ಐಶ್ವರ್ಯಾ ರೈಗೆ ಸಂಕಷ್ಟ, ED ಸಮನ್ಸ್​: ಮಾಜಿ ವಿಶ್ವ ಸುಂದರಿಗೆ ಉರುಳಾಗುತ್ತಾ ಪನಾಮ ಕೇಸ್​!

ಬಾಲಿವುಡ್(Bollywood) ನಟಿ ಐಶ್ವರ್ಯಾ ರೈಗೆ ಇಡಿ ಸಮನ್ಸ್(Summons) ಕಳುಹಿಸಿ ದೆಹಲಿ(Delhi)ಗೆ ಬರುವಂತೆ ಆದೇಶಿಸಲಾಗಿದೆ. 2016ರಿಂದಲೂ ಪನಾಮಾ ಪೇಪರ್ಸ್​ ಲೀಕ್​ ಪ್ರಕರಣ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಈ ಮೊದಲೇ ಜಾರಿ ನಿರ್ದೇಶನಾಲಯಕ್ಕೆ ಕೆಲವು ದಾಖಲೆ ಪತ್ರಗಳನ್ನು ಒಪ್ಪಿಸಿದ್ದರು.

ಐಶ್ವರ್ಯಾ ರೈ ಬಚ್ಚನ್​

ಐಶ್ವರ್ಯಾ ರೈ ಬಚ್ಚನ್​

  • Share this:
Panama Papers Leak: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದ ಪನಾಮ ಪೇಪರ್ಸ್(Panama Papers) ಕೇಸ್​ಗೆ ಸಂಬಂಧಿಸಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ(Aishwarya Rai)ಗೆ ಇಡಿ(ED) ಸಮನ್ಸ್​ ಜಾರಿಗೊಳಿಸಿದೆ.ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಬಾಲಿವುಡ್(Bollywood) ನಟಿ ಐಶ್ವರ್ಯಾ ರೈಗೆ ಇಡಿ ಸಮನ್ಸ್(Summons) ಕಳುಹಿಸಿ ದೆಹಲಿ(Delhi)ಗೆ ಬರುವಂತೆ ಆದೇಶಿಸಲಾಗಿದೆ. 2016ರಿಂದಲೂ ಪನಾಮಾ ಪೇಪರ್ಸ್​ ಲೀಕ್​ ಪ್ರಕರಣ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಈ ಮೊದಲೇ ಜಾರಿ ನಿರ್ದೇಶನಾಲಯಕ್ಕೆ ಕೆಲವು ದಾಖಲೆ ಪತ್ರಗಳನ್ನು ಒಪ್ಪಿಸಿದ್ದರು. ಈಗ ಮತ್ತೆ ಸಮನ್ಸ್​ ನೀಡಿರುವುದು ಅಚ್ಚರಿ ಮೂಡಿಸಿದೆ. ಪನಾಮ ಪೇಪರ್ಸ್ ಪ್ರಕರಣದಲ್ಲಿ ಭಾರತದ ಸುಮಾರು 500 ಜನರು ಭಾಗಿಯಾಗಿದ್ದಾರೆ. ಫೇಮಸ್​ ರಾಜಕಾರಣಿಗಳು(Politicians), ಸಿನಿಮಾ ನಟ, ನಟಿಯರು, ಕ್ರಿಕೆಟ್​ ಆಟಗಾರರು, ಉದ್ಯಮಿಗಳ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. ಇನ್ನು ಐಶ್ವರ್ಯಾ ರೈ ಬಚ್ಚನ್ ಇಂದು ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ. ಹೀಗಾಗಿ ಸಂಸ್ಥೆಯು ಶೀಘ್ರದಲ್ಲೇ ಐಶ್ವರ್ಯಾ ರೈ ಬಚ್ಚನ್‌ಗೆ ಹೊಸ ಸಮನ್ಸ್ ಅನ್ನು ಜಾರಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. 

ತನಿಖೆಯಲ್ಲಿ ಭಾಗಿಯಾಗಿದ್ದ ಅಭಿಷೇಕ್​ ಬಚ್ಚನ್​!

ಈ ಹಿಂದೆ ಇದೇ ಪ್ರಕರಣದಲ್ಲಿ ಅಭಿಷೇಕ್​ ಬಚ್ಚನ್​ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ದೇಶದ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಅಭಿಷೇಕ್​ ಬಚ್ಚನ್​ ಕೂಡ ಇಡಿ ವಿಚಾರಣೆಯನ್ನು ಎದುರಿಸಿದ್ದರು. ಇದೇ  ಪ್ರಕರಣ ಸಂಬಂಧ ಈಗ ಐಶ್ವರ್ಯಾ ರೈಗೆ ಸಮನ್ಸ್ ನೀಡಲಾಗಿದೆ. ಆದರೆ ವಿಚಾರಣೆಗೆ ಹಾಜರಾಗಲು ಬೇರೆ ದಿನಾಂಕವನ್ನು ಅವರು ಕೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಎರಡು ಬಾರಿ ಅವರು ವಿಚಾರಣೆ ದಿನಾಂಕ ಮುಂದೂಡಲು ಕೇಳಿಕೊಂಡಿದ್ದರು. ಇನ್ನೂ ಅಮಿತಾಭ್​ ಬಚ್ಚನ್​ ಅವರಿಗೂ ಸಮನ್ಸ್​ ನೀಡಿ ವಿಚಾರಣೆಗೆ ಕರೆಯಲಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.

ಇದನ್ನು ಓದಿ : ಕಿಚ್ಚನ ಬಾಡಿಗಾರ್ಡ್ ಜೊತೆ ದೀಪಿಕಾ ಪಡುಕೋಣೆ ವಿಡಿಯೋ ಕಾಲ್​: ಕನ್ನಡದಲ್ಲೇ ಮಾತನಾಡಿದ ಪದ್ಮಾವತಿ!

ಏನಿದು ಪನಾಮಾ ಪೇಪರ್ಸ್ ಕೇಸ್​?

2016ರಲ್ಲಿ ಯುಕೆಯಲ್ಲಿ ಪನಾಮಾ ಕಾನೂನು ಸಂಸ್ಥೆಯೊಂದರ 11.5 ಕೋಟಿ ತೆರಿಗೆ ದಾಖಲೆಗಳು ಸೋರಿಕೆಯಾಗಿದ್ದವು. ಇದರಲ್ಲಿ ಪ್ರಪಂಚದಾದ್ಯಂತದ ದೊಡ್ಡ ನಾಯಕರು, ಉದ್ಯಮಿಗಳು ಮತ್ತು ದೊಡ್ಡ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲಾಯಿತು. ಈ ಸಂದರ್ಭದಲ್ಲಿ ಭಾರತದ ಸುಮಾರು 500 ಜನರ ಹೆಸರುಗಳು ಈ ಪಟ್ಟಿಯಲ್ಲಿ ಇರುವುದು ಬಹಿರಂಗವಾಗಿದೆ. ಇದರಲ್ಲಿ ಬಚ್ಚನ್ ಕುಟುಂಬದ ಹೆಸರೂ ಸೇರಿತ್ತು.ಪನಾಮಾ ಲೀಕ್ಸ್‌ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳು ತೆರಿಗೆ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಇದಕ್ಕಾಗಿ ತೆರಿಗೆ ಅಧಿಕಾರಿಗಳು ತನಿಖೆಯಲ್ಲಿ ತೊಡಗಿದ್ದಾರೆ. ಈ ವೇಳೆ ಐಶ್ವರ್ಯಾ ರೈ ಅವರನ್ನು ಮೊದಲು ಕಂಪನಿಯೊಂದರ ನಿರ್ದೇಶಕಿಯನ್ನಾಗಿ ಮಾಡಲಾಗಿತ್ತು. ನಂತರ ಅವರನ್ನು ಕಂಪನಿಯ ಷೇರುದಾರ ಎಂದು ಘೋಷಿಸಲಾಯಿತು.

ಇದನ್ನು ಓದಿ :ಬೆಂಗಳೂರಿನ ಅಭಿಮಾನಿಗಾಗಿ ಸಖತ್ ಗಿಫ್ಟ್ ಕಳಿಸಿದ ಸೂಪರ್​ಸ್ಟಾರ್ ರಜನಿಕಾಂತ್, ವಿಡಿಯೋ ನೋಡಿ

ಪನಾಮ ಪೇಪರ್ಸ್ ದಾಖಲೆಯಲ್ಲಿ ಸುಮಾರು 11.5 ಮಿಲಿಯನ್ ಗೌಪ್ಯ ದಾಖಲೆಗಳು ಇದೆ. ಮೊಸಾಕ್ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆ. ಆ ಸಂಸ್ಥೆಯು ಈ ದಾಖಲೆಯನ್ನು ಬಹಿರಂಗ ಪಡಿಸಿದ್ದು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳು ಇದರಲ್ಲಿ ಇದೆ. ಈ ಪ್ರಕರಣ ಅಮಿತಾಭ್​ ಬಚ್ಚನ್​ ಕುಟುಂಬಕ್ಕೆ ಸಂಕಷ್ಟತಂದೊಡ್ಡುತ್ತಾ ಕಾದು ನೋಡಬೇಕಿದೆ.
Published by:Vasudeva M
First published: