ಹೊಸಾ ರೂಪದಲ್ಲಿ ಮತ್ತೆ ಬರ್ತಿದೆ ಎವರ್​ಗ್ರೀನ್ ಕ್ಲಾಸಿಕ್ ಸಿನಿಮಾ ಬಂಧನ-2, ತಾರಾಗಣದಲ್ಲಿ ಯಾರಿದ್ದಾರೆ? ಫುಲ್ ಡೀಟೆಲ್ಸ್

Bandhana: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಬಂಧನ-2 ಸಿನಿಮಾ ಮುಹೂರ್ತ ನೆರವೇರಿದ್ದು ಚಿತ್ರದ ನಾಯಕ ನಟ, ಆದಿತ್ಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಹಳೆ ಬಂಧನ ಸಿನಿಮಾದಲ್ಲಿ ಇದ್ದ ಜೈಜಗದೀಶ್ ಹಾಗೂ ಸುಹಾಸಿನಿ, ಭಾರತಿ ವಿಷ್ಣುವರ್ಧನ್ ಸೇರಿ ಹಲವರು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ಬಂಧನ

ಬಂಧನ

 • Share this:
  ಕನ್ನಡ ಚಿತ್ರರಂಗದಲ್ಲಿ(Sandalwood) ಇತಿಹಾಸ(History) ಸೃಷ್ಟಿಸಿದ ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ 'ಬಂಧನ' ಸಹ ಒಂದು. 'ಬಂಧನ' ಸೃಷ್ಟಿಸಿದ್ದ ಎಷ್ಟೋ ದಾಖಲೆಗಳು(Records) ಈಗಲೂ ಜೀವಂತವಿವೆ. ಆ ಸಿನಿಮಾದ ಹಾಡುಗಳಿಗಂತೂ(Songs) ಸಾವೇ ಇಲ್ಲ..ಉಷಾ ನವರತ್ನರಾಮ್ ಅವರ 'ಬಂಧನ' ಕಾದಂಬರಿ(Novel) ಆಧರಿಸಿ 1984ರಲ್ಲಿ ಬಂಧನ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು.. ಡಾ. ಹರೀಶ್ ಪಾತ್ರದಲ್ಲಿ ವಿಷ್ಣುವರ್ಧನ್(Vishnuvardhan) ಕಾಣಿಸಿಕೊಂಡಿದ್ದರೆ ನಂದಿನಿಯಾಗಿ ಸುಹಾಸಿನಿ(Suhasini) ನಟಿಸಿದ್ದರು.. ನಂದಿನಿ ಪ್ರೀತಿ ಪಡೆಯದೇ ಒದ್ದಾಡುವ ಹರೀಶ್ ಪಾತ್ರಕ್ಕೆ ಜೀವ ತುಂಬಿದ ವಿಷ್ಣು ದಾದಾ ಅವರ ನಟನೆ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.. ವಿಶೇಷ ಅಂದ್ರೆ ಈ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 37 ವರ್ಷ ಸಂದಿವೆ.. ಹೀಗಾಗಿ ಈ ಶುಭ ಸಮಾರಂಭದಲ್ಲಿ ಬಂಧನ ಸಿನಿಮಾದ ಸಿಕ್ವೆಲ್ ಮಾಡಲು ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ನಿರ್ಧಾರ ಮಾಡಿದ್ದು ಬಂಧನ-2 ಸಿನಿಮಾವನ್ನು ತೆರೆಗೆ ತರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ತೆರೆಮೇಲೆ ಮತ್ತೆ ಬರುತ್ತಿದೆ ಬಂಧನ-2...

  ವಿಷ್ಣುದಾದಾ ಜೊತೆಗೆ ಬಂಧನ ಸಿನಿಮಾದಲ್ಲಿ ಮೋಡಿಮಾಡಿದ್ದ ಸುಹಾಸಿನಿ ಹಾಗೂ ಜಗದೀಶ್ ಬಂಧನ -2 ಸಿನಿಮಾದಲ್ಲಿ ಇರಲಿದ್ದು ಇವರ ಜೊತೆಜೊತೆಗೆ ಚಿತ್ರವು ಮುಂದುವರೆಯಲಿದೆ. ದೇಶ ಅಂದ್ರೆ ಹೊಸದಾಗಿ ಬರುತ್ತಿರುವ ಬಂಧನ ಸಿಕ್ವೆಲ್ ಗೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಪುತ್ರ ಆದಿತ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ..

  ಇದನ್ನೂ ಓದಿ: ರಾಕಿಂಗ್​ ದಂಪತಿಗೆ 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮ

  ಇಂದು ನೆರವೇರಿದ ಬಂಧನ-2 ಸಿನಿಮಾ ಮುಹೂರ್ತ

  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು
  ಬಂಧನ-2 ಸಿನಿಮಾ ಮುಹೂರ್ತ ನೆರವೇರಿದ್ದು ಚಿತ್ರದ ನಾಯಕ ನಟ, ಆದಿತ್ಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಹಳೆ ಬಂಧನ ಸಿನಿಮಾದಲ್ಲಿ ಇದ್ದ ಜೈಜಗದೀಶ್ ಹಾಗೂ ಸುಹಾಸಿನಿ, ಭಾರತಿ ವಿಷ್ಣುವರ್ಧನ್ ಸೇರಿ ಹಲವರು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..ಅಲ್ಲದೆ ಚಿತ್ರದ ಮುಹೂರ್ತದ ಬಳಿಕ ಚಿತ್ರತಂಡಕ್ಕೆ ಶುಭವಾಗಲಿ ಅಂತ ಭಾರತಿ ವಿಷ್ಣುವರ್ಧನ್ ಶುಭಹಾರೈಸಿದ್ದಾರೆ..

  ಇನ್ನು ವಿಷ್ಣುದಾದಾ ಬರ್ತಡೇ ದಿನ ಬಂಧನ-2 ಸಿನಿಮಾ ಮಾಡುವುದಾಗಿ ರಾಜೇಂದ್ರಸಿಂಗ್ ಬಾಬು ಘೋಷಣೆ ಮಾಡಿದ್ದರು.. ಅಲ್ಲದೆ ಅದೇ ದಿನ ಆದಿತ್ಯ ಕಾಣಿಸಿಕೊಂಡಿದ್ದ ಸಿನಿಮಾದ ಪೋಸ್ಟರ್ ಗಳನ್ನು ಸಹ ರಾಜೇಂದ್ರ ಸಿಂಗ್ ಬಾಬು ಬಿಡುಗಡೆ ಮಾಡಿದ್ದರು.. ಈಗ ಖಾಸಗಿ ಹೋಟೆಲಿನಲ್ಲಿ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ.. ಇನ್ನು ಚಿಂತನ್‌ ಎ. ವಿ ಸಂಭಾಷಣೆ ಬಂಧನ-2 ಸಿನಿಮಾಗೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಧರ್ಮವಿಶ್‌ ಸಂಗೀತ ಸಂಯೋಜಿಸುತ್ತಿದ್ದು, ಅಣಜಿ ನಾಗರಾಜ್‌ ಛಾಯಾಗ್ರಹಣವಿದೆ. ಎಸ್‌. ವಿ ರಾಜೇಂದ್ರ ಸಿಂಗ್‌ ಬಾಬು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “ಬಂಧನ 2′ ಚಿತ್ರ “ಗ್ರೀನ್‌ ಲೈಟ್ಸ್‌ ವೇಂಚರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ “ಬಂಧನ 2′ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ

  ಇದನ್ನೂ ಓದಿ: ನಾಳೆ ದೃಶ್ಯ-2 ಚಿತ್ರದ ಜೊತೆ 5 ಹೊಸಬರ ಸಿನಿಮಾ ರಿಲೀಸ್​: ಲಿಸ್ಟ್​ ಇಲ್ಲಿದೆ ನೋಡಿ..

  ಬಂಧನ ಸಿನಿಮಾದಲ್ಲಿ ಪರಕಾಯ ಪ್ರವೇಶ ಮಾಡಿದ್ದ ವಿಷ್ಣು ದಾದಾ

  ತನ್ನ ಕಾರಣದಿಂದಲೇ ಬೇರೆಯಾದ ನಂದಿನಿ-ಬಾಲು ಅವರನ್ನು ಒಟ್ಟುಗೂಡಿಸುವ ಕರುಣಾಮಯನಾಗಿ, ಚಿತ್ರದ ಕೊನೆಗೆ ಟ್ರ್ಯಾಜಿಡಿ ನಾಯಕನಾಗಿ ಹಲವು ತರದ ಅಭಿನಯಗಳನ್ನು ಏಕಕಾಲಕ್ಕೆ ವಿಷ್ಣುವರ್ಧನ್ ಅವರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ. ಇನ್ನು ಜೊತೆಗೆ ಸುಹಾಸಿನಿ, ಜೈಜಗದೀಶ್, ರೂಪಾದೇವಿ, ಕಾಂಚನ, ಮುಸುರಿ ಕೃಷ್ಣಮೂರ್ತಿ, ಶಿವರಾಂ ಸೇರಿದಂತೆ ಅನೇಕ ಕಲಾವಿದರ ಸಮಯೋಚಿತ ಅಭಿನಯ ಕೂಡ ಚಿತ್ರದ ಗೆಲುವಿನಲ್ಲಿ ವಿಶೇಷವಾದ ಪಾತ್ರವನ್ನೇ ವಹಿಸಿದೆ… ಇನ್ನು ಅಂದಿನ ಕಾಲಕ್ಕೆ ಸೂಪರ್ ಹಿಟ್ ಸಿನಿಮಾ ವಾಗಿದ್ದ ಬಂಧನಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ ಹಲವಾರು ಭಾಷೆಗಳಲ್ಲಿ ಈ ಸಿನಿಮಾ ಡಬ್ ಆಗಿ ಬಿಡುಗಡೆಗೊಂಡಿತ್ತು
  Published by:ranjumbkgowda1 ranjumbkgowda1
  First published: