Anitha EAnitha E
|
news18-kannada Updated:October 22, 2020, 4:10 PM IST
ಇರೋಸ್ ನೌ ಮಾಡಿರುವ ವಿವಾದಾತ್ಮಕ ಪೋಸ್ಟ್
ಬಾಲಿವುಡ್ ಸಿನಿ ಪ್ರೇಕ್ಷಕರಿಗೆ ಇರೋಸ್ ನೌ ಕುರಿತಾಗಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಸಂಸ್ಥೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದೆ. ಇನ್ನು, ನವರಾತ್ರಿ ಆರಂಭವಾದಾಗಿನಿಂದ ಬಾಲಿವುಡ್ ನಟ-ನಟಿಯರ ಸಿನಿಮಾ ಫೋಟೋಗಳನ್ನು ಬಳಸಿ ನವರಾತ್ರಿಗೆ ವಿಶ್ ಮಾಡುವ ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದೆ. ಈ ಪೋಸ್ಟರ್ಗಳಲ್ಲಿ ಬರೆಯಲಾಗುತ್ತಿರುವ ಶೀರ್ಷಿಕೆಗಳಿಂದಾಗಿ ನೆಟ್ಟಿಗರು ಗರಂ ಆಗಿದ್ದಾರೆ. ಅಲ್ಲದೆ ಇರೋಸ್ ನೌ ಅನ್ನು ಬಹಿಷ್ಕರಿಸಿ ಅನ್ನೋ ಅಭಿಯಾನ ಆರಂಭಿಸಿದ್ದಾರೆ. ಟ್ವಿಟರ್ನಲ್ಲಿ ಬಾಯ್ಕಾಟ್ ಇರೋಸ್ ನೌ ಸದ್ಯ ಟ್ರೆಂಡಿಂಗ್ನಲ್ಲಿದೆ. ಅಲ್ಲದೆ ನವರಾತ್ರಿ ಪವಿತ್ರವಾದ ಹಬ್ಬ ಅದನ್ನು ಕೆಟ್ಟದಾಗಿ ಬಿಂಬಿಸಿ ಪೋಸ್ಟರ್ಗಳನ್ನು ರಿಲೀಸ್ ಮಾಡಲಾಗುತ್ತಿದೆ ಎಂದು ನೆಟ್ಟಿಗರು ಸಿಟ್ಟಾಗಿದ್ದಾರೆ. ಇರೋಸ್ ನೌ ಪೋಸ್ಟ್ ಮಾಡುತ್ತಿರುವ ಪೋಸ್ಟರ್ಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನು ನಟಿ ಕಂಗನಾ ರನೌತ್ ಸಹ ಈ ಪೋಸ್ಟ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜನರು ದಸರಾ ಹಬ್ಬದ ಸಂಭ್ರಮದಲ್ಲಿದ್ದರೆ, ಇರೋಸ್ ನೌ ಮಾತ್ರ ಮಾಡಿದ ತಪ್ಪಿನಿಂದಾಗಿ ನೆಟ್ಟಿಗರು ಹಬ್ಬದ ಸಮಯದಲ್ಲೂ ಕೋಪಗೊಳ್ಳುವಂತಾಗಿದೆ. ನಟಿ ಕತ್ರಿನಾ ಕೈಫ್, ರಣವೀರ್ ಸಿಂಗ್ ಅವರ ಫೋಟೋ ಇರುವ ಪೋಸ್ಟರ್ನಲ್ಲಿ ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದಂತೆ ಅಸಂಬದ್ಧ ಹಾಗೂ ಅಶ್ಲೀಲವಾದ ಪದಗಳ ಪ್ರಯೋಗ ಮಾಡಲಾಗಿದೆ. ಇದರಿಂದ ನೆಟ್ಟಿಗರು ಇರೋಸ್ ನೌ ವಿರುದ್ಧ ಕೋಪಗೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇರೋಸ್ ನೌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಈಗ ಕ್ಷಮೆ ಯಾಚಿಸಿದೆ ಈ ಸಂಸ್ಥೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿರುವ ಪೋಸ್ಟ್ ಸಹ ಹಂಚಿಕೊಂಡಿದೆ.
ನಮಗೆ ಯಾರೊಬ್ಬರ ಭಾವನೆಗೆ ಧಕ್ಕೆ ಉಂಟುಮಾಡುವ ಉದ್ದೇಶ ಇರಲಿಲ್ಲ. ನಾವು ಮಾಡಿದ್ದ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದೇವೆ. ಕ್ಷಮೆ ಇರಲಿ ಎಂದು ಇರೋಸ್ ನೌ ಪೋಸ್ಟ್ ಮಾಡಿದೆ.
We must preserve cinema as a community viewing theatre experience,its more difficult to enthrall large section of audience than sexualise content for personal viewing, digitisation of art faces this major crisis, all streaming platforms are nothing but a porn hub. SHAME @ErosNow pic.twitter.com/qKHde2R4HI
ವಿವಾದಕ್ಕೆ ಕಾರಣವಾಗಿರುವ ಇರೋಸ್ ನೌ ಪೋಸ್ಟ್ ಕುರಿತಾಗಿ ನಟಿ ಕಂಗನಾ ಸಹ ಟ್ವೀಟ್ ಮಾಡಿದ್ದಾರೆ. ಸಿನಿಮಾ ಕುಟುಂಬದೊಂದಿಗೆ ಸೇರಿ ನೋಡುವ ಮನರಂಜನ ಮಾಧ್ಯಮ. ಅದನ್ನು ನಾವು ಕಾಪಾಡಿಕೊಳ್ಳಬೇಕು. ಒಟಿಟಿ ಪ್ಲಾಟ್ಫಾರಂ ಅಶ್ಲೀಲವಾದ ಹಬ್ ಆಗಿದೆ. ಇರೋಸ್ ನೌ ನಿಮಗೆ ನಾಚಿಕೆಯಾಗುವುದಿಲ್ಲವಾ ಎಂದಿದ್ದಾರೆ.
ಇನ್ನು ಇರೋಸ್ ನೌ ಕ್ಷಮೆ ಯಾಚಿಸಿದರೂ ನೆಟ್ಟಿಗರು ಮಾತ್ರ ಬಾಯ್ಕಾಟ್ ಮಾಡಿ ಎನ್ನುತ್ತಲೇ ಇದ್ದಾರೆ. ಮಾಡಿರುವ ಕೆಲಸಕ್ಕೆ ಕ್ಷಮೆಯಾಚಿಸಿದರೆ ಸಾಲದು, ಇರೋಸ್ ನೌ ಅನ್ನು ಬಹಿಷ್ಕರಿಸಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ.
Published by:
Anitha E
First published:
October 22, 2020, 4:10 PM IST