Bigg Boss OTT: ಇವ್ರೆಲ್ಲ ಇನ್ನೂ ಬಿಗ್​ಬಾಸ್​ ಮನೆಯಲ್ಲಿ ಅಸಲಿ ಮುಖ ತೋರಿಸಿಲ್ವಂತೆ! ಕಿರಣ್​ ಕಥೆ, ನ್ಯೂಸ್​ 18 ಜೊತೆ

ಕಿರಣ್​ ಅವರಿಗೆ ಕನ್ನಡ (Kannada) ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಇತರೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮೊದಲ ವಾರವೇ ಬಿಗ್​ಬಾಸ್​ ಮನೆಯಿಂದ ಹೊರಬಂದಿದ್ದಾರೆ. ಈ ಬಗ್ಗೆ ನ್ಯೂಸ್​ 18 ಜೊತೆ ಮಾತನಾಡಿದ್ದಾರೆ.

ಬಿಗ್​ಬಾಸ್​​ ಒಟಿಟಿ ಕಂಟೆಸ್ಟೆಂಟ್ಸ್​

ಬಿಗ್​ಬಾಸ್​​ ಒಟಿಟಿ ಕಂಟೆಸ್ಟೆಂಟ್ಸ್​

  • Share this:
ಬಿಗ್​ಬಾಸ್​ ಕನ್ನಡ ಒಟಿಟಿ (Bigg Boss OTT) ಶುರುವಾಗಿ ಇಂದಿಗೆ 10 ನೇ ದಿನ. ಕೇವಲ 10 ದಿನದಲ್ಲೇ ಬಿಗ್​ಬಾಸ್​ ಒಟಿಟಿ ಸಖತ್ ಸೌಂಡ್ ಮಾಡುತ್ತಿದೆ. ಮನೆಯೊಳಗೆ ಇರುವ ಒಬ್ಬೊಬ್ಬರ ಒಂದೊಂದು ಅವತಾರದಲ್ಲಿ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಒಂದು ಎಲಿಮನೇಷನ್ (First Elimination)​ ಕೂಡ ಆಗಿದೆ. ಡ್ಯಾನ್ಸರ್​ ಕಮ್ ಮಾಡೆಲ್​,​ ಯೋಗಾ ಟೀಚರ್ ಆಗಿದ್ದ ಕಿರಣ್​ ಯೋಗೇಶ್ವರ್​ (Kiran Yogeshwar) ಅವರ ಬಿಗ್​ಬಾಸ್​ ಮನೆಯಿಂದ ಮೊದಲ ವಾರದಲ್ಲೇ ಹೊರಬಂದಿದ್ದಾರೆ. ಕಿರಣ್​ ಅವರಿಗೆ ಕನ್ನಡ (Kannada) ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಇತರೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಂತಿಮವಾಗಿ ಅತಿ ಕಡಿಮೆ ವೋಟ್ ​ ಬಂದಿರುವುದು ಕೂಡ ಅವರಿಗೆ. ಆದ್ದರಿಂದ ಮೊದಲ ವಾರವೇ ಅವರ ಬಿಗ್​ ಬಾಸ್​ ಪಯಣ ಅಂತ್ಯವಾಗಿದೆ. ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ನ್ಯೂಸ್​ 18 ಕನ್ನಡ (News 18 Kannada) ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

‘ಒಂದೇ ವಾರಕ್ಕೆ ಆಚೆ ಬರೋ ಕಂಟೆಸ್ಟೆಂಟ್​ ನಾನಾಗಿರಲಿಲ್ಲ’

‘ಒಂದೇ ವಾರದಲ್ಲಿ ನಾನು ಎಲ್ಲ ಜೊತೆ ಕ್ಲೋಸ್​ ಆದೆ. ಮೊದಲ ಮೂರು ದಿನ ನನಗೆ ಸ್ವಲ್ಪ ಜ್ವರ ಇತ್ತು. ಹೀಗಾಗಿ ಬೇಗ ಎಲ್ಲರ ಜೊತೆಯಲ್ಲೂ ಬೆರೆಯಲು ಸಾಧ್ಯವಾಗಲಿಲ್ಲ. ನಂತರ ನಾನು ಎಲ್ಲರೊಂದಿಗೆ ಮಾತನಾಡುತ್ತಾ ಹತ್ತಿರವಾಗಿದೆ. ಎಲ್ಲರೂ ಕೂಡ ನನ್ನೊಂದಿಗೆ ಸಂತೋಷವಾಗಿದ್ದರು. ನಾನು ಒಂದೇ ವಾರಕ್ಕೆ ಆಚೆ ಬರುವ ಕಂಟೆಸ್ಟೆಂಟ್​ ಆಗಿರಲಿಲ್ಲ. ಮನೆ ಒಳಗೆ ಹೋಗುವ ಮುನ್ನವೂ ನಾನು ಒಂದು ವಾರಕ್ಕೆ ಹೊರಗೆ ಬರುತ್ತೇನೆ ಅಂದುಕೊಂಡಿರಲಿಲ್ಲ' ಎಂದು ಕಿರಣ್​ ಯೋಗೇಶ್ವರ್​ ಹೇಳಿದ್ದಾರೆ.

ಕಿಚನ್​ನಲ್ಲೇ ಹೆಚ್ಚಿನ ಸಮಯ ಕಳೆದುಬಿಟ್ಟೆ!

ಇನ್ನೂ ಮನೆಯಿಂದ ಹೊರಬರಲು ಮುಖ್ಯ ಕಾರಣ ಅಂದರೆ ನಾನು ಹೆಚ್ಚಿನ ಸಮಯ ಕಿಚನ್​ನಲ್ಲೇ ಕಳೆದುಬಿಟ್ಟಿ. ಎಲ್ಲರಿಗೂ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಮಾಡಿಕೊಡುತ್ತಿದ್ದೆ. ಆಗ ಬೇರೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಆಟ ಆಡಿಲ್ಲ, ಎಂಟರ್​ಟೈನ್ಮೆಂಟ್​ ನೀಡಲ್ಲ ಅಂತ ಜನರಿಗೆ ಅನ್ನಿಸಿರಬಹುದು. ಇನ್ನೊಂದು ಮುಖ್ಯ ಕಾರಣ ಅಂದರೆ ನನಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ಹೀಗಾಗಿ ನನಗೆ ಅಲ್ಲಿದ್ದವರ ಜೊತೆ ಕನೆಕ್ಟ್​ ಆಗುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡೆ ಎಂದು ಅವರು ನ್ಯೂಸ್​ 18 ಜೊತೆ ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಸೋನುಗೆ ಪೂಸಿ ಹೊಡೆಯಲು ಹೋದ ರಾಕೇಶ್; ಟ್ರೋಲ್ ರಾಣಿ ಸಿಟ್ಟಾಗಿದ್ಯಾಕೆ?

ಇವ್ರೆಲ್ಲ ಅಸಲಿ ಮುಖ ತೋರಿಸಲ್ವಂತೆ!

ಇನ್ನೂ ಈ ಬಿಗ್​ಬಾಸ್​ ಕನ್ನಡ ಒಟಿಟಿಯಲ್ಲಿ ಯಾರು ಇನ್ನೂ ಫೇಕ್ ಅನ್ನಿಸುತ್ತಾರೆ. ತಮ್ಮ ನಿಜವಾದ ರೂಪವನ್ನು ತೋರಿಸುತ್ತಿಲ್ಲ ಎಂದು ಕಿರಣ್​ ಅವರನ್ನು ಕೇಳಿದ್ದಕ್ಕೆ ಹೀಗೆ ಉತ್ತರಿಸಿದ್ದಾರೆ ನೋಡಿ. 'ಅರ್ಜುನ್​, ಚೈತ್ರ, ರಾಕೇಶ್​​, ಅಕ್ಷತಾ, ಸಾನಿಯಾ ಹಾಗೂ ಜಯಶ್ರೀ ಇವರು ಫೇಕ್​ ಅಂತ ಅಲ್ಲ. ಆದರೆ, ಅವರ ನಿಜವಾದ ರೂಪ ಬೇರೇನೆ ಇದೆ. ಆದರೆ ಅದನ್ನು ಮರೆಮಾಚಿ ಎಲ್ಲರೊಂದಿಗೆ ಖುಷಿಯಾಗಿ' ಇರುತ್ತಾರ ಎಂದು ಅವರು ಹೇಳಿದರು.

ನನ್ನ ಬದಲು ಆಕೆ ಆಚೆ ಬರಬೇಕಿತ್ತು ಎಂದ ಕಿರಣ್​!

ನನಗಿಂತ ಈ ಮನೆಯಲ್ಲಿ ಕಳಪೆ ಆಟ ಆಡಿದವರು ಇದ್ದಾರೆ. ನನ್ನ ಬದಲು ಅಕ್ಷತಾ ಆಚೆ ಬರಬೇಕಿತ್ತು ಎಂದು ಕಿರಣ್​ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಯಲ್ಲಿ ಊಟದ ಫೈಟ್​; ಅರ್ಜುನ್​-ರೂಪೇಶ್ ಶೆಟ್ಟಿ​ ನಡುವೆ ವಾರ್

ಟಾಪ್​ 5 ಕಂಟೆಸ್ಟೆಂಟ್​ ಇವ್ರೆ ಅಂತೆ!

ಇನ್ನೂ ಬಿಗ್​ಬಾಸ್​ ಕನ್ನಡ ಒಟಿಟಿ ಸೀಸನ್​ ಒಂದರ ಟಾಪ್​ 5 ಕಂಟೆಸ್ಟೆಂಟ್​ ಯಾರಾಗಬಹುದು ಎಂಬ ಪ್ರಶ್ನೆಗೂ ಕಿರಣ್​ ಉತ್ತರಿಸಿದ್ದಾರೆ. ಅರ್ಜುನ್​, ರಾಕೇಶ್​, ಸ್ಪೂರ್ತಿ, ನಂದು, ರೂಪೇಶ್​ ಶೆಟ್ಟಿ ಎಂದು ಕಿರಣ್​ ಹೇಳಿದ್ದಾರೆ. ಮತ್ತೆ ಬಿಗ್​ಬಾಸ್​ ಮನೆಯಿಂದ ಎಲ್ಲರ ಜೊತೆ ಹೇಗೆ ಇರಬೇಕು ಎಂಬ ಪಾಠವನ್ನು ಕಲಿತೆ ಎಂದು ಹೇಳಿದರು. ಮತ್ತೆ ಬಿಗ್​ಬಾಸ್​ ಮನೆಗೆ ಕಳುಹಿಸಿದರೆ ಕಂಡಿತ ಹೋಗ್ತಿನಿ ಅಂತಾರೆ ಈ ರಾಜಸ್ಥಾನಿ ಬೆಡಗಿ ಕಿರಣ್​ ಯೋಗೇಶ್ವರ್​.
Published by:Vasudeva M
First published: