನ ದಂತಕಥೆ ಕಿಶೋರ್ ಕುಮಾರ್ ಇವರ ಸಂಬಂಧಿಯಾಗಿದ್ದರು. ಬಾಲ್ಯದಲ್ಲಿ ತಬಲಾ ನುಡಿಸುತ್ತಿದ್ದ ಬಪ್ಪಿ, ಅಲ್ಲಿಂದಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು.

ವಿವಿಧ ಭಾಷೆಗಳಲ್ಲಿ ಹಾಡಿದ್ದ ಬಪ್ಪಿ ಲಹಿರಿ

ಬರೀ ಹಿಂದಿ ಭಾಷೆಯಷ್ಟೇ ಅಲ್ಲದೇ ಭಾರತದ ಬಹು ಭಾಷೆಗಳಲ್ಲಿ ಬಪ್ಪಿ ಲಹಿರಿ ಹಾಡು ಹಾಡಿ, ಸಂಗೀತ ಪ್ರೇಮಿಗಳನ್ನು ರಂಜಿಸಿದ್ದಾರೆ. ಬಂಗಾಳಿ, ಗುಜರಾತಿ, ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಪ್ಪಿ ಗಾನ ಲಹರಿ ತೇಲಿ ಬಂದಿದೆ.

ಇದನ್ನೂ ಓದಿ: Fitness Influencer Hospitalised: ಹಾಸಿಗೆ ಹಿಡಿದ ಫಿಟ್ನೆಸ್ ಫ್ರೀಕ್! ಅತಿಯಾದ ವರ್ಕೌಟ್ ಇಷ್ಟೊಂದು ಡೇಂಜರಾ ?

‘ಕರೆಂಟು ಹೋದ ಟೈಮಲಿ’ ಹಾಡಿದ್ದ ಗಾಯಕ

ಕನ್ನಡದಲ್ಲೂ ಸುಮಾರು 5ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಪ್ಪಿ ಲಹರಿ ಹಾಡಿದ್ದಾರೆ. ಆಫ್ರಿಕಾದಲ್ಲಿ ಶೀಲಾ, ಕೃಷ್ಣಾ ನೀ ಬೇಗನೆ ಬಾರೋ, ಪೊಲೀಸ್ ಮತ್ತು ದಾದಾ, ಗುರು ಹಾಗೂ 2014ರಲ್ಲಿ ತೆರೆಕಂಡ ಲವ್ ಇನ್ ಮಂಡ್ಯದಲ್ಲಿ ಬಪ್ಪಿ ಗಾನಲಹರಿ ಇದೆ.

ಅದರಲ್ಲೂ ‘ಲವ್ ಇನ್ ಮಂಡ್ಯ’ ಸಿನಿಮಾದ “ಕರೆಂಟು ಹೋದ ಟೈಮಲಿ, ಹುಡುಗಿ ಇದ್ಲು ಪಕ್ದಲಿ” ಹಾಡು ಕರುನಾಡ ಪಡ್ಡೆ ಹುಡುಗರ ಹಾಟ್ ಫೆವರೇಟ್ ಆಗಿತ್ತು.
Published by:Annappa Achari
First published: