ಬಾಲಿವುಡ್​ನಲ್ಲಿ ಸೆಟ್ಟೇರಲಿದೆಯಾ ಏಕ್​ ವಿಲನ್​ ಸೀಕ್ವಲ್​?

news18
Updated:July 2, 2018, 11:35 AM IST
ಬಾಲಿವುಡ್​ನಲ್ಲಿ ಸೆಟ್ಟೇರಲಿದೆಯಾ ಏಕ್​ ವಿಲನ್​ ಸೀಕ್ವಲ್​?
news18
Updated: July 2, 2018, 11:35 AM IST
ನ್ಯೂಸ್​ 18 ಕನ್ನಡ
2014ರಲ್ಲಿ ತೆರೆಕಂಡಿದ್ದ 'ಏಕ್​ ವಿಲನ್'​ ಸಿನಿಮಾ ಶ್ರದ್ಧಾ ಕಪೂರ್​, ಸಿದ್ಧಾರ್ಥ್​ ಮಲ್ಹೋತ್ರ ಮತ್ತು ರಿತೇಶ್​ ದೇಶಮುಖ್​ ಸಿನಿ ಕೆರಿಯರ್​ಗೆ ತಿರುವು ನೀಡಿದ್ದು ಸುಳ್ಳಲ್ಲ. ಇದೀಗ ಈ ರೊಮ್ಯಾಂಟಿಕ್​ ಥ್ರಿಲ್ಲರ್​ ಸಿನಿಮಾದ ಸೀಕ್ವಲ್​ ತೆರೆಗೆ ತರಲು ಕರಣ್​ ಜೋಹರ್​ ಮತ್ತು ಏಕ್ತಾ ಕಪೂರ್​ ಸಿದ್ಧವಾಗಿದ್ದಾರೆ.

ಏಕ್ತಾ ಕಪೂರ್​ ಅವರ ಬಾಲಾಜಿ ಮೋಷನ್​ ಪಿಕ್ಚರ್ಸ್​ ಮತ್ತು ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್​ ಬ್ಯಾನರ್​ ಅಡಿಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಮೋಹಿತ್​ ಸೂರಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ.

ಈ ಸಿನಿಮಾ ಮಾಡಬೇಕೆಂಬ ನಿರ್ಧಾರ ಮಾತ್ರ ಆಗಿದ್ದು, ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ಏಕ್ತಾ ಕಪೂರ್​ ತಮ್ಮ ನಿರ್ಮಾಣದ 'ವೀರೇ ದಿ ವೆಡ್ಡಿಂಗ್'​ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ.
First published:July 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...