ಖ್ಯಾತ ನಟಿ ಮಂಜು ವಾರಿಯರ್​ಗೆ 17 ವರ್ಷದ ಮಗಳಿದ್ದಾಳೆ; ಆದರೆ ಆಕೆ ಅಮ್ಮನ ಜೊತೆಗಿಲ್ಲ!

manju warrier: ಮಂಜು ವಾರಿಯರ್​​​ ತಮ್ಮ 20ನೇ ವಯಸ್ಸಿಗೆ ಮದುವೆಯಾಗಿದ್ದರು. ಮಾಲಿವುಡ್​ ಖ್ಯಾತ ನಟ ದಿಲೀಪ್​ ಅವರನ್ನು ವರಿಸಿದ್ದರು. ಇವರಿಬ್ಬರಿಗೆ ಪುಟ್ಟ ಹೆಣ್ಣು ಮಗು ಕೂಡ ಆಯಿತು. ಆಕೆಗೆ ಮೀನಾಕ್ಷಿ ಎಂದು ಹೆಸರಿಟ್ಟರು. ಆನಂತರ ಅವರಿಬ್ಬರ 2015ರಲ್ಲಿ ವಿಚ್ಛೇದನ ಮೂಲಕ ಸಂಬಂಧಕ್ಕೆ ಫುಲ್​ಸ್ಟಾಪ್​ ನೀಡಿದ್ದರು.

 ಮಂಜು ವಾರಿಯರ್

ಮಂಜು ವಾರಿಯರ್

 • Share this:
  ಮಾಲಿವುಡ್​​ನ ಖ್ಯಾತ ನಟಿ ಮಂಜು ವಾರಿಯರ್​​​​ ತಮ್ಮ 17ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರು ನಟಿಸಿರುವ ಸಾಕಷ್ಟು ಸಿನಿಮಾಗಳು ಸೂಪರ್​ ಡೂಪರ್​ ಹಿಟ್​​ ಆಗಿದೆ. ಅಷ್ಟೇ ಅಲ್ಲದೆ, ಮಂಜು ವಾರಿಯರ್​ ಅದ್ಧುತ ಡ್ಯಾನ್ಸರ್​ ಕೂಡ ಹೌದು. ಸಿನಿಮಾದ ಜೊತೆಗೆ ತಮ್ಮ ನೃತ್ಯವನ್ನು ಇಷ್ಟ ಪಡುವ ಅವರು ಆಗಾಗ ಸಾಮಾಜಿಕ ತಾಣದಲ್ಲಿ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಮಂಜು ವಾರಿಯರ್​​​ ತಮ್ಮ 20ನೇ ವಯಸ್ಸಿಗೆ ಮದುವೆಯಾಗಿದ್ದರು. ಮಾಲಿವುಡ್​ ಖ್ಯಾತ ನಟ ದಿಲೀಪ್​ ಅವರನ್ನು ವರಿಸಿದ್ದರು. ಇವರಿಬ್ಬರಿಗೆ ಪುಟ್ಟ ಹೆಣ್ಣು ಮಗು ಕೂಡ ಆಯಿತು. ಆಕೆಗೆ ಮೀನಾಕ್ಷಿ ಎಂದು ಹೆಸರಿಟ್ಟರು. ಆನಂತರ ಅವರಿಬ್ಬರ 2015ರಲ್ಲಿ ವಿಚ್ಛೇದನ ಮೂಲಕ ಸಂಬಂಧಕ್ಕೆ ಫುಲ್​ಸ್ಟಾಪ್​ ನೀಡಿದ್ದರು.

  ಆದರೀಗ ಮಂಜು ವಾರಿಯರ್​ ಮಗಳು ಮೀನಾಕ್ಷಿ ಜೊತೆಗಿಲ್ಲ.  ದಿಲೀಪ್​ ಜೊತೆಗಿದ್ದಾಳೆ. ವಿಚ್ಛೇದನ ಪಡೆದುಕೊಂಡ ನಂತರ ದಿಲೀಪ್​​, ಕಾವ್ಯಾ ಮಾಧವನ್​ ಅವರನ್ನು 2016ರಲ್ಲಿ ವಿವಾಹವಾದರು.

  ಇತ್ತೀಚೆಗೆ ದಿಲೀಪ್​​​ ಮತ್ತು ಕಾವ್ಯ ಮಾಧವನ್​ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ಮಹಾಲಕ್ಮೀ ಎಂದು ಹೆಸರನ್ನಿಟ್ಟಿದ್ದಾರೆ. ಮಾಲಿವುಡ್​ನಲ್ಲಿ ಕೇಳಿಬಂದಿರುವ ಮಾಹಿತಿ ಮೇರೆಗೆ ಮೀನಾಕ್ಷಿಯೇ ಈ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗುತ್ತದೆ. ದಿಲೀಪ್​ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಪತ್ನಿ ಕಾವ್ಯಮಾಧವನ್​​​​ ಮಗಳು ಮೀನಾಕ್ಷಿ, ತಾಯಿ ಮತ್ತು ಎರಡನೇ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

   
  ಇತ್ತ ವಿಚ್ಛೇದನದ ಬಳಿಕ ಮಂಜು ವಾರಿಯರ್​​ ‘ಹೌ ಓಲ್ಡ್​ ಆರ್​ ಯು‘ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್​ ಹಿಟ್​​ ಆಗಿದ್ದಲ್ಲದೆ. ನ್ಯಾಷನಲ್​​ ಫಿಲ್ಮ್​ ಅವಾರ್ಡ್​, ಕೇರಳ ರಾಜ್ಯ ಪ್ರಶಸ್ತಿ, ಮಾತ್ರವಲ್ಲದೆ 7 ಫಿಲ್ಮ್​ಫೇರ್​ ಪ್ರಶಸ್ತಿ​ ಲಭಿಸಿತು. ಸದ್ಯ ಸಿನಿಮಾ ಮಾಡುತ್ತಾ ಮಂಜು ವಾರಿಯರ್​​ ಜೀವನ ಕಳೆಯುತ್ತಿದ್ದಾರೆ.

   

  Gautam Gambhir: ಗೌತಮ್ ಗಂಭೀರ್ ಪ್ರಕಾರ ಐಪಿಎಲ್​ನಲ್ಲಿ ಬಲಿಷ್ಠ ತಂಡ ಯಾವುದು ಗೊತ್ತಾ?
  First published: