ನಿಮಗೆ ಸಿನೆಮಾ (Film) ಹೋಗುವಾಗ ತಡವಾಗುತ್ತೆ ಅಂತ ಏನ್ ಮಾಡ್ತೀರಾ? ಆಟೋದಲ್ಲಿ, ಬೈಕ್, ಓಲಾ ಹೀಗೆ ಹಲವಾರು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನ ಬಳಸುತ್ತೀರಿ. ಅದೇ ರಾಜಕಾರಣಿಗಳು (Politician) ಅಥವಾ ಯಾವುದೇ ಸೆಲೆಬ್ರಿಟಿ (Celebrity) ಸಾಮಾನ್ಯವಾಗಿ ಕಾರಿನಲ್ಲಿ ಬರುತ್ತಾರೆ. ಹಾಗೆಯೇ ಕೆಲವೊಮ್ಮೆ ತಡವಾಗುವುದು ಸಾಮಾನ್ಯ. ಆದರೆ ನಮ್ಮ ಸಚಿವರು ಸಿನೆಮಾ ನೋಡಲು ತಡವಾಗುತ್ತದೆ ಎಂದು ಮೆಟ್ರೋದಲ್ಲಿ ಬಂದು ಸಿನೆಮಾ ವೀಕ್ಷಿಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ.
ಸೃಜನ್ ಲೋಕೇಶ್ ಮತ್ತು ನಟಿ ಮೇಘನಾ ರಾಜ್ ನಟನೆಯ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರವನ್ನು ವೀಕ್ಷಿಸಲು ಮಲ್ಲೇಶ್ವರಂ ಮಂತ್ರಿ ಮಾಲ್ ಗೆ ಶಿಕ್ಷಣ ಸಚಿವ ನಾಗೇಶ್ ಬಂದಿದ್ದು. ಈ ಚಿತ್ರ ವಿಭಿನ್ನ ಕಥೆಯನ್ನು ಹೊಂದಿದೆ, ಜನರನ್ನ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯಶಸ್ವಿ ಆಗಿದೆ. ಅದಕ್ಕೆ ಸಾಮಾಜಿಕ ಕಳಕಳಿ ಇದೆ ಎಂಬ ಕಾರಣಕ್ಕೆ ಸರ್ಕಾರ ಅದನ್ನು ಬೆಂಬಲಿಸುವ ಉದ್ದೇಶದಿಂದ ಮಾನ್ಯ ಶಿಕ್ಷಣ ಮಂತ್ರಿ ನಾಗೇಶ್ ಸಿನಿಮಾ ನೋಡಲು ಬಂದಿದ್ದರು.
ಚಿತ್ರಕ್ಕೆ ಶಿಕ್ಷಣ ಸಚಿವರ ಸಾಥ್
ಇನ್ನು ಚಿತ್ರ ನೋಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸಿನಿಮಾವನ್ನು ಮಕ್ಕಳು ತಮ್ಮ ತಂದೆ ತಾಯಿಗಳ ಜೊತೆಯಲ್ಲಿ ತಪ್ಪದೇ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ಪ್ರತಿ ಶಾಲೆಯ ಶಿಕ್ಷಕರು ಎಲ್ಲಾ ಮಕ್ಕಳಿಗೆ ಈ ಸಿನಿಮಾ ನೋಡಲು ಪ್ರೇರೇಪಿಸಬೇಕು, ಈ ಮುಲಕ ಅವರ ಮೊಬೈಲ್ ಗೀಳನ್ನು ಬಿಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ‘; ಇದು ಟಾಕಿಂಗ್ ಸ್ಟಾರ್ ಸೃಜನ್ ಹೊಸ ಪ್ರಯತ್ನ
ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಪ್ರಸ್ತುತ ವಿಚಾರಗಳ ಕುರಿತು ಸಿನೆಮಾಗಳು ಹೆಚ್ಚು ಬರ್ತಿದೆ. ಜನರ ಜೀವನಕ್ಕೆ ಹತ್ತಿರವಾಗಲು, ದಿನ ನಿತ್ಯ ಅನುಭವಿಸುವ ಕಥೆಯನ್ನು ಹೊಂದಿರುವ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದೀಗ ಇಂತಹದೇ ಕತೆಯುಳ್ಳ ಚಿತ್ರ ಬಂದಿದ್ದು, ಜನರಿಗೆ ಇಷ್ಟವಾಗಿದೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ನಟಿ ಮೇಘನಾ ರಾಜ್ ನಟನೆಯ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ‘ ಸಿನಿಮಾ ಈಗ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಮೊಬೈಲ್ ಎಲ್ಲರ ಜೀವನದಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ, ಆದರೆ ಅದೇ ಜೀವನವಲ್ಲ ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಮಕ್ಕಳು ಮತ್ತು ಪೋಷಕರ ಮೊಬೈಲ್ ಚಟದ ಬಗ್ಗೆ ಬಂದಿರುವ ಈ ಸಿನೆಮಾ ಅಗತ್ಯವಾದ ಪ್ರಸ್ತುತ ಜಗತ್ತಿಗೆ ಬೇಕಾದ ಸಂದೇಶವನ್ನು ನೀಡುತ್ತಿದೆ.
ಮಧುಚಂದ್ರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಸಂಪೂರ್ಣ ಕಾಮಿಡಿ ಚಿತ್ರವಾಗಿದೆ. ಆದರೆ ಜನರನ್ನ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯಶಸ್ವಿ ಆಗಿದೆ ಎಂದರೆ ತಪ್ಪಲ್ಲ.
ಇದನ್ನೂ ಓದಿ: ಈ ನಟ, ನಟಿಯರು ಒಬ್ಬರಿಗೊಬ್ಬರು ಸಂಬಂಧಿಕರಂತೆ! ಇವರ ರಿಲೇಷನ್ಶಿಪ್ ಹೇಗಿದೆ ನೋಡಿ
ಟೀಸರ್ ಮೂಲಕ ಸುದ್ದಿ ಮಾಡಿದ್ದ ಚಿತ್ರ
2020 ರಲ್ಲಿಯೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಸುದ್ದಿ ಮಾಡಿದ್ದು, ಜನರು ಸಹ ಬಹಳ ಇಷ್ಟಪಟ್ಟಿದ್ದರು. ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳ ವರ್ತನೆ ಹೇಗೆ ಬದಲಾಗಬಹುದು ಎಂಬುದನ್ನು ನಿರ್ದೇಶಕ ಮಧುಚಂದ್ರ ತೋರಿಸಿದ್ದಾರೆ. ನಗರಗಳ ಸಿಗ್ನಲ್ಗಳಲ್ಲಿ ವಾಹನ ನಿಲ್ಲಿಸಿಕೊಂಡು ಇದ್ದಾಗ, ಪುಟಾಣಿ ಮಕ್ಕಳು ಡೇಟಾ ಕೊಡಿ ಅಂಕಲ್, ಡೇಟಾ ಕೊಡಿ ಆಂಟಿ ಎಂದು ಕೇಳುವ ದೃಶ್ಯವನ್ನು ಮತ್ತು ಮೊಬೈಲ್ ಬಳಕೆ ಹೆಚ್ಚಾಗಿ ಕತ್ತು ವಾಲಿಸಿಕೊಂಡವರ ಮದುವೆ ಸಂಭ್ರಮವನ್ನು ಹೀಗೆ ಮೊಬೈಲ್ ಹೇಗೆ ನಮ್ಮ ಬದುಕನ್ನು ಬದಲಾಯಿಸುತ್ತಿದೆ ಎಂಬುದನ್ನ ತೋರಿಸುತ್ತದೆ ಈ ಚಿತ್ರ. ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ, 40 ಜನ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ