ವಿಕ್ರಾಂತ್ ರೋಣ (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಕಿಚ್ಚ ಸುದೀಪ್ ಅವರಿಗೆ ಕೊರೋನಾ ಪಾಸಿಟಿವ್ ಎಂಬ ಸುಳ್ಳು ಸುದ್ದಿಯನ್ನು ಹರಿದಾಡುತ್ತಿದೆ. ಕೆಲ ಕಿಡಿಗೇಡಿಗಳು ಕಿಚ್ಚ ಅವರಿಗೆ ಕೊರೋನಾ ತಗುಲಿದೆದ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಆದರೆ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜಾಕ್ ಮಂಜು ಅವರು ಸುದೀಪ್ ಅರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಸುದೀಪ್ (Sudeep ) ಸರ್ ಗೆ ಕೊರೋನ ಬಂದಿದೆ ಎನ್ನುವುದು ಸುಳ್ಳು ಮಾಹಿತಿ ಎಂದು ತಿಳಿಸಿದ್ದಾರೆ.
ಕಿಚ್ಚನ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ ಜಾಕ್ ಮಂಜು:
ಇನ್ನು, ಕಿಚ್ಚ ಸುದೀಪ್ ಅವರಿಗೆ ಕೊರೋನಾ ಪಾಸಿಟಿವ್ ಎಂಬ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹಬ್ಬಿಸಿದ ಬೆನ್ನಲ್ಲೇ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜಾಕ್ ಮಂಜು ಅವರು ಸ್ಪಷ್ಟನೆ ನೀಡಿದ್ದು, ‘ದೆಹಲಿಯಿಂದ ಬಂದು ಕ್ರಿಕೆಟ್ ಆಡುವಾಗ ಮಳೆಯಲ್ಲಿ ನೆನೆದ ಕಾರಣ ಸುದೀಪ್ ಅವರಿಗೆ ವೈರಲ್ ಫೀವರ್ ಬಂದಿದೆ.
ಇದಲ್ಲದೇ ಇದೇ ತಿಂಗಳ 22, 23 ಮತ್ತು 24ರಂದು ಒಟ್ಟು ಮೂರುದಿನಗಳ ಕಾಲ ಮುಂಬೈನಲ್ಲಿ ವಿಕ್ರಾಂತ್ ರೋಣ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಲ್ಲದೇ 25 ಹೈದರಾಬಾದ್ ಮತ್ತು 26ರಂದು ಬೆಂಗಳೂರಿನ ಇವೆಂಟ್ ಮುಗಿಸಿ ಬಳಿಕ 27ರಂದು ದುಬೈನಲ್ಲಿ ನಡೆಯೋ ಪ್ರೀಮಿಯರ್ ಶೋಗೆ ಹೋಗುತ್ತಾರೆ. ಸುದೀಪ್ ಅವರಿಗೆ ಕೊರೋನಾ ಬಂದಿದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ‘ ಎಮದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada: ಬಿಗ್ಬಾಸ್ ಸೀಸನ್ 9ರ ರಿಲೀಸ್ ಡೇಟ್ ಫಿಕ್ಸ್? ಲೀಕ್ ಆಯ್ತು ಕಿಚ್ಚನ ಹೊಸ ಲುಕ್
ನಿಮ್ಮ ಭಾಷೆಯಲ್ಲಿಯೇ ವಿಕ್ರಾಂತ್ ರೋಣ ನೋಡಿ:
ಇನ್ನು ಮೊನ್ನೆ ದೆಹಲಿಯಲ್ಲಿ ಸಿನಿಮಾ ಪ್ರಚಾರ ಕಾರ್ಯದಲ್ಲಿದ್ದ ನಟ ಸುದೀಪ್ ಅವರು ವಿಕ್ರಾಂತ್ ರೋಣ ಮತ್ತು ವಿವಿಧ ಭಾಷೆಗಳಿಗೆ ಡಬ್ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ತಂಡವು ಸಿನೆಡಬ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹೊಸ ಆ್ಯಪ್ ಸಿನಿಪ್ರಿಯರು ತಮ್ಮ ಆಯ್ಕೆಯ ಭಾಷೆಯಲ್ಲಿ ಸಿನಿಮಾವನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.
ಉದಾಹರಣೆಗೆ, ನೀವು ಆಂಧ್ರಪ್ರದೇಶದಲ್ಲಿದ್ದರೆ ಮತ್ತು ಕನ್ನಡ ಆವೃತ್ತಿಯಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನು ವೀಕ್ಷಿಸಬೇಕು ಎಂದರೆ ನೀವು ಕಷ್ಟಪಡಬೇಕಿಲ್ಲ. ನಿಮಗೆ ಥಿಯೇಟರ್ಗಳಲ್ಲಿ ಕನ್ನಡ ಆವೃತ್ತಿ ಸಿಗುವುದಿಲ್ಲ ಎಂಬ ಚಿಂತೆ ಬೇಡ. ನೀವು ತೆಲುಗು ಭಾಷೆಯಲ್ಲಿ ಸಿನಿಮಾ ನೋಡಲು ಹೋಗಬಹುದು, ಅಲ್ಲಿ ಈ ಅಪ್ಲಿಕೇಶನ್ ಅನ್ನು ಬಳಸಿ ನಿಮ್ಮ ಆಯ್ಕೆಯ ಭಾಷೆಯನ್ನು ಸಿಂಕ್ ಮಾಡಬಹುದು. ಡೈಲಾಗ್, ಹಾಡುಗಳು, ಎಲ್ಲವೂ ನಿಮಗೆ ನಿಮ್ಮ ಭಾಷೆಯಲ್ಲಿ ಸಿಗುತ್ತದೆ. ಇದು ಥಿಯೇಟರ್ನಲ್ಲಿ ಮಾತ್ರ ಕೆಲಸ ಮಾಡುತ್ತದೆ ಎಂದು ಸುದೀಪ್ ವಿವರಿಸಿದ್ದಾರೆ.
ಇದನ್ನೂ ಓದಿ: Vikrant Rona: ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ, NFT ಗೆ ಎಂಟ್ರಿ ಕೊಟ್ಟ ವಿಕ್ರಾಂತ್ ರೋಣ
ವಿಕ್ರಾಂತ್ ರೋಣ ಪ್ರೀಮಿಯರ್ ಶೋ:
ಜುಲೈ 28 ರಂದು 3D ನಲ್ಲಿ ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣ, ಜುಲೈ 27 ರಂದು ದುಬೈನಲ್ಲಿ ಅದರ ಅಂತರರಾಷ್ಟ್ರೀಯ ಪ್ರೀಮಿಯರ್ ಅನ್ನು ಆಯೋಜಿಸಿದೆ. ಜುಲೈ 24 ಅಥವಾ 25 ರಂದು ಬೆಂಗಳೂರಿನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ನಡೆಸಲು ತಂಡ ನಿರ್ಧರಿಸಿದೆ. ಕೆಜಿಎಪ್ ಬಳಿಕ ಕನ್ನಡ ಚಿತ್ರರಂಗದಿಂದ ಬರುತ್ತಿರೋ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರವಾಗಿದ್ದು, ಅನೂಪ್ ಭಂಡಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ