ತೊಟ್ಟ ಬಟ್ಟೆಯಿಂದಲೇ ಟ್ರೋಲ್​ ಆದ ಕಿರುತೆರೆ ರಾಣಿ ಏಕ್ತಾ ಕಪೂರ್​..!

news18
Updated:July 27, 2018, 2:06 PM IST
ತೊಟ್ಟ ಬಟ್ಟೆಯಿಂದಲೇ ಟ್ರೋಲ್​ ಆದ ಕಿರುತೆರೆ ರಾಣಿ ಏಕ್ತಾ ಕಪೂರ್​..!
news18
Updated: July 27, 2018, 2:06 PM IST
ನ್ಯೂಸ್​ 18 ಕನ್ನಡ 

ಕಿರುತೆರೆಯನ್ನು ಆಳುತ್ತಿರುವ ನಿರ್ಮಾಪಕಿ ಏಕ್ತಾ ಕಪೂರ್​ ಆಗಾಗ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ತಾವು ತೊಡುವ ಬಟ್ಟೆ, ಮತ್ತೆ ಕೆಲವೊಮ್ಮೆ ತಾವು ನಿರ್ಮಿಸುವ ಸಿನಿಮಾಗಳಿಂದಾಗಿ ಸುದ್ದಿಯಾಗುತ್ತಾರೆ. ಆದರೆ ಈ ಬಾರಿಯೂ ಪಾರ್ಟಿಯೊಂದಕ್ಕೆ ಹೋದಾಗ ತೊಟ್ಟಿದ್ದ ವಿನ್ಯಾಸಿತ ಬಟ್ಟೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಏಕ್ತಾ ಹೆಸರು ಓಡಾಡುತ್ತಿದೆ.

ಹೌದು ಏಕ್ತಾ ಇತ್ತೀಚೆಗೆ ಧಾರಾವಾಹಿಯೊಂದರ ಯಶಸ್ಸಿನ ಪಾರ್ಟಿಯೊಂದಕ್ಕೆ ಹೋದಾಗ ರಫಲ್​ ಮರೂನ್​ ಗೌನ್​ ತೊಟ್ಟು ಹೋಗಿದ್ದರು. ನೀಲಿ ಬಣ್ಣದ ಜೀನ್ಸ್​ ಪ್ಯಾಂಟ್​ ಮೇಲೆ ಮರೂನ್​ ಗೌನ್ ತೊಟ್ಟಿದ್ದ ಚಿತ್ರವನ್ನು ಸಾಮಾಜಿಕ ಜಾಲತಾನದಲ್ಲಿ ಪೋಸ್ಟ್​ ಮಾಡಲಾಗಿತ್ತು.

 
Loading...

The queen of tv land arrives #ektakapoor for #yehhainmohabatein 1500 episodes celelberations @viralbhayani


A post shared by Viral Bhayani (@viralbhayani) on


ಆದರೆ ಆ ಚಿತ್ರದಲ್ಲಿ ​ಏಕ್ತಾ ತೊಟ್ಟಿರುವ ಬಟ್ಟೆ ಯಾವುದು ಎಂದೂ ಯಾರಿಗೂ ಅರ್ಥವಾಗದ ಕಾರಣ ಟ್ರೋಲಿಗರು ಈ ಚಿತ್ರವನ್ನು ಟ್ರೋಲ್​ ಮಾಡಿದ್ದಾರೆ. ಅಲ್ಲದೆ ಆ ಫೋಟೋಗೆ ವ್ಯಂಗ್ಯವಾಗಿ ನೀವು ತೊಟ್ಟಿರುವುದು ಏನು?, ಯಾವ ಸ್ಟೈಲ್​ ಇದು? ಯಾವ ಬಟ್ಟೆ ಇದು? ಇವರಿಗೆ ಸ್ಟೈಲ್​ ಮಾಡುವುದೇ ಗೊತ್ತಿಲ್ಲ? ಇವರು ಒಳ್ಳೆಯ ಉಡುಗೆ ತೊಟ್ಟಿದ್ದನ್ನೇ ನಾವು ನೋಡಿಲ್ಲ? ಎಂದು ಹೇಳುತ್ತೀರಾ ಎಂದೆಲ್ಲ ಕಮೆಂಟ್​ ಹಾಕುತ್ತಿದ್ದಾರೆ.'ಯೇ ಹೈ ಮೊಹಬತೇನ್​' ಧಾರಾವಾಹಿ 1500 ಸಂಚಿಕೆ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಇದರಲ್ಲಿ ತೆಗೆದಿದ್ದ ಕೆಲವು ಚಿತ್ರಗಳನ್ನು ಏಕ್ತಾ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.


Love em !!! @karan9198 @anitahassanandani r d pillars too of yhm #yhm


A post shared by Ekta❤️myVEERES (@ektaravikapoor) on
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ