Vikrant Rona: ವಿಕ್ರಾಂತ್ ರೋಣ ಸಿನಿಮಾ ನೋಡುವಾಗ ಕಿರಿಕ್​, ಚಿತ್ರಮಂದಿರದ ಎದುರು ಲಾಂಗ್-ಮಚ್ಚು ಹಿಡಿದು ಗಲಾಟೆ

 ಚಿಕ್ಕಮಗಳೂರು ನಗರದ ಮಿಲನ ಥಿಯೇಟರ್​ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಗಲಾಟೆ ನಡೆದಿದ್ದು, ಓರ್ವ ವ್ಯಕ್ತಿಗೆ ಗಂಭಿರ ಗಾಯವಾಗಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಚಿಕ್ಕಮಗಳೂರು (ಜುಲೈ 28): ಸ್ಯಾಂಡಲ್​ವುಡ್​ನಲ್ಲಿ (Sandalwood) ಬಹುನಿರೀಕ್ಷಿತ ಸಿನಿಮಾ ಕಿಚ್ಚ ಸುದೀಪ್​ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಚಿತ್ರ ಇಂದು ಬಿಡುಗಡೆ ಆಗಿದ್ದು, ಪ್ರಪಂಚದಾದ್ಯಂತೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಸಿನಿಮಾ ನೋಡಿದ ಎಲ್ಲರೂ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದರ ನಡುವೆ ಚಿಕ್ಕಮಗಳೂರಿನಲ್ಲಿ (Chikkamagaluru) ವಿಕ್ರಾಂತ್​ ರೋಣ ಪ್ರದರ್ಶನ ಕಾಣುವ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ ಆಗಿದ್ದು, ಚಿತ್ರಮಂದಿರದ ಆವರಣದಲ್ಲಿಯೇ ಮಚ್ಚು, ಲಾಂಗ್​ಗಳು ಝಳಪಿಸಿದೆ. ಇದರಿಂದ ಚಿತ್ರ ನೋಡಲು ಬಂದಂತಹ ಉಳಿದ ಪ್ರೇಕ್ಷಕರಿಗೆ ತೊಂದರೆ ಆಗಿದೆ. ಅಲ್ಲದೇ ಈ ಗಲಾಟೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರ ಪ್ರದರ್ಶನದ ವೇಳೆ ಗಲಾಟೆ:

ಹೌದು, ಇಂದು ರಾಜ್ಯದ ಎಲ್ಲಡೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಭರ್ಜರಿಯಾಗಿ ಬಿಡುಗಡೆ ಆಗಿದೆ. ಇದರ ನಡುವೆ ಚಿಕ್ಕಮಗಳೂರು ನಗರದ ಮಿಲನ ಥಿಯೇಟರ್​ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಓರ್ವ ಪದೇ ಪದೇ ಹೊರಗೆ ಹೋಗುತ್ತಿದ್ದನು. ಇದರಿಂದ ಸಿನಿಮಾ ನೋಡಲು ತೊಂದರೆ ಆದ ಹಿಂದಿನ ಸಾಲಿನಲ್ಲಿ ಕುಳಿತವರು ಈ ಬಗ್ಗೆ ಪ್ರಶ್ನೆ ಮಾಡಿದ್ದಲ್ಲದೇ ಕಿರಿಕ್ ಮಾಡಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಅವರ ನಡುವೆ ಗಲಾಟೆ ಆಗಿದೆ. ನಂತರ ಚಿತ್ರಮಂದಿರದ ಹೊರಭಾಗದಲ್ಲಿ 2 ಗುಂಪುಗಳ ನಡುವೆ ಮಚ್ಚು-ಲಾಂಗ್​ ಗಳ ಸಮೇತವಾಗಿ ಗಲಾಟೆ ಆಗಿದೆ. ಈ ಹೊಡೆದಾಟದಲ್ಲಿ ಭರತ್​ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಭರತ್ ಅವರನ್ನು​​ ಹಾಸನಕ್ಕೆ ರವಾನಿಸಲಾಗಿದೆ. ಗಲಾಟೆಯ ಬಗ್ಗೆ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರಂತೆ.

ಇದನ್ನೂ ಓದಿ: Vikrant Rona: ವಿಕ್ರಾಂತ್​ ರೋಣ ಚಿತ್ರಕ್ಕೆ ಪೈರಸಿ ಕಾಟ, ಸಂಪೂರ್ಣ ಚಿತ್ರ ಆನ್​​ಲೈನ್​ನಲ್ಲಿ ಲೀಕ್

ವಿಕ್ರಾಂತ್ ರೋಣ ಚಿತ್ರಕ್ಕೂ ಪೈರಸಿ ಕಾಟ:

ಹೌದು, ಇಂದು ಬಿಡುಗಡೆ ಆಗಿದ್ದ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ ಸಿನಿಮಾಗೆ ಪೈರಿಸಿ ಕಾಟ ಎದುರಾಗಿದೆ. ಆಧುನಿಕ ತಂತ್ರಜ್ಞಾನ ಚಿತ್ರರಂಗಕ್ಕೆ ಎಡಬಿಡದೇ ಕಾಡುತ್ತಿದೆ. ತಮಿಳ್​ ರಾಕರ್ಸ್​ ಸೈಟ್​ನಲ್ಲಿ ವಿಕ್ರಾಂತ್​ ರೋಣ ಸಿನಿಮಾವು ಸಂಪೂರ್ಣ ಲೀಕ್​ ಆಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಸೋರಿಕೆ ಆಗಿದೆ. ಇನ್ನು, ಪೈರಸಿ ವಿರುದ್ಧ ಹೋರಾಟಕ್ಕೆ ಪೈರಸಿ ನಿಗ್ರಹ ತಂಡ ನಿಯಮಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಈ ಪೈರಸಿ ಕಂಡುಬಂದಲ್ಲಿ ಈ ರೀತಿ ಮಾಡಿ ಎಂದು ಚಿತ್ರತಂಡ ಅಭಿಮಾನಿಗಳಲ್ಲಿ ಮನವಿ ಮಾಡಿದೆ. ಅದರ ಪ್ರಕಾರ ನಿಮಗೆ ವಿಕ್ರಾಂತ್ ರೋಣ ಸಿನಿಮಾದ ಪೈರಸಿ ಕಂಡುಬಂದಲ್ಲಿ , 8147824034 ವಾಟ್ಸಾಪ್ ಸಂಖ್ಯೆ ಅಥವಾ AntiPiracyAiPlex.com ಇಮೇಲ್ ವಿಳಾಸಕ್ಕೆ ವರದಿ ಮಾಡಿ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: Vikrant Rona: ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ

KGF 2 ದಾಖಲೆ ಮುರಿದ ವಿಕ್ರಾಂತ್ ರೋಣ:

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರವು ಸರಿಸುಮಾರು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ ಎಂದು ತಿಳಿದುಬಂದಿದೆ. ಜೊತೆಗೆ 3Dಯಲ್ಲೂ ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ. ಇದರ ನಡುವೆ ಭಾರತದಲ್ಲಿ ಕನ್ನಡ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆಯಲ್ಲಿ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್-2 ದಾಖಲೆಯನ್ನು ಮುರಿದಿದೆ. ಹೌದು, ವಿಕ್ರಾಂತ್ ರೋಣ ಚಿತ್ರವು ದೇಶಾದ್ಯಂತ 1047 ಕನ್ನಡ ಶೋಗಳು ದೊರಕಿವೆ. KGF 2 ಚಿತ್ರಕ್ಕೆ 913 ಶೋಗಳು ಸಿಕ್ಕಿದ್ದವು.
Published by:shrikrishna bhat
First published: