Jacqueline and Sukesh: ರಾ ರಾ ರಕ್ಕಮ್ಮಗೆ ತಪ್ಪದ ಸಂಕಷ್ಟ, ಆತ ಮೋಸಗಾರ ಅಂತ ಗೊತ್ತಿದ್ರೂ ಜೊತೆಯಲ್ಲೇ ಇದ್ರಂತೆ!

ಜಾರಿ ನಿರ್ದೇಶನಾಲಯವು ತಾನು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ನಟಿಗೆ ಸುಕೇಶ್ ಅಪರಾಧಿ ಹಿನ್ನೆಲೆಯುಳ್ಳವನೆಂಬ ಅರಿವಿದ್ದರೂ ಅವನ ಜೊತೆ ಹಣದ ವ್ಯವಹಾರದಲ್ಲಿ ತೊಡಗಿದ್ದಳೆಂಬ ವಿಷಯವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂಬುದಾಗಿ ತಿಳಿದುಬಂದಿದೆ. ಇಷ್ಟೇ ಅಲ್ಲದೆ, ನಟಿ ಹಾಗೂ ಅವರ ಕುಂಟುಂಬದವರು ಈ 'ಜೊತೆಗಾರಿಕೆ' ಮೂಲಕ ಸುಕೇಶನಿಂದ ಆರ್ಥಿಕವಾಗಿ ಹಲವು ಲಾಭಗಳನ್ನು ಪಡೆದುಕೊಂಡಿದ್ದಾಗಿ ಇಡಿ ತನ್ನ ಚಾರ್ಜ್ ಶೀಟ್ ನಲ್ಲಿ ದಾಖಲಿಸಿದೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್

  • Share this:
ನವದೆಹಲಿ: ಈ ಹಿಂದೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರನ್ನು ಆರೋಪಿ ಸುಕೇಶ್ ಜೊತೆ ಹಣದ ವ್ಯವಹಾರದಲ್ಲಿ ತೊಡಗಿದ್ದರ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ್ದು ಗೊತ್ತೇ ಇದೆ. ಸದ್ಯ, ಜಾರಿ ನಿರ್ದೇಶನಾಲಯವು ತಾನು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ (Charge sheet) ನಟಿಗೆ ಸುಕೇಶ್ (Sukesh) ಅಪರಾಧಿ ಹಿನ್ನೆಲೆಯುಳ್ಳವನೆಂಬ ಅರಿವಿದ್ದರೂ ಅವನ ಜೊತೆ ಹಣದ ವ್ಯವಹಾರದಲ್ಲಿ ತೊಡಗಿದ್ದಳೆಂಬ ವಿಷಯವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂಬುದಾಗಿ ತಿಳಿದುಬಂದಿದೆ. ಇಷ್ಟೇ ಅಲ್ಲದೆ, ನಟಿ ಹಾಗೂ ಅವರ ಕುಂಟುಂಬದವರು ಈ 'ಜೊತೆಗಾರಿಕೆ' ಮೂಲಕ ಸುಕೇಶನಿಂದ ಆರ್ಥಿಕವಾಗಿ ಹಲವು ಲಾಭಗಳನ್ನು (Profits) ಪಡೆದುಕೊಂಡಿದ್ದಾಗಿ ಇಡಿ ತನ್ನ ಚಾರ್ಜ್ ಶೀಟ್ ನಲ್ಲಿ ದಾಖಲಿಸಿದೆ.

ಅಪರಾಧಿ ಹಿನ್ನೆಲೆಯಿದ್ದ ವ್ಯಕ್ತಿಯ ಜೊತೆ ವ್ಯವಹಾರ ನಡೆಸುತ್ತಿದ್ದ ನಟಿ 
ಹಣದ ಆಮೀಶವೇ, ನಟಿ ಹಾಗೂ ಆಕೆಯ ಕುಟುಂಬದವರಿಗೆ ಅಪರಾಧಿ ಹಿನ್ನೆಲೆಯಿದ್ದ ವ್ಯಕ್ತಿಯ ಜೊತೆ ವ್ಯವಹಾರ ನಡೆಸಲು ಯಾವುದೇ ರೀತಿಯ ಅಡ್ಡಿಪಡಿಸಲಿಲ್ಲ ಎಂಬುದಾಗಿಯೂ ಇಡಿ ಈ ಪ್ರಕರಣದಲ್ಲಿ ಅಂತಿಮವಾಗಿ ಕಂಡುಕೊಂಡಿರುವುದಾಗಿ ಉಲ್ಲೇಖಿಸಿದೆ. ಅಲ್ಲದೆ, ಪ್ರತಿ ಸಂದರ್ಭದಲ್ಲೂ ನಟಿ ಜಾಕ್ವೆಲಿನ್ ಅವರು ತಾವು ಪಡೆದ ಉಡುಗೊರೆಗಳ ಕುರಿತು ನಿರಂತರವಾಗಿ ತಮ್ಮ ನಿಲುವನ್ನು ಬದಲಾಯಿಸುತ್ತಿದ್ದರು ಹಾಗೂ ಕೊನೆಯಲ್ಲಿ ದಾಖಲಾದ ಹೇಳಿಕೆಗಳು ಹಾಗೂ ಪುರಾವೆಗಳ ಜೊತೆ ವಿಚಾರಿಸಿದಾಗ ಮಾತ್ರವೇ ಅವರು ಪ್ರತಿಯೊಂದರ ಬಗ್ಗೆ ವಿವರಣೆಗಳನ್ನು ನೀಡಿರುವುದಾಗಿ ಇಡಿ ಆರೋಪಿಸಿದೆ.

ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಏನೇನಿದೆ?
ಮುಂದುವರೆದಂತೆ, ಚಾರ್ಜ್ ಶೀಟ್ ನಲ್ಲಿ, "ಇಲ್ಲಿಯವರೆಗೂ ನಡೆಸಲಾದ ತನಿಖೆಯ ಆಧಾರದ ಮೇಲೆ ತಿಳಿದುಬಂದ ವಿಷಯವೆಂದರೆ, ನಟಿಯು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಪರಾಧದಲ್ಲಿ ತೊಡಗಿದ್ದು ಅದರ ಭಾಗವಾದ ಬೆಲೆಯುಳ್ಳ ಉಡುಗೊರೆಗಳನ್ನು ತಮಗಾಗಿ ಹಾಗೂ ತಮ್ಮ ಕುಟುಂಬದ ಸದಸ್ಯರಿಗಾಗಿ ಭಾರತ/ವಿದೇಶಗಳಲ್ಲಿ ಪಡೆದಿದ್ದು ಈ ಮೂಲಕ ಅವರು ಮನಿ ಲಾಂಡರಿಂಗ್ ಕಾಯಿದೆ 2002 ಸೆಕ್ಷನ್ ಅಡಿ ಅಪರಾಧ ಎಸಗಿದಂತಾಗಿದ್ದು ಅದಕ್ಕಾಗಿ ಅವರು ಈ ಕಾಯಿದೆಯಡಿಯಲ್ಲಿ ಶಿಕ್ಷೆಗಾಗಿ ಅರ್ಹರಾಗಿದ್ದಾರೆ" ಎಂದು ವಿವರಿಸಿದೆ.

ಅಲ್ಲದೆ, ನಟಿ ಜಾಕ್ವೆಲಿನ್ ಅವರು ಕ್ರಿಮಿನಲ್ ಹಿನ್ನೆಲೆ ಗೊತ್ತಿದ್ದೂ ಆ ಮೂಲಕ ತಮ್ಮನ್ನು ತಾವು ಆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಮನಿ ಲಾಂಡರಿಂಗ್ ಕಾಯಿದೆಯ ಸೆಕ್ಷನ್ ಮೂರರ ಅಡಿಯಲ್ಲೂ ತಪ್ಪಿತಸ್ಥರಾಗಿರುವುದಾಗಿ ಇಡಿ ತಾನು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: Michael Jackson: ಡ್ರಗ್ಸ್​ ಪಡೆಯೋಕೆ 19 ಫೇಕ್ ಐಡಿ ಮಾಡ್ಕೊಂಡಿದ್ರು ಮೈಕಲ್ ಜಾಕ್ಸನ್

ಸುಕೇಶ್ ಚಂದ್ರಶೇಖರ್ ಹಲವು ಅಕ್ರಮ ಚಟುವಟಿಕೆಗಳ ಮೂಲಕ ಹಣ ವಂಚನೆಗಳನ್ನು ಎಸಗಿದ್ದು ಆ ಮೂಲಕ ಗಳಿಸಿದ ಹಣದ ಒಂದು ಭಾಗವನ್ನು ಜಾಕ್ವೆಲಿನ್ ಸಾಲ ಪಡೆದಿರುವುದಾಗಿ ಎಂದು ತೋರಿಸಿ, ಅದನ್ನು ತಮ್ಮ ಸಹೋದರಿ ಹಾಗೂ ಸಹೋದರನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಮೂಲಕ ಭಾರತ ಹಾಗೂ ವಿದೇಶಗಳಲ್ಲಿ ಆಸ್ತಿ ಖರೀದಿಸಿ, ತಮ್ಮ ಪೋಷಕರಿಗಾಗಿ ಕಾರು ಖರೀದಿಸುವ ಮೂಲಕ ಅಕ್ರಮ ಆಸ್ತಿಯನ್ನು ಭೋಗಿಸಿದ ಅಪರಾಧ ಎಸಗಿರುವುದಾಗಿ ಜಾರಿ ನಿರ್ದೇಶನಾಲಯವು ಆರೋಪಿಸಿದೆ.

ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ಕೋರ್ಟ್ ಬಾಲಿವುಡ್ ನಟಿ ಜಾಕ್ವೆಲಿನ್ ಅವರಿಗೆ ಸೆಪ್ಟೆಂಬರ್ 26 ರಂದು ಖುದ್ದು ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಬುಧವಾರದಂದು ಸಮನ್ಸ್ ಜಾರಿಗೊಳಿಸಿದ್ದು ಈ ಒಟ್ಟಾರೆ ಪ್ರಕರಣವು ವಂಚಕ ಸುಕೇಶ್ ಚಂದ್ರಶೇಖರ್ ನನ್ನು ಒಳಗೊಂಡಿರುವ ಒಟ್ಟು 200 ಕೋಟಿ ರೂ. ಮೌಲ್ಯದ ಮನಿ ಲಾಂಡರಿಂಗ್ ವಂಚನೆಯ ಪ್ರಕರಣವಾಗಿದೆ. ಈ ಹಿಂದೆ ಇಡಿಯು ದೆಹಲಿಯ ನ್ಯಾಯಾಲಯದಲ್ಲಿ ಸುಕೇಶ್ ವಿರುದ್ಧ 200 ಕೋಟಿ ರೂ. ಮೌಲ್ಯದ ಎಕ್ಸ್ಟಾರ್ಷನ್ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದು ಅದರಲ್ಲಿ ನಟಿ ಜಾಕ್ವೆಲಿನ್ ಅವರನ್ನೂ ಆರೋಪಿಯನ್ನಾಗಿ ದೂಷಿಸಿದೆ.

ಏತನ್ಮಧ್ಯೆ, ದೆಹಲಿ ಪೊಲೀಸ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು ಜಾಕ್ವೆಲಿನ್ ಅವರ ಪ್ರಕರಣವನ್ನೂ ಸಹ ನಡೆಸುತ್ತಿದ್ದು ಅವರು ನ್ಯಾಯಾಲಯಕ್ಕೆ, ಜಾಕ್ವೆಲಿನ್ ಅವರನ್ನು ಆಗಸ್ಟ್ 26 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಳಲಾಗಿತ್ತು. ಆದರೆ, ಅವರು ಆ ದಿನದಂದು ಹಾಜರಾಗದ ಕಾರಣ ಅವರಿಗೆ ಮತ್ತೆ ವಿಚಾರಣೆಗಾಗಿ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಬಾರಿ ಅವರು ಹಾಜರಾಗಿ ತನಿಖೆಗೆ ಸಹಯೋಗ ನೀಡುವುದಾಗಿ ಕೋರ್ಟಿಗೆ ಆಶ್ವಾಸನೆಯನ್ನೂ ನೀಡಿದ್ದಾರೆನ್ನಲಾಗಿದೆ.

ಈ ಬಗ್ಗೆ ಜಾಕ್ವೆಲಿನ್ ಪರ ವಕೀಲರು ಏನು ಹೇಳಿದ್ದಾರೆ
ಇನ್ನೂ, ಜಾಕ್ವೆಲಿನ್ ಅವರ ಪರ ವಕೀಲರಾಗಿರುವ ಪ್ರಶಾಂತ್ ಪಾಟೀಲ್ ಅವರು ಮಾತನಾಡಿದ್ದು, "ಇಲ್ಲಿಯವರೆಗೂ ಜಾಕ್ವೆಲಿನ್ ಅವರು ಎಲ್ಲ ಸಂದರ್ಭಗಳಲ್ಲೂ ತನಿಖೆಗೆ ಸಹಯೋಗ ನೀಡಿದ್ದಾರೆ ಹಾಗೂ ಪ್ರತಿ ಸಮನ್ ಗಳು ಜಾರಿಯಾದಾಗ ಹಾಜರಾತಿ ನೀಡಿದ್ದಾರೆ, ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಎಲ್ಲ ಕೇಳಲಾದ ಮಾಹಿತಿ ಹಾಗೂ ವಿವರಣೆಗಳನ್ನು ನೀಡಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:  Anupam Kher: ಬಾಲಿವುಡ್ ಚಿತ್ರಗಳಸೋಲಿನ ಬಗ್ಗೆ ಅನುರಾಗ್ ಕಶ್ಯಪ್ ಹೇಳಿಕೆಗೆ ಅನುಪಮ್ ಖೇರ್ ಖಡಕ್ ಉತ್ತರ!

ಈಗಾಗಲೇ ಇಡಿ ತಾನು ರೇಡ್ ಮಾಡಿರುವ ಸ್ಥಳಗಳಿಂದ 16 ಹೈ ಎಂಡ್ ಕಾರುಗಳನ್ನು ಜಪ್ತಿ ಮಾಡಿದ್ದು ಅವು ಲೀನಾ ಪೌಲೋಸ್ ಅಥವಾ ಮೂರನೇ ಪಾರ್ಟಿಯ ಹೆಸರಿನಲ್ಲಿವೆ ಎಂದು ತಿಳಿದುಬಂದಿದೆ. ಇಲ್ಲಿ ಮುಖ್ಯ ವಂಚಕನಾಗಿರುವ ಸುಕೇಶ್ ತಾನು ಅಕ್ರಮವಾಗಿ ಪಡೆಯುತ್ತಿದ್ದ ಆಸ್ತಿಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ನಮೂದಿಸುವಂತಹ ಕಾರ್ಯತಂತ್ರವನ್ನು ಬಳಸುತ್ತಿದ್ದನೆನ್ನಲಾಗಿದ್ದು ಇದೀಗ ನಟಿಯು ಸಹ ಮೋಸದ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
Published by:Ashwini Prabhu
First published: