ಏಕ್ ಲವ್​ ಯಾ ಸೆಟ್​ನಲ್ಲಿ ದೀಪಾವಳಿ ಸಂಭ್ರಮ: ಪ್ರೇಮ್ ಅಡ್ಡಾಗೆ ಹೊಸ ನಟನ ಎಂಟ್ರಿ..!

Ek Love Ya: 'ಏಕ್​ ಲವ್ ಯಾ' ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿದ್ದು ಇಲ್ಲಿ ಡಿಂಪಲ್ ಕ್ವೀನ್ ಟಾಮ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರೇಮ್ ಮತ್ತು ತಂಡ

ಪ್ರೇಮ್ ಮತ್ತು ತಂಡ

  • Share this:
ಜೋಗಿ ಪ್ರೇಮ್ 'ಏಕ್ ಲವ್ ಯಾ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ರಕ್ಷಿತಾ ಪ್ರೇಮ್ ಸಹೋದರ 'ರಾಣಾ' ಈ ಚಿತ್ರದ ನಾಯಕ. ಸಖತ್ ಸೌಂಡ್ ಮಾಡಿಯೇ ಸೆಟ್ಟೇರಿದ್ದ ಈ ಚಿತ್ರ ಈಗ ಮತ್ತೆ ಸದ್ದು ಮಾಡಿದೆ. ಹೌದು, ದೀಪಾವಳಿ ಎಂದರೆ ಸದ್ದಿರಬೇಕಲ್ಲವೇ. ಹಾಗೆಯೇ ಪ್ರೇಮ್ ಅಡ್ಡಾದಿಂದ ಶುಭಾಶಯ ಕೂಡ ಜೋರಾಗಿಯೇ ಕೇಳಿ ಬಂದಿದೆ.

ಚಿತ್ರದ ಸೆಟ್​ನಲ್ಲಿ ದೀಪಾವಳಿಯನ್ನು ಆಚರಿಸಿಕೊಳ್ಳುವ ಮೂಲಕ ಪ್ರೇಮ್ ಅ್ಯಂಡ್ ಟೀಂ ಸಮಸ್ತ ಕನ್ನಡ ಜನತೆಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಮೈಸೂರಿನಲ್ಲಿ‌ ಭರದ ಚಿತ್ರೀಕರಣ ನಡೆಸುತ್ತಿರುವ 'ಏಕ್ ಲವ್ ಯಾ' ಟೀಮ್​ಗೆ ಈಗ ಕನ್ನಡದ ಹಿರಿಯ ನಟ ಚರಣ್ ರಾಜ್ ಸಹ ಸೇರಿಕೊಂಡಿದ್ದಾರೆ. ಈ ವಿಷಯವನ್ನು ಕೂಡ ಹಬ್ಬದ ಸಂಭ್ರಮದೊಂದಿಗೆ ಚಿತ್ರತಂಡ ಬಹಿರಂಗಪಡಿಸಿದೆ.

ಪ್ರೇಮ್ ಮತ್ತು ತಂಡ


'ಏಕ್​ ಲವ್ ಯಾ' ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿದ್ದು ಇಲ್ಲಿ ಡಿಂಪಲ್ ಕ್ವೀನ್ ಟಾಮ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಟಗರು ಚಿತ್ರದ ಛಾಯಾಗ್ರಾಹಕ ಮಹೇನ್ ಸಿಂಹ  ಪ್ರೇಮ್ಸ್​ ಟೀಂನೊಂದಿಗೆ ಕೈ ಜೋಡಿಸಿರುವುದು. ಹಾಗೆಯೇ ಅರ್ಜುನ್ ಜನ್ಯ ನೀಡಿರುವ ಮ್ಯೂಸಿಕ್​ನೊಂದಿಗೆ ಈಗಾಗಲೇ ಟೈಟಲ್ ಟೀಸರ್​ ಮೋಡಿ ಮಾಡಿದೆ.


ಕಳೆದ ಕೆಲದಿನಗಳಿಂದ ಶೂಟಿಂಗ್​ನಲ್ಲೇ ಬ್ಯುಸಿಯಾಗಿರುವ ಜೋಗಿ ಪ್ರೇಮ್ ಈ ಬಾರಿ ಭಾಮೈದನೊಂದಿಗೆ ಮತ್ತೆ ಸಕ್ಸಸ್ ಟ್ರ್ಯಾಕ್​ಗೆ ಮರಳುವ ಸೂಚನೆಯಂತು ನೀಡಿದ್ದಾರೆ.
First published: