• Home
  • »
  • News
  • »
  • entertainment
  • »
  • Ranveer Singh: ನಟ ರಣವೀರ್​​ನನ್ನು ನೋಡಿ ನೀವ್ಯಾರು ಅಂತ ಕೇಳಿದ್ರಂತೆ! ದೀಪಿಕಾ ಪತಿ ಕೊಟ್ಟ ಉತ್ತರ ಎಲ್ಲರ ಮನಸು ಗೆದ್ದಿತು

Ranveer Singh: ನಟ ರಣವೀರ್​​ನನ್ನು ನೋಡಿ ನೀವ್ಯಾರು ಅಂತ ಕೇಳಿದ್ರಂತೆ! ದೀಪಿಕಾ ಪತಿ ಕೊಟ್ಟ ಉತ್ತರ ಎಲ್ಲರ ಮನಸು ಗೆದ್ದಿತು

ರಣವೀರ್ ಸಿಂಗ್

ರಣವೀರ್ ಸಿಂಗ್

ಕ್ರೀಡಾ ಕಾರ್ಯಕ್ರಮದ ವೀಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಖ್ಯಾತ ಬಾಲಿವುಡ್ ನಟನನ್ನು ಎಫ್ 1 ಪತ್ರಕರ್ತರಾದ ಮಾರ್ಟಿನ್ ಬ್ರುಂಡಲ್ ಗುರುತಿಸಲು ವಿಫಲವಾಗಿ 'ನೀವು ಯಾರು' ಎಂದು ಕೇಳಿದರು.

  • Share this:

ಬಾಲಿವುಡ್ (Bollywood) ನಟ ರಣವೀರ್ ಸಿಂಗ್ (Ranveer Singh) ಎಂದರೆ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ ಅಂತ ನಾವು ಕೇಳಬಹುದು. ಆದರೆ ಎಲ್ಲರಿಗೂ ಎಲ್ಲರೂ ಗೊತ್ತಿರುವುದಿಲ್ಲ ಎಂಬ ಮಾತನ್ನು ಸಾಬೀತುಪಡಿಸುತ್ತದೆ. ಇಲ್ಲಿ ನಡೆದಿರುವ ಒಂದು ಘಟನೆ ಅಂತ ಹೇಳಬಹುದು. ಹೌದು.. ಎಷ್ಟೋ ಬಾರಿ ನಟ ಮತ್ತು ನಟಿಯರು ತಮ್ಮನ್ನು ಜನರು ಗುರುತು (Identity) ಹಿಡಿಯುತ್ತಾರೆ ಅನ್ನೋ ಕಾರಣಕ್ಕೆ ಹೊರಗೆ ಸುತ್ತಾಡಲು ಮತ್ತು ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾರೆ ಅಂತ ಹೇಳಬಹುದು. ಕೆಲವೊಮ್ಮೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದರೆ ಅವರ ಜೊತೆ ಅವರ ಬಾಡಿಗಾರ್ಡ್ ಗಳನ್ನು ಕರೆದುಕೊಂಡು ಹೋಗುತ್ತಾರೆ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಅವರ ಜೊತೆ ಸೆಲ್ಫಿ (Selfie) ತೆಗೆಸಿಕೊಳ್ಳಲು ಮತ್ತು ಆಟೋಗ್ರಾಫ್ ಕೇಳಲು ಮುಗಿ ಬೀಳುತ್ತಾರೆ ಅನ್ನೋ ಕಾರಣಕ್ಕೆ ಅಂತ ಹೇಳಬಹುದು.


ಬಾಲಿವುಡ್ ನಟನಿಗೆ ‘ಯಾರು ನೀವು’ ಅಂತ ಕೇಳಿದ್ರಂತೆ ನೋಡಿ..


ಆದರೆ ಇಲ್ಲೊಬ್ಬ ನಟ ತನ್ನ ನೆಚ್ಚಿನ ಎಫ್ 1 ನೋಡಲು ಅಬುಧಾಬಿಗೆ ಹೋದಾಗ ಅಲ್ಲಿ ಅವರನ್ನ ‘ಯಾರು ನೀವು’ ಅಂತ ಕೇಳಿದ್ದರಂತೆ ನೋಡಿ. ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆದ ಫಾರ್ಮುಲಾ 1 ರೇಸ್ ನಲ್ಲಿ ನಟ ರಣವೀರ್ ಸಿಂಗ್ ಅವರು ಭಾಗವಹಿಸಿದ್ದರು. ಇದಕ್ಕಾಗಿ ಅವರು ಭಾರತೀಯ ಬ್ರ್ಯಾಂಡ್ ಅಂಬಾಸಿಡರ್ ಸಹ ಆಗಿದ್ದಾರೆ.
ಈ ಕ್ರೀಡಾ ಕಾರ್ಯಕ್ರಮದ ವೀಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಖ್ಯಾತ ಬಾಲಿವುಡ್ ನಟನನ್ನು ಎಫ್ 1 ಪತ್ರಕರ್ತರಾದ ಮಾರ್ಟಿನ್ ಬ್ರುಂಡಲ್ ಗುರುತಿಸಲು ವಿಫಲವಾಗಿ 'ನೀವು ಯಾರು' ಎಂದು ಕೇಳಿದರು.


ಹಾಗೆ ಕೇಳಿದಾಗ ತಕ್ಷಣಕ್ಕೆ ಸ್ವಲ್ಪವೂ ವಿಚಲಿತರಾಗದೇ, ಆ ಕ್ಷಣವನ್ನು ರಣವೀರ್ ಸಿಂಗ್ ಅವರು ಉತ್ತಮವಾಗಿ ನಿಭಾಯಿಸಿದರು ಎಂದು ಹೇಳಬಹುದು. ನಟ “ನಾನು ಮುಂಬೈನಿಂದ ಬಂದಿದ್ದು, ತಾನೊಬ್ಬ ಬಾಲಿವುಡ್ ನಟ ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡರು.
ನಂತರ ಬ್ರುಂಡಲ್ ನಟನ ಉಡುಪನ್ನು ಶ್ಲಾಘಿಸಲು ಹೋದರು, ಅದಕ್ಕೆ ರಣವೀರ್ ಅವರು ಮರುದಿನ ಬೆಳಿಗ್ಗೆ ಉಡುಪನ್ನು ಹಿಂತಿರುಗಿಸಬೇಕಾಗುತ್ತದೆ ಎಂದು ತಮಾಷೆ ಮಾಡಿದರು.


ನಟ ರಣವೀರ್ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಹೇಳಿದ್ದೇನು?


ಕೆಲವು ನೆಟ್ಟಿಗರು ರಣವೀರ್ ಸಿಂಗ್ ಅವರಿಗೆ ಹೀಗೆ ಕೇಳಿದ್ದು ತುಂಬಾನೇ 'ಮುಜುಗರ' ಅಂತ ಟೀಕಿಸಿದರೆ, ಅನೇಕರು ಆ ಪತ್ರಕರ್ತನಿಗೆ ನಟ ಹೇಗೆ ವಿನಮ್ರವಾಗಿ ಉತ್ತರಿಸಿದ್ದಾರೆ ಅಂತ ತಿಳಿದು ಅವರನ್ನು ಬೆಂಬಲಿಸಿದರು. 'ಮಿಸ್ಟರ್ ಸಿಂಗ್ ಅದನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ' ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದರೆ, ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು 'ಎಂತಹ ವಿನಮ್ರ ವ್ಯಕ್ತಿ, ಬೇರೆ ಯಾರಿಗೂ ಸಾಧ್ಯವಿಲ್ಲದಂತೆ ಆ ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿದರು” ಎಂದು ಬರೆದಿದ್ದಾರೆ.


ಇದನ್ನೂ ಓದಿ: Samantha: ಸಮಂತಾ ಆರೋಗ್ಯ ಸಮಸ್ಯೆ! ಸೌತ್ ಕೊರಿಯಾಗೆ ಶಿಫ್ಟ್


ಈ ಕ್ಲಿಪ್ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಇನ್ನೂ ಹೆಚ್ಚಾಗುತ್ತಲೇ ಇದೆ ಅಂತ ಹೇಳಬಹುದು. ಈ ಟ್ವೀಟ್ ಗೆ ಇದುವರೆಗೂ ಸುಮಾರು 21,000 ಲೈಕ್ ಗಳು ಸಹ ಬಂದಿವೆ. ಈ ವೀಡಿಯೋವು ವಿವಿಧ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿತು. ಈ ಕ್ಲಿಪ್ ಅನ್ನು ಮರು ಟ್ವೀಟ್ ಸಹ ಮಾಡಿದರು.


ಯಾರನ್ನೆಲ್ಲಾ ಭೇಟಿ ಆದ್ರು ನೋಡಿ ರಣವೀರ್?


ರಣವೀರ್ ಸಿಂಗ್ ಅವರ ಸಭ್ಯ ಮತ್ತು ವೃತ್ತಿಪರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಹೃದಯಗಳನ್ನು ಗೆಲ್ಲುತ್ತಿದೆ. ನಂತರ ಅದೇ ಕಾರ್ಯಕ್ರಮದಲ್ಲಿ ಬಂದಿದ್ದಂತಹ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ನ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಸಹ ರಣವೀರ್ ಅವರು ಭೇಟಿಯಾದರು ಮತ್ತು ಅಮೇರಿಕದ ಸಿಂಗರ್ ಅಕಾನ್ ಅವರೊಂದಿಗೂ ಸಹ ಸ್ವಲ್ಪ ಮೋಜಿನ ಕ್ಷಣಗಳನ್ನು ಕಳೆದರು. ಆನಂತರ ನಟ ರಣವೀರ್ ಸಿಂಗ್ ಅಲ್ಲಿರುವ ಅವರ ಅಭಿಮಾನಿಗಳೊಂದಿಗೆ ಸೆಲ್ಫಿಯನ್ನು ಸಹ ತೆಗೆಸಿಕೊಂಡರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು