ಬಿಡುಗಡೆ ಆಯಿತು ಅನಿಲ್​-ಸೋನಮ್​ ಕಪೂರ್​ ಅಭಿನಯದ ಮೊದಲ ಸಿನಿಮಾದ ಟೀಸರ್​

news18
Updated:June 29, 2018, 9:56 AM IST
ಬಿಡುಗಡೆ ಆಯಿತು ಅನಿಲ್​-ಸೋನಮ್​ ಕಪೂರ್​ ಅಭಿನಯದ ಮೊದಲ ಸಿನಿಮಾದ ಟೀಸರ್​
news18
Updated: June 29, 2018, 9:56 AM IST
ನ್ಯೂಸ್​ 18 ಕನ್ನಡ 

'ವೀರೇ ದಿ ವೆಡ್ಡಿಂಗ್'​ ಸಿನಿಮಾದ ನಂತರ ಮತ್ತೊಮ್ಮೆ ಸೋನಮ್​ ಕಪೂರ್​  ಬೆಳ್ಳಿ ಪರದೆ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿಯ ವಿಶೇಷತೆ ಎಂದರೆ ಸೋನಮ್​ ಇದೇ  ಬಾರಿಗೆ ಅಪ್ಪ ಅನಿಲ್​ ಕಪೂರ್​ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.

ಅಪ್ಪ-ಮಗಳು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ 'ಏಕ್​ ಲಡಕಿ ಕೋ ದೇಖ ತೋ ಐಸಾ ಲಗಾ' ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ. ಇದರಲ್ಲಿ ಅನಿಲ್​ ಕಪೂರ್​ ಅಭಿನಯದ '1942: ಎ ಲವ್​ಸ್ಟೋರಿ' ಸಿನಿಮಾದ ಒಂದು ಝಲಕ್​ ಸಹ ಇದೆ.

 
ಇತ್ತೀಚೆಗೆ ಸೋನಮ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಸಿನಿಮಾದ ಪೋಸ್ಟರ್​ ಅನ್ನು ಶೇರ್​ ಮಾಡಿದ್ದರು. ಈ ಸಿನಿಮಾವನ್ನು 'ಸಂಜು' ಸಿನಿಮಾದ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ವಿದು ವಿನೋದ್​ ಚೋಪ್ರಾ ನಿರ್ಮಾಣದ ಈ ಸಿನಿಮಾದಲ್ಲಿ ಜೂಹಿ ಚಾವ್ಲಾ ಹಾಗೂ ರಾಜಕುಮಾರ್​ ರಾವ್​ ಸಹ ಕಾಣಿಸಿಕೊಳ್ಳಲಿದ್ದಾರೆ.

First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...