Viaan Raj Kundra: ಸಣ್ಣ ವಯಸ್ಸಲ್ಲೇ ಹೊಸ ಬ್ಯುಸಿನೆಸ್​ ಆರಂಭಿಸಿದ ಶಿಲ್ಪಾ ಶೆಟ್ಟಿ ಮಗ ವಿಯಾನ್!

ಶಿಲ್ಪಾ ಶೆಟ್ಟಿಯವರ ಮಗ ವಿಯಾನ್ ಈಗಾಗಲೇ ತಮ್ಮ ಮೊದಲ ಮತ್ತು ಅನನ್ಯವಾದ ಒಂದು ವ್ಯಾಪಾರೋದ್ಯಮವನ್ನು ಪ್ರಾರಂಭಿಸಿದ್ದಾರೆಂದು ತಿಳಿದುಬಂದಿದೆ ನೋಡಿ. ನಟಿ ಶಿಲ್ಪಾ ಶೆಟ್ಟಿ ತಮ್ಮ ಮಗನ ಬಗ್ಗೆ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡಿರಲಿಕ್ಕಿಲ್ಲ ಮತ್ತು ಇದಕ್ಕಿಂತ ಹೆಚ್ಚು ಹೆಮ್ಮೆ ಪಡಲು ಸಾಧ್ಯವಿಲ್ಲ. ಶಿಲ್ಪಾ ತಮ್ಮ ಮಗನ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಮಗ ವಿಯಾನ್ ತಯಾರಿಸಿದ ಕಸ್ಟಮೈಸ್ಡ್ ಸ್ನೀಕರ್ಸ್

ಶಿಲ್ಪಾ ಶೆಟ್ಟಿ ಅವರ ಮಗ ವಿಯಾನ್ ತಯಾರಿಸಿದ ಕಸ್ಟಮೈಸ್ಡ್ ಸ್ನೀಕರ್ಸ್

  • Share this:
ಈ ಬಾಲಿವುಡ್ ನಟ, ನಟಿಯರ ಮಕ್ಕಳು (Children) ಏನೆಲ್ಲಾ ಮಾಡುತ್ತಾರೆ ಅಂತ ತಿಳಿದುಕೊಳ್ಳುವ ಕುತೂಹಲ ಯಾವ ಅಭಿಮಾನಿಗೆ ಇರಲ್ಲ ಹೇಳಿ? ತಮ್ಮ ನೆಚ್ಚಿನ ನಟ ಮತ್ತು ನಟಿಯ ಮಗ ಅಥವಾ ಮಗಳು (Daughter) ಏನು ಓದುತ್ತಿದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ. ಬನ್ನಿ ಹಾಗಾದರೆ ನೀವು ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ದೊಡ್ಡ ಅಭಿಮಾನಿಯಾಗಿದ್ದರೆ, ನಿಮಗೊಂದು ಕುತೂಹಲಕಾರಿಯಾದ ಸಂಗತಿ ಇದೆ. ಇದು ಅವರ ಬಗ್ಗೆ ಅಲ್ಲ ಬಿಡಿ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮಗ ವಿಯಾನ್ (Viaan) ಬಗ್ಗೆ ಇದೆ.

ತಾಯಿಗಾಗಿ ಕಸ್ಟಮೈಸ್ಡ್ ಮಾಡಿದ ಸ್ನೀಕರ್ ಗಳನ್ನು ತಯಾರಿಸಿ ಕೊಟ್ಟ ವಿಯಾನ್
ಇವರ ಮಗ ವಿಯಾನ್ ಈಗಾಗಲೇ ತಮ್ಮ ಮೊದಲ ಮತ್ತು ಅನನ್ಯವಾದ ಒಂದು ವ್ಯಾಪಾರೋದ್ಯಮವನ್ನು ಪ್ರಾರಂಭಿಸಿದ್ದಾರೆಂದು ತಿಳಿದುಬಂದಿದೆ ನೋಡಿ. ನಟಿ ಶಿಲ್ಪಾ ಶೆಟ್ಟಿ ತಮ್ಮ ಮಗನ ಬಗ್ಗೆ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡಿರಲಿಕ್ಕಿಲ್ಲ ಮತ್ತು ಇದಕ್ಕಿಂತ ಹೆಚ್ಚು ಹೆಮ್ಮೆ ಪಡಲು ಸಾಧ್ಯವಿಲ್ಲ. ಶಿಲ್ಪಾ ತಮ್ಮ ಮಗನ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಏಕೆಂದರೆ ಅವನು ತನ್ನ ತಾಯಿಗಾಗಿ ವಿಶೇಷವಾಗಿ ಕಸ್ಟಮೈಸ್ಡ್ ಮಾಡಿದ ಒಂದು ಜೋಡಿ ಸ್ನೀಕರ್ ಗಳನ್ನು ತಯಾರಿಸಿ ಕೊಟ್ಟಿದ್ದಾನೆ.

ಹೊಸ ಉದ್ಯಮದ ಬಗ್ಗೆ ತಾಯಿ ಶಿಲ್ಪಾ ಹೇಳಿದ್ದು ಹೀಗೆ
ಈ ವಿಡಿಯೋವನ್ನು ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಅವರು "ನನ್ನ ಮಗ ವಿಯಾನ್ ರಾಜ್ ನ ಮೊದಲ ಮತ್ತು ಅನನ್ಯ ವ್ಯಾಪಾರೋದ್ಯಮ. 'ಕಸ್ಟಮೈಸ್ಡ್ ಸ್ನೀಕರ್ ಗಳನ್ನು ರಚಿಸುವುದು' ಪುಟ್ಟ ಮಕ್ಕಳ ದೊಡ್ಡ ದೊಡ್ಡ ಕನಸುಗಳನ್ನು ಯಾವಾಗಲೂ ಪೋಷಕರು ಪ್ರೋತ್ಸಾಹಿಸಬೇಕು. ಈ ಸ್ನೀಕರ್ ಗಳ ಪರಿಕಲ್ಪನೆಯಿಂದ ಹಿಡಿದು ವಿನ್ಯಾಸಗಳವರೆಗೆ ಎಲ್ಲವೂ ಅವನದೇ! ಆಶ್ಚರ್ಯಕರವಾದ ಸಂಗತಿಯೆಂದರೆ, ಈ ಎಳೆ ವಯಸ್ಸಿನಲ್ಲಿ ಅವನು ತನ್ನ ಆದಾಯದ ಸ್ವಲ್ಪ ಭಾಗವನ್ನು ಚಾರಿಟಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ, ಅವನಿಗೆ ಕೇವಲ 10 ವರ್ಷ! ನಿನ್ನ ಈ ತಾಯಿಗೆ ನಿನ್ನ ಬಗ್ಗೆ ತುಂಬಾನೇ ಹೆಮ್ಮೆ ಇದೆ.. ನಿನಗೆ ಒಳ್ಳೆಯದಾಗಲಿ ಮಗನೇ” ಅಂತ ಬರೆದು ಹೃದಯಗಳ ಎಮೋಜಿಗಳನ್ನು ನಟಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಗನ ಆ ವಿಡಿಯೋದಲ್ಲಿ ನಟಿ ಶಿಲ್ಪಾ ಶೆಟ್ಟಿ ಸಹ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:  Bollywood: ಏನಿಲ್ಲ ಏನಿಲ್ಲ ಟೈಗರ್​ ಶ್ರಾಫ್​- ದಿಶಾ ಪಾಟ್ನಿ ನಡುವೆ ಏನಿಲ್ಲ! ಶಾಕಿಂಗ್​ ಹೇಳಿಕೆ ಕೊಟ್ಟ ಕೃಷ್ಣ ಶ್ರಾಫ್​

ಸಿನೆಮಾ ತಾರೆಯರಿಂದ ಮೆಚ್ಚುಗೆ ಗಳಿಸಿದ ಪೋಸ್ಟ್ 
ಈ ವಿಡಿಯೋ ಸಿನೆಮಾ ತಾರೆಯರು ಮತ್ತು ಶಿಲ್ಪಾ ಅವರ ಅಭಿಮಾನಿಗಳಿಂದ ತುಂಬಾನೇ ಮೆಚ್ಚುಗೆಯನ್ನು ಗಳಿಸಿದೆ. ಶಿಲ್ಪಾ ಅವರ ಆಪ್ತ ಸ್ನೇಹಿತೆ ಮತ್ತು ಖ್ಯಾತ ನಿರ್ದೇಶಕಿ ಫರಾಹ್ ಖಾನ್ ಅವರು ಕಾಮೆಂಟ್ ವಿಭಾಗದಲ್ಲಿ ವಿಯಾನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶಿಲ್ಪಾ ಅವರ ಸಹೋದರಿ ಮತ್ತು ನಟಿ ಶಮಿತಾ ಶೆಟ್ಟಿ ಸಹ "ನನ್ನ ಕಸ್ಟಮೈಸ್ಡ್ ಸ್ನೀಕರ್ ಗಳನ್ನು ನೋಡಿ ಖುಷಿಯಾಯಿತು, ನಿಮ್ಮ ಚಿಕ್ಕಮ್ಮನಿಗೆ ನಿನ್ನ ಬಗ್ಗೆ ತುಂಬಾನೇ ಹೆಮ್ಮೆಯಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

'ವಿಯಾನ್ ಕಿಕ್ಸ್'  
ವಿಯಾನ್ ಬ್ರ್ಯಾಂಡ್ ಅನ್ನು 'ವಿಯಾನ್ ಕಿಕ್ಸ್' ಎಂದು ಹೆಸರಿಸಲ್ಪಟ್ಟಿದೆ, ಅವರು ಕಸ್ಟಮೈಸ್ಡ್ ಸ್ನೀಕರ್ ಗಳು, ಬಟ್ಟೆಗಳು ಮತ್ತು ಚೀಲಗಳನ್ನು ತಯಾರಿಸುತ್ತಾರೆ. ಇವುಗಳ ಬೆಲೆಯು 4999 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಈ ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ, ವಿಯಾನ್ ಅವರು ಗಳಿಸಿದ ಆದಾಯವು ಶಿಲ್ಪಾ ಶೆಟ್ಟಿ ಫೌಂಡೇಶನ್ ಗೆ ಹೋಗುತ್ತದೆ ಎಂದು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Gurmeet and Debina: 2ನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ ದಂಪತಿ

ಮತ್ತೊಂದು ಸುದ್ದಿಯಲ್ಲಿ, ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಅವರ ಮುಂಬರುವ ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಿದ್ದು ಕಾಲು ಮುರಿದುಕೊಂಡಿರುವ ವಿಚಾರ ಸಹ ಹೊರ ಬಂದಿದೆ. ಆದರೆ ಈ ನಟಿ ಕಳೆದ ರಾತ್ರಿ ಮುಂಬೈನಲ್ಲಿ ನಡೆದ ಒಂದು ಕಾರ್ಯಕ್ರಮವೊಂದರಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಕಾರ್ಯಕ್ರಮಕ್ಕೆ ಬಂದು ಎಲ್ಲರನ್ನು ಬೆರಗುಗೊಳಿಸಿದರು. ಕೆಲಸದ ವಿಷಯಕ್ಕೆ ಬಂದರೆ ಶಿಲ್ಪಾ ಅವರು ಕೊನೆಯ ಬಾರಿಗೆ ‘ಹಂಗಾಮಾ 2; ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸೋನಾಲ್ ಜೋಶಿ ನಿರ್ದೇಶನದ ‘ಸುಖೀ’ ಎಂಬ ಹೆಸರಿನ ಚಿತ್ರ ಮತ್ತು ರೋಹಿತ್ ಶೆಟ್ಟಿ ಅವರ ‘ಇಂಡಿಯನ್ ಪೊಲೀಸ್ ಫೋರ್ಸ್’ ಎಂಬ ಶೀರ್ಷಿಕೆಯ ವೆಬ್ ಸಿರೀಸ್ ನಲ್ಲಿ ಕೂಡ ಇವರು ನಟಿಸಲಿದ್ದಾರೆ.
Published by:Ashwini Prabhu
First published: