Alia Bhatt: ನೋಡಲು ಅಲಿಯಾ ಭಟ್ ಥರಾನೇ ಇದ್ರೂ ಇವರು ಅಲಿಯಾ ಭಟ್ ಅಲ್ಲ! ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ ಈ ವೀಡಿಯೋ

ನಟಿ ಆಲಿಯಾ ಭಟ್ ಅವರಂತೆ ಕಾಣುವ ಮಹಿಳೆಯ ಅಭಿನಯವನ್ನು ತುಂಬಾನೇ ಶ್ಲಾಘಿಸುತ್ತಿದೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಸೆಲೆಸ್ಟಿ ಬೈರಾಗೆ ಎಂಬ ಹೆಸರಿನ ಹ್ಯಾಂಡಲ್ ಹೊಂದಿರುವ ಮಹಿಳೆ ಇತ್ತೀಚೆಗೆ ದಿಲ್ ತೋ ಪಾಗಲ್ ಹೈ ಚಿತ್ರದ ಹಾಡಿಗೆ ಲಿಪ್ ಸಿಂಕ್ ಮಾಡಿ ಆ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಅಲಿಯಾ ಭಟ್

ಅಲಿಯಾ ಭಟ್

  • Share this:
ಮೊನ್ನೆ ತಾನೇ ನಾವು ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Actor Salman Khan) ಅವರ ನಕಲಿ (Duplicate) ಎಂದು ಖ್ಯಾತಿ ಪಡೆದಿರುವ ಲಕ್ನೋ ನಗರದ ಅಜಮ್ ಅನ್ಸಾರಿ (Azam Ansari) ಅವರು ತಮ್ಮದೊಂದು ಚಿಕ್ಕ ರೀಲ್ ಎಂದರೆ ಸಣ್ಣ ವೀಡಿಯೋವನ್ನು ತಯಾರಿಸಲು ರಸ್ತೆಯ ಮೇಲೆ ತಮ್ಮ ನೆಚ್ಚಿನ ನಟ ಸಲ್ಮಾನ್ ಚಿತ್ರದ ಹಾಡಿಗೆ ಶರ್ಟ್ ಹಾಕಿಕೊಳ್ಳದೆ ಡ್ಯಾನ್ಸ್ ಮಾಡಿ, ಟ್ರಾಫಿಕ್ ಜಾಮ್ ಗೆ (Traffic jam) ಕಾರಣರಾಗಿ ನಂತರ ಪೊಲೀಸರ (Police) ಕೈಗೆ ಸಿಕ್ಕಿ ಬಿದ್ದಿದ್ದು ನಾವೆಲ್ಲಾ ನೋಡಿದ್ದೇವೆ. ಇಲ್ಲಿಯೂ ಸಹ ಇನ್ನೊಬ್ಬ ಬಾಲಿವುಡ್ ನಟಿಯ ಹಾಗೆಯೇ ಕಾಣುವ ಮಹಿಳೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media) ತುಂಬಾ ಹವಾ ಮಾಡಿದೆ ಎಂದು ಹೇಳಬಹುದು.

ಇಂತಹ ವೈರಲ್ ವಿಷಯಗಳನ್ನು ಹೆಕ್ಕಿ ಹೆಕ್ಕಿ ತೆಗೆಯುವಲ್ಲಿ ಇಂಟರ್ನೆಟ್ ತುಂಬಾನೇ ಪರಿಣಾಮಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸಿಕ್ಕಾಪಟ್ಟೆ ಹವಾ ಮಾಡಿದ ಈ ವೀಡಿಯೋದಲ್ಲಿ ಈಗ ನಟಿ ಆಲಿಯಾ ಭಟ್ ಅವರಂತೆ ಕಾಣುವ ಮಹಿಳೆಯ ಅಭಿನಯವನ್ನು ತುಂಬಾನೇ ಶ್ಲಾಘಿಸುತ್ತಿದೆ. ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಸೆಲೆಸ್ಟಿ ಬೈರಾಗೆ ಎಂಬ ಹೆಸರಿನ ಹ್ಯಾಂಡಲ್ ಹೊಂದಿರುವ ಮಹಿಳೆ, ಇತ್ತೀಚೆಗೆ 'ದಿಲ್ ತೋ ಪಾಗಲ್ ಹೈ' ಚಿತ್ರದ ಹಾಡಿಗೆ ಲಿಪ್-ಸಿಂಕ್ ಮಾಡಿ ಆ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಆಲಿಯಾ ಭಟ್ ಆನ್ ಹೋಲುವ ಯುವತಿ
ಈ ವೀಡಿಯೋಗಾಗಿ ಈ ಯುವತಿ ನಟಿ ಆಲಿಯಾ ಭಟ್ ಅವರ 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರದ ಲುಕ್ ಅನ್ನು ಮರು ಸೃಷ್ಟಿಸಿದ್ದಾರೆ ಎಂದು ಹೇಳಬಹುದು.ಗುಲಾಬಿ ಹೂವಿನ ಪ್ರಿಂಟ್ ಹೊಂದಿರುವ ಬಿಳಿ ಸೀರೆಯನ್ನು ಧರಿಸಿದ್ದ ಈ ಮಹಿಳೆ, 'ದಿಲ್ ತೋ ಪಾಗಲ್ ಹೈ' ಚಿತ್ರದ 'ಕಬ್ ತಕ್ ಚುಪ್ ಬೈಟೆ' ಹಾಡಿನ ರೀಮಿಕ್ಸ್ ಮಾಡಿದ ಆವೃತ್ತಿಯಲ್ಲಿ ಲಿಪ್ ಸಿಂಕ್ ಮಾಡುವುದರೊಂದಿಗೆ ಡ್ಯಾನ್ಸ್ ಸಹ ಮಾಡಿದರು. ಅವರು ಜುಮ್ಕಾ ಹಾಕಿಕೊಂಡು ಮತ್ತು ಬಿಂದಿಯನ್ನು ಹಚ್ಚಿಕೊಂಡು ದುಂಡಗಿನ ಸನ್‌ಗ್ಲಾಸಸ್ ನೊಂದಿಗೆ ದಿಟ್ಟೋ ನಟಿ ಆಲಿಯಾನಂತೆಯೇ ಕಾಣುತ್ತಿದ್ದಾರೆ.

ಇದನ್ನೂ ಓದಿ:  Deepika Padukone: ಲೂಯಿ ವಿಟಾನ್​ಗೆ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್, ದೀಪಿಕಾಗೆ ಬಂಪರ್

ನಟಿ ಆಲಿಯಾ ಭಟ್ ಅವರೊಂದಿಗೆ ಮಹಿಳೆಯ ಹೋಲಿಕೆಯಿಂದ ನಟಿಯ ಅಭಿಮಾನಿಗಳು ಆಶ್ಚರ್ಯಚಕಿತರಾದರು. ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ಅರೇ.. ಆಆಅ ಆಲಿಯಾ" ಎಂದು ಕಾಮೆಂಟ್ ಮಾಡಿದ್ದಾರೆ. "2ನೇ ಅಲಿಯಾ ಭಟ್" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋಗೆ ಮೂರು ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.
ಆಲಿಯಾ ಭಟ್ ಅವರ ಡೋಪೆಲ್ ಗ್ಯಾಂಗರ್
ಈ ಮಹಿಳೆ ಆಲಿಯಾ ಭಟ್ ಅವರ ಡೋಪೆಲ್ ಗ್ಯಾಂಗರ್ ಆಗಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅವರು ಅಸ್ಸಾಂ ಮೂಲದವರಾಗಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ನಿಯಮಿತವಾಗಿ ತಮ್ಮ ಈ ರೀತಿಯ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ ಎಂದು ಹೇಳಬಹುದು. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ರಾಜಸ್ಥಾನದಿಂದ ಮಾಡಿದ ಅವರ ವೀಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಪ್ರಸಿದ್ಧವಾಗಿತ್ತು.

ಹಲವಾರು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ ಆಲಿಯಾ ಭಟ್
ನಟಿ ಆಲಿಯಾ ಭಟ್ ಏಪ್ರಿಲ್ 14 ರಂದು ನಟ ರಣಬೀರ್ ಕಪೂರ್ ಅವರನ್ನು ಅವರ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಮದುವೆಯಾದ ಕೆಲವೇ ದಿನಗಳ ನಂತರ ಇವರು ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದು, ಕರಣ್ ಜೋಹರ್ ಅವರ ನಿರ್ದೇಶನದ ರಣವೀರ್ ಸಿಂಗ್ ಅವರೊಂದಿಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಮತ್ತು ಪತಿ ರಣಬೀರ್ ಕಪೂರ್ ಅವರೊಂದಿಗೆ ಅಯಾನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಸೇರಿದಂತೆ ಹಲವಾರು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.ಇದನ್ನೂ ಓದಿ:  Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

ಇಷ್ಟೇ ಅಲ್ಲದೆ ಆಲಿಯಾ ಅವರು ನೆಟ್‌ಫ್ಲಿಕ್ಸ್ ನಲ್ಲಿ ಮೂಡಿ ಬರಲಿರುವ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಮೂಲಕ ಗಾಲ್ ಗಡೋಟ್ ಅವರೊಂದಿಗೆ ಹಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅವರು ನಟ ಶಾರುಖ್ ಖಾನ್ ಅವರೊಂದಿಗೆ ಸಹ-ನಿರ್ಮಾಣ ಮಾಡುತ್ತಿರುವ ‘ಡಾರ್ಲಿಂಗ್ಸ್’ ಚಿತ್ರದಲ್ಲಿಯೂ ಸಹ ನಟಿಸಲಿದ್ದಾರೆ.
Published by:Ashwini Prabhu
First published: