Yaare Yaare Song: ಯಾರೆ ಯಾರೆ... ಎನ್ನುತ್ತಲೇ ಪ್ರೇಮಿಗಳ ದಿನದಂದು ಮ್ಯೂಸಿಕಲ್​ ಟ್ರೀಟ್ ಕೊಟ್ಟ ಏಕ್​ ಲವ್​ ಯಾ ಚಿತ್ರತಂಡ: ಮೆಚ್ಚಿಕೊಂಡ ಪುನೀತ್​..!

Happy Valentines Day: ಪ್ರೇಮಿಗಳ ದಿನದಂದು ರಿಲೀಸ್​ ಆಗಿರುವ ಯಾರೇ ಯಾರೇ ನೀನು ನಂಗೆ... ಏನೋ ಆಸೆ.... ರೊಮ್ಯಾಂಟಿಕ್​ ಲವ್​ ಸಾಂಗ್​ಗೆ ಕನ್ನಡದಲ್ಲಿ ಬಾಲಿವುಡ್​ ಗಾಯಕ ಅರ್ಮಾನ್​ ಮಲ್ಲಿಕ್​ ಹಾಡಿದರೆ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಂಚಿತ್​ ಹೆಗಡೆ ದನಿಯಾಗಿದ್ದಾರೆ.

ಯಾರೆ ಯಾರೆ... ಹಾಡಿನ ಪೋಸ್ಟರ್​

ಯಾರೆ ಯಾರೆ... ಹಾಡಿನ ಪೋಸ್ಟರ್​

  • Share this:
ಪ್ರೇಮಿಗಳ ದಿನದಂದು ಸಿನಿರಂಗದ ಕಡೆಯಿಂದ ಸಿನಿಪ್ರಿಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಸಂಕ್ರಾಂತಿ ಹಬ್ಬದಂದು ನಿರ್ದೇಶಕ ಜೋಗಿ ಪ್ರೇಮ್​ ತಮ್ಮ ಏಕ್​ ಲವ್​ ಯಾ (Ek Love Ya) ಚಿತ್ರದ ಮೊದಲ ಹಾಡಿನ ರಿಲೀಸ್ ದಿನಾಂಕ ಪ್ರಕಟಿಸುವುದರ ಜೊತೆಗೆ ಸಿನಿಮಾದ ಹೊಸ ಪೋಸ್ಟರ್​ಗಳನ್ನೂ ಹಂಚಿಕೊಂಡಿದ್ದರು. ಜೋಗಿ ಪ್ರೇಮ್(Jogi Prem)​ ಆ್ಯಕ್ಷನ್​ ಕಟ್​ ಹೇಳುತ್ತಿರುವ ಸಿನಿಮಾದ ಹೆಸರಲ್ಲೇ ಲವ್​ ಇದೆ. ಅಂತೆಯೇ ಈ ಲವ್​ ಸ್ಟೋರಿಯ ಮೊದಲ ಹಾಡನ್ನು ಪ್ರೇಮಿಗಳ ದಿನದಂದು ಅಂದರೆ ಇಂದು ರಿಲೀಸ್ ಮಾಡಿದೆ ಚಿತ್ರತಂಡ. ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಾಣವಾಗ್ತಿರೋ ಸಿನಿಮಾಗೆ ಅರ್ಜುನ್ಯ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ಸ್ಯಾಂಡಲ್​ವುಡ್​ಗೆ ಪರಿಚಯವಾಗಲಿದ್ದಾರೆ.

ಪ್ರೇಮಿಗಳ ದಿನದಂದು ರಿಲೀಸ್​ ಆಗಿರುವ ಯಾರೇ ಯಾರೇ ನೀನು ನಂಗೆ... ಏನೋ ಆಸೆ.... ರೊಮ್ಯಾಂಟಿಕ್​ ಲವ್​ ಸಾಂಗ್​ಗೆ ಬಾಲಿವುಡ್​ ಗಾಯಕ ಅರ್ಮಾನ್​ ಮಲ್ಲಿಕ್ ದನಿಯಾಗಿದ್ದಾರೆ​. ಏಕ್​ ಲವ್​ ಯಾ ಸಿನಿಮಾದ ಮೊದಲ ಹಾಡು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್‌ ಆಗಿದೆ.ಹಾಡಿಗೆ ದನಿಯಾದ ಸಂಚಿತ್​ ಹೆಗಡೆ

ಕನ್ನಡದಲ್ಲಿ ಬಾಲಿವುಡ್​ ಗಾಯಕ ಅರ್ಮಾನ್​ ಮಲ್ಲಿಕ್​ ಹಾಡಿದರೆ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಂಚಿತ್​ ಹೆಗಡೆ ದನಿಯಾಗಿದ್ದಾರೆ.ಈ ಹಾಡು ರಿಲೀಸ್ ಹಾಡುತ್ತಿದ್ದಂತೆಯೇ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ತಕ್ತವಾಗುತ್ತಿದೆ. ಇನ್ನು ಹಾಡು ನೋಡಿದ ಪುನೀತ್​ ರಾಜ್​ಕುಮಾರ್ ಹಾಗೂ ಟಾಲಿವುಡ್​ ನಟಿ-ನಿರ್ಮಾಪಕಿ ಚಾರ್ಮಿ ಕೌರ್​ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಹಾಡಿನ ರಿಲೀಸ್​ ದಿನಾಂಕ ಪ್ರಕಟಿಸುತ್ತಿದ್ದಂತೆಯೇ ಪ್ರೇಮ್​ ಹಾಡಿನ ಕೆಲವು ಸಾಲುಗಳನ್ನು ಗಾಯಕ ಹಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಜೊತೆಗೆ ಹಾಡಿಗಾಗಿ ಮಾಡಿದ್ದ ಕೆಲವು ವಿಡಿಯೋ ತುಣುಕುಗಳನ್ನೂ ಪೋಸ್ಟ್ ಮಾಡಿದ್ದರು.
View this post on Instagram


A post shared by Prem❣️s (@directorprems)

ಅರ್ಜುನ್​ ಜನ್ಯ ಅವರ ಜೊತೆ ಅರ್ಮಾನ್​ ಮಲ್ಲಿಕ್​ ಹಾಡನ್ನು ಹಾಡುತ್ತಾ ಅಭ್ಯಾಸ ಮಾಡುತ್ತಿರುವ ವಿಡಿಯೋ ಈ ಹಿಂದೆ ವೈರಲ್​ ಆಗಿತ್ತು. ಈ ಹಾಡನ್ನು ಲಡಾಖ್​, ಗುಜರಾತ್​ ಹಾಗೂ ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದು ನವದಾಂಪತ್ಯಕ್ಕೆ ಕಾಲಿಟ್ಟ ಮಿಲನಾ-ಡಾರ್ಲಿಂಗ್ ಕೃಷ್ಣ

'ಏಕ್​ ಲವ್ ಯಾ' ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿದ್ದು, ಇಲ್ಲಿ ರಾಣಾಗೆ ನಾಯಕಿಯಾಗಿ ರೇಷ್ಮಾ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಮ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಸಿನಿಮಾದ ಚಿತ್ರೀಕರಣ ಊಟಿ, ಗುಜರಾತ್​ ಹಾಗೂ ಕಾಶ್ಮೀರದಲ್ಲಿ ಪೂರ್ಣಗೊಂಡಿದೆ. ಇನ್ನು ಲಾಕ್​ಡೌನ್​ ಸಡಿಲಗೊಂಡ ಕೂಡಲೇ ಊಟಿಯಲ್ಲಿ ಹಾಡಿನ ಚಿತ್ರೀಕರಣದ ಜೊತೆಗೆ ಕೊಂಚ ಪ್ಯಾಚ್​ ವರ್ಕ್​ ಸಹ ಮುಗಿಸಿರುವ ಚಿತ್ರತಂಡ ನಂತರ ಕಾಶ್ಮೀರಕ್ಕೆ ಹೋಗಿತ್ತು.

ಇದನ್ನೂ ಓದಿ: Aishwarya-Amarthya Wedding: ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ-ಅಮರ್ಥ್ಯ ವಿವಾಹದಲ್ಲಿ ಭಾಗಿಯಾದ ಪುನೀತ್​ ರಾಜ್​ಕುಮಾರ್ ದಂಪತಿ..!

ಹಾಗೆಯೇ ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಟಗರು ಚಿತ್ರದ ಛಾಯಾಗ್ರಾಹಕ ಮಹೇನ್ ಸಿಂಹ ಜೋಗಿ ಪ್ರೇಮ್​ ಅವರ ತಂಡದ ಜೊತೆ ಇರುವುದು. ​ಈಗಾಗಲೇ ಟೈಟಲ್ ಟೀಸರ್ ಹಾಗೂ ಮೋಷನ್ ಪೋಸ್ಟರ್​ ಸಿನಿಮಾದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. .
Published by:Anitha E
First published: