TRP Case: ಸಿಸಿಬಿ ಅಂಗಳದಲ್ಲಿ ಟಿಆರ್​ಪಿ ಕಳ್ಳಾಟ ಕೇಸ್​: ಇನ್ಮುಂದೆ ಐತೆ ಅಸಲಿ ಆಟ!

ಸ್ಟಾರ್​ ಸುವರ್ಣ ಚಾನೆಲ್​ನ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಕರೆಸಿ ಸಿಸಿಬಿ ವಿಚಾರಣೆ ನಡೆಸಿದೆ. ಟಿಆರ್​ಪಿ ಟ್ಯಾಂಪರಿಂಗ್ ಕಳ್ಳಾಟದ​ ಬಗ್ಗೆ ಹಲವು ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಹಲವಾರು ಮಾಹಿತಿಗಳನ್ನು ಸಿಸಿಬಿ ಅಧಿಕಾರಿಗಳು ಕಲೆ ಹಾಕಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಲ್ಲರೂ ನಂಬರ್​ ಒನ್(Number One)​ ಸ್ಥಾನದಲ್ಲಿ ಇರಲು ಇಷ್ಟ ಪಡುತ್ತಾರೆ. ಸದಾ ನಾನೇ ಮುಂದೆ ಇರಬೇಕು. ತನ್ನ ಸ್ಥಾನ ಭದ್ರಮಾಡಿಕೊಳ್ಳಬೇಕು ಎಂಬುಂವ ಆಸೆ ಎಲ್ಲರಿಗೂ ಇರುತ್ತೆ. ಶಾಲೆಯಲ್ಲಿ ಪ್ರತಿಬಾರಿ ಫಸ್ಟ್​ ಬರುವ ವಿದ್ಯಾರ್ಥಿ ಆ ಸ್ಥಾನವನ್ನು ಬೇರೆ ಯಾರಿಗೂ ಬಿಟ್ಟುಕೊಡಲು  ಇಷ್ಟಪಡುವುದಿಲ್ಲ.ಮನರಂಜನಾ(Entertainment) ವಾಹಿನಿಗಳಾಗಲಿ, ನ್ಯೂಸ್(News) ಚಾನೆಲ್​​ಗಳಾಗಲಿ.. ಎಲ್ಲಾ ವಾಹಿನಿಗಳು ನಿಂತಿರುವುದೇ ಟಿ.ಆರ್.ಪಿ(TRP) ಎಂಬ ನಂಬರ್ ಗೇಮ್(Number Game) ಮೇಲೆ. ಟಿ.ಆರ್.ಪಿ ಎಂಬ ಕುದುರೆ ರೇಸ್ ನಲ್ಲಿ ಗೆಲ್ಲಲು ಕೆಲ ವಾಹಿನಿಗಳು ಕೂಡ ಅಡ್ಡದಾರಿ ಹಿಡಿದಿರುವ ಬಗ್ಗೆ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆಗುತ್ತಿದೆ.ಎಲ್ಲಿ ಪೈಪೋಟಿ ಇಲ್ಲ ಹೇಳಿ. ಎಲ್ಲ ಕಡೆಯಲ್ಲೂ ಪೈಪೋಟಿ ಇರುತ್ತೆ. ಅದೂ ಮನರಂಜನಾ ವೇದಿಕೆಯಲ್ಲೂ ಸೇಮ್​ ಟು ಸೇಮ್​. ನಮ್ಮ ಚಾನೆಲ್​ನ ಟಿಆರ್​ಪಿ(Channel TRP) ಇಷ್ಟು ಇರಬೇಕು, ಅಷ್ಟು ಇರಬೇಕು ಎಂದು ಅಂದುಕೊಳ್ಳುವುದು ತಪ್ಪಲ್ಲ. ಟಿಆರ್​ಪಿ ಹೆಚ್ಚು ಬರುವ ಹಾಗೇ ಒಳ್ಳೆಯ ಕಂಟೆಂಟ್(​Content) ಕೊಟ್ಟರೆ ನಿಜಕ್ಕೂ ಜನ ನೋಡುತ್ತಾರೆ. ಆದರೆ, ಲಾಭಕ್ಕಾಗಿ ಟೆಲಿವಿಷನ್(Television) ರೇಟಿಂಗ್​ಗಳನ್ನು ಮಾನ್ಯುಪುಲೇಟ್(Manipulate) ಮಾಡುವುದು ಸರಿಯಲ್ಲ. ಹೀಗೆ ಟಿಆರ್​​ಪಿ ಮಾನ್ಯಪುಲೇಟ್​ ಮಾಡಿರುವ ಕೇಸ್​ ದಾಖಲಾಗಿತ್ತು. ಈ ಕೇಸ್​ನಿಂದ ಹಲವಾರು ಚಾನೆಲ್​ಗಳ ಅಸಲಿ ಬಣ್ಣ ಬಯಲಾಗಿತ್ತು. ಆದರೆ, ಈ ಕೇಸ್​ ವೇಗ ಕಳೆದುಕೊಂಡಿತ್ತು. ಇದೀಗ ಈ ಟಿಆರ್​​ಪಿ ಕಳ್ಳಾಟ ಕೇಸ್​ ಸಿಸಿಬಿ(CCB) ಅಂಗಳದಲ್ಲಿದೆ. ಅಷ್ಟೇ ಅಲ್ಲದೇ ಈ ಕೇಸ್​ ಚುರುಕು ಪಡೆದುಕೊಂಡಿದೆ. ಹೀಗಾಗಿ ಮನರಂಜನಾ ವಾಹಿನಿಗಳ ಟಿಆರ್​ಪಿ ಕಳ್ಳಾಟ ಪ್ರಕರಣ ಸಿಸಿಬಿ ಕೈಸೇರಿದ್ದು, ಕಳ್ಳರಿಗೆ ಡವ ಡವ ಶುರುವಾಗಿದೆ. 

ವಿಚಾರಣೆ ಆರಂಭಸಿದ ಸಿಸಿಬಿ ಅಧಿಕಾರಿಗಳು

ಸ್ಟಾರ್​ ಸುವರ್ಣ ಚಾನೆಲ್​ನ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಕರೆಸಿ ಸಿಸಿಬಿ ವಿಚಾರಣೆ ನಡೆಸಿದೆ. ಟಿಆರ್​ಪಿ ಟ್ಯಾಂಪರಿಂಗ್ ಕಳ್ಳಾಟದ​ ಬಗ್ಗೆ ಹಲವು ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಹಲವಾರು ಮಾಹಿತಿಗಳನ್ನು ಸಿಸಿಬಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ವಿಚಾರಣೆ ಮಾಡಿರುವಂತಹ ವ್ಯಕ್ತಿಗೆ ಗೇಟ್​ ಪಾಸ್​ ನೀಡಲು, ಸ್ಟಾರ್​ ಸುವಣ್ಣ ನಿರ್ಧಾರ ಮಾಡಿದೆ ಎಂದು ಮೂಲಗಳು ಹೇಳಿವೆ. ಇನ್ನೂ ಸಿಸಿಬಿಗೆ ಸಂಪೂರ್ಣ ಬೆಂಬಲವನ್ನು ಬಾರ್ಕ್​ ಕೊಟ್ಟಿದೆ. ಮೊದಲಿನಿಂದಲೂ ಈ ಕೇಸ್​​ಗೆ ಬೇಕಿರುವ ಎಲ್ಲ ಸಹಕಾರವನ್ನು ಬಾರ್ಕ್​ ನೀಡಿಕೊಂಡು ಬಂದಿದೆ. ಈ ಕೇಸ್​ನ ಇನ್​ವೆಸ್ಟಿಗೇಷನ್​ಗೂ ಬಾರ್ಕ್ ಸಹಾಯ ಮಾಡಿಕೊಂಡು ಬಂದಿದೆ. ಈ ವಿಚಾರ ಕೇಳಿ ಟ್ಯಾಂಪರಿಂಗ್​ ಕಳ್ಳರಿಗೆ ನಡುಕ ಶುರುವಾಗಿದೆ.

ಇದನ್ನು ಓದಿ : ಮೈ ಕೊಡವಿ ಎದ್ದು ನಿಂತ ಮಲಯಾಳಂ ಸಿನಿರಂಗ​​​.. 3 ತಿಂಗಳಲ್ಲಿ 50 ಸಿನಿಮಾಗಳು ರಿಲೀಸ್​!

ಅಸಲಿಗೆ ಟಿಆರ್​ಪಿ ಎಂದೇನು ಗೊತ್ತಾ?

ಯಾರೆಲ್ಲ ಟಿಆರ್‌ಪಿ ವಿಚಾರದ ಬಗ್ಗೆ ಮಾತನಾಡುತ್ತಾರೋ ಅವರಲ್ಲಿ ಹಲವು ಮಂದಿಗೆ ಟಿಆರ್‌ಪಿ ಅಂದರೆ ಏನು ಎನ್ನುವುದೇ ಗೊತ್ತಿಲ್ಲ. ಪ್ರತಿವಾರ ಪ್ರಕಟವಾಗುವ ಟಿಆರ್‌ಪಿ ರೇಟಿಂಗ್‌‌ನ ಆಧಾರದಲ್ಲಿ ಟಿವಿಗಳ ಭವಿಷ್ಯ ನಿಂತಿರುತ್ತದೆ.  ಪ್ರಾದೇಶಿಕ ವಾಹಿನಿಗಳಲ್ಲಿ. ಪ್ರಾದೇಶಿಕ ವಾಹಿನಿಗಳಿಗೆ ಟಿಆರ್‌ಪಿಯೇ ಮಾನದಂಡ. ಪ್ರತಿ ವಾರ ಟಿಆರ್‌ಪಿ ನೀಡೋ ಸಂಸ್ಥೆ ನೀಡುವ ರೇಟಿಂಗ್‌‌ ಆಧಾರದಲ್ಲಿ ಈ ವಾಹಿನಿಗಳು ಕಾರ್ಯ‌ನಿರ್ವ‌ಹಿಸುತ್ತಿರುತ್ತವೆ. ರೇಟಿಂಗ್‌ ನೀಡುವ ಸಂಸ್ಥೆ ಮಹಾನಗರ, ನಗರ, ಗ್ರಾಮೀಣ ಭಾಗದಲ್ಲಿ ಕೇಬಲ್‌ ಹಾಕಿರುವ ಮನೆಗಳಲ್ಲಿ ಕೆಲ ಮನೆಗಳನ್ನು ಆರಿಸಿಕೊಂಡು ಪೀಪಲ್ಸ್‌ ಮೀಟರ್‌ ಎನ್ನುವ ಒಂದು ಸಾಧನವನ್ನು ಅಳವಡಿಸುತ್ತವೆ. ಈ ಸಾಧನ ಒಂದು ದಿನದಲ್ಲಿ ಆ ಮನೆಯವರು ಯಾವ ಸಮಯದಲ್ಲಿ ಯಾವ ಕಾರ್ಯಕ್ರಮವನ್ನು ನೋಡುತ್ತಾರೆ ಎನ್ನುವುದನ್ನು ದಾಖಲಿಸುತ್ತದೆ.

ಇದನ್ನು ಓದಿ : ಅದೊಂದು ಪೂಜೆ ಮಾಡಿಸಿ ಅದೃಷ್ಟ ಲಕ್ಷ್ಮೀಯನ್ನು ಪಕ್ಕದಲ್ಲೇ ಕೂರಿಸಿಕೊಂಡ ರಶ್ಮಿಕಾ: ಈಕೆ ಮುಟ್ಟಿದ್ದೆಲ್ಲ ಚಿನ್ನವಂತೆ!

ಈ ಸಾಧನಗಳಲ್ಲಿ ದಾಖಲಾದ ಎಲ್ಲ ಮಾಹಿತಿಗಳನ್ನು ಕ್ರೋಢಿಕರಿಸಿ ಲೆಕ್ಕ ಹಾಕಿ ಅಂತಿಮವಾಗಿ ವಾರದಲ್ಲಿಒಂದು ದಿನ ಚಾನೆಲ್‌ಗಳ ಟಿಆರ್‌ಪಿಯನ್ನು ಬಿಡುಗಡೆ ಮಾಡುತ್ತದೆ.

ಟಿ.ಅರ್.ಪಿ ದಾಖಲಾಗುವುದು ಹೇಗೆ.?

ಭಾರತದಾದ್ಯಂತ ಅಂದಾಜು 44 ಸಾವಿರ ಆಯ್ದ ಮನೆಗಳ ಟಿವಿ ಸೆಟ್ ಟಾಪ್ ಬಾಕ್ಸ್ ಗಳ ಜೊತೆಗೆ ‘ಬಾರೋ ಮೀಟರ್’ ಎಂಬ ಸಾಧನವನ್ನು ಅಳವಡಿಸಲಾಗಿದೆ. ‘ಬಾರೋ ಮೀಟರ್’ ಸಾಧನ ಅಳವಡಿಸಿರುವ ಮನೆಗಳ ಜೊತೆಗೆ ಬಾರ್ಕ್ ಗೌಪ್ಯ ಒಪ್ಪಂದವನ್ನು ಮಾಡಿಕೊಂಡಿದೆ. ಯಾರ ಮನೆಯಲ್ಲಿ ‘ಬಾರೋ ಮೀಟರ್’ ಅಳವಡಿಸಲಾಗಿದೆ ಎಂಬ ಮಾಹಿತಿ ವಾಹಿನಿಯವರಿಗೆ ತಿಳಿದಿರುವುದಿಲ್ಲ.ಬಾರೋ ಮೀಟರ್ ಇರುವ ಮನೆಯವರು ಯಾವ ವಾಹಿನಿಯನ್ನು, ಯಾವ ಕಾರ್ಯಕ್ರಮವನ್ನು ನೋಡುತ್ತಾರೆ ಎಂಬುದರ ಸಂಪೂರ್ಣ ವಿವರ ಬಾರೋ ಮೀಟರ್ ನಲ್ಲಿ ದಾಖಲಾಗುತ್ತದೆ. ಬಾರೋ ಮೀಟರ್ ನಲ್ಲಿ ದಾಖಲಾಗಿರುವ ದತ್ತಾಂಶಗಳನ್ನು ಬಾರ್ಕ್ ಸಂಗ್ರಹಿಸುತ್ತದೆ.

ಟಿ.ಆರ್.ಪಿ ತಿರುಚಲು ನಿಜಕ್ಕೂ ಸಾಧ್ಯನಾ?

ಟಬಾರೋ ಮೀಟರ್ ಅಳವಡಿಸಿರುವ ಮನೆಯವರಿಗೆ ಹಣ ನೀಡಿ ಪುಸಲಾಯಿಸಿ, ನಿರ್ದಿಷ್ಟ ವಾಹಿನಿ/ಕಾರ್ಯಕ್ರಮವನ್ನು ನೋಡಲು ಸೂಚಿಸಿದರೆ,  ಸ್ವಇಚ್ಛೆಯಿಂದ ಅಲ್ಲದೆ, ಒತ್ತಾಯಪೂರ್ವಕವಾಗಿ ಅಥವಾ ಒತ್ತಡದಿಂದ ನಿರ್ದಿಷ್ಟ ವಾಹಿನಿ/ಕಾರ್ಯಕ್ರಮ ನೋಡುವ ಮೂಲಕ ಟಿ.ಆರ್.ಪಿ ಯನ್ನು ತಿರುಚಲಾಗುತ್ತಿದೆ. ಬಾರೋ ಮೀಟರ್ ಅಳವಡಿಸಿರುವ ಮನೆಯವರಿಗೆ ಐನೂರು-ಸಾವಿರ ರೂಪಾಯಿ ದುಡ್ಡು ಕೊಟ್ಟು ನಿರ್ದಿಷ್ಟ ವಾಹಿನಿ/ಕಾರ್ಯಕ್ರಮವನ್ನು ನೋಡುವಂತೆ ಕೆಲ ವಾಹಿನಿಗಳು ಒತ್ತಾಯ ಮಾಡುವುದರಿಂದ ‘ಅಸಲಿ’ ಟಿ.ಆರ್.ಪಿ ಲಭ್ಯವಾಗುವುದಿಲ್ಲ.
Published by:Vasudeva M
First published: