Shankar Nag: ಶಂಕರ್​ ನಾಗ್​ ಮೃತಪಟ್ಟ ಸ್ಥಳದಲ್ಲಿ ಪ್ರತಿ ಅಮಾವಾಸ್ಯೆ ಕಾಯ್ತಾರೆ ಇವರು! ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ

ಶಂಕರ್​ನಾಗ್​ ಸಾವನ್ನಪ್ಪಿದ್ದ ಹಿಂದಿನ ದಿನ ಹೇಗಿತ್ತು? ಏನಾಯ್ತು ಎಂಬುದರ ಬಗ್ಗೆ ಇನ್ನೂ ಅನೇಕರಿಗೆ ತಿಳಿದಿಲ್ಲ. ಚಿತ್ರಾಪುರ ಮಠದಲ್ಲಿ ಶಂಕರ್​ ನಾಗ್​ ಅವರ ತಂದೆ ಕೆಲಸ ಮಾಡುತ್ತಿದ್ದರು. ಅವರು ವಿಧಿವಶವಾದ ನಂತರ ಅವರ ತಾಯಿ ಅಲ್ಲೇ ಇದ್ದರು. ಶಂಕರ್​ನಾಗ್​ ಸಾಯುವ ಹಿಂದಿನ ದಿನ ಅವರ ತಾಯಿ ಕರೆ ಮಾಡಿದ್ದರಂತೆ.

ದಿವಗಂತ ಶಂಕರ್​ ನಾಗ್​

ದಿವಗಂತ ಶಂಕರ್​ ನಾಗ್​

  • Share this:
ಅದು ಸೆಪ್ಟೆಂಬರ್ (September)​ 30 1990. ಮುಂಜಾನೆ ವೇಳೆಯಲ್ಲಿ ಒಂದು ಆಘಾತಕಾರಿ ವಿಷಯ ಹೊರಬಿದ್ದಿತ್ತು. ಇಡೀ ಕನ್ನಡ ಚಿತ್ರರಂಗ (Kannada Film Industry) ಕ್ಕೆ ಬರ ಸಿಡಿಲು ಬಡಿದಿತ್ತು. ಇದೇನಪ್ಪಾ? ಈ ಸುದ್ದಿ ನಿಜನಾ? ದೇವರೇ ಹೀಗೆ ಯಾಕೆ ಆಯ್ತು ಅಂತ ಇಡೀ ಕರುನಾಡು ಕಣ್ಣೀರು ಹಾಕಿತ್ತು. ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ,ನಿರ್ಮಾಪಕ, ಸಂಭಾಷಣೆಕಾರ ಶಂಕರ್​ನಾಗ್​  ಅಪಘಾತ (Shankar Nag Accident) ದಲ್ಲಿ ಕೊನೆಯುಸಿರೆಳೆದಿದ್ದರು. ಯಾರೂ ಊಹಿಸದ ರೀತಿಯಲ್ಲಿ ಅವರ ಶವ ಸಿಕ್ಕಿತ್ತು. ಆಗೆಲ್ಲ ಈಗಿನ ಕಾಲದ ಹಾಗೇ ಮೀಡಿಯಾ (Media) , ಸ್ಮಾರ್ಟ್ ಫೋನ್ (Smart P​ ಇರಲಿಲ್ಲ. ನ್ಯೂಸ್​ ಪೇಪರ್​ನಿಂದ ಮಾತ್ರ ಈ ಸುದ್ದಿ ತಿಳಿಯಬೇಕಿತ್ತು. ಸೆಪ್ಟೆಂಬರ್​ 30 ರಂದು ಬೆಳಗ್ಗೆ 9 ಗಂಟೆಯಾಗುವಷ್ಟರಲ್ಲಿ ಶಂಕರ್​ ನಾಗ್​ ಇನ್ನಿಲ್ಲ ಎಂಬ ಸುದ್ದಿ ಇಡೀ ಕರುನಾಡಿಗೆ ಹಬ್ಬಿತ್ತು.

ಶಂಕರ್​ನಾಗ್​ ಸಾವನ್ನಪ್ಪಿದ್ದ ಹಿಂದಿನ ದಿನ ಹೇಗಿತ್ತು? ಏನಾಯ್ತು ಎಂಬುದರ ಬಗ್ಗೆ ಇನ್ನೂ ಅನೇಕರಿಗೆ ತಿಳಿದಿಲ್ಲ. ಚಿತ್ರಾಪುರ ಮಠದಲ್ಲಿ ಶಂಕರ್​ ನಾಗ್​ ಅವರ ತಂದೆ ಕೆಲಸ ಮಾಡುತ್ತಿದ್ದರು. ಅವರು ವಿಧಿವಶವಾದ ನಂತರ ಅವರ ತಾಯಿ ಅಲ್ಲೇ ಇದ್ದರು. ಶಂಕರ್​ನಾಗ್​ ಸಾಯುವ ಹಿಂದಿನ ದಿನ ಅವರ ತಾಯಿ ಕರೆ ಮಾಡಿದ್ದರಂತೆ.

ಚಿತ್ರಾಪುರ ಮಠಕ್ಕೆ ಬರುವಂತೆ ಹೇಳಿದ್ದ ಶಂಕರ್ ನಾಗ್​ ತಾಯಿ!

ಹೌದು, ಶಂಕರ್​ ನಾಯ್​ ಸಾಯುವ ಹಿಂದಿನ ದಿನ ಅವರ ತಾಯಿ ಶಂಕರ್​ನಾಗ್​ ಹಾಗೂ ಅನಂತ್​ ನಾಗ್​ ಅವರಿಗೆ ಕರೆ ಮಾಡಿ, ಚಿತ್ರಾಪುರ ಮಠಕ್ಕೆ ಬರುವಂತೆ ಸೂಚಿಸಿದ್ದರಂತೆ. ಶೂಟಿಂಗ್​ ಇರುವ ಕಾರಣ ಆಗಲ್ಲ ಎಂದು ಶಂಕರ್​ನಾಗ್​ ಹೇಳಿದ್ದರಂತೆ. ತಾಯಿ ಪಟ್ಟು ಹಿಡಿದಿದ್ದರಂತೆ. ವಿಜಯದಶಮಿ ಹಬ್ಬವನ್ನು ಚಿತ್ರಾಪುರ ಮಠದಲ್ಲೇ ಆಚರಿಸಬೇಕು ಎಂದು ಹೇಳಿದರಂತೆ. ಮಠದಲ್ಲಿರುವ ಕಾರಣ ಅವರ ತಾಯಿ ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬಿದ್ದರು. ಅನಂತ್​ ನಾಗ್​ ಬರುವುದು ಬೇಡ ಅವರಿಗೆ ಗಂಡಾಂತರ ಇದೆ. ನೀನು ಮಾತ್ರ ಬಾ ಎಂದು ಶಂಕರ್​ನಾಗ್​ಗೆ ಹೇಳಿದ್ದರಂತೆ.

ಶಂಕರ್ ನಾಗ್​ ಅವರ ಅಪರೂಪದ ಚಿತ್ರ


ಅನಂತ್​ನಾಗ್​ಗೆ ಗಂಡಾಂತರ ಇದೆ ಎಂದಿದ್ದರಂತೆ!

ಚಿತ್ರಾಪುರ ಮಠದ ಮಾತಾಜಿ ಶಂಕರ್​ನಾಗ್​ ಅವರ ತಾಯಿಗೆ ನಿಮ್ಮ ಇನ್ಬರು ಮಕ್ಕಳಲ್ಲಿ ಒಬ್ಬರಿಗೆ ಗಂಡಾಂತರ ಇದೆ ಎಂದು ಹೇಳಿದ್ದರಂತೆ. ತಾಯಿ ಅನಂತ್​ ನಾಗ್​ಗೆ ಗಂಡಾಂತರ ಇದೆ ಎಂದು ಊಹಿಸಿಕೊಂಡಿದ್ದರಂತೆ. ಹೀಗಾಗಿ ಶಂಕರ್​ನಾಗ್​ ಅವರನ್ನು ಮಾತ್ರ ಕರೆಸಿಕೊಂಡಿದ್ದೆರು. ಚಿತ್ರಾಪುರ ಮಠದಲ್ಲಿ ಎಲ್ಲರೂ ಒಟ್ಟಾಗಿ ವಿಜಯದಶಮಿ ಹಬ್ಬವನ್ನು ಆಚರಿಸಿಕೊಂಡಿದ್ದರು. ಶಂಕರ್​ನಾಗ್​ ಜೊತೆ ಪತ್ನಿ ಅರುಂಧತಿ ನಾಗ್​, ಮಗಳು ಕಾವ್ಯ, ಡ್ರೈವರ್ ಲಿಂಗಣ್ಣ ಕೂಡ ಇದ್ದರು. ಎಲ್ಲ ಮುಗಿಸಿ ಊಟ ಮಾಡಿ ಮಲಗಿದ್ದರು. ಇದ್ದಕ್ಕಿದ್ದ ಹಾಗೇ ಮಧ್ಯರಾತ್ರಿ ಎಚ್ಚರಗೊಂಡ ಶಂಕರ್​ನಾಗ್​ ಗಡಿಬಿಡಿಯಲ್ಲಿ ಪತ್ನಿ, ಮಗಳನ್ನು ಎಬ್ಬಿಸಿಕೊಂಡು ಬಾಗಲಕೋಟೆಯ ಮುದೋಳ್​ನಲ್ಲಿರುವ ಲೋಕಾಪುರಕ್ಕೆ ಹೋಗಬೇಕು ಎಂದಿದ್ದರಂತೆ.

ಮಧ್ಯರಾತ್ರಿ ಎದ್ದು ಹೊರಡಬೇಕು ಎಂದಿದ್ದ ಶಂಕರ್​ ನಾಗ್!

ಲೋಕಾಪುರದಲ್ಲಿ ಜೋಕುಮಾರಸ್ವಾಮಿ ನಾಟಕದ ಪ್ರೀ ಪ್ರೋಡಕ್ಷನ್​ ಕೆಲಸಗಳು ಬಾಕಿ ಇದ್ದವು. ಹೀಗಾಗಿ ಶಂಕರ್​ನಾಗ್​ ಕೆಲ ದಿನಗಳಿಂದಲೂ ಇಲ್ಲಿಗೆ ಹೋಗುವುದಾಗಿ ಹೇಳಿಕೊಂಡಿದ್ದರಂತೆ. ಜೋಕುಮಾರಸ್ವಾಮಿ ನಾಟಕವನ್ನು ಸಿನಿಮಾ ಮಾಡಲು ನಿರ್ಧಾರ ಮಾಡಿದ್ದರಂತೆ ಶಂಕರ್​ನಾಗ್​. ನಾಟಕಕ್ಕಾಗಿ ಕೆಲ ಕಲಾವಿದರನ್ನು ಅಲ್ಲಿಗೆ ಕಳುಹಿಸಿದ್ದರಂತೆ. ಹೀಗಾಗಿ ಚಿತ್ರಾಪುರ ಮಠದಿಂದ ಗಡಿಬಿಡಿಯಾಗಿ ಇಲ್ಲಿಗೆ ಹೋಗಬೇಕೆಂದು ಮಧ್ಯರಾತ್ರಿ ಎಬ್ಬಿಸಿಕೊಂಡು ಹೊರಡುತ್ತಾರೆ. ಶಂಕರ್​ನಾಗ್​ ಅವರಿಗೆ ಮೊದಲಿನಿಂದಲೂ ಮಧ್ಯರಾತ್ರಿ ಕಾರು ಓಡಿಸಿ ಅಭ್ಯಾಸವಿತ್ತು. ನಿದ್ರೆ ಮಂಪರಿನಲ್ಲಿದ್ದ ಮಗಳು, ಹಾಗೂ ಪತ್ನಿ ಜೊತೆ ಡ್ರೈವರ್​ ಲಿಂಗಣ್ಣ ಅವರೊಟ್ಟಿಗೆ ಶಂಕರ್​ನಾಗ್​ ಅಲ್ಲಿಂದ ಹೊರಟಿದ್ದರು.

ಶಂಕರ್ ನಾಗ್​ ಅವರ ಅಪರೂಪದ ಚಿತ್ರ


ಇದನ್ನೂ ಓದಿ: ಪ್ರಭಾಸ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್, ‘ಆದಿಪುರುಷ್’ ಚಿತ್ರತಂಡದಿಂದ ಹೊರಬಿತ್ತು ಬಿಗ್​ ಅಪ್​ಡೇಟ್

ಗಾಡಿ ಓಡಿಸಿದ್ದು ಶಂಕರ್​ ನಾಗ್​ ಅಲ್ಲ, ಡ್ರೈವರ್​ ಲಿಂಗಣ್ಣ!

ದಾವಣಗೆರೆ ಸ್ವಲ್ಪ ದೂರ ಇರುವ ಆನಗೋಡು ಬಳಿ ಶಂಕರ್​ನಾಗ್ ಕಾರು ಅಪಘಾತವಾಗಿತ್ತು. ಒಂದು ವಾರದಿಂದ ಕೆಟ್ಟು ನಿಂತಿದ್ದ ಟ್ರಕ್​ಗೆ ಶಂಕರ್​ನಾಗ್​ ಅವರ ಕಾರು ಗುದ್ದಿತ್ತು. ಲಿಂಗಣ್ಣ ಸ್ವಲ್ಪ ನಿದ್ದೆ ಮಂಪರುನಲ್ಲಿದ್ದರು. ಲಿಂಗಣ್ಣ ಕಾರುನ್ನು ಓಡಿಸುತ್ತಿದ್ದರು. ಲಿಂಗಣ್ಣ ಪಕ್ಕ ಶಂಕರ್​ನಾಗ್​ ಇದ್ದರು. ಹಿಂಬದಿ ಸೀಟಿನಲ್ಲಿ ಮಗಳು ಕಾವ್ಯ, ಅರುಂಧತಿ ನಾಗ್​ ಮಲಗಿಕೊಂಡಿದ್ದರು. ಒಂದಷ್ಟು ಜನ ಕೆಟ್ಟು ನಿಂತಿದ್ದ ಟ್ರಕ್​ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಯ್ತು ಅಂತ ಹೇಳುತ್ತಾರೆ. ಇನ್ನೂ ಕೆಲವರು ಕೆಟ್ಟು ನಿಂತಿದ್ದ ಟ್ರಕ್​ ಪಕ್ಕ ಹೋಗುವಾಗ ಮತ್ತೊಂದು ಟ್ರಕ್​ಗೆ ಮುಂದೆಯಿಂದ ಗುದ್ದಿದೆ ಅಂತ ಹೇಳುತ್ತಾರೆ. ಸ್ಥಳೀಯರು ಹೇಳಿದ ಹಾಗೇ ಪತ್ರಿಕೆಯಲ್ಲಿ ಪ್ರಕಟಣೆಯಾಗಿತ್ತು.

ಶಂಕರ್​ ನಾಗ್ ಅಂತ್ಯಕ್ರಿಯೆ


ಕೋರ್ಟ್​ ಮೊರೆ ಹೋಗಿದ್ದ ಅರುಂಧತಿ ನಾಗ್​!

ಇಲ್ಲಿಯವರೆಗೂ ಯಾವ ರೀತಿ ಅಪಘಾತ ಆಯ್ತು ಅಂತ ಗೊತ್ತಿಲ್ಲ.
ಬೆಳಕು ಆಗುವವರೆಗೂ ಶಂಕರ್​ನಾಗ್​, ಲಿಂಗಣ್ಣ, ಅರುಂಧತಿ, ಕಾವ್ಯ ರಸ್ತೆಯಲ್ಲೇ ಬಿದ್ದಿದ್ದರು. ಮೊದಲಿಗೆ ಯಾರೋ ಬೇರೆ ಅಂತ ಸ್ಥಳೀಯರು ಅಂದುಕೊಂಡಿದ್ದರು. ಬಳಿಕ ಹತ್ತಿರ ಬಂದು ನೋಡಿದಾ ಶಂಕರ್​ನಾಗ್​ ಎಂದು ಸ್ಥಳೀಯರಿಗೆ ಗೊತ್ತಾಯ್ತು. ಇಡೀ ಕರ್ನಾಟಕದಾದ್ಯಂತ ಅಂದು ದುಖಃದ ಸಾಗರದಲ್ಲಿ ಮುಳುಗಿತ್ತು. ಶಂಕರ್​ನಾಗ್​ ಅವರ ಮೃತದೇಹವನ್ನು ಅಲ್ಲಿಂದ ಬೆಂಗಳೂರಿನ ವಿಲ್ಸನ್​ ಗಾರ್ಡ್​ಗೆ ತೆಗೆದುಕೊಂಡು ಬರುತ್ತಾರೆ. ಇಲ್ಲಿ ಅಂತಿಮ ಪ್ರಕ್ರಿಯೆಗಳನ್ನು ನಡೆಸಿ ಅಂತ್ಯಕ್ರಿಯೆ ಕೂಡ ನಡೆಸಲಾಯ್ತು. ಇದಾದ ಬಳಿಕ ಅರುಂಧತಿ ನಾಗ್​ ಕೋರ್ಟ್​ನಲ್ಲಿ ನನಗೆ ನಷ್ಟವಾಗಿದೆ ಎಂದು ಹೋರಾಟ ಮಾಡಿ, 21 ಲಕ್ಷದ 60 ಸಾವಿರವನ್ನು ಪರಿಹಾರವಾಗಿ ಪಡೆದುಕೊಂಡಿದ್ದರು.

ಪ್ರತಿ ಅಮಾವಾಸ್ಯೆಯೆಂದು ಸ್ಥಳ ಕಾಯ್ತಾರಂತೆ!

ಆನಗೋಡು ಜನರಿಗೆ ಈಗಲೂ ಶಂಕರ್​ನಾಗ್ ಅವರ ಮೇಲೆ ಅಪಾರ ಪ್ರೀತಿ ಇದೆ. ಹೀಗಾಗಿ ಶಂಕರ್​ನಾಗ್​ ತೀರಿಹೋದ ಜಾಗದಲ್ಲೇ ಶಾಲೆಯನ್ನು ಸಹ ಆ ಊರಿನ ಜನರು ಕಟ್ಟಿಸಿದರು.ಶಂಕರ್​ನಾಗ್ ಶಾಲೆ ಎಂದು ಹೆಸರಿಡಲಾಗಿದೆ. ಪ್ರತಿ ಅಮಾವಾಸೆಯೆಂದು ಆನುಗೋಡು ಭಾಗದ ಜನರು ಶಂಕರ್​ನಾಗ್​ ಮೃತಪಟ್ಟ ಸ್ಥಳಕ್ಕೆ ಬಂದು ರಾತ್ರಿ ಪೂರ ಆ ಜಾಗವನ್ನು ಕಾಯ್ತಾರಂತೆ. ಶಂಕರ್​ನಾಗ್​ ಅವರು ಅಲ್ಲೇ ಇದ್ದಾರೆ ಅನ್ನೊ ನಂಬಿಕೆ ಇವರದ್ದು. ಮತ್ತೊಂದು ಕಾರಣ ಅಂದರೆ, ಪ್ರತಿ ಅಮಾವಾಸ್ಯೆಯಂದು ಈ ಭಾಗದಲ್ಲಿ ಹೆಚ್ಚಾಗಿ ಅಪಘಾತವಾಗುತ್ತಂತೆ. ಹೀಗಾಗಿ ಇಲ್ಲಿನ ಜನರು ಪ್ರತಿ ಅಮಾವಾಸ್ಯೆಯೆಂದು ಅಪಘಾತವಾದ ಸ್ಥಳಕ್ಕೆ ಬಂದು ಕಾಯ್ತಾರಂತೆ. ಯಾರೇ ಈ ಜಾಗದಲ್ಲಿ ಗಾಡಿ ನಿಲ್ಲಿಸಿದರು, ಅವರನ್ನು ಅಲ್ಲಿಂದ ಕಳುಹಿಸುತ್ತಾರಂತೆ.

ಶಂಕರ್​ ನಾಗ್​ ಕಾರು


ಇದನ್ನೂ ಓದಿ: ಗಂಧದಗುಡಿ ರಿಲೀಸ್‌ಗೆ ಮುಹೂರ್ತ ಫಿಕ್ಸ್! ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾಡಿದ್ರು ಡೇಟ್ ಅನೌನ್ಸ್

ಶಂಕರ್​ನಾಗ್​ ಅವರಿಗೆ ಸ್ಮಾರಕ, ಸಮಾಧಿ ಇಲ್ಲ!

ಶಂಕರ್​ನಾಗ್​ ಅವರಿಗೆ ಈಗಲೂ ಸ್ಮಾರಕವಾಗಲಿ, ಸಮಾಧಿಯಾಗಲಿ ಇಲ್ಲ. ಜನರನ್ನು ಭಾವನಾತ್ಮಕಾವಾಗಿ ಕನೆಕ್ಟ್​ ಆಗಲು ಸಮಾಧಿಯಾಗಲಿ, ಸ್ಮಾರಕವಾಗಲಿ ಕಟ್ಟುತ್ತಾರೆ. ಆದರೆ, ಶಂಕರ್​ನಾಗ್​ ಅವರ ಸಮಾಧಿ ಎಲ್ಲೂ ಇಲ್ಲ. ಅರುಂಧತಿ ನಾಗ್ ಅವರ ಮನೆ ಬಳಿ ಚಿಕ್ಕ ಕಲ್ಲೊಂದನ್ನು ಇಟ್ಟು ಪೂಜೆ ಮಾಡುತ್ತಾರಂತೆ. ಕೇವಲ ಮನೆಯವರು ಮಾತ್ರ ಇಲ್ಲಿ ಪೂಜೆ ಮಾಡ್ತಾರೆ. ವಿಲ್ಸನ್​ ಗಾರ್ಡ್​ನಲ್ಲೂ ಶಂಕರ್​ನಾಗ ಅವರ ಸಮಾಧಿ ಇಲ್ಲ ಅನ್ನುವುದು ನಿಜಕ್ಕೂ ದುರಂತ.
Published by:Vasudeva M
First published: