• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ButtaBomma Song: ಏಕ್ತಾ ಕಪೂರ್ ಮನೆಯಲ್ಲೂ ಅಲ್ಲು ಅರ್ಜುನ್​ರ ಬುಟ್ಟಬೊಮ್ಮ ಹಾಡಿನದ್ದೇ ಸದ್ದು..!

ButtaBomma Song: ಏಕ್ತಾ ಕಪೂರ್ ಮನೆಯಲ್ಲೂ ಅಲ್ಲು ಅರ್ಜುನ್​ರ ಬುಟ್ಟಬೊಮ್ಮ ಹಾಡಿನದ್ದೇ ಸದ್ದು..!

ಮಗನೊಂದಿಗೆ ಏಕ್ತಾ ಕಪೂರ್​

ಮಗನೊಂದಿಗೆ ಏಕ್ತಾ ಕಪೂರ್​

Ekta Kapoor: ಈ ಹಿಂದೆ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಂಗಿ ಶಮಿತಾ ಶೆಟ್ಟಿ ಸಹ ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್​ ಮಾಡಿದ್ದರು. ನಂತರ ಕ್ರಿಕೆಟಿಗ ಡೇವಿಡ್​ ವಾರ್ನರ್ ಸಹ ಈ ಹಾಡಿಗೆ ಹೆಂಗಳಿ ಹಾಗೂ ಮಗು ಜೊತೆ ಸ್ಟೆಪ್​ ಹಾಕಿದ್ದರು. ಈಗ ಈ ಹಾಡು ಬಿ-ಟೌನ್​ನ ಫಿಲ್ಮ್​ ಮೇಕರ್​ ಏಕ್ತಾ ಕಪೂರ್​ ಮನೆಗೂ ಲಗ್ಗೆ ಇಟ್ಟಿದೆ.

ಮುಂದೆ ಓದಿ ...
  • Share this:

ಅಲ್ಲು ಅರ್ಜುನ್​ ಅವರ 'ಅಲಾ ವೈಕುಂಠಪುರಂಲೋ ' ಸಿನಿಮಾ ಹಾಡುಗಳು ಈಗಾಗಲೇ ಸಖತ್ ಸದ್ದು ಮಾಡುತ್ತಿವೆ. ವಿಶ್ವದಾದ್ಯಂತ ಖ್ಯಾತಿ ಪಡೆದ ನೂರು ವಿಡಿಯೋ ಹಾಡುಗಳಲ್ಲಿ ಬುಟ್ಟ ಬೊಮ್ಮ 15ನೇ ಸ್ಥಾನದಲ್ಲಿದೆಯಂತೆ.


'ಅಲಾ ವೈಕುಂಠಪುರಂಲೋ' ಸಿನಮಾದ 'ಬುಟ್ಟಬೊಮ್ಮ...' ಹಾಗೂ 'ರಾಮುಲೋ ರಾಮುಲಾ...' ಹಾಡುಗಳು ಟಿಕ್​ಟಾಕ್​ನಲ್ಲೂ ಧೂಳೆಬ್ಬಿಸುತ್ತಿವೆ. ಸೆಲೆಬ್ರಿಟಿಗಳೂ ಸಹ 'ಬುಟ್ಟಬೊಮ್ಮ...' ಹಾಡಿಗೆ ಸೊಂಟ ಕುಣಿಸುತ್ತಿದ್ದಾರೆ. ಯೂಟ್ಯೂಬ್​ನಲ್ಲಿ ಬುಟ್ಟಬೊಮ್ಮ ವಿಡಿಯೋ ಹಾಡಿಗೆ 20 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ.
ಈ ಹಿಂದೆ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಂಗಿ ಶಮಿತಾ ಶೆಟ್ಟಿ ಸಹ 'ಬುಟ್ಟಬೊಮ್ಮ...' ಹಾಡಿಗೆ ಡ್ಯಾನ್ಸ್​ ಮಾಡಿದ್ದರು. ನಂತರ ಕ್ರಿಕೆಟಿಗ ಡೇವಿಡ್​ ವಾರ್ನರ್ ಸಹ ಈ ಹಾಡಿಗೆ ಹೆಂಡತಿ ಹಾಗೂ ಮಗು ಜೊತೆ ಸ್ಟೆಪ್​ ಹಾಕಿದ್ದರು. ಈಗ ಈ ಹಾಡು ಬಿ-ಟೌನ್​ನ ಫಿಲ್ಮ್​ ಮೇಕರ್​ ಏಕ್ತಾ ಕಪೂರ್​ ಮನೆಗೂ ಲಗ್ಗೆ ಇಟ್ಟಿದೆ.

View this post on Instagram

Shetty's sister🤤😂❤ @theshilpashetty @shamitashetty_official @indiatiktok #shilpashetty #shamitashetty


A post shared by Shilpa Shetty Kundra. (@shilpashetty_team) on

ಏಕ್ತಾ ಕಪೂರ್ ಅವರ ಮನೆಯಲ್ಲಿ ಈಗ 'ಬುಟ್ಟಬೊಮ್ಮ...' ಹಾಡಿನದ್ದೇ ಸದ್ದಂತೆ. ಏಕ್ತಾ ಅವರ ಮಗ ರವೀ ಸಹ ಅಲ್ಲು ಅರ್ಜುನ್​ 'ಬುಟ್ಟಬೊಮ್ಮ...' ಹಾಡನ್ನು ನೋಡುತ್ತಾ ಡ್ಯಾನ್ಸ್​ ಮಾಡುತ್ತಾ ಎಂಜಾಯ್​ ಮಾಡುತ್ತಿರುತ್ತಾನಂತೆ. ಈ ಬಗ್ಗೆ ಏಕ್ತಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ​ ಪೋಸ್ಟ್​ ಮಾಡಿದ್ದಾರೆ.
View this post on Instagram

Fav song of my fav boy! ) also #gendaphool ! How music has no language!!!


A post shared by Erk❤️rek (@ektarkapoor) on

ಏಕ್ತಾ ಕಪೂರ್​ ತಮ್ಮ ಮಗ ಟಿವಿಯಲ್ಲಿ ಅಲ್ಲು ಅರ್ಜುನ್​ ಕುಣಿಯೋದನ್ನು ನೋಡಿ ಡ್ಯಾನ್ಸ್ ಮಾಡಲು ಪ್ರಯತ್ನಿಸುತ್ತಿರುವ ಕ್ಯೂಟ್​ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸಂಗೀತಕ್ಕೆ ಭಾಷೆಯ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಟಾಲಿವುಡ್​ನಲ್ಲಿ ಹೊಸ ದಾಖಲೆಗಳನ್ನು ಮಾಡಿರುವ 'ಬುಟ್ಟಬೊಮ್ಮ...' ಹಾಡು ಈಗ ಬಾಲಿವುಡ್​ನಲ್ಲೂ ಸದ್ದು ಮಾಡುತ್ತಿದೆ.


Alia Bhatt: ಹೊಸ ಕಚೇರಿಗಾಗಿ ಇಂಟೀರಿಯರ್​ ಡಿಸೈನರ್​ ಆದ ಆಲಿಯಾ ಭಟ್​..!
Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು