ಕಳೆದ ಕೆಲ ದಿನಗಳ ಹಿಂದಷ್ಟೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಪುತ್ರ ಕಿರೀಟಿ ಚಿತ್ರರಂಗಕ್ಕೆ (Film Industry) ಕಾಲಿಡಲಿದ್ದಾರೆ ಎಂಬ ವಿಚಾರ ಹರಿದಾಡಿತ್ತು. ಮೊದಲಿನಿಂದಲೂ ರಾಜಕೀಯ (Politics) ಮತ್ತು ಚಿತ್ರರಂಗಕ್ಕೂ ಒಳ್ಳೆಯ ನಂಟಿದೆ. ಚಿತ್ರರಂಗದಿಂದ ರಾಜಕೀಯಕ್ಕೆ ಹೋದವರಿದ್ದಾರೆ ಹಾಗೂ ರಾಜಕೀಯದಿಂದ ಚಿತ್ರರಂಗಕ್ಕೂ ಸಹ ಬಂದವರಿದ್ದಾರೆ. ಇನ್ನು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ಕೊನೆಗೆ ಉತ್ತರ ಸಿಕ್ಕಿದ್ದು, ವಾರಾಹಿ ಪ್ರೊಡಕ್ಷನ್ ಹೌಸ್ ಅಡಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ (Kireeti) ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಈ ಪ್ರೊಡಕ್ಷನ್ ಹೌಸ್ನ 15ನೇ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ಕಿರೀಟಿ ನಾಯಕನಾಗಿ ತೆರೆಯ ಮೇಲೆ ಬರುತ್ತಿದ್ದಾರೆ,
ವಾರಾಹಿ ಫಿಲ್ಮಂ ಪ್ರೊಡಕ್ಷನ್ ಟಾಲಿವುಡ್ನ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿದ್ದು, ಈಗಾಗಲೇ ಉತ್ತಮ ಕಂಟೆಂಟ್ ಇರುವ ಹಾಗೂ ಹೈ ಬಜೆಟ್ ಸಿನಿಮಾಗಳನ್ನು ಜನರಿಗೆ ನೀಡಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹೊಸ ಚಿತ್ರದಲ್ಲಿ ವಾರಾಹಿ ಸಂಸ್ಥೆಯು, ನಿರ್ದೇಶಕ ರಾಧಾಕೃಷ್ಣ ಅವರ ಜೊತೆ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಹೆಸರಿಡದ ಈ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಲವ್ ಮತ್ತು ಫ್ಯಾಮಿಲಿ ಕಥೆಯುಳ್ಳ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದ್ದು, ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಲಿದ್ದು, ನಿಜಕ್ಕೂ ದೊಡ್ಡ ವಿಚಾರವೇ ಆಗಿದೆ.
ಚಿತ್ರದಲ್ಲಿರದೇ ದೊಡ್ಡ ತಾರಾ ಬಳಗ
ಈ ಚಿತ್ರದ ವಿಶೇಷತೆ ಎಂದರೆ ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರದ ಆರ್ಟ್ ಡೈರೆಕ್ಟರ್ ಆಗಿ ರವೀಂದರ್ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಸಹ ಈ ಚಿತ್ರದ ಭಾಗವಾಗಿದ್ದಾರೆ. ಈ ಚಿತ್ರವನ್ನು ಮಾರ್ಚ್ 4 ರಂದು ಅದ್ಧೂರಿಯಾಗಿ ಲಾಂಚ್ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ಬಣ್ಣದ ಲೋಕಕ್ಕೆ ಜನಾರ್ದನ ರೆಡ್ಡಿ ಮಗನ ಎಂಟ್ರಿ: ಶೀಘ್ರವೇ ಹೀರೋ ಆಗಿ ಬರ್ತಾರೆ ಕಿರೀಟಿ ರೆಡ್ಡಿ!
ಚಿತ್ರರಂಗಕ್ಕೆ ಎಂಟ್ರಿ ಆಗಲು ಫುಲ್ ಕಸರತ್ತು
ಇನ್ನು ಚಿತ್ರಂಗಕ್ಕೆ ಕಾಲಿಡಲು ಕಿರೀಟಿ ಸಹ ಸಜ್ಜಾಗಿದ್ದು, ಯುಕೆಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ನಟನೆಗೆ ಸಂಬಂಧಿಸಿದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಸಾಹಸಕ್ಕೆ ಸಂಬಂಧಪಟ್ಟಂತೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ಕಿರೀಟಿ ಪಡೆದುಕೊಂಡಿದ್ದಾರೆ. ಸ್ವಂತವಾಗಿ ಸ್ಟಂಟ್ಸ್ಗಳನ್ನು ಮಾಡುವಷ್ಟರ ಮಟ್ಟಿಗೆ ಸಿದ್ಧಗೊಂಡಿದ್ದಾರೆ.
ಅಲ್ಲದೇ, ಕಿರೀಟಿ ಪ್ರತಿದಿನ ಜಿಮ್ಗೆ ಹೋಗಿ ಬೆವರಿಳಿಸುವುದಲ್ಲದೇ, ಡ್ಯಾನ್ಸ್ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಇನ್ನು ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿದ್ಧವಾದ ‘ಮಾಯಾ ಬಜಾರ್ 2016 ನಿರ್ದೇಶನವನ್ನು ಮಾಡಿದ್ದರು, ಅದು ಜನರ ಮೆಚ್ಚುಗೆಗೆ ಸಹ ಪಾತ್ರವಾಗಿತ್ತು.
ಇದನ್ನೂ ಓದಿ: `ಆದಿಪುರುಷ್’ ಸಿನಿಮಾ ರಿಲೀಸ್ ಡೇಟ್ ಅನೌನ್ಸ್.. ಗೆಟ್ ರೆಡಿ ಫಾರ್ ಗ್ರೇಟ್ ಬ್ಯಾಟಲ್!
ಮಗಳ ಮದುವೆಯನ್ನೇ ಅದ್ಧೂರಿಯಾಗಿ ಮಾಡಿದ್ದ ಜನಾರ್ದನ ರೆಡ್ಡಿ ಮಗನನ್ನ ಚಿತ್ರರಂಗಕ್ಕೆ ಹೇಗೆ ಲಾಂಚ್ ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ