ಎಲ್ಲಿದ್ದೆ ಇಲ್ಲಿ ತನಕ ಎಂದು ಪ್ರಶ್ನಿಸುತ್ತಲೇ ಮತ್ತೆ ಬಂದ ಟಾಕಿಂಗ್ ಸ್ಟಾರ್

Ellidde illi Tanaka : ಚಿತ್ರದಲ್ಲಿ ಟಾಕಿಂಗ್ ಸ್ಟಾರ್​ಗೆ ನಾಯಕಿಯಾಗಿ ಕ್ಯೂಟ್ ಬ್ಯೂಟಿ ಹರಿಪ್ರಿಯಾ ನಟಿಸಿದ್ದಾರೆ. ಇನ್ನು ಮಗನೊಂದಿಗೆ ಗಿರಿಜಾ ಲೊಕೇಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿರುವುದು ಮತ್ತೊಂದು ವಿಶೇಷ.

zahir | news18-kannada
Updated:August 21, 2019, 10:16 AM IST
ಎಲ್ಲಿದ್ದೆ ಇಲ್ಲಿ ತನಕ ಎಂದು ಪ್ರಶ್ನಿಸುತ್ತಲೇ ಮತ್ತೆ ಬಂದ ಟಾಕಿಂಗ್ ಸ್ಟಾರ್
Srujan lokesh
  • Share this:
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ನಾಯಕನ ಇಂಟ್ರೊಡಕ್ಷನ್ ಟೀಸರ್ ಬಿಡುಗಡೆಯಾಗಿದೆ. ಕಲರ್​ಫುಲ್​ ಆಗಿ ಚಿತ್ರೀಕರಿಸಲಾಗಿರುವ ಈ ಗೀತೆಯಲ್ಲಿ ಸೃಜನ್ ಸಖತ್ ಸ್ಟೈಲಿಸ್ಟ್​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ನೀ ನಗೆ ಹಂಚಿ ಮಿಂಚುವ ನಮ್ಮ ಕನ್ನಡದವ..ಎಂಬ ಇಂಟ್ರೊಡಕ್ಷನ್ ಗೀತೆಗೆ ಭರ್ಜರಿ ಚೇತನ್ ಸಾಹಿತ್ಯ ಒದಗಿಸಿದ್ದಾರೆ. ಹೇಳಿ ಕೇಳಿ ಕಿರುತೆರೆಯಲ್ಲಿ ಮಜದ ರಸದತೌಣ ನೀಡುವ ಸೃಜನ್​ ಅವರ ಹಾಸ್ಯ ಪ್ರಜ್ಞೆಗೆ ಹೇಳಿ ಮಾಡಿಸಿದಂತಿದೆ ಗೀತೆಯ ಸಾಹಿತ್ಯ.

ಈ ಚಿತ್ರವನ್ನು ಸೃಜನ್ ತಮ್ಮ ಲೊಕೇಶ್ ಪ್ರೊಡಕ್ಷನ್ ಬ್ಯಾನರ್​ನಲ್ಲಿ ನಿರ್ಮಿಸಿದ್ದಾರೆ. 2017 ರಲ್ಲಿ ತೆರೆಕಂಡಿದ್ದ 'ಹ್ಯಾಪಿ ಜರ್ನಿ'ಯೊಂದಿಗೆ ಕಳೆದು ಹೋಗಿದ್ದ ಸೃಜನ್ ಇದೀಗ ಮತ್ತೆ ಸ್ಯಾಂಡಲ್​ವುಡ್​ ಪ್ರೇಕ್ಷಕರ ಮುಂದೆ 'ಎಲ್ಲಿದ್ದೆ ಇಲ್ಲಿ ತನಕ' ಎಂಬ ಪ್ರಶ್ನೆಯೊಂದಿಗೆ ಮರಳಿದ್ದಾರೆ.

ಚಿತ್ರದಲ್ಲಿ ಟಾಕಿಂಗ್ ಸ್ಟಾರ್​ಗೆ ನಾಯಕಿಯಾಗಿ ಕ್ಯೂಟ್ ಬ್ಯೂಟಿ ಹರಿಪ್ರಿಯಾ ನಟಿಸಿದ್ದಾರೆ. ಇನ್ನು ಮಗನೊಂದಿಗೆ ಗಿರಿಜಾ ಲೊಕೇಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿರುವುದು ಮತ್ತೊಂದು ವಿಶೇಷ. ತೇಜಸ್ವಿ ನಿರ್ದೇಶನದ ಚಿತ್ರದ ಮೇಲೆ ಈಗಾಗಲೇ ಗಾಂಧಿನಗರದಲ್ಲಿ ಒಳ್ಳೆ ಟಾಕುಗಳು ಕೇಳಿ ಬರುತ್ತಿದ್ದು, ಅತೀ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.ಅಂದಹಾಗೆ 'ಎಲ್ಲಿದ್ದೆ ಇಲ್ಲಿ ತನಕ' ಎಂಬ ಟೈಟಲ್​ನ್ನು 1980ರಲ್ಲಿ ತೆರೆಕಂಡಿದ್ದ ಲೊಕೇಶ್ ಅಭಿನಯದ 'ಎಲ್ಲಿಂದಲೋ ಬಂದವರು' ಚಿತ್ರದ ಸೂಪರ್ ಹಿಟ್​ ಗೀತೆಯಿಂದ ಆಯ್ದುಕೊಳ್ಳಲಾಗಿದೆ. ಹೀಗಾಗಿ ಈ ಚಿತ್ರವು ಸೃಜನ್ ಪಾಲಿಗೆ ಸ್ಯಾಂಡಲ್​ವುಡ್​ನಲ್ಲಿ ಹೊಸ ಲಕ್ ಕುದುರಿಸಲಿದೆ ಎಂದೇ ಹೇಳಲಾಗುತ್ತಿದೆ.

First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading