ಸೆಟ್ಟೇರಿತು `ಏಕ್ ಲವ್ ಯಾ': ಪ್ರೇಮ್ ನಿರ್ದೇಶನದಲ್ಲಿ ಬರದಿಂದ ಸಾಗುತ್ತಿದೆ ಸಿನಿಮಾದ ಚಿತ್ರೀಕರಣ

ಕಳೆದ ಶನಿವಾರ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಿ `ಏಕ್ ಲವ್ ಯಾ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಸರಳ ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕ ಪ್ರೇಮ್ ತಮ್ಮ ಭಾವಮೈದುನ ಅಭಿಷೇಕ್ ನಟನೆಯ ಮೊದಲ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

ಪ್ರೇಮ್​ ನಿರ್ದೇಶನದ 'ಏಕ್​ ಲವ್​ ಯಾ' ಸಿನಿಮಾದಲ್ಲಿ ರಕ್ಷಿತಾ ತಮ್ಮ ರಾಣಾ

ಪ್ರೇಮ್​ ನಿರ್ದೇಶನದ 'ಏಕ್​ ಲವ್​ ಯಾ' ಸಿನಿಮಾದಲ್ಲಿ ರಕ್ಷಿತಾ ತಮ್ಮ ರಾಣಾ

  • News18
  • Last Updated :
  • Share this:
ಜೋಗಿ ಪ್ರೇಮ್​ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಏಕ್​ ಲವ್​ ಯಾ' ಈಗಷ್ಟೆ ಸೆಟ್ಟೇರಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿತು. ರಕ್ಷಿತಾ ಪ್ರೇಮ್ ಅವರ ಸಹೋದರ ಅಭಿಷೇಕ್ ಈ ಚಿತ್ರದ ಮೂಲಕ ರಾಣಾ ಎಂಬ ಹೆಸರಿನೊಂದಿಗೆ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಕಳೆದ ಶನಿವಾರ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಿ `ಏಕ್ ಲವ್ ಯಾ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಸರಳ ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕ ಪ್ರೇಮ್ ತಮ್ಮ ಭಾವಮೈದುನ ಅಭಿಷೇಕ್ ನಟನೆಯ ಮೊದಲ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ: ನಿರೀಕ್ಷಿಸಿ ಜಗ್ಗೇಶ್​ರ ಆತ್ಮಕತೆ: 'ನವರಸ ನಾಯಕನ ನಾಲ್ಕು ಹೆಜ್ಜೆ'ಯಾಗಿ ಜಗ್ಗಣ್ಣನ ಜೀವನದ ಕತೆ..!​

ಇದೇ ತಿಂಗಳಿನಿಂದಲೇ `ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣಕ್ಕೆ ಕಿಕಕ್ ಸ್ಟಾರ್ಟ್​ ಸಿಕ್ಕಿದೆ . ಈ ಸಂತೋಷದ ವಿಷಯವನ್ನು ನಟಿ ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶುಭ ಹಾರೈಸುವಂತೆ ಕೋರಿದ್ದಾರೆ.

ರಾಣಾ (ಅಭಿಷೇಕ್) ಎಂಜಿನಿಯರಿಂಗ್ ಮುಗಿಸಿ ನ್ಯೂಯಾರ್ಕ್‍ನಲ್ಲಿ  ಥಿಯೇಟರ್​ ವಿಭಾಗದಲ್ಲಿ ಅಭಿನಯ ತರಬೇತಿ ಪಡೆದು, ನಂತರ ನಿರ್ದೇಶಕ ಪ್ರೇಮ್ ಅವರ `ದಿ ವಿಲನ್' ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದ್ದರು.

ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಏಕ್ ಲವ್ ಯಾ' ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದರೆ, ಮಹೇಂದ್ರ ಸಿಂಹ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: Pailwaan Movie: 'ಪೈಲ್ವಾನ್​' ಸಿನಿಮಾದಲ್ಲಿ ಸುನೀಲ್​ ಶೆಟ್ಟಿ ಪಾತ್ರದ ಗುಟ್ಟು ರಟ್ಟು: ಇಂದು ಸಂಜೆ ಬಿಡುಗಡೆಯಾಗಲಿದೆ ಚಿತ್ರದ ಮತ್ತೊಂದು ಪೋಸ್ಟರ್​

ಈ ಸಿನಿಮಾಗಾಗಿ ಸುದೀಪ್​ ಜಿಮ್​ ಮೆಟ್ಟಿಲು ಹತ್ತಿ ಬೆವರಿಳಿಸಿದ್ದ ಸುದ್ದಿ ಸಖತ್ ಸದ್ದು ಮಾಡಿತ್ತು. ಎಸ್​. ಕೃಷ್ಣ ನಿರ್ದೇಶನದ 'ಪೈಲ್ವಾನ್​' ಸಿನಿಮಾ ಆಗಸ್ಟ್​ನಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರಲಿದೆ.

 

Kingfisher Calendar: 2019ರ ಕಿಂಗ್​ಫಿಶರ್​ ಕ್ಯಾಲೆಂಡರ್​ ಶೂಟ್​ನ ಹಾಟ್​ ಹಾಟ್​ ಫೋಟೊಗಳು ..!


First published: