• Home
  • »
  • News
  • »
  • entertainment
  • »
  • Dhoomam: KGF ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಅನೌನ್ಸ್! ಧೂಮಂನಲ್ಲಿ ಪುಷ್ಪ ಸ್ಟಾರ್

Dhoomam: KGF ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಅನೌನ್ಸ್! ಧೂಮಂನಲ್ಲಿ ಪುಷ್ಪ ಸ್ಟಾರ್

ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಧೂಮಂ

ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಧೂಮಂ

ಹೊಂಬಾಳೆ ಫಿಲ್ಮ್ಸ್ ತನ್ನ ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದು ಇದರಲ್ಲಿ ಮಾಲಿವುಡ್ ಸ್ಟಾರ್ಸ್ ಮಿಂಚಲಿದ್ದಾರೆ. ಧೂಮಂ ಕುರಿತು ಇಲ್ಲಿದೆ ಡೀಟೆಲ್ಸ್.

  • Share this:

ಹೊಂಬಾಳೆ ಫಿಲ್ಮ್ಸ್ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದರೆ ಸಿನಿ ಪ್ರಿಯರ ಕುತೂಹಲ ಕೆರಳುತ್ತದೆ. ಕೆಜಿಎಫ್​ನಂತ ಸೂಪರ್ ಹಿಟ್ ಸಿನಿಮಾ ಕೊಟ್ಟ ಹೊಂಬಾಳೆ ಫಿಲ್ಮ್ಸ್ (Hombale Films) ಬಗ್ಗೆ ಸಿನಿಪ್ರಿಯರ ಈ ನಿರೀಕ್ಷೆ ತುಂಬಾ ಕಾಮನ್. ಮುಂದಿನ ಸಿನಿಮಾ (Cinema) ಯಾವುದು? ಮುಂದೆ ಹೊಂಬಾಳೆ ಫಿಲ್ಮ್ಸ್ ಯಾವ ಸಿನಿಮಾ  ನಿರ್ಮಿಸಲಿದೆ ಎನ್ನುವ ಕುತೂಹಲದಲ್ಲಿರುವ ಮಂದಿಗೆ ಉತ್ತರ ಸಿಕ್ಕಿದೆ. ಸೌತ್ ನಟ  (South Actor)ಫಹದ್ ಫಾಸಿಲ್ ಮಲಯಾಳಂ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಪುಷ್ಪಾ ನಂತರ ಇವರ ರೇಂಜ್ ಬದಲಾಗಿದೆ. ಸ್ಟಾರ್ ನಟ ಹೀರೋ ಆಗಿ ಮಿಂಚಿದ್ದಕ್ಕಿಂತ ಹೆಚ್ಚಾಗಿ ಈಗ ತೀವ್ರವಾದ ಅಭಿನಯದಿಂದ ಅಭಿಮಾನಿಗಳನ್ನು ಮೆಚ್ಚಿಸುತ್ತಿದ್ದಾರೆ. ಫಹದ್ ಧೂಮಮ್‌ಗಾಗಿ (Dhoomam) ಹೊಂಬಾಳೆ ಫಿಲಂಸ್‌ನೊಂದಿಗೆ ಕೈ ಜೋಡಿಸಲು ಸಿದ್ಧರಾಗಿದ್ದಾರೆ. ಶ್ರದ್ಧಾ ಶ್ರೀನಾಥ್ ನೇತೃತ್ವದ ಯು ಟರ್ನ್ ಮತ್ತು ಸತೀಶ್ ನೀನಾಸಂ ಅವರ ಲೂಸಿಯಾ ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾದ ಪವನ್ ಕುಮಾರ್ (Pawan Kumar) ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.


ಅಪರ್ಣಾ ಬಾಲಮುರಳಿ ನಾಯಕಿಯಾಗಿರುವ ಈ ಚಿತ್ರವನ್ನು ಪವನ್ ಕುಮಾರ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಅಕ್ಟೋಬರ್ 9 ರಂದು ಸೆಟ್ಟೇರಲಿದೆ. ಅಕ್ಟೋಬರ್ 9, 2022 ರಿಂದ ಧೂಮಮ್ ಶುರುವಾಗಲಿದೆ. ಎಂಡ್ ಗೇಮ್ 2023 ಬೇಸಿಗೆಯಲ್ಲಿ ಪ್ರಾರಂಭವಾಗುತ್ತದೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
ನಾಲ್ಕು ಭಾಷೆಗಳಲ್ಲಿ ಬಿಡುಗಡೆ


ಧೂಮಮ್ ಥ್ರಿಲ್ಲರ್ ಸಿನಿಮಾವನ್ನು, ಈ ಹಿಂದೆ ಲೂಸಿಯಾ ಮತ್ತು ಯು-ಟರ್ನ್ ಅನ್ನು ನಿರ್ದೇಶಿಸಿದ್ದ ಪವನ್ ಕುಮಾರ್ ನಿರ್ದೇಶಿಸಿ ಚಿತ್ರಕಥೆ ಬರೆಯಲಿದ್ದಾರೆ. ಧೂಮಮ್ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಅಕ್ಟೋಬರ್ 9 ರಂದು ಪ್ರಾರಂಭವಾಗಲಿದ್ದು, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು 4 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


ಇದನ್ನೂ ಓದಿ: Ponniyin Selvan Movie Review: ಕಾದಂಬರಿ ಸಿನಿಮಾ ಆದಾಗ ಅದ್ಭುತ! ಪೊನ್ನಿಯಿನ್ ಸೆಲ್ವನ್​ಗೆ ವ್ಯಾಪಕ ಮೆಚ್ಚುಗೆ


ಮಲಯಾಳಂ ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಧೂಮಮ್ ಎರಡನೇ ಸಿನಿಮಾ ಮಾಡುತ್ತಿದೆ. ಧೂಮಮ್ ಚಿತ್ರದ ಪ್ರಮಾಣ ಮತ್ತು ವ್ಯಾಪ್ತಿ ದೊಡ್ಡದಾಗಲಿದೆ. ಈ ಚಿತ್ರವು ಟಾಪ್ ನಟರು ಮತ್ತು ತಂತ್ರಜ್ಞರನ್ನು ಒಳಗೊಂಡಿರುತ್ತದೆ, ಅದರ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.ಫಸ್ಟ್ ಲುಕ್ ಬಿಡುಗಡೆಗೊಳಿಸಿ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, 'ಧೂಮಮ್ ಹೊಸ ಪರಿಕಲ್ಪನೆಯನ್ನು ಆಧರಿಸಿದೆ. ನಾವು ಹೊಸ ಪಾತ್ರದಲ್ಲಿ ಫಹಾದ್ ಅವರನ್ನು ನೋಡಲಿದ್ದೇವೆ ಮತ್ತು ವೀಕ್ಷಿಸಲಿದ್ದೇವೆ ಎಂದು ತಿಳಿಸಲಾಗಿದೆ.


ಇದನ್ನೂ ಓದಿ: Vikram Vedha Movie Review: ಒರಿಜಿನಲ್ ಸಿನಿಮಾವನ್ನೇ ಮರೆಸುತ್ತಂತೆ ಹಿಂದಿ ವಿಕ್ರಂ ವೇದಾ! ಹೇಗಿದೆ ಸಿನಿಮಾ?


ಖ್ಯಾತ ಛಾಯಾಗ್ರಾಹಕಿ ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿದೆ. ಸಿನಿಮಾ 2023 ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.


ವಿಶ್ವಾದ್ಯಂತ ಕೆಜಿಎಫ್ ಸಿನಿಮಾಗಳ ಮೂಲಕ ಪ್ರೊಡಕ್ಷನ್ ಹೌಸ್ ರೋಲ್‌ನಲ್ಲಿದೆ. ಸಲಾರ್ ಜೊತೆ ರಾಕಿಂಗ್ ಸ್ಟಾರ್ ಯಶ್, ಸುಧಾ ಕೊಂಗೂರ, ಪ್ರಶಾಂತ್ ನೀಲ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪೃಥ್ವಿರಾಜ್ ಸುಕುಮಾರನ್, ಫಹದ್ ಫಾಸಿಲ್ ಅವರ ಜೊತೆಗೂ ಪ್ರಾಜೆಕ್ಟ್ ಮಾಡಿ ಭಾರತೀಯ ಚಿತ್ರರಂಗದಾದ್ಯಂತ ತಮ್ಮ ಅಸ್ತಿತ್ವ ಗುರುತಿಸಲು ಸಿದ್ಧರಾಗಿದ್ದಾರೆ.

Published by:Divya D
First published: