Alia-Ranbir: ನಿಮ್ಮ ಸಂತೋಷದ ಕ್ಷಣದಲ್ಲಿ ನಾವು ಇರಲಿಲ್ಲ, ಕಾಂಡೋಮ್ ಕಂಪನಿ ಟ್ವೀಟ್ ವೈರಲ್
ಬಾಲಿವುಡ್ ಕ್ಯೂಟ್ ಕಪಲ್ ಗಳಾದ ಆಲಿಯಾ ಮತ್ತು ರಣಬೀರ್ ಇದೀಗ ತಂದೆ-ತಾಯಿಯಾಗುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ವಿಚಾರ ಎಲ್ಲಡೆ ವೈರಲ್ ಆಗುತ್ತಿದ್ದಂತೆ, ಕಾಂಡೋಮ್ ಕಂಪನಿಯೊಂದು ಮಾಡಿರುವ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್ನ (Bollywood) ಕ್ಯೂಟ್ ಜೋಡಿಗಳಾದ (Couple) ರಣಬೀರ್ ಕಪೂರ್ (Ranbir Kapoor) ಮತ್ತು ಕ್ಯೂಟ್ ಬೆಡಗಿ ಆಲಿಯಾ ಭಟ್ (Alia Bhatt) ದಾಂಪತ್ಯ ಜೀವನಕ್ಕೆ ಕಾಳಿಟ್ಟು ಸುಮಾರು ಮೂರು ತಿಂಗಳಾಗಿವೆ. ಈ ವರ್ಷದ ಏಪ್ರಿಲ್ 14ರಂದು ಸಪ್ತಪದಿ ತುಳಿದಿದ್ದ ಈ ಜೋಡಿ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಹೌದು, ಆಲಿಯಾ ಹಾಗೂ ರಣಬೀರ್ ಕಪೂರ್ ತಂದೆ ತಾಯಿ ಆಗುತ್ತಿದ್ದಾರೆ. ಆಲಿಯಾ ಗರ್ಭಿಣಿ (Pregnant) ಎನ್ನುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಮೂಲಕ ಮತ್ತೊಂದು ಬಾಲಿವಡು್ನ ಸ್ಟಾರ್ ಜೋಡಿ ತಂದೆ-ತಾಯಿ ಆಗುತ್ತಿದ್ದಾರೆ. ಈ ಸಂತಸದ ವಿಚಾರವನ್ನು ಆಲಿಯಾ ಸಾಮಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಈ ವಿಷಯ ರಿವೀಲ್ ಆಗುತ್ತಿದ್ದಂತೆ ಎಲ್ಲಡೆ ವೈರಲ್ ಆಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಡ್ಯೂರೆಕ್ಸ್ ಕಾಂಡೋಮ್ (Condom) ಕಂಪನಿಯೊಂದು ಮಾಡಿದ ಟ್ವೀಟ್ ಸಹ ಇದೀಗ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆಯ್ತು ಕಾಂಡೋಮ್ ಕಂಪನಿ ಟ್ವೀಟ್:
ಹೌದು, ರಣಬೀರ್ ಮತ್ತು ಆಲಿಯಾ ಇದೀಗ ತಂದೆ - ತಾಯಿ ಆಗುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಈ ಜೋಡಿಯೇ ಅಧಿಕೃತಗೊಳಿಸಿದೆ. ಈ ವಿಚಾರ ಹೊರಬರುತ್ತಿದ್ದಂತೆ ಕಾಂಡೋಮ್ ಕಂಪನಿಯಾದ ಡ್ಯೂರೆಕ್ಸ್ ಒಂದು ಟ್ವೀಟ್ ಮೂಲಕ ಸ್ಟಾರ್ ಜೋಡಿಗೆ ಶುಭಾಷಯ ಹೇಳಿದೆ. ಆದರೆ ಇದೀಗ ಈ ಟ್ವೀಟ್ ಸಖತ್ ಫನ್ನಿಯಾಗಿದ್ದು, ಎಲ್ಲಡೆ ವೈರಲ್ ಆಗುತ್ತಿದೆ. ಒಟ್ಟು 2 ಟ್ವೀಟ್ ಮಾಡಿರುವ ಕಂಪನಿ, ಮೊದಲ ಟ್ವೀಟ್ ನಲ್ಲಿ, ‘‘ನಿಮ್ಮ ಸಂತಸದ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ‘ ಎಂದು ಟ್ವೀಟ್ ಮಾಡುವ ಮೂಲಕ ಶುಭಾಷಯ ಕೋರಿದೆ. ಅಲ್ಲದೇ ಶೀಘ್ರದಲ್ಲಿಯೇ ನೀವು ತಂದೆ - ತಾಯಿ ಆಗುತ್ತಿರುವುದಕ್ಕೆ ಶುಭಾಷಯವನ್ನು ಕೋರಿದೆ.
ಈ ಮೊದಲ ಟ್ವೀಟ್ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಕಂಪನಿ ಸಂಜೆಯ ವೇಳೆಗೆ ಮತ್ತೊಂದು ಟ್ವಿಟ್ ಮಾಡಿದೆ. ಅದರಲ್ಲಿ, ‘‘ಪ್ರಿತಿಯ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್, ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇಲ್ಲ ಎಂದರೆ ಫನ್ ಇರುವುದಿಲ್ಲ‘ ಎಂದು ಬರೆದುಕೊಂಡಿದೆ. ಈ ಟ್ವೀಟ್ ನೋಡಿದ ನೆಟ್ಟಿಗರು ಕಂಪನಿಯ ಈ ಫನ್ನಿ ಶೂಬಾಷಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಕಂಪನಿಯ ಮಾರ್ಕೆಂಟಿಗ್ ತಂತ್ರಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಈ ಬಗ್ಗೆ ಆಲಿಯಾ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ನಮ್ಮ ಮಗು ಸದ್ಯದಲ್ಲಿ ಬರಲಿದೆ ಎಂದು ಸ್ಕ್ಯಾನಿಂಗ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಇದು ಆಲಿಯಾ ಹಾಗೂ ರಣಬೀರ್ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದ್ದು, ವಿಶ್ಗಳ ಮಳೆ ಸುರಿಸುತ್ತಿದ್ದಾರೆ. ಇನ್ನೂ ಇಬ್ಬರು ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದು, ಅಯಾನ್ ಮುಖರ್ಜಿ ಅವರ ನಿರ್ದೇಶನದ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ