• Home
  • »
  • News
  • »
  • entertainment
  • »
  • Bollywood: ಅಮೀರ್‌ ಖಾನ್‌ ವಿಚ್ಛೇದನದ ಬಗ್ಗೆ ಸಹೋದರ ಹೇಳಿದ್ದೇನು ಗೊತ್ತಾ..?

Bollywood: ಅಮೀರ್‌ ಖಾನ್‌ ವಿಚ್ಛೇದನದ ಬಗ್ಗೆ ಸಹೋದರ ಹೇಳಿದ್ದೇನು ಗೊತ್ತಾ..?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Amir Khan: ಫೈಸಲ್ ಅವರಿಗೆ ನಿಮ್ಮ ಮತ್ತು ನಿಮ್ಮ ಸಹೋದರ ಅಮೀರ್‌ ಸಂಬಂಧ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ “ನಮ್ಮ ಮಧ್ಯೆ ಎಲ್ಲವೂ ಚೆನ್ನಾಗಿದೆ, ನಾವಿಬ್ಬರೂ ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

  • Share this:

ಬಾಲಿವುಡ್ ನಟ ಮತ್ತು ಮಿಸ್ಟರ್ ಪರ್ಫೆಕ್ಟ್ ಅಂತಾನೆ ಪ್ರಖ್ಯಾತಿ ಪಡೆದ ಅಮೀರ್‌ ಖಾನ್ ಇತ್ತೀಚೆಗೆ ಕಿರಣ್‌ರಿಂದ ವಿವಾಹ ವಿಚ್ಛೇದನೆ ಪಡೆದದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಆದರೆ ಹೀಗೇಕೆ ಆಯ್ತು ಅಂತ ಯಾರಿಗೂ ಗೊತ್ತಿಲ್ಲ. ಅಮೀರ್‌ ಸಹೋದರ ಫೈಸಲ್ ಖಾನ್ ಈಗ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಣ್ಣನ ಬಗ್ಗೆ ಏನು ಹೇಳಿದ್ದಾರೆ ನೋಡಿ. ಅಣ್ಣ ಅಮೀರ್‌ ಜೊತೆಗೆ ಸೇರಿಕೊಂಡು ಮಾಡಿದ್ದ ಹಿಂದಿ ಚಿತ್ರ ‘ಮೇಲಾ’ ನಂತರ ಬಾಲಿವುಡ್‌ನಲ್ಲಿ ಅವರಿಗೆ ಯಾವುದೇ ಅವಕಾಶಗಳು ಸಿಕ್ಕಿರಲಿಲ್ಲ. ತುಂಬಾ ವರ್ಷಗಳ ನಂತರ ಮತ್ತೆ ತಾವೇ ನಿರ್ದೇಶಿಸಿ ನಟಿಸುತ್ತಿರುವಂತಹ ‘ಫ್ಯಾಕ್ಟರಿ’ ಚಿತ್ರದ ಮೂಲಕ ಮತ್ತೆ ಬಾಲಿವುಡ್ ಕದವನ್ನು ತಟ್ಟುವುದಕ್ಕೆ ಸಜ್ಜಾಗಿದ್ದಾರೆ.


ಅಮೀರ್‌ 15 ವರ್ಷಗಳ ಕಾಲ ಪತ್ನಿ ಕಿರಣ್ ರಾವ್‌ರೊಂದಿಗೆ ಸಂಸಾರ ಮಾಡಿ, ಇತ್ತೀಚೆಗೆ ತಮ್ಮ ವಿಚ್ಛೇದನ ಘೋಷಿಸಿದರು. ಇದರ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ಫೈಸಲ್ "ನಾನು ಅವರಿಗೆ ಯಾವುದೇ ಸಲಹೆ ನೀಡಲು ಸಾಧ್ಯವಿಲ್ಲ, ಏಕೆಂದರೆ ನನ್ನ ಮದುವೆಯೂ ಮುರಿದು ಬಿದ್ದಿದೆ, ಹಾಗಾಗಿ ನಾನು ಯಾರ ವೈಯಕ್ತಿಕ ಜೀವನದ ಬಗ್ಗೆಯೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅವರಿಗೆ ಯಾವುದು ಉತ್ತಮ ಎಂದು ಅವರಿಬ್ಬರಿಗೂ ತಿಳಿದಿದೆ" ಎಂದು ಹೇಳಿದರು.


ಫೈಸಲ್ ಅವರಿಗೆ ನಿಮ್ಮ ಮತ್ತು ನಿಮ್ಮ ಸಹೋದರ ಅಮೀರ್‌ ಸಂಬಂಧ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ “ನಮ್ಮ ಮಧ್ಯೆ ಎಲ್ಲವೂ ಚೆನ್ನಾಗಿದೆ, ನಾವಿಬ್ಬರೂ ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುತ್ತೇವೆ. ನಾನು ಈಗ ನಿರ್ದೇಶನಕ್ಕೆ ಕೈ ಹಾಕಿದ್ದು, ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ನಿರ್ಮಾಪಕರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ದೇವರ ಮತ್ತು ಪ್ರೇಕ್ಷಕರ ತೀರ್ಪು ಇನ್ನೂ ನೋಡಬೇಕಿದೆ", ಎಂದು ಹೇಳಿದರು.


ಇದನ್ನೂ ಓದಿ: ಲೂಸ್ ಮಾದ ಅಭಿನಯದ ಲಂಕೆ ಚಿತ್ರದ ಆಡಿಯೋ ರಿಲೀಸ್

ತನ್ನ ತಾಯಿ ಮತ್ತು ಸಹೋದರ ಅಮೀರ್‌ ಇಬ್ಬರೂ ಫ್ಯಾಕ್ಟರಿ ಚಿತ್ರವನ್ನು ಈಗಾಗಲೇ ವೀಕ್ಷಿಸಿದ್ದು, ಅದನ್ನು ಇಷ್ಟಪಟ್ಟಂತೆ ಅನ್ನಿಸುತ್ತಿದೆ. ಈ ಚಿತ್ರ ನೋಡಿದ ನಂತರ ಅಮೀರ್‌ ಸ್ವತಃ ನನ್ನ ಬಳಿ ಬಂದು ನನ್ನ ಹಾಡುಗಾರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ನೀನು ನನಗಿಂತಲೂ ತುಂಬಾ ಚೆನ್ನಾಗಿ ಹಾಡುತ್ತಿಯ ಎಂದು ಹೇಳಿದರು ಎಂದು ಫೈಸಲ್ ಸುದ್ದಿ ಮಾಧ್ಯಮದವರಿಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.


ಫೈಸಲ್ ತನ್ನ ಕುಟುಂಬದೊಂದಿಗೆ ಕಾನೂನಿನ ಹೋರಾಟ ನಡೆಸುತ್ತಿದ್ದು, ಕುಟುಂಬದವರು ಫೈಸಲ್ ಖಿನ್ನತೆಗೊಳಗಾಗಿದ್ದರು ಮತ್ತು ಅವರಿಗೆ ಸ್ಕಿಜೋಫ್ರೇನಿಯಾ ಇದೆ ಎಂದು ಭಾವಿಸಿ ಒಂದು ವರ್ಷ ಗೃಹಬಂಧನದಲ್ಲಿ ಇರಿಸಿದ್ದರು. ತನ್ನ ಸಹಿ ಹಕ್ಕುಗಳನ್ನು ಬಿಟ್ಟುಕೊಡುವಂತೆ ಆತನ ಕುಟುಂಬದವರು ಕೇಳಿದಾಗ ಫೈಸಲ್ ನ್ಯಾಯಾಲಯದ ಮೊರೆ ಹೋದರು.


ಫೈಸಲ್ ಜೆಜೆ ಆಸ್ಪತ್ರೆಯಲ್ಲಿ 20 ದಿನಗಳ ಕಾಲ ಮಾನಸಿಕ ಮೌಲ್ಯಮಾಪನಕ್ಕೆ ಒಳಗಾಗಿ, ನಂತರ ಅವರು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದು ಘೋಷಿಸಲಾಯಿತು. "ನನಗೆ ಒಂದು ವರ್ಷದವರೆಗೆ ತಪ್ಪು ಔಷಧಿಗಳನ್ನು ನೀಡಲಾಯಿತು" ಎಂದು ಕಳೆದ ವರ್ಷ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


 

First published: