ಹಾಲಿವುಡ್ (Hollywood) ಹಾಗೂ ಅಂತರಾಷ್ಟ್ರೀಯ ಸಿನಿ ಕ್ಷೇತ್ರದಲ್ಲಿ ದಕ್ಷಿಣ ಏಷ್ಯಾದವರಿಗೆ ಮನ್ನಣೆ ದೊರಕುವಂತಾಗಲು ಪರಿಶ್ರಮ ವಹಿಸಿದ ಅನೇಕ ಕಲಾವಿದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಒಬ್ಬರು. ಹಾಲಿವುಡ್ ಸಿನಿ ಜಗತ್ತಿನಲ್ಲೂ ತಾನೊಬ್ಬ ಅದ್ಭುತ ಪ್ರತಿಭಾವಂತೆ ಎಂಬುದನ್ನು ಪ್ರಿಯಾಂಕಾ ಸಾಧಿಸಿದ್ದಾರೆ. ಇದೀಗ ಪ್ರಿಯಾಂಕಾ, ಪಾಕಿಸ್ತಾನಿ (Pakisthani) ಚಲನಚಿತ್ರ ನಿರ್ಮಾಪಕಿ ಶರ್ಮೀನ್ ಒಬೈದ್ ಚಿನೋಯ್ ಅವರನ್ನು ದಕ್ಷಿಣ ಏಷ್ಯಾದವರೆಂದು ಸಂಬೋಧಿಸಿದ್ದು ಹಲವಾರು ಪಾಕಿಸ್ತಾನಿ ನಟರು ಹಾಗೂ ಸಿನಿ ಗಣ್ಯರ ಕಣ್ಣು ಕೆಂಪಗಾಗಿಸಿದೆ.
ಶರ್ಮೀನ್ ಒಬೈದ್ ಚಿನೋಯ್ರನ್ನು ದಕ್ಷಿಣ ಏಷ್ಯಾದವರೆಂದು ಸಂಬೋಧಿಸಿದ ಪ್ರಿಯಾಂಕಾ
ಪಾಕಿಸ್ತಾನಿ ಚಲನಚಿತ್ರ ನಿರ್ಮಾಪಕಿ ಶರ್ಮೀನ್ ಒಬೈದ್ ಚಿನೋಯ್ ಅವರನ್ನು ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ದಕ್ಷಿಣ ಏಷ್ಯಾದವರು ಎಂದು ಸಂಬೋಧಿಸಿದ್ದು ಇದೀಗ ಪಾಕಿಸ್ತಾನ ನಟ ಅದ್ನಾನ್ ಸಿದ್ದಿಕಿ ಸೇರಿದಂತೆ ಹಲವಾರು ಸಿನಿ ಗಣ್ಯರನ್ನು ಅಸಾಮಾಧಾನಗೊಳಿಸಿದೆ.
ದಕ್ಷಿಣ ಏಷ್ಯಾದ ಶ್ರೇಷ್ಠತೆ ಮತ್ತು ಸಿನಿಮಾ ಜಗತ್ತಿನಲ್ಲಿನ ಸಾಧಕರನ್ನು ಗೌರವಿಸಲು ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಪೂರ್ವ ಕಾರ್ಯಕ್ರಮವನ್ನು ಪ್ರಿಯಾಂಕಾ ಆಯೋಜಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಈ ವರ್ಷ ಶರ್ಮೀನ್ ಒಬೈದ್ ಚಿನೋಯ್ ಕೂಡ ಭಾಗವಹಿಸಿದ್ದರು.
ಪ್ರಿಯಾಂಕಾರಿಗೆ ಕಾಮೆಂಟ್‌ಗಳಲ್ಲಿಯೇ ತಿರುಗೇಟು ನೀಡಿದ ಸಿದ್ಧಿಕಿ
ದಕ್ಷಿಣ ಏಷ್ಯಾದ ತಾರಾಗಣವನ್ನು ಬಳಸಿಕೊಂಡು Ms ಮಾರ್ವೆಲ್‌ನ ಎರಡು ಸಂಚಿಕೆಗಳನ್ನು ನಿರ್ದೇಶಿಸಿದ, ಓಬೈದ್ ಚಿನೋಯ್ ಇನ್ನೂ ಹೆಸರಿಡದೇ ಇರುವ ಸ್ಟಾರ್ ವಾರ್ಸ್ ಚಲನಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಈ ವಾರ ಕರ್ನಾಟಕಕ್ಕೆ ಭೇಟಿ ಕೊಟ್ಟ ಟಾಪ್ ಸೆಲೆಬ್ರಿಟಿಗಳಿವರು
ಈ ಸಮಯದಲ್ಲಿ ಚಿನೋಯ್ ಅವರನ್ನು ಅಭಿನಂದಿಸಿರುವ ಪ್ರಿಯಾಂಕಾ ಚೋಪ್ರಾ ಸ್ಟಾರ್ ವಾರ್ಸ್ ಚಲನಚಿತ್ರವನ್ನು ನಿರ್ದೇಶಿಸಿದ ಪ್ರಥಮ ಮಹಿಳೆ ಹಾಗೂ ಹಾಗೂ ಈಕೆ ದಕ್ಷಿಣ ಏಷ್ಯಾದವರು ಎಂದು ಸಂಬೋಧಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
With due respect, @priyankachopra . Sharmeen Obaid Chinoy is a Pakistani first just to brush up your knowledge. Much like the way you flaunt your Indian nationality whenever you get the opportunity before claiming to be a South Asian.🙏🏽 pic.twitter.com/B7wy8gD8QB
— Adnan Siddiqui (@adnanactor) April 14, 2023
ಚಿನೋಯ್ ಪಾಕಿಸ್ತಾನದವರು
ದಕ್ಷಿಣ ಏಷ್ಯಾದವರು ಎಂದು ಚಿನೋಯ್ ಅವರನ್ನು ಸಂಬೋಧಿಸುವುದಕ್ಕೂ ಮೊದಲು ಆಕೆ ಪಾಕಿಸ್ತಾನದವರು ಎಂದು ಸಿದ್ಧಿಕಿ ಪ್ರಿಯಾಂಕಾರಿಗೆ ತಿರುಗೇಟು ನೀಡಿದ್ದಾರೆ.
ನೀವು ಅವಕಾಶ ದೊರೆತಾಗಲೆಲ್ಲಾ ಪ್ರತಿಯೊಬ್ಬರನ್ನೂ ದಕ್ಷಿಣ ಏಷ್ಯಾದವರೆಂದು ಸಂಬೋಧಿಸುವ ಹಾಗೂ ನಿಮ್ಮ ಭಾರತೀಯತೆಯನ್ನು ಪ್ರದರ್ಶಿಸುವ ರೀತಿ ನಿಜಕ್ಕೂ ಇಷ್ಟವಾಗಿದೆ ಆದರೆ ಬಣ್ಣಿಸುವ ಮೊದಲು ವ್ಯಕ್ತಿಯ ರಾಷ್ಟ್ರೀಯತೆಯನ್ನು ತಿಳಿದುಕೊಳ್ಳಿ ಎಂದು ಕಾಮೆಂಟ್‌ನಲ್ಲಿ ತಿವಿದಿದ್ದಾರೆ.
ಸಿದ್ಧಿಕಿ ಕಾಮೆಂಟ್‌ಗೆ ಅಂಗೀಕಾರ ನೀಡಿದ ಇನ್ನಷ್ಟು ಪೋಸ್ಟ್‌ಗಳು
ಸಿದ್ದಿಕಿ ಅವರ ಪೋಸ್ಟ್‌ಗೆ ಹಲವಾರು ಕಾಮೆಂಟ್‌ಗಳು ಪ್ರತಿಕ್ರಿಯೆ ನೀಡಿದ್ದು, ಅವರ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬರಹಗಾರ ಫೈಸಲ್ ಕಪಾಡಿಯಾ ಕೂಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, ಶರ್ಮೀನ್ ಪಾಕಿಸ್ತಾನದವರು ಹಾಗೂ ಆಕೆಯನ್ನು ಪಾಕಿಸ್ತಾನಿ ಎಂದೇ ಸಂಬೋಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಪತ್ರಕರ್ತ ಅನಿಸ್ ಫಾರೂಕಿ ಕೂಡ ಸಿದ್ದಿಕಿ ಕಾಮೆಂಟ್‌ಗೆ ದನಿಗೂಡಿಸಿದ್ದು, ನೀವು ಹೇಳಿದ್ದು ನಿಜ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಿಯಾಂಕಾ ಪರ ಮಾತನಾಡಿದ ನಿರ್ಮಾಪಕ ಶಹನವಾಜ್ ಝಾಲಿ
ಪ್ರಿಯಾಂಕಾ ಹೇಳಿಕೆಯ ಕುರಿತು ಚಲನಚಿತ್ರ ನಿರ್ಮಾಪಕ ಶಹನವಾಜ್ ಝಾಲಿ ಧನಾತ್ಮಕವಾಗಿ ಉತ್ತರಿಸಿದ್ದು, ಭಿನ್ನವಾಗಿ ಯೋಚಿಸುವಂತೆ ಕರೆ ನೀಡಿದ್ದಾರೆ. ದಕ್ಷಿಣ ಏಷ್ಯಾದವರು ಎಂದು ಸಂಬೋಧಿಸುವುದರಲ್ಲಿ ತಪ್ಪೇನಿಲ್ಲ ಎಂದು ಝಾಲಿ ಪ್ರಿಯಾಂಕ ಬೆಂಬಲಕ್ಕೆ ನಿಂತಿದ್ದಾರೆ.
ಪ್ರತಿಯೊಂದು ಹೇಳಿಕೆಗಳಲ್ಲೂ ನ್ಯೂನತೆ ಹಾಗೂ ಆಪಾದನೆಗಳನ್ನು ಹುಡುಕುವ ಬದಲಿಗೆ ಯಾರನ್ನಾದರೂ ಹೊಗಳಿದಾಗ ಅದನ್ನು ಪ್ರಶಂಸಿಸಿ ಹಾಗೂ ಸ್ವೀಕರಿಸಿ ಎಂದು ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ಪ್ರಿಯಾಂಕಾರನ್ನು ಹೆಚ್ಚಿನ ನೆಟ್ಟಿಗರು ಟ್ರೋಲ್ ಮಾಡಿದ್ದು, ಆಕೆಯನ್ನು ಮತಾಂಧ ಎಂದು ಕರೆದಿದ್ದಾರೆ.
ಪ್ರಿಯಾಂಕಾ ಹಾಗೂ ಶರ್ಮೀನ್ ಪ್ರತಿಕ್ರಿಯೆ ನೀಡಿಲ್ಲ
ಈ ಕಾಮೆಂಟ್‌ಗಳಿಗೆ ಪ್ರಿಯಾಂಕಾ ಯಾವುದೇ ಪ್ರತ್ಯುತ್ತರ ನೀಡಿಲ್ಲ ಅಂತೆಯೇ ಶರ್ಮೀನ್ ಒಬೈದ್ ಚಿನೋಯ್ ಕೂಡ ಪ್ರತಿಕ್ರಿಯಿಸಿಲ್ಲ ಎಂಬುದು ವಿಶೇಷವಾದುದು.
ಇದನ್ನೂ ಓದಿ: ಸಿನಿಮಾ ಮೂಲಕ ನೋಡ್ಬಹುದು ಸೇಂಟ್ ಅಲೋಶಿಯಸ್ ಚಾಪೆಲ್‌ನ ಗತ ವೈಭವ
ಪ್ರಿಯಾಂಕಾ ಮಾರ್ಚ್‌ನಲ್ಲಿ, ಆಸ್ಕರ್ ಸಮಾರಂಭಕ್ಕೂ ಮುನ್ನ ಮಲಾಲಾ ಯೂಸುಫ್‌ಜಾಯ್, ಗಾಯಕ ಅಲಿ ಸೇಥಿ, ಕ್ವೀರ್ ಐ'ಸ್ ಟಾನ್ ಫ್ರಾನ್ಸ್ ಮತ್ತು ಪಾಕಿಸ್ತಾನಿ ಮೂಲದ ಇತರರನ್ನು ಒಳಗೊಂಡಿರುವ ಗ್ರೂಪ್ ಫೋಟೋವನ್ನು ಹಂಚಿಕೊಂಡಿದ್ದರು.
ದಕ್ಷಿಣ ಏಷ್ಯಾದವರೆಂದು ಸ್ವಯಂ ಕರೆದುಕೊಂಡಿರುವ ಚಿನೋಯ್
ಚಿತ್ರಕ್ಕೆ ನೀಡಿರುವ ಶೀರ್ಷಿಕೆಯಲ್ಲಿ, ಒಬೈದ್ ಚಿನೋಯ್ ತಮ್ಮನ್ನು ತಾವು ದಕ್ಷಿಣ ಏಷ್ಯಾದವರು (ಪಾಕಿಸ್ತಾನಿ) ಎಂದು ಎರಡು ಬಾರಿ ಸಂಬೋಧಿಸಿಕೊಂಡಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ನಮ್ಮಲ್ಲಿ ಅನೇಕರಿಗೆ ಭಾವನಾತ್ಮಕ ರಾತ್ರಿ ಎಂದೆನಿಸಿದೆ. 2012 ರ ಆಸ್ಕರ್ ಪಟ್ಟಿಯಲ್ಲಿ ನಾವು ಮೂವರು ದಕ್ಷಿಣ ಏಷ್ಯನ್ನರು ಇದ್ದೇವೆ ಎಂದು ಚಿನೋಯ್ ಬರೆದುಕೊಂಡಿದ್ದಾರೆ.
ಒಂದು ದಶಕದ ನಂತರ ನಾವು 100 ಕ್ಕೂ ಹೆಚ್ಚು ಸಿನಿ ಕಲಾವಿದರು ಸಿನಿಮಾ ರಂಗದಲ್ಲಿ ದಕ್ಷಿಣ ಏಷ್ಯಾದವರ ಸಂಭ್ರಮವನ್ನು ಆಚರಿಸಲು ಒಗ್ಗೂಡಿದ್ದೇವೆ. ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಪಡೆದ ಏಕೈಕ ದಕ್ಷಿಣ ಏಷ್ಯಾದ ಒಬ್ಬರೇ ಮಹಿಳೆಯಾಗಿ ಗೌರವಕ್ಕೆ ಪಾತ್ರರಾಗಲು ನನಗೆ ಹೆಮ್ಮೆ ಇದೆ. ಈ ಸಾಧನೆಗೆ ನಾನು ಆಭಾರಿ ಎಂದು ಬರೆದುಕೊಂಡಿದ್ದಾರೆ.
ಎರಡು ಆಸ್ಕರ್ ವಿಜೇತೆ ನಿರ್ಮಾಪಕಿ ಎಂದೆನಿಸಿರುವ ಚಿನೋಯ್
ಶರ್ಮೀನ್ ಒಬೈದ್ ಚಿನೋಯ್ ಎರಡು ಅತ್ಯುತ್ತಮ ಸಾಕ್ಷ್ಯಚಿತ್ರಗಳಾದ ಸೇವಿಂಗ್ ಫೇಸ್ ಮತ್ತು ಎ ಗರ್ಲ್ ಇನ್ ದಿ ರಿವರ್: ದಿ ಪ್ರೈಸ್ ಆಫ್ ಫಾರ್ಗಿವೆನೆಸ್‌ಗಾಗಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಪ್ರತಿಭಾವಂತೆಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ