ಕಾಲಿವುಡ್ ಖ್ಯಾತ ನಟ ಸೂರ್ಯ ಮತ್ತು ಮಾಲಿವುಡ್ ಖ್ಯಾತ ನಟ ಫಾಹದ್ ಫಾಸಿಲ್ ಒಂದೇ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಕಾಲಿವುಡ್ ಸಿನಿಮಾರಂಗದಲ್ಲಿ ಸುದ್ದಿಯೊಂದು ಹರಿದಾಡಿದೆ. ವೆಬ್ ಸಿರೀಸ್ನಲ್ಲಿ ಇವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ ಎಂಬ ಸುದ್ದಿಯಂತೂ ಅಭಿಮಾನಿಗಳು ಸಂತೋಷಕ್ಕೆ ಇನ್ನಷ್ಟು ಕಾರಣವಾಗಿದೆ.
ಇತ್ತೀಚೆಗೆ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ‘ನವರಸ’ ಟೈಟಲ್ನಲ್ಲಿ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಹಾಗಾಗಿ ಈ ವೆಬ್ ಸಿರೀಸ್ನಲ್ಲಿ ಸೂರ್ಯ ಹಾಗೂ ಫಾಹದ್ ಫಾಸಿಲ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆಯೇ, ‘ನವರಸ’ ಶಿರ್ಷಿಕೆಯ ವೆಬ್ ಸಿರೀಸ್ನಲ್ಲಿ ಒಂಭತ್ತು ಎಪಿಸೋಡ್ಗಳಿರಲಿದ್ದು, ಒಂದೊಂದು ಎಪಿಸೋಡ್ ಅನ್ನು ಒಬ್ಬೊಬ್ಬ ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆ. ಹಾಗಾಗಿ ಒಟ್ಟು 9 ನಿರ್ದೇಶಕರಿಂದ ‘ನವರಸ’ ವೆಬ್ ಸಿರೀಸ್ ಮೂಡಿ ಬರಲಿದೆ. ಸುಧಾ ಕೊಂಗಾರಾ, ಜಯೇಂದ್ರ, ಗೌತಮ್ ಮೆನನ್, ಬಿಜೋಯ್ ನಂಬಿಯಾರ್, ಕಾರ್ತಿಕ್ ನರೇನ್, ಕೆ.ವಿ ಆನಂದ್ ನಿರ್ದೇಶನ ಮಾಡಲಿದ್ದಾರೆ.
ಇನ್ನು ನಟ ವಿಜಯ್ ಸೇತುಪತಿ ಕೂಡ ನಟಿಸಲಿದ್ದಾರಂತೆ ಅವರ ಜೊತೆಗೆ ಅರವಿಂದ್ ಸ್ವಾಮಿ ಮತ್ತು ಸಿದ್ಧಾರ್ಥ್ ಕೂಡ ‘ನವರಸ’ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
ಅಳಿಯನನ್ನೇ ಮದುವೆಯಾದ ಅತ್ತೆಯ ಜೀವನದಲ್ಲಿ ಈಗ ಹೊಸ ಟ್ವಿಸ್ಟ್; ಏನದು?; ಈ ಸ್ಟೋರಿ ಓದಿ
ನಟ ಸೂರ್ಯ ಸುರರೈ ಪೊಟ್ರು, ರೋಕೆಟ್ರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರೋನಾ ಅವಾಂತರ ಕಡಿಮೆಯಾದಂತೆ ಈ ಸಿನಿಮಾಗಳು ತೆರೆ ಮೇಲೆ ಬರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ