ಟಾಲಿವುಡ್ ಸ್ವೀಟಿ ಹಾಗೂ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಪಾತ್ರಗಳಿಗೆ ತಕ್ಕಂತೆ ತಮ್ಮ ಅಭಿನಯವನ್ನೂ ಬದಲಾಯಿಸಿಕೊಳ್ಳುವ ಪ್ರತಿಭಾವಂತ ಕಲಾವಿದೆ. ಅನುಷ್ಕಾ ಶೆಟ್ಟಿ ಅಭಿನಯದ ಹಲವಾರು ಸಿನಿಮಾಗಳು ಸ್ಟಾರ್ ನಟನಿಲ್ಲದಿದ್ದರೂ ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸುತ್ತವೆ. ಇದಕ್ಕೆ ಉದಾಹರಣೆ ಅವರ ಅಭಿನಯದ ಅರುಂಧತಿ, ಭಾಗಮತಿ ಹಾಗೂ ಇತರೆ ಚಿತ್ರಗಳು. ಅನುಷ್ಕಾ ಶೆಟ್ಟಿ ಬಾಹುಬಲಿ ಚಿತ್ರದ ನಂತರ ಅಭಿನಯಿಸಿದ ಸಿನಿಮಾ ಭಾಗಮತಿ. ಟಾಲಿವುಡ್ನಲ್ಲಿ ರಿಲೀಸ್ ಆಗಿ ಸಖತ್ ಸದ್ದು ಮಾಡಿದ್ದ ಸಿನಿಮಾ, ಈಗ ಬಾಲಿವುಡ್ನಲ್ಲಿ ರಿಮೇಕ್ ಆಗುತ್ತಿದೆ. ಚಿತ್ರದ ಹಿಂದಿ ರಿಮೇಕ್ಗೆ ದುರ್ಗಮತಿ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಭೂಮಿ ಪೆಡ್ನೆಕರ್ ಅನುಷ್ಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಮತಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಅಕ್ಷಯ್ ಕುಮಾರ್, ಭೂಷಣ್ ಕುಮಾರ್, ಕ್ರಿಷನ್ಕುಮಾರ್ ಹಾಗೂ ವಿಕ್ರಮ್ ಮಲ್ಹೋತ್ರ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಭಾಗಮತಿಯ ನಿರ್ದೇಶಕ ಅಶೋಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಭೂಮಿ ಪೆಡ್ನೆಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದುರ್ಗಮತಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾ ಹಿಂದಿ ಪ್ರೇಕ್ಷಕರಿಗೆ ಹೊಸದು. ಆದರೆ ಹಿಂದಿ ಸಿನಿಮಗಳನ್ನು ನೋಡುವ ದಕ್ಷಿಣ ಭಾರತೀಯರಿಗೆ ಮಾತ್ರ ಇದು ರಿಮೇಕ್ ಅಷ್ಟೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಅನುಷ್ಕಾ ಶೆಟ್ಟಿ ಅಭಿಮಾನಿಗಳು ಭೂಮಿ ಅವರ ಅಭಿನಯದ ಬಗ್ಗೆ ವಿಮರ್ಶೆ ಮಾಡಲಾರಂಭಿಸಿದ್ದಾರೆ.
ಅನುಷ್ಕಾ ಶೆಟ್ಟಿ ಅಭಿನಯದ ಭಾಗಮತಿ ಸಿನಿಮಾದ ರಿಮೇಕ್ನಲ್ಲಿ ಭೂಮಿ ಪೆಡ್ನೆಕರ್ ಯಾವುದೇ ಕಾರಣಕ್ಕೂ ಸ್ವೀಟಿಯನ್ನು ಮ್ಯಾಚ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಅನುಷ್ಕಾ ಅಭಿನಯಿಸಿರುವ ಪವರ್ಫುಲ್ ಪಾತ್ರಕ್ಕೆ ಭೂಮಿ ಪೆಡ್ನೆಕರ್ ಸರಿ ಹೊಂದುತ್ತಿಲ್ಲ ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.
No one can beat our Queen!! Crappy Bollywood remakes don't stand a chance. History has proven how many legendary South Indian movies were destroyed by B'wood. #AnushkaShetty pic.twitter.com/RLHRbhuJLE
— Sensational Sweety (@km_raj05) November 25, 2020
#BhumiPednekar
Sorry to say this, you may be a good actor but you can't match the screen presence of our #LadySuperstar #AnushkaShetty . This scene has a seperate fan base. @MsAnushkaShetty was just 🔥🔥🔥.
Anyways, all the best. pic.twitter.com/ChkpIdIHop
— srikarnakkina (@srikarnakkina1) November 25, 2020
Try ur level best but u cant match her acting skills in #bhagamathie #AnushkaShetty #BhumiPednekar #DurgamatiOnPrime pic.twitter.com/fhHMSvEMqV
— Rohithsaitampara 😥 (@Rohithsaitampa1) November 25, 2020
ಇದನ್ನೂ ಓದಿ: ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ಗಾಗಿ ರಾಕ್ ಸಾಲಿಡ್ ಬಾಡಿ ಬಿಲ್ಡ್ ಮಾಡಿದ ಕಿಚ್ಚ ಸುದೀಪ್..!
ಅಮೆಜಾನ್ ಪ್ರೈಂಗಾಗಿ ಮಾಡಿರುವ ಈ ದುರ್ಗಮತಿ ಡಿ. 11ಕ್ಕೆ ಒಟಿಟಿ ಮೂಲಕ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ, ಜಿಶ್ಶು ಸೇನ್ಗುಪ್ತ, ಮಾಹಿ ಗಿಲ್ ಸೇರಿದಂತೆ ಇತರರು ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ