ಬಾಲಿವುಡ್ (Bollywood)ಎಂದರೆ ಅದೊಂದು ರಂಗುರಂಗಿನ ಪ್ರಪಂಚ ರೊಮ್ಯಾಂಟಿಕ್(Romantic) ಹಾಡುಗಳು, ಪ್ರೇಮಕಥೆಗಳು(Love Story), ಫ್ಯಾಂಟಸಿ ಸಿನಿಮಾಗಳು(Films), ಚಾಕಲೇಟ್ ಮುಖದ ಹೀರೋಗಳು(Hero), ಪುರುಷಪ್ರಧಾನ ಕಥೆಗಳು. ಹೀಗಾಗಿ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್(Bollywood) ಸಿನಿಮಾಗಳಿಗೆ ತನ್ನದೆಯಾದ ಮಾರುಕಟ್ಟೆ ಇದೆ.ಬಾಲಿವುಡ್ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ, ಪೃಥ್ವಿರಾಜ್ ಕಪೂರ್ ಅಮಿತಾ ಬಚ್ಚನ್ ರಿಂದ ಹಿಡಿದು ಈಗಿನ ರಣವೀರ್ ಸಿಂಗ್ ವರೆಗೂ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.. ಅದರಲ್ಲೂ ಬಾಲಿವುಡ್ ಅಂದರೆ ತಕ್ಷಣ ನೆನಪಾಗುವುದು ಖಾನ್ ಗಳ ದರ್ಬಾರ್.. ಸಲ್ಮಾನ್ ಖಾನ್ ಅಮೀರ್ ಖಾನ್ ಶಾರುಖ್ ಖಾನ್.
ಇದನ್ನೂ ಓದಿ: ‘83’ ಚಿತ್ರೀಕರಣದ ವೇಳೆ ರಣವೀರ್ ಯಾರನ್ನು ನೋಡಿ ಭೂತ ಎಂದು ಭಾವಿಸಿದ್ದರು ಗೊತ್ತೇ?
ಈ ಮೂವರು ಇಡೀ ಬಾಲಿವುಡ್ ಸಿನಿಮಾರಂಗದ ತ್ರಿಮೂರ್ತಿಗಳು ಇದ್ದಂತೆ.. ಅಮಿತಾ ಬಚ್ಚನ್ ಬಳಿಕ ನೇಪಥ್ಯಕ್ಕೆ ಸರಿಯುತ್ತಿದ್ದ ಬಾಲಿವುಡ್ ನಲ್ಲಿ ಹೊಸ ಶಕೆ ಆರಂಭಿಸಿದ ಈ ತ್ರಿಮೂರ್ತಿಗಳು ಎರಡು ದಶಕಗಳ ಕಾಲ ಬಾಲಿವುಡ್ನಲ್ಲಿ ಅನಭಿಷಕ್ತ ದೊರೆಗಳಾಗಿ ಮೆರೆದವರು..ಆದರೆ ಈಗ ಅದೇ ಖಾನ್ ಗಳು ಬಾಲಿವುಡ್ ನಲ್ಲಿ ಬರುತ್ತಿರುವ ಹೊಸ ನಟರ ಮುಂದೆ ಮಂಕಾದಂತೆ ಕಾಣುತ್ತಿದ್ದಾರೆ.
ಬಾಲಿವುಡ್ನಲ್ಲಿ ಮರೆಯಾಗುತ್ತಿದ್ಯಾ ಖಾನ್ ಗಳ ದರ್ಬಾರ್
ಸಲ್ಮಾನ್ ಖಾನ್,ಅಮೀರ್ ಖಾನ್, ಶಾರುಖ್ ಖಾನ್
ಮೂವರ ವಯಸ್ಸು ಕೂಡ ಈಗ ಬರೋಬ್ಬರಿ 55 ದಾಟಿದೆ, ಹೀಗಾಗಿ ರೋಮ್ಯಾನ್ಸ್ ಚಿತ್ರಗಳನ್ನು ಮಾಡುವ ಸ್ಥಿತಿಯಲ್ಲಿ ಇಲ್ಲ. ಮಾಡಿದರೂ ಅಂತಹ ಚಿತ್ರಗಳನ್ನು ಜನ ಈಗ ನೋಡುವುದಿಲ್ಲ. ಇನ್ನೊಂದೆಡೆ ರಗಡ ಮಾಸ್ ಎಲಿಮೆಂಟ್ ಚಿತ್ರಗಳನ್ನು ಕೂಡ ಮಾಡಲು ಅವರ ವಯಸ್ಸ ಕೂಡ ಅಡ್ಡಿಯಾಗಿದೆ. ಈಗ ಎಲ್ಲೋ ಒಂದೆಡೆ ಬದಲಾಗುತ್ತಿರುವ ಜನರ ಅಭಿರುಚಿಗೆ ತಕ್ಕ ಚಿತ್ರಗಳಲ್ಲಿ ಅಭಿನಯಿಸುವುದು ಮೂವರು ಖಾನ್ ಗಳಿಗೂ ಕೂಡ ಕಷ್ಟಕರ ಅನಿಸುತ್ತದೆ. ನಿನಗೆ ಈಗ ಸೌತ್ ಸಿನಿ ಇಂಡಸ್ಟ್ರಿಯ ಅನೇಕ ನಟರು ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಉದಯ ಆಗಿದ್ದಾರೆ..
ಅದರಲ್ಲೂ ಬಾಹುಬಲಿ ಮೂಲಕ ಸಾಕಷ್ಟು ಕ್ರೇಜ್ ಸೃಷ್ಟಿಸಿರುವ ಪ್ರಭಾಸ್ ಬಾಲಿವುಡ್ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.. ಕೆಜಿಎಫ್ ಮೂಲಕ ಭರ್ಜರಿ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ಯಶ್ ಭವಿಷ್ಯದಲ್ಲಿ ಬಾಲಿವುಡ್ ಅಳುವ ಎಲ್ಲಾ ಲಕ್ಷಣಗಳನ್ನು ಈಗಲೇ ತೋರಿಸಿದ್ದಾರೆ. ಇದರ ನಡುವೆ ಈ ಮೂವರು ಖಾನ್ ಗಳ ಸಿನಿಮಾಗಳು ಬಹುತೇಕ ಫ್ಲಾಪ್ ಪಟ್ಟಿಗೆ ಸೇರುತ್ತಿದ್ದರೆ, ಇವರ ಸಿನಿಮಾ ಜಮಾನ ಮುಗಿಯುತ್ತಿದೆಯಾ ಎನ್ನುವ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.
ಹೊಸಬರ ಮುಂದೆ ಮಂಕಾಗಿರುವ ಬಾಲಿವುಡ್ ಖಾನ್ ಗಳು
ಸದ್ಯ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅಮೀರ್ ಖಾನ್ ಸಲ್ಮಾನ್ ಖಾನ್ ಹೊರತುಪಡಿಸಿ ಅನೇಕ ಪ್ರತಿಭಾವಂತ ನಟರ ದಂಡು ಇದೆ. ಚಾಕ್ಲೆಟ್ ಮುಖದ ಹೀರೋ ರಣಬೀರ್ ಕಪೂರ್, ರನ್ವೀರ್ ಸಿಂಗ್, ಕಾರ್ತಿಕ್ ಅರ್ಯನ್, ರಾಜಕುಮಾರ್ ರಾವ್, ಅಕ್ಷಯ್ ಕುಮಾರ್ ಹೃತಿಕ್ ರೋಷನ್ ರಂತ ಪ್ರತಿಭಾವಂತ ನಟರು ಖಾನ್ ಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ.. ತಮ್ಮ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ಈ ನಟರು ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಸಾಕಷ್ಟು ಖ್ಯಾತಿ ಕೂಡ ಗಳಿಸಿಕೊಂಡಿದ್ದಾರೆ.. ಇದು ಸಾಲದು ಎನ್ನುವಂತೆ ಬಾಲಿವುಡ್ ಚಿತ್ರರಂಗಕ್ಕೆ ದಕ್ಷಿಣ ಭಾರತದ ನಟರು ಕೂಡ ಎಂಟ್ರಿ ಯಾಗಿದ್ದು ಭರ್ಜರಿ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ..
ಬಾಲಿವುಡ್ನಲ್ಲಿ ಶುರುವಾಯಿತು ದಕ್ಷಿಣ ಭಾರತದ ನಟರ ಹವಾ
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಬಾಲಿವುಡ್ ಪಾಲಿಗೆ ಅಕ್ಷರಶಃ ದುಃಸ್ವಪ್ನದಂತೆ ಕಾಡಿತು. ಬಾಲಿವುಡ್ ಹೊರತಾದ ಹೊಸ ಹೀರೋ ಪ್ರಭಾಸ್ ಭಾರತೀಯ ಸಿನಿಮಾ ರಂಗದ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ. ಶಾರುಖ್ ಖಾನ್ ಅಭಿನಯದ 'ಜೀರೋ' ಎದುರು 'ಕೆಜಿಎಫ್' ತೊಡೆ ತಟ್ಟಿ ಗೆದ್ದ ಮೇಲೆ ಯಶ್ ಬಾಲಿವುಡ್ ಮಂದಿಯ ನಿದ್ದೆಗೆಡಿಸಿದ. ಇನ್ನು ಇತ್ತೀಚೆಗೆ ಬಿಡುಗಡೆಗೊಂಡಿರುವ 'ಪುಷ್ಪ' ಚಿತ್ರದ ಮೂಲಕ ಅಲ್ಲು ಅರ್ಜುನ್ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಎಮರ್ಜ್ ಆಗಿದ್ದಾನೆ. ಇನ್ನು ಸರದಿ ಸಾಲಿನಲ್ಲಿ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ಟಿಆರ್ ಕೂಡ ಇದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ ಮೇಲೆ ಮತ್ತು ಅದರ ನೆಪೊಟಿಸಂ ಬಗ್ಗೆ ವ್ಯಾಪಕವಾದ ಆಕ್ರೋಶ ಹೊರ ಹೊಮ್ಮುತ್ತಲೇ ಇದೆ.
ಇದನ್ನೂ ಓದಿ: ಅಬ್ಬಬ್ಬಾ.. ಏನ್ ಟ್ರಾನ್ಸ್ಫರ್ಮೇಶನ್ ಗುರೂ..ವಿಜಯ್ ದೇವರಕೊಂಡ ನೀವು ಬೀಸ್ಟ್ ಎಂದ ನೆಟ್ಟಿಗರು!
ಇನ್ನು ಬದಲಾದ ಕಾಲಘಟ್ಟದಲ್ಲಿ 'ತಾನಾಜಿ', 'ಬಾಹುಬಲಿ', 'ಆದಿಪುರುಷ' ಅಂತಹ ಚಿತ್ರಗಳ ಹವಾ ಕೂಡ ಹೆಚ್ಚುತ್ತಿದೆ. ಇನ್ನೊಂದೆಡೆ ರಗಡ್ ಮಾಸ್ (ಕೆಜಿಎಫ್) ಚಿತ್ರಗಳು ಹಿಂದಿ ಜನರನ್ನು ಆಕರ್ಷಿಸುತ್ತಿದೆ. ಹೀಗಾಗಿಯೇ ಕಳೆದ ಐದು ವರ್ಷಗಳಿಂದ ಮೂರು ಖಾನ್ ಗಳಿಗೆ ಸರಿಯಾದ ಒಂದೇ ಒಂದು ದೊಡ್ಡ ಹಿಟ್ ಕೂಡ ಇಲ್ಲ.. ಹೀಗಾಗಿ ಎರಡು ದಶಕಗಳ ಕಾಲ ಬಾಲಿವುಡ್ ಸಿನಿಮಾ ರಂಗವನ್ನ ಅನಭಿಶಕ್ತ ದೊರೆಗಳಂತೆ ಆಳಿದ ಮೂವರು ಖಾನ್ ಗಳು ತಮ್ಮ ಸಿನಿ ಜೀವನದ ಅಂತಿಮ ಹಂತಕ್ಕೆ ಬಂದು ತಲುಪಿದ್ದಾರೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ