Dhruva Sarja: ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಧ್ರುವ-ಪ್ರೇಮ್! ಮುಹೂರ್ತ ಟೈಂನಲ್ಲಿ ಆ ಒಂದು ತಪ್ಪು ಮಾಡಬಾರದಿತ್ತು

ಚಿತ್ರತಂಡವು ಮುಹೂರ್ತದ ವಿವರ ನೀಡುವ ಪೋಸ್ಟರ್ ಗಳನ್ನು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯ ಅದಿ-ಬದಿಗಳಲ್ಲಿ ನೆಟ್ಟಿದ್ದು ಅದು ಈಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಧ್ರುವ ಸರ್ಜಾ, ಜೋಗಿ ಪ್ರೇಮ್​

ಧ್ರುವ ಸರ್ಜಾ, ಜೋಗಿ ಪ್ರೇಮ್​

  • Share this:
ಹ್ಯಾಟ್ರಿಕ್ ನಿರ್ದೇಶಕ (Hattrick Director) ಎಂದೇ ಖ್ಯಾತಿಯಾಗಿರುವ ಪ್ರೇಮ್ (Prem) ಅವರ ನಿರ್ದೇಶನದಲ್ಲಿ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಅವರು ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು ಸಜ್ಜಾಗಿದ್ದು ಇನ್ನೂ ಹೆಸರಿಡದ ಆ ಚಿತ್ರದ ಮುಹೂರ್ತ ಸಮಾರಂಭ ಕಾರ್ಯಕ್ರಮ ಈಗ ನಡೆದಿದ್ದು ಈಗ ಆ ಕಾರ್ಯಕ್ರಮದ ಚಿತ್ರತಂಡ ಹೊಸ ವಿವಾದ (Controversy) ಒಂದನ್ನು ಮೈಮೇಲೆ ಎಳೆದುಕೊಂಡಂತೆ ಕಂಡುಬರುತ್ತಿದೆ. ಮೊನ್ನೆ ಭಾನುವಾರದಂದು, ಕನ್ನಡ ಚಿತ್ರರಂಗದ ಚಿತ್ರತಾರೆ ಧ್ರುವ ಸರ್ಜಾ ಅವರ ಹೊಸ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ಚಾಮುಂಡಿ ಬೆಟ್ಟ(Chamundi Betta) ದಲ್ಲಿ ನಡೆಯಿತು. ಆ ಕಾರಣಕ್ಕಾಗಿ ಚಿತ್ರತಂಡವು ಮುಹೂರ್ತದ ವಿವರ ನೀಡುವ ಪೋಸ್ಟರ್ ಗಳನ್ನು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯ ಅದಿ-ಬದಿಗಳಲ್ಲಿ ನೆಟ್ಟಿದ್ದು ಅದು ಈಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಧ್ರುವ-ಪ್ರೇಮ್​

ಚಾಮುಂಡಿ ಬೆಟ್ಟವನ್ನು ದಕ್ಷಿಣ ಭಾರತದ ಪವಿತ್ರ ಸ್ಥಳಗಳಲ್ಲಿ ಒಂದನ್ನಾಗಿ ಪರಿಗಣಿಸಲಾಗಿದೆ ಹಾಗೂ ಕಳೆದ ಹಲವು ಸಮಯದಿಂದ ಚಾಮುಂಡಿ ಬೆಟ್ಟವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅನೇಕ ಪರಿಸರವಾದಿಗಳು ಅಭಿಯಾನಗಳ ಮೂಲಕ ಕಾರ್ಯನಿರತರಾಗಿದ್ದಾರೆ. ಇತ್ತೀಚಿನ ಕೆಲ ಸಮಯದಿಂದ ಚಾಮುಂಡಿ ಬೆಟ್ಟಕ್ಕೆಂದು ಬರುವ ಪ್ರವಾಸಿಗರಿಂದ ಉಂಟಾಗುತ್ತಿರುವ ಮಾಲಿನ್ಯ ಪ್ರದೇಶದ ಪರಿಸರವಾದಿಗಳು ಚಿಂತೆಗೀಡಾಗುವಂತೆ ಮಾಡಿದ್ದು ಈಗ ಪ್ರೇಮ್ ಅವರು ನಿರ್ದೇಶಿಸುತ್ತಿರುವ ಈ ಹೊಸ ಚಿತ್ರದ ತಂಡವು ಯಾವುದೇ ಸೂಕ್ಷ್ಮತೆಯ ಭಾವ ತೋರದೆ ರಸ್ತೆಯ ಎರಡೂ ಬದಿಗಳಲ್ಲಿ ಪೋಸ್ಟರ್ ಅಂಟಿಸಿ ಪರಿಸರಕ್ಕೆ ಹಾನಿ ಮಾಡಿದ್ದು ಪರಿಸರ ಪ್ರೇಮಿಗಳು ಕೋಪಿಸಿಕೊಳ್ಳುವಂತಾಗಿದೆ.

ಚಾಮುಂಡಿ ಬೆಟ್ಟದ ತುಂಬಾ ಹೊಸ ಸಿನಿಮಾದ ಪೋಸ್ಟರ್​!

ಚಿತ್ರತಂಡ ಮಾಡಿರುವ ಈ ಕ್ರಮಕ್ಕೆ ಬೇಸರ ವ್ಯಕ್ತಪಡಿಸುತ್ತ ಹಾಗೂ ಅಷ್ಟೇ ಕೋಪದ ನುಡಿಯಲ್ಲಿ ಪರಿಸರವಾದಿಯಾದ ಶೈಲಜೇಶ ಅವರು ಹೇಳುತ್ತಾರೆ, "ಇಂದು ಇಲ್ಲಿನ ಜನರು ಚಾಮುಂಡಿ ಬೆಟ್ಟವನ್ನು ಸಂರಕ್ಷಿಸಲು ಹೋರಾಟ ಮಾಡುತ್ತಿದ್ದರೆ ಈ ತಂಡವು ಪರಿಸರದ ಬಗ್ಗೆ ಒಂದಿಷ್ಟು ಕಾಳಜಿವಹಿಸದೆ ಎಲ್ಲೆಂದರಲ್ಲಿ ಪೋಸ್ಟರ್ ಬ್ಯಾನರ್ ನೆಟ್ಟು ಪರಿಸರಕ್ಕೆ ಧಕ್ಕೆ ಉಂಟು ಮಾಡಿದೆ. ಪರಿಸರದ ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಿ ಈ ರೀತಿ ಮಾಡಿದವರ ವಿರುದ್ಧ ಈ ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಅತಿ ಕಠಿಣ ಕ್ರಮ ಜರುಗಿಸಬೇಕು ಹಾಗೂ ಕೂಡಲೇ ಈ ಪೋಸ್ಟರ್ ಗಳನ್ನು ತೆರವುಗೊಳಿಸಬೇಕು" ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನು ಧ್ರುವನ ಫ್ಯಾನ್​ ಕಣೋ! ಹೊಸ ಸಿನಿಮಾ ಅನೌನ್ಸ್​ ಕಾರ್ಯಕ್ರಮದಲ್ಲಿ ಜೋಗಿ ಪ್ರೇಮ್ ಗರಂ

ಇನ್ನೊಬ್ಬ ಪರಿಸರವಾದಿ ಈ ಬಗ್ಗೆ ತಮ್ಮ ಕ್ರೋಧ ಈ ರೀತಿ ಹೊರಹಾಕಿದ್ದಾರೆ, "ಇಲ್ಲಿ ಈ ರೀತಿ ಪೋಸ್ಟರ್ ಗಳನ್ನು ನೆಡಲು ಇವರಿಗೆ ಯಾರು ಅನುಮತಿ ಕೊಟ್ಟರೋ ನನಗೆ ಗೊತ್ತಿಲ್ಲ, ಆದರೆ ಕೆಲ ದಿನಗಳ ನಂತರ ಈ ಪೋಸ್ಟರ್ ಗಳು ಇಲ್ಲಿಯೆ ಕೆಳಗೆ ಬೀಳುತ್ತವೆ ಹಾಗೂ ಈ ಪ್ರದೇಶವನ್ನು ಮಲೀನ ಮಾಡುತ್ತವೆ, ಹಾಗಾಗಿ ಇದನ್ನು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ನೀಡಿದರೆ ಮುಂದೆ ಯಾರೂ ಮತ್ತೆ ಈ ರೀತಿಯ ತಪ್ಪು ಮಾಡಲು ಹಿಂಜರಿಯಬಹುದು" ಎನ್ನುತ್ತಾರೆ.

ಇದನ್ನೂ ಓದಿ: ರಾಕಿ ಭಾಯ್​ ಸ್ಟೈಲ್​ ಫಾಲೋ ಮಾಡಿದ ಶಿಲ್ಪಾ ಶೆಟ್ಟಿ! ಇವ್ರಿಗೂ ವೈಲೆನ್ಸ್​​ ಅಂದ್ರೆ ಇಷ್ಟ ಇಲ್ವಂತೆ

ಮೊದಲ ಬಾರಿ ಒಂದಾದ ಧ್ರುವ-ಪ್ರೇಮ್​ ಜೋಡಿ!

ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಅವರು ಇದೇ ಮೊದಲ ಬಾರಿ ಧ್ರುವ ಸರ್ಜಾ ಅವರೊಡನೆ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು ಅವರನ್ನು ನಿರ್ದೇಶಿಸುವ ಜವಾಬ್ದಾರಿ ಹೊತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಅವರ ಬಂಡವಾಳವಿರುವ ಈ ಚಿತ್ರವು ಬಹು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಭಾನುವಾರ ಮೈಸೂರಿನಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿರುವ ಪ್ರೇಮ್ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು ಆ ಬಗ್ಗೆ ಈಗಾಗಲೇ ಕೆಲಸ ಪ್ರಾರಂಭವಾಗಿರುವುದಾಗಿ ಹೇಳಿದ್ದಲ್ಲದೆ ಶೀಘ್ರದಲ್ಲೇ ಚಿತ್ರದ ಹೆಸರನ್ನು ಅನಾವರಣಗೊಳಿಸುವುದಾಗಿ ನುಡಿದಿದ್ದಾರೆ.
Published by:Vasudeva M
First published: