ಬಾಲಿವುಡ್ (Bollywood) ಸಿನಿಮಾಗಳು ಅಂದರೆ ಅಲ್ಲಿ ಕಿಸ್ಸಿಂಗ್ ಸೀನ್ಸ್ (Kissing Scene) ಇರುವುದು ಕಾಮನ್. ಯುವಕ-ಯುವತಿ ಪ್ರೇಮ ಹೇಳಿಕೊಳ್ಳುವುದು ಚುಂಬನ ಮೂಲಕವೇ. ಹೀಗಾಗಿ ಬಾಲಿವುಡ್ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಇರುತ್ತೆ. ಅದರಲ್ಲೂ ಬಾಲಿವುಡ್ ನಟ ಇಮ್ರಾನ್ ಹಷ್ಮಿ ಸಿನಿಮಾಗಳು ಅಂದರೆ, ಅದರಲ್ಲಿ ಮಾತಿಗಿಂತ ಮುತ್ತಿನ ಸೀನ್ಗಳೇ ಹೆಚ್ಚು. ಇದು ಎಲ್ಲರಿಗೂ ಗೊತ್ತಿದೆ. ಕಿಸ್ಸಿಂಗ್ ಸ್ಟಾರ್ ಅಂತಲೇ ಇಮ್ರಾನ್ ಹಷ್ಮಿ(Emraan Hashmi) ಅವರನ್ನು ಕರೆಯಲಾಗುತ್ತೆ. ಇತ್ತೀಚೆಗೆ ಮಾಡುತ್ತಿರುವ ಸಿನಿಮಾಗಳಲ್ಲಿ ಇಮ್ರಾನ್ ಹಷ್ಮಿ ಕಿಸ್ಸಿಂಗ್ ಸೀನ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ, ಇದೀಗ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇಮ್ರಾನ್ ಹಷ್ಮಿಗೆ ನಟಿಯೊಬ್ಬರು ಯಾವ ರೇಂಜ್ಗೆ ಕಿಸ್ ಮಾಡಿದ್ದಾರೆ ಅಂದ್ರೆ ನೀವು ಕೂಡ ಶಾಕ್ ಆಗುತ್ತೀರಾ. ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಿದರೂ, ಬಿಡದೇ ಇಮ್ರಾನ್ ಹಷ್ಮಿ ತುಟಿಯನ್ನು ಕಚ್ಚಿ ಕಿಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಿಸ್ಸಿಂಗ್ ಸ್ಟಾರ್ (Kissing Star) ಇಮ್ರಾನ್ ಹಷ್ಮಿಗೆ ಈ ನಟಿ ಚಾಲೆಂಜ್ ಮಾಡಿ ಕಿಸ್ ಮಾಡಿದಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
‘ಅಜರ್’ ಸಿನಿಮಾದ ಕಿಸ್ಸಿಂಗ್ ದೃಶ್ಯ ವೈರಲ್!
‘ಅಜರ್’ ಸಿನಿಮಾದಲ್ಲಿ ಇಮ್ರಾನ್ ಹಾಗೂ ನರ್ಗೀಸ್ ನಟಿಸಿದ್ದಾರೆ. ಈ ಚಿತ್ರದಲ್ಲಿ ‘ಬೋಲ್ ದೋ ನಾ ಜರಾ..’ ಸಾಂಗ್ ಇದೆ. ಈ ಹಾಡಿನಲ್ಲಿ ಕಿಸ್ಸಿಂಗ್ ದೃಶ್ಯವೊಂದು ಬರುತ್ತದೆ. ಇದರ ಮೇಕಿಂಗ್ ವಿಡಿಯೋ ಈಗ ವೈರಲ್ ಆಗಿದೆ. ಇಮ್ರಾನ್ ಹಷ್ಮಿ ಹಾಗೂ ನರ್ಗೀಸ್ ನಡುವಣ ಕಿಸ್ಸಿಂಗ್ ದೃಶ್ಯವನ್ನು ನಾಲ್ಕು ಬಾರಿ ಶೂಟ್ ಮಾಡಲಾಗಿತ್ತು. ಆದರೆ, ನಿರ್ದೇಶಕರಿಗೆ ಈ ದೃಶ್ಯ ತೃಪ್ತಿ ನೀಡಿರಲಿಲ್ಲ. ಹೀಗಾಗಿ, ಒನ್ ಮೋರ್ ಟೇಕ್ ಎಂದಿದ್ದರು. ಆಗ ಇಮ್ರಾನ್ ತುಂಬಾನೇ ಮುಜುಗರ ಮಾಡಿಕೊಂಡಿದ್ದರಂತೆ. ಇದೆ ವೇಳೆ ನಿರ್ದೇಶಕರು ಕಟ್ ಹೇಳಿದ್ದರೂ ನರ್ಗೀಸ್ ಮಾತ್ರ ಕಿಸ್ ಮಾಡುತ್ತಲೇ ಇದ್ದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನು ಓದಿ : ಬದುಕಿನ `ಯುದ್ಧ’ ಮುಗಿಸಿದ ಯುದ್ಧಕಾಂಡ ನಿರ್ದೇಶಕ ಕೆ.ವಿ.ರಾಜು: ಹುಲಿಯಾ ಇನ್ನೂ ನೆನಪು ಮಾತ್ರ!
‘ಇಮ್ರಾನ್ ಹಷ್ಮಿ ನಾಟಕವಾಡುತ್ತಿದ್ದಾರೆ’
‘ನಾನು ಇಮ್ರಾನ್ಗೆ ಐದನೇ ಬಾರಿ ಕಿಸ್ ಮಾಡುತ್ತಿದ್ದೇನೆ. ಇದಕ್ಕಾಗಿ ನಾನು ಹೆಚ್ಚಿನ ಹಣವನ್ನು ಪಡೆದುಕೊಳ್ಳಬೇಕಿದೆ. ಇಮ್ರಾನ್ ಹಷ್ಮಿ ತುಂಬಾನೇ ಸಂತಸಗೊಂಡಿದ್ದಾರೆ ಎಂದು ನನಗನಿಸುತ್ತಿದೆ. ಆದರೆ, ತಮಗೇನು ಗೊತ್ತಿಲ್ಲ ಎಂಬಂತೆ ನಟಿಸುತ್ತಿದ್ದಾರೆ. ಅವರಿಗೆ ಇದು ಇಷ್ಟವಾಗುತ್ತಿದೆ. ಆದಾಗ್ಯೂ ನಾಟಕವಾಡುತ್ತಿದ್ದಾರೆ’ ಎಂದಿದ್ದರು ನರ್ಗೀಸ್. ಹೀಗೆ ಹೇಳಿದ ನಂತರದಲ್ಲಿ ಕಿಸ್ ಮಾಡಿದ ನರ್ಗೀಸ್ ಅವರು, ನಿರ್ದೇಶಕರು ಕಟ್ಕಟ್ ಎಂದರೂ ಕಿಸ್ ಮಾಡುವುದನ್ನು ಮುಂದುವರಿಸುತ್ತಲೇ ಇದ್ದರು. ಇದನ್ನು ನೋಡಿ ತಂಡದವರು ನಕ್ಕಿದ್ದಾರೆ. ಇನ್ನೂ ಈ ವಿಡಿಯೋ ಕಂಡ ಪಡ್ಡೆ ಹೈಕ್ಳು ಏನು ಅದೃಷ್ಟ ಗುರೂ.. ಸಿನಿಮಾ ಸ್ಟಾರ್ಗಳೇ ನಿಜಕ್ಕೂ ಲಕ್ಕಿ. ಏನ್ ಬೇಕಾದರೂ, ಎಷ್ಟು ಸಲ ಬೇಕಾದರೂ ಮಾಡಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ : ಬಾಲಯ್ಯನ ಎದುರು ತೊಡೆ ತಟ್ಟಲಿರುವ ಸ್ಯಾಂಡಲ್ವುಡ್ `ಸಲಗ’: ವಿಲನ್ ಲುಕ್ ರಿವೀಲ್!
ಒಟ್ಟನಲ್ಲಿ ಇಂಟರ್ನೆಟ್ನಲ್ಲಿ ಈ ವಿಡಿಯೋ ಸದ್ಯಕ್ಕೆ ಬೆಂಕಿ ಹಚ್ಚಿದೆ. ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಷ್ಮಿಗೆ ನರ್ಗೀಸ್ ಶಾಕ್ ಕೊಟ್ಟಿದ್ದಾರೆ. ನೆಟ್ಟಿಗರು ನರ್ಗೀಸ್ ಅವರ ವಿಡಿಯೋ ಮೇಲೆ ಸಖತ್ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಇದೇ ರೀತಿ ಎಲ್ಲ ನಟಿರಿಗೂ ಮಾಡುತ್ತೀರಾ? ಇಲ್ಲ ಇಮ್ರಾನ್ ಹಷ್ಮಿ ಒಬ್ಬರೇನಾ ಎಂದು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ