• Home
  • »
  • News
  • »
  • entertainment
  • »
  • Devaraj: ನಟ ದೇವರಾಜ್ ಮನೆಯಲ್ಲಿ ಡೈನಾಮಿಕ್​ ಲೀಗ್ ಆರಂಭ..!

Devaraj: ನಟ ದೇವರಾಜ್ ಮನೆಯಲ್ಲಿ ಡೈನಾಮಿಕ್​ ಲೀಗ್ ಆರಂಭ..!

ನಟ ದೇವರಾಜ್​ ಅವರ ಕುಟುಂಬ

ನಟ ದೇವರಾಜ್​ ಅವರ ಕುಟುಂಬ

Dynamic League: ಲಾಕ್​ಡೌನ್​ ಸಡಿಲಗೊಂಡು ಚಿತ್ರೀರಕಣಕ್ಕೆ ಅನುಮತಿ ದೊರೆಯುತ್ತಿದ್ದಂತೆಯೇ ಸೆಲೆಬ್ರಿಟಿಗಳು ಕೆಲಸಕ್ಕೆ ಮರಳುವ ಸಿದ್ಧತೆಯಲ್ಲಿದ್ದರು. ಕೆಲವರು ಆಗಲೇ ಹೈದರಾಬಾದಿಗೆ ತೆರಳಿ ಶೂಟಿಂಗ್​ಗೂ ಹಾಜರಾಗಿದ್ದರು. ಆದರೆ ಈಗ ಮತ್ತೆ ಲಾಕ್​ಡೌನ್​ನಿಂದಾಗಿ ಸೆಲೆಬ್ರಿಟಿಗಳು ತಮ್ಮ ದಿನಗಳನ್ನು ಹೇಗೆ ಕಳೆಯುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ಕೊಡಲಾರಂಭಿಸಿದ್ದಾರೆ. ಇದಕ್ಕೆ ನಟ ದೇವರಾಜ್​ ಹಾಗೂ ಅವರ ಕುಟುಂಬದವರೂ ಹೊರತಾಗಿಲ್ಲ.

ಮುಂದೆ ಓದಿ ...
  • Share this:

ಕೊರೋನಾ ಲಾಕ್​ಡೌನ್​ ಅನ್ನು ಹಂತ ಹಂತವಾಗಿ ಸಡಿಲಿಸಿದ್ದ ರಾಜ್ಯ ಸರ್ಕಾರ ಈಗ ಮತ್ತೆ ಲಾಕ್​ಡೌನ್​ ಮಾಡಿದೆ. ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಕ್​ಡೌನ್​ ಎಂದು ಆದೇಶ ಹೊರಡಿಸುತ್ತಿದ್ದಂತೆಯೇ ಸೆಲೆಬ್ರಿಟಿಗಳು ಮತ್ತೆ ಹಾಲಿಡೇ ಮೂಡಿಗೆ ಹೋದಂತಿದೆ. 


ಲಾಕ್​ಡೌನ್​ ಸಡಿಲಗೊಂಡು ಚಿತ್ರೀರಕಣಕ್ಕೆ ಅನುಮತಿ ದೊರೆಯುತ್ತಿದ್ದಂತೆಯೇ ಸೆಲೆಬ್ರಿಟಿಗಳು ಕೆಲಸಕ್ಕೆ ಮರಳುವ ಸಿದ್ಧತೆಯಲ್ಲಿದ್ದರು. ಕೆಲವರು ಆಗಲೇ ಹೈದರಾಬಾದಿಗೆ ತೆರಳಿ ಶೂಟಿಂಗ್​ಗೂ ಹಾಜರಾಗಿದ್ದರು. ಆದರೆ ಈಗ ಮತ್ತೆ ಲಾಕ್​ಡೌನ್​ನಿಂದಾಗಿ ಸೆಲೆಬ್ರಿಟಿಗಳು ತಮ್ಮ ದಿನಗಳನ್ನು ಹೇಗೆ ಕಳೆಯುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ಕೊಡಲಾರಂಭಿಸಿದ್ದಾರೆ. ಇದಕ್ಕೆ ನಟ ದೇವರಾಜ್​ ಹಾಗೂ ಅವರ ಕುಟುಂಬದವರೂ ಹೊರತಾಗಿಲ್ಲ.


Actor Devaraj family visits Darshans farmhouse in Mysore
ದರ್ಶನ್​ ಅವರ ತೋಟದ ಮನೆಯಲ್ಲಿ ತೆಗೆದ ಚಿತ್ರ


ಲಾಕ್​ಡೌನ್​ನ ಮೊದಲ ದಿನ ಆರಂಭವಾಗುತ್ತಿದ್ದಂತೆಯೇ ನಟ ದೇವರಾಜ್​ ಅವರ ಮನೆಯಲ್ಲಿ ಡೈನಾಮಿಕ್​ ಲೀಗ್​ ಆರಂಭವಾಗಿದೆ ಮನೆಯ ಆವರಣದಲ್ಲೇ ದೇವರಾಜ್​ ಅವರು ಬ್ಯಾಟ್​ ಹಿಡಿದು ಸಿಕ್ಸ್​ ಹೊಡೆಯೋಕೆ ನಿಂತಿದ್ದಾರೆ. ಮಕ್ಕಳಾದ ಪ್ರಜ್ವಲ್​ ಹಾಗೂ ಪ್ರಣಮ್​ ಸಹ ಅಪ್ಪನಿಗೆ ಜೊತೆಯಾಗಿದ್ದಾರೆ.


Dynamic League started at Actor Devarajs home in lockdown
ದೇವರಾಜ್ ಅವರ ಮನೆಯಲ್ಲಿ ಡೈನಾಮಿಕ್​ ಲೀಗ್​ ಆರಂಭ


ಪ್ರಣಮ್​ ಹಾಗೂ ಪ್ರಜ್ವಲ್​ ಮನೆಯಲ್ಲಿ ಕ್ರಿಕೆಟ್​ ಆಡುತ್ತಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಡೈನಾಮಿಕ್​ ಲೀಗ್ ಆರಂಭವಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.


Dynamic League started at Actor Devarajs home in lockdown
ಮಕ್ಕಳೊಂದಿಗೆ ಕ್ರಿಕೆಟ್​ ಆಡುತ್ತಿರುವ ನಟ ದೇವರಾಜ್​


ಈ ಹಿಂದೆಯೂ ಲಾಕ್​ಡೌನ್​ನಲ್ಲಿ ಪ್ರಜ್ವಲ್​ ಹಾಗೂ ದೇವರಾಜ್​ ಅವರು ಮನೆಯಲ್ಲಿ ಕೇರಂ ಆಡುತ್ತಾ ಕಾಲ ಕಳೆದಿದ್ದರು. ಆ ಚಿತ್ರವನ್ನೂ ಪ್ರಜ್ವಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ದೇವರಾಜ್​ ಅವರು ತಮ್ಮ ಮಕ್ಕಳೊಂದಿಗೆ ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ದರ್ಶನ್​ ಅವರನ್ನು ನೋಡಲು ಮೈಸೂರಿನಲ್ಲಿರುವ ತೋಟದ ಮನೆಗೆ ಹೋಗಿದ್ದರು. ಅಲ್ಲಿ ದಚ್ಚು ಜೊತೆ ಸಮಯ ಕಳೆದಿದ್ದರು. ಆಗ ತೆಗೆದಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.


ಇದನ್ನೂ ಓದಿ: ಸ್ನೇಹಿತರೊಂದಿಗೆ ಟ್ರ್ಯಾಕ್ಟರ್​ ಹತ್ತಿ ರಸ್ತೆಗಿಳಿದ ದರ್ಶನ್​..!

Published by:Anitha E
First published: