ಸಂಜಯ್ ದತ್​ರ ಜೀವನಾಧಾರಿತ ಸಿನಿಮಾದಲ್ಲಿ 'ಸಂಜು' ಆಗಲಿದ್ದಾರೆ ರಣಬೀರ್ ಕಪೂರ್

news18
Updated:March 13, 2018, 6:37 PM IST
ಸಂಜಯ್ ದತ್​ರ ಜೀವನಾಧಾರಿತ ಸಿನಿಮಾದಲ್ಲಿ 'ಸಂಜು' ಆಗಲಿದ್ದಾರೆ ರಣಬೀರ್ ಕಪೂರ್
news18
Updated: March 13, 2018, 6:37 PM IST
ನ್ಯೂಸ್ 18 ಕನ್ನಡ

ಕಳೆದ ಕೆಲವರ್ಷಗಳಿಂದ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಯಾವ ಸಿನಿಮಾಗಳೂ ಬಿ- ಟೌನ್​ನಲ್ಲಿ ಅಷ್ಟೊಂದು ಸದ್ದು ಮಾಡಲೇ ಇಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲಿ ತೆರೆಕಂಡ ‘ಜಗ್ಗಾ ಜಾಸೂಸ್’ ರಣಬೀರ್ ಅಭಿನಯದ ಕೊನೆಯ ಚಿತ್ರ. ಆದಾದ ಬಳಿಕ ರಣಬೀರ್​ ಅವರು ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ? ಏನು ಮಾಡುತ್ತಿದ್ದಾರೆ? ಯಾವ ಚಿತ್ರಕ್ಕೆ ಸಹಿ ಹಾಕಿದ್ದಾರೆ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ರಣಬೀರ್ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಬಾಲಿವುಡ್ ನಟ ಸಂಜಯ್ ದತ್ ಅವರ ಜೀವಾನಾಧರಿತ ಸಿನಿಮಾ 'ಸಂಜು'ನಲ್ಲಿ ರಣಬೀರ್ ಕಪೂರ್ ಸಂಜು ಬಾಬಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಚಿತ್ರದ ಶೀರ್ಷಿಕೆಗೆ 'ದತ್', 'ಬಾಬಾ', 'ಸಂಜು ಬಾಬಾ' ಎಂಬ ಹೆಸರುಗಳನ್ನು ಇಡುವ ಸಾಧ್ಯತೆ ಇದೆ ಎಂದು ಕೇಳಿಬರುತ್ತಿತ್ತು. ಆದರೆ ಸದ್ಯ ‘ಸಂಜು’ ಹೆಸರು ಈ ಚಿತ್ರಕ್ಕೆ ಅಂತಿಮವಾಗಿದ್ದು  ರಣಬೀರ್ ಥೇಟ್ ಸಂಜಯ್ ದತ್ ರೀತಿಯಲ್ಲೆ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಇವರನ್ನ ಸಂಜು ಎಂದೆ ಕರೆಯುವ ಕಾರಣ ಚಿತ್ರಕ್ಕೆ ಈ ಹೆಸರನ್ನೇ ಇಡಲಾಗಿದೆಯಂತೆ.‘ಈ ಚಿತ್ರಕ್ಕಾಗಿ ತುಂಬಾ ಕಷ್ಟ ಪಟ್ಟಿರುವೆ. ಚಿತ್ರೀಕರಣದ ಸಂದರ್ಭ ಅದ್ಭುತ ಅನುಭವಗಳಾಗಿವೆ. ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲಾ ಅನುಭವಿಸುತ್ತಾನೆ ಎಂಬುದನ್ನ ಗ್ರಹಿಸಲು ಸಾಧ್ಯವಿಲ್ಲ’ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

ಈಗಾಗಲೇ ಸಂಜಯ್ ದತ್ ಅವರಂತೆಯೇ ಕಾಣುವ ರಣಬೀರ್ ಅವರ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ರಾಜ್​ಕುಮಾರ್ ಹಿರಾನಿ ‘ಸಂಜು’ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸೋನಮ್ ಕಪೂರ್ ಹಾಗೂ ಅನುಷ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಮಹೇಶ್ ಭಟ್ ಹಾಗೂ ಸಂಜಯ್ ದತ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಸಿನಿಮಾ ಜೂನ್ 29ಕ್ಕೆ ತೆರೆಕಾಣಲಿದೆ.

First published:March 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ