Raju Srivatsava: ರಾಜು ಶ್ರೀವಾತ್ಸವ್‌ ಮೆದುಳು ನಿಷ್ಕ್ರಿಯ! ಹಾಸ್ಯ ನಟನಿಗಾಗಿ ಅಭಿಮಾನಿಗಳ ಪ್ರಾರ್ಥನೆ

ರಾಜು ಶ್ರೀವಾತ್ಸವ್ ಅವರ ಸ್ನೇಹಿತ ಸುನೀಲ್ ಪಾಲ್ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ವಿಡಿಯೋ ಶೇರ್ ಮಾಡಿದ್ದಾರೆ. ರಾಜು ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಹೀಗಾಗಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳಿಗೆ ಸುನೀಲ್ ಪಾಲ್ ಮನವಿ ಮಾಡಿದ್ದಾರೆ.

ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ

ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ

 • Share this:
  ದೆಹಲಿ: ಖ್ಯಾತ ಹಾಸ್ಯ ನಟ (Famous Comedian) ರಾಜು ಶ್ರೀವಾತ್ಸವ್ (Raju Srivatsava) ಆರೋಗ್ಯ ಸ್ಥಿತಿ (Health Conditions) ಮತ್ತಷ್ಟು ಗಂಭೀರವಾಗಿದೆ. ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು, ಆಪ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಅಭಿಮಾನಿಗಳು (Fans) ತಮ್ಮ ನೆಚ್ಚಿನ ಹಾಸ್ಯ ನಟನ ಆರೋಗ್ಯ ಸುಧಾರಿಸಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ರಾಜು ಶ್ರೀವಾತ್ಸವ್ ಅವರ ಮೆದುಳು (Brain) ಕೆಲಸ ಮಾಡುತ್ತಿಲ್ಲ, ಅದು ನಿಷ್ಕ್ರಿಯ ಗೊಂಡಿವೆ ಅಂತ ದೆಹಲಿಯ ಏಮ್ಸ್ ಆಸ್ಪತ್ರೆ (Delhi AIMS Hospital) ಮೂಲಗಳು ತಿಳಿಸಿವೆ. ಅಲ್ಲದೇ ಅವರ ಆಪ್ತ ಸ್ನೇಹಿತ ಸುನೀಲ್ ಪಾಲ್ (Sunil Pal) ಈ ಬಗ್ಗೆ ತಿಳಿಸಿದ್ದು, ಇನ್ಸ್‌ಸ್ಟಾಗ್ರಾಮ್‌ನಲ್ಲಿ (Instagram) ಭಾವನಾತ್ಮಕ ವಿಡಿಯೋ ಶೇರ್ (Video Share) ಮಾಡಿದ್ದಾರೆ. “ರಾಜು ಶ್ರೀವಾತ್ಸವ್ ಅವರ ಆರೋಗ್ಯ ಸುಧಾರಣೆಗೆ ದೇವರಲ್ಲಿ (God) ಪ್ರಾರ್ಥಿಸುವುದು (Prayer) ಒಂದೇ ದಾರಿ” ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ರಾಜು ಶ್ರೀವಾತ್ಸವ್ ಮೆದುಳು ನಿಷ್ಕ್ರಿಯ

  ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ಅವರ ಆರೋಗ್ಯ ಹದಗೆಟ್ಟಿದೆ. ಅವರು ವೆಂಟಿಲೇಟರ್‌ನಲ್ಲಿದ್ದು, ಏಮ್ಸ್ ಆಸ್ಪತ್ರೆ ವೈದ್ಯರು ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜು ಅವರ ಆಪ್ತ ಸ್ನೇಹಿತ ಸುನೀಲ್ ಪಾಲ್ ಅವರ ಸ್ಥಿತಿ ಚೆನ್ನಾಗಿಲ್ಲದ ಕಾರಣ ಜನರು ಪ್ರಾರ್ಥಿಸುವಂತೆ ಕೇಳಿಕೊಂಡಿದ್ದಾರೆ. ರಾಜು ಶ್ರೀವಾಸ್ತವ್ ಅವರ ಇತ್ತೀಚಿನ ಆರೋಗ್ಯ ವರದಿಯನ್ನು ಸುನಿಲ್ ಹಂಚಿಕೊಂಡಿದ್ದಾರೆ ಮತ್ತು ರಾಜು ಅವರ ಮೆದುಳು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಅಂತ ಅವರು ಹೇಳಿದ್ದಾರೆ.


  ಭಾವನಾತ್ಮಕ ವಿಡಿಯೋ ಹಂಚಿಕೊಂಡ ಸ್ನೇಹಿತ

  ರಾಜು ಶ್ರೀವಾತ್ಸವ್ ಅವರ ಸ್ನೇಹಿತ ಸುನೀಲ್ ಪಾಲ್ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ವಿಡಿಯೋ ಶೇರ್ ಮಾಡಿದ್ದಾರೆ. ರಾಜು ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಹೀಗಾಗಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳಿಗೆ ಸುನೀಲ್ ಪಾಲ್ ಮನವಿ ಮಾಡಿದ್ದಾರೆ.

  ಇದನ್ನೂ ಓದಿ: Raju Srivastav Health Update: ರಾಜು ಶ್ರೀವಾಸ್ತವ ಸ್ಥಿತಿ ಚಿಂತಾಜನಕ, ವೆಂಟಿಲೇಟರ್​ನಲ್ಲಿ ಹಾಸ್ಯನಟ!

  ಜಿಮ್‌ನಲ್ಲಿ ವರ್ಕೌಟ್ ಮಾಡುವಾಗಲೇ ಹೃದಯಾಘಾತ

  ಇದೇ ಆಗಸ್ಟ್ 10ರಂದು ದೆಹಲಿಯ ಜಿಮ್ ಒಂದರಲ್ಲಿ ರಾಜು ಶ್ರೀವಾತ್ಸವ್ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ರಾಜು ಶ್ರೀವಾತ್ಸವ್ ಅವರಿಗೆ ಹೃದಯಾಘಾತವಾಯಿತು. ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಒಂದು ವಾರದಿಂದ ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  ರಾಜು ಶ್ರೀವಾತ್ಸವ್ ಆರೋಗ್ಯಕ್ಕಾಗಿ ಅಭಿಮಾನಿಗಳ ಪ್ರಾರ್ಥನೆ

  ಬಾಲಿವುಡ್ ಖ್ಯಾತ ಕಾಮಿಡಿಯನ್, ಸ್ಟ್ಯಾಂಡಪ್ ಕಾಮಿಡಿ ಮೂಲಕ  ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ರಾಜು ಶ್ರೀವಾತ್ಸವ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎನ್ನಲಾಗುತ್ತಿದೆ. ದಿನದಿಂದ ದಿನಕ್ಕೆ ಅವರು ಆರೋಗ್ಯ ಸ್ಥಿತಿ ಕುಗ್ಗುತ್ತಿದೆ.  ಇದೀಗ ಗಂಭೀರ ಸ್ಥಿತಿಯಲ್ಲಿ ಅವರು ಇದ್ದಾರೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: Raju Srivastav: ಹೃದಯಾಘಾತಕ್ಕೂ ಮುನ್ನ ವಿಡಿಯೋ ಮಾಡಿ ವೀಕ್ಷಕರನ್ನು ನಗಿಸಿದ್ದ ರಾಜು ಶ್ರೀವಾಸ್ತವ್!

  ಹಿಂದಿ ಚಿತ್ರರಂಗದಿಂದ ರಾಜು ಶ್ರೀವಾತ್ಸವ್​ ಬಣ್ಣದ ಬದುಕು ಆರಂಭಿಸಿದರು. ‘ಮೈನೆ ಪ್ಯಾರ್ ಕಿಯಾ’, ‘ಬಾಜಿಗರ್​’, ‘ಬಾಂಬೆ ಟು ಗೋವಾ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಂತರ ಸ್ಟ್ಯಾಂಡಪ್​ ಕಾಮಿಡಿಯನ್ ಆಗಿಯೂ ಗುರುತಿಸಿಕೊಂಡರು. ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್​’ ನಲ್ಲಿ ಎರಡನೇ ರನ್ನರ್​ ಅಪ್ ಆದರು. ಇನ್ನು, ರಿಯಾಲಿಟಿ ಶೋನಲ್ಲೂ ಶ್ರೀವಾತ್ಸವ್ ಭಾಗವಹಿಸಿದ್ದರು. ಹಿಂದಿ ಬಿಗ್ ಬಾಸ್​ನ ಮೂರನೇ ಸೀಸನ್​ಗೆ ಅವರು ಸ್ಪರ್ಧಿ ಆಗಿದ್ದರು. ‘ಕಾಮಿಡಿ ಕಾ ಮಹಾ ಮುಕ್ಬಾಲ್​’, ‘ನಾಚ್ ಬಲಿಯೇ’ ರಿಯಾಲಿಟಿ ಶೋನ ಆರನೇ ಸೀಸನ್​ಗೆ ಅವರು ಸ್ಪರ್ಧಿ ಆಗಿದ್ದರು.
  Published by:Annappa Achari
  First published: