Priyamani: ಪ್ರಿಯಾಮಣಿ ಮದುವೆ ಅಸಿಂಧು? ನನಗೆ ವಿಚ್ಛೇದನ ಕೊಡದೇ ನಟಿಯನ್ನು ಮದುವೆಯಾಗಿದ್ದಾನೆ ಎಂದು ಮೊದಲ ಪತ್ನಿ ಆರೋಪ

ಬಹುಭಾಷಾ ನಟಿ ಪ್ರಿಯಾಮಣಿ ಮದುವೆಯಲ್ಲಿ ಅಪಸ್ವರ ಎದ್ದಿದೆ. ಆತ ತನಗಿನ್ನೂ ಸರಿಯಾಗಿ ವಿಚ್ಛೇದನ ನೀಡಿಲ್ಲ, ಆದ್ದರಿಂದ ದಾಖಲೆಗಳ ಪ್ರಕಾರ ಮುಸ್ತಾಫಾ ಇನ್ನೂ ನನ್ನ ಪತಿ. ಅಂದ ಮೇಲೆ ಪ್ರಿಯಾಮಣಿ ಜೊತೆಗಿನ ಆತನ ಮದುವೆ ಅಸಿಂಧು ಎಂದಿದ್ದಾರೆ ಮುಸ್ತಾಫಾ ರಾಜ್ ಮೊದಲ ಪತ್ನಿ ಆಯೆಷಾ.

ಪ್ರಿಯಾಮಣಿ - ಮುಸ್ತಾಫಾ

ಪ್ರಿಯಾಮಣಿ - ಮುಸ್ತಾಫಾ

 • Share this:
  ಈ ನಟನಟಿಯರ ಖಾಸಗಿ ಬದುಕು ಒಂಥರಾ ಗಾಜಿನ ಮನೆಯ ರೀತಿಯದ್ದು ಎನಿಸುತ್ತೆ. ಅವರಿಗೊಂದು ಖಾಸಗಿ ಬದುಕೇ ಇಲ್ಲವೇನೋ.. ಅವರು ಖ್ಯಾತರಾಗಿದ್ದರಿಂದಲೇ ಕೆಲವಷ್ಟು ಸಮಸ್ಯೆಗಳು ಬರುತ್ತವೇನೋ ಎನಿಸುವಂಥಾ ಸನ್ನಿವೇಶಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈಗಿನ್ನೂ ರಾಜ್ ಕುಂದ್ರಾ ಪೋರ್ನ್ ಹಗರಣದ ಹಿನ್ನೆಲೆಯಲ್ಲಿ ಪತ್ನಿ ಶಿಲ್ಪಾ ಶೆಟ್ಟಿ ಜೊತೆಗಿನ ಆತನ ಸಂಬಂಧ ಏನಾಗಿದೆ ಎನ್ನುವ ಬಗ್ಗೆಯೇ ಹೆಚ್ಚಿನ ಚರ್ಚೆಯಾಗ್ತಿದೆ. ಇದರ ಬೆನ್ನಲ್ಲೇ ಮತ್ತೋರ್ವ ನಟಿ  ಪ್ರಿಯಾಮಣಿ ದಾಂಪದ್ಯದ ಹೊಸಾ ವರಸೆಯೊಂದು ಹೊರಬಿದ್ದಿದೆ. ಪ್ರಿಯಾಮಣಿ ಮತ್ತು ಆಕೆಯ ಪತಿ ಮುಸ್ತಾಫಾ ರಾಜ್ ವಿವಾಹವೇ ಅಸಿಂಧು, ಆ ಮದುವೆಗೆ ಮಾನ್ಯತೆಯೇ ಇಲ್ಲ ಎನ್ನುವ ತಕರಾರು ಎದ್ದಿದೆ. ಈ ಗಂಭೀರ ಆರೋಪ ಮಾಡುತ್ತಿರುವುದು ಪ್ರಿಯಾಮಣಿ ಪತಿ ಮುಸ್ತಾಫಾ ರಾಜ್ ಮೊದಲನೇ ಪತ್ನಿ ಆಯೆಷಾ. ಮೊದಲ ಪತ್ನಿಯಿಂದ ಮುಸ್ತಾಫಾ ರಾಜ್​ಗೆ ಇಬ್ಬರು ಮಕ್ಕಳಿದ್ದಾರೆ.

  ಆತ ತನಗಿನ್ನೂ ಸರಿಯಾಗಿ ವಿಚ್ಛೇದನ ನೀಡಿಲ್ಲ, ಆದ್ದರಿಂದ ದಾಖಲೆಗಳ ಪ್ರಕಾರ ಮುಸ್ತಾಫಾ ಇನ್ನೂ ನನ್ನ ಪತಿ. ಅಂದ ಮೇಲೆ ಪ್ರಿಯಾಮಣಿ ಜೊತೆಗಿನ ಆತನ ಮದುವೆ ಅಸಿಂಧು ಎಂದಿದ್ದಾರೆ ಆಯೆಷಾ. 2013ರಲ್ಲಿ ಮುಸ್ತಾಫಾ ಮತ್ತು ಆಯೆಷಾ ಬೇರೆಯಾಗಿದ್ದರು. 2017ರಲ್ಲಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆಯಾಗಿದ್ದರು. ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದ ಈ  ಜೋಡಿ ಅನ್ಯೋನ್ಯವಾಗಿಯೇ ಬಾಳುತ್ತಿದ್ದಾರೆ. ಬಹುಭಾಷಾ ತಾರೆಯಾಗಿ, ರಾಷ್ಟ್ರಪ್ರಶಸ್ತಿಯನ್ನೂ ಪಡೆದಿರುವ ಈ ನಟಿ ಇತ್ತೀಚಿನ ಸೂಪರ್ ಹಿಟ್ ಸೀರೀಸ್ ಫ್ಯಾಮಿಲಿ ಮ್ಯಾನ್​ನಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಇದನ್ನೂ ಓದಿ: Sonam Kapoor: ಒಂದು ಬಿಸಿನೀರಿನ ಬಾಟಲಿ ಮತ್ತು ಶುಂಠಿ ಟೀ ಇಂದ ಎಲ್ಲರ ಬಾಯಿ ಮುಚ್ಚಿಸಿದ ಸೋನಮ್ ಕಪೂರ್ !

  ಹೊಸಾ ವಿವಾದದ ಬಗ್ಗೆ ಪ್ರಮುಖ ದಿನ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಮುಸ್ತಾಫಾ ರಾಜ್, ಆಯೆಷಾ ಮಾಡುತ್ತಿರುವ ಎಲ್ಲಾ ಆರೋಪಗಳೂ ಸುಳ್ಳು. ನಾನು ನಿಯಮಿತವಾಗಿ ಮಕ್ಕಳ ನಿರ್ವಹಣೆಗೆ ಹಣ ನೀಡುತ್ತಿದ್ದೇನೆ. ಹೆಚ್ಚಿನ ಹಣದ ಆಸೆಗಾಗಿ ಆಕೆ ಹೀಗೆಲ್ಲಾ ಮಾಡುತ್ತಿದ್ದಾಳೆ ಎಂದಿದ್ದಾರೆ. ಆದ್ರೆ ಆಯೆಷಾ ಮಾತ್ರ ದಾಖಲೆಗಳ ಪ್ರಕಾರ ಮುಸ್ತಾಫಾ ತನಗಿನ್ನೂ ವಿಚ್ಛೇದನವನ್ನೇ ನೀಡಿಲ್ಲ, ಹಾಗಾಗಿ ನಟಿಯೊಂದಿಗಿನ ಆತನ ವಿವಾಹ ಅಸಿಂಧು ಎಂದೇ ವಾದಿಸುತ್ತಿದ್ದಾರೆ.

  ಇಷ್ಟು ಸಮಯದ ನಂತರ ಈಗೇಕೇ ಈ ವಿಚಾರ ಎಂದಿದ್ದಕ್ಕೆ ಒ್ರತಿಕ್ರಿಯಿಸಿರುವ ಆಯೆಷಾ, ಒಂಟಿ ಹೆಂಗಸು ಅನೇಕ ವಿಚಾರಗಳನ್ನು ಹೆಚ್ಚು ಗಲಾಟೆ ಇಲ್ಲದೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾಳೆ, ಆದ್ರೆ ವಿಚಾರ ಕೈಮೀರಿ ಹೋದಾಗ ಬೇರೆ ದಾರಿ ಕಾಣದೇ ಈ ಮಾರ್ಗ ಅನುಸರಿಸಬೇಕಾಯಿತು ಎಂದಿದ್ದಾರೆ. ಈ ವಿಚಾರದ ಬಗ್ಗೆ ನಟಿ ಪ್ರಿಯಾಮಣಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: