ಮೇಘನಾ ರಾಜ್ ಮಗು ನೋಡಲು ಕೇರಳದಿಂದ ಬಂದ ಮಲಯಾಳಂ ಸ್ಟಾರ್ ಜೋಡಿ ಫಹಾದ್ ಪಾಸಿಲ್- ನಜ್ರಿಯಾ

ಕನಕಪುರ ರಸ್ತೆಯ ಧ್ರುವ ಸರ್ಜಾ ಒಡೆತನದ ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿ ಇದೆ. ಮಗು ಹಾಗೂ ತಾಯಿ ಆರೋಗ್ಯ ವಿಚಾರಿಸಿದ ನಂತರ ನಿರ್ದೇಶಕ ಪನ್ನಗಾಭರಣ ಜತೆ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಚಿರು ಸರ್ಜಾ ಸಮಾಧಿಗೆ ತೆರಳಿದ್ದಾರೆ.

Fahadh Faasil And Nazriya Nazim

Fahadh Faasil And Nazriya Nazim

  • Share this:
ಸರ್ಜಾ ಕುಟುಂಬಕ್ಕೆ ಗುರುವಾರ ಸಿಹಿ ಸುದ್ದಿ ಸಿಕ್ಕಿತ್ತು. ಕೆಲ ತಿಂಗಳ ಹಿಂದಷ್ಟೇ ಗಂಡ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದ ನಟಿ ಮೇಘನಾ ರಾಜ್​ ಈಗ ಗಂಡುಮಗುವಿಗೆ ಜನ್ಮ ನೀಡಿದ್ದರು. ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್​ ಸರ್ಜಾ ಅವರ ಆಗಮನವಾಗಿತ್ತು. ಅನೇಕ ಸ್ಟಾರ್​ ನಟ-ನಟಿಯರು ಬಂದು ಮೇಘನಾ ಆರೋಗ್ಯ ವಿಚಾರಿಸಿ, ಶುಭಕೋರಿ ಹೋಗಿದ್ದರು. ಈಗ ಮಲಯಾಳಂನ ಖ್ಯಾತ ಸ್ಟಾರ್​ ದಂಪತಿ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ಇಬ್ಬರೂ ಕೇರಳದಿಂದ ಕಾರಿನಲ್ಲೇ ಆಗಮಿಸಿದ್ದು ವಿಶೇಷವಾಗಿತ್ತು.

ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಜನ್ಮದಿನ ಆಚರಣೆ ಮಾಡಿತ್ತು ಸರ್ಜಾ ಕುಟುಂಬ. ಅದೇ ದಿನವೇ ಮೇಘನಾಗೆ ಹೆರಿಗೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಕೆಲ ದಿನ ಬಿಟ್ಟು ಜೂನಿಯರ್​ ಚಿರು ಆಗಮಿಸಿದ್ದ. ವಿಶೇಷ ಎಂದರೆ, ಗುರುವಾರ ಚಿರು ಸರ್ಜಾ- ಮೇಘನಾ ನಿಶ್ಚಿತಾರ್ಥದ ದಿನ. ಅದೇ ದಿನವೇ ಮೇಘನಾಗೆ ಮಗುವಾಗಿತ್ತು. ಈಗ ಮೇಘನಾ ಆಪ್ತ ಸ್ನೇಹಿತರಾದ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಬೆಂಗಳೂರಿಗೆ ಆಗಮಿಸಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ.

ಕನಕಪುರ ರಸ್ತೆಯ ಧ್ರುವ ಸರ್ಜಾ ಒಡೆತನದ ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿ ಇದೆ. ಮಗು ಹಾಗೂ ತಾಯಿ ಆರೋಗ್ಯ ವಿಚಾರಿಸಿದ ನಂತರ ನಿರ್ದೇಶಕ ಪನ್ನಗಾಭರಣ ಜತೆ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಚಿರು ಸರ್ಜಾ ಸಮಾಧಿಗೆ ತೆರಳಿದ್ದಾರೆ. ಸಮಾಧಿಗೆ ಭೇಟಿ ನೀಡಿದ ನಂತರದಲ್ಲಿ ಅವರು ಬೆಂಗಳೂರಲ್ಲಿ ಕೆಲ ಕಾಲ ವಿಶ್ರಮಿಸಿ ಕೇರಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಇದು ಕೊರೋನಾ ಸಂದರ್ಭ. ಈ ವೇಳೆ ವಿಮಾನದಲ್ಲಿ ಬಂದರೆ ವೈರಸ್​ ಅಂಟುವ ಸಾಧ್ಯತೆ ಇರುತ್ತದೆ. ಈ ವೇಳೆ ತಾಯಿ ಹಾಗೂ ಮಗುವನ್ನು ಭೇಟಿ ಮಾಡೋದು ಅಷ್ಟೊಂದು ಸೇಫ್​ ಅಲ್ಲ. ಹೀಗಾಗಿ, ಇಬ್ಬರೂ ಕಾರಿನಲ್ಲೇ ಬಂದಿದ್ದಾರೆ.
Published by:Rajesh Duggumane
First published: