Duniya Vijay: ಭೀಮನ ಅಂಗಳಕ್ಕೆ Ash Melo ಎಂಟ್ರಿ, ಸ್ಕೈಲರ್​ಗೂ ಚಾನ್ಸ್ ಕೊಟ್ಟ ದುನಿಯಾ ವಿಜಯ್

ಕರಿ ಚಿರತೆ ಎಂದೇ ಕರೆಸಿಕೊಳ್ಳುವ ದುನಿಯಾ ವಿಜಯ್ (Duniya Vijya) ಅಭಿನಯದ ಭೀಮ ಸಿನಿಮಾದ ಹೊಸ ಅಪ್​ಡೇಟ್ ಹೊರ ಬಿದ್ದಿದೆ. ಚಿತ್ರದಲ್ಲಿ ಒಂದು ಹೊಸ ಪ್ರಮುಖ (Main Role) ಪಾತ್ರವೇ ಇದೆ. ಅದನ್ನ ವಿಶೇಷವಾಗಿಯೇ ಈಗ ರಿವೀಲ್ ಮಾಡಲಾಗಿದೆ.

ಸ್ಕೈಲರ್

ಸ್ಕೈಲರ್

  • Share this:
ಕರಿ ಚಿರತೆ ಎಂದೇ ಕರೆಸಿಕೊಳ್ಳುವ ದುನಿಯಾ ವಿಜಯ್ (Duniya Vijay) ಅಭಿನಯದ ಭೀಮ ಸಿನಿಮಾದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಚಿತ್ರದಲ್ಲಿ ಒಂದು ಹೊಸ ಪ್ರಮುಖ (Main Role) ಪಾತ್ರವೇ ಇದೆ. ಅದನ್ನ ವಿಶೇಷವಾಗಿಯೇ ಈಗ ರಿವೀಲ್ ಮಾಡಲಾಗಿದೆ. ಚಿತ್ರದ ನಾಯಕ ಮತ್ತು ನಿರ್ದೇಶಕ ದುನಿಯಾ ವಿಜಯ್ ಹೇಳೋವಂತೆ, ಈ ಪಾತ್ರವನ್ನ ಸ್ಕೈಲರ್ (Skyler Aishwarya) ನಿಭಾಯಿಸುತ್ತಿದ್ದಾರೆ. ಸದ್ಯದ ದಿನಗಳಲ್ಲಿರೋ ಟ್ರೆಂಡ್​ ಅನ್ನೇ ಬಿಂಬಿಸೋ ಹಾಗೇನೆ ಈ ಒಂದು ಕ್ಯಾರೆಕ್ಟರ್ ಇದೆ.ಇದನ್ನ ಸ್ಕೈಲರ್ Ash Melo ನಿರ್ವಹಿಸುತ್ತಿದ್ದಾರೆ. ಚೆನ್ನಾಗಿಯೇ ಮಾಡುತ್ತಾಳೆ ಎಂಬ ನಂಬಿಕೆ ಬಂದ್ಮೇಲೆ ಭೀಮಾ ಚಿತ್ರಕ್ಕೆ ಐಶ್ವರ್ಯರಳನ್ನ ಆಯ್ಕೆ ಮಾಡಲಾಗಿದೆ. ಹೀಗಂತ ಮಾಹಿತಿ ಕೊಡುವ ದುನಿಯಾ ವಿಜಯ್,ಭೀಮಾ ಚಿತ್ರದ ಮುಂದಿನ ಶೆಡ್ಯೂಲ್ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದಾರೆ.

ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿಮಾ ತನ್ನ ಪೋಸ್ಟರ್ ಗಳಿಂದಲೇ ಭಾರೀ ಗಮನ ಸೆಳೆಯುತ್ತಿದೆ. ಚಿತ್ರದ ದುನಿಯಾ ವಿಜಯ್ ಲುಕ್ ಬೇಜಾನ್ ಸೌಂಡ್ ಕೂಡ ಮಾಡುತ್ತಿದೆ. ಭೀಮಾ ಅನ್ನೋ ಟೈಟಲ್​ಗೂ ಚಿತ್ರದ ಕ್ಯಾರೆಕ್ಟರ್​ಗೂ ಸೂಕ್ತ ಅನ್ನೋ ಹಂಗೇನೆ ಪೋಸ್ಟರ್ ಸಹ ಡಿಸೈನ್ ಆಗಿವೆ.

ಇಂತಹ ಈ ಚಿತ್ರದಲ್ಲಿ ಹೊಸ ಪಾತ್ರಗಳ ಎಂಟ್ರಿ ಆಗುತ್ತಿದೆ. ಭಿನ್ನ ವಿಭಿನ್ನ ಹಾಗೂ ಚಿತ್ರ-ವಿಚಿತ್ರ ಅನಿಸಿಬಿಡೋ ಪಾತ್ರಗಳು ನಿಮ್ಮಲ್ಲಿ ಬೇರೆ ರೀತಿಯ ಸೆಳೆತವನ್ನೇ ಮೂಡಿಸುತ್ತವೆ. ಅದರಲ್ಲೂ ಈ ಸಿನಿಮಾದಲ್ಲಿ ಈಗ ಸ್ಕೈಲರ್ Ash Melo ಅನ್ನೋ ಯುವತಿಯ ಪರಿಚಯ ಕೂಡ ಆಗುತ್ತಿದೆ.

ಭೀಮಾ ಚಿತ್ರದ ಪ್ರಮುಖ ಪಾತ್ರದಲ್ಲಿ Skyler Ash Melo ನಟನೆ

ಸ್ವತಃ ದುನಿಯಾ ವಿಜಯ್ ಹೇಳುವಂತೆ ಸ್ಕೈಲರ್ ಐಶ್ವರ್ಯ ಒಳ್ಳೇ ಕಲಾವಿದೆ. ಈಕೆ ಚೆನ್ನಾಗಿ ಕ್ಯಾರೆಕ್ಟರ್ ನಿಭಾಯಿಸುತ್ತಾಳೆ ಅಂದ್ಮೇಲೆನೆ ಕ್ಯಾರೆಕ್ಟರ್ ಕೊಟ್ಟಿದ್ದೇವೆ. ಈಗೀನ ಟ್ರೆಂಡ್ ಗೆ ಸೂಟೇಬಲ್ ಆಗ್ತಾಳೆ ಅನ್ನೋದಕ್ಕೆ ಈ ಹುಡುಗಿಯನ್ನ ಸೆಲೆಕ್ಟ್ ಮಾಡಿದ್ದೇವೆ. ನಮ್ಮ ಚಿತ್ರದ ಕ್ಯಾರೆಕ್ಟರ್​ಗೆ ಚೆನ್ನಾಗಿಯೇ ಈಕೆ ಸೂಟ್ ಆಗುತ್ತಾಳೆ.

Duniya Vijya Acted Bheem Film Latest Updates
ಭೀಮ ಚಿತ್ರದ ಹೊಸ ಪಾತ್ರದ ಪರಿಚಯ


ಈ ಕಾರಣಕ್ಕೇನೆ ಈ ಚಿತ್ರದಲ್ಲಿ ಈ ಪಾತ್ರಕ್ಕೆ Ash Melo ಸೆಲೆಕ್ಟ್ ಆಗಿದ್ದಾರೆ. ಚಿತ್ರದಲ್ಲಿ ಹೊಸ ಹೊಸ ಪಾತ್ರಗಳ ದೊಡ್ಡ ದಂಡೇ ಇದೆ. ಒಬ್ಬರಿಗಿಂತ ಒಬ್ಬರು ಅನ್ನೋ ಹಾಗೆ ಪಾತ್ರಗಳ ಪರಿಚಯ ಇಲ್ಲಿ ಆಗಿದೆ.

ಗಿಲಿ ಗಿಲಿ ಚಂದ್ರು, ಗಿರಿಜಾ, ಬ್ಯಾಕ್ ಡ್ಯಾಗನ್ ಮಂಜು ಹೀಗೆ ಹಲವು ಪಾತ್ರಗಳನ್ನ ಡೈರೆಕ್ಟರ್ ದುನಿಯಾ ವಿಜಯ್ ಇಲ್ಲಿ ಸೃಷ್ಟಿ ಮಾಡಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಅನ್ನೋ ಹಾಗೆ Ash Melo ಲುಕ್ ಅನ್ನ ಈಗ ರಿವೀಲ್ ಮಾಡಲಾಗಿದೆ.

ದುನಿಯಾ ವಿಜಯ್ ಬಹಳ ದಪ್ಪ ಆದ್ರು ಅಲ್ವೇ ?
ದುನಿಯಾ ವಿಜಯ್ ತಮ್ಮ ದೇಹವನ್ನ ಚೆನ್ನಾಗಿಯೇ ದಂಡಿಸುತ್ತಾರೆ. ಆದರೆ ಬಾಲಯ್ಯನ ತೆಲುಗು ಸಿನಿಮಾಗೋಸ್ಕರವೇ ಕೊಂಚ ಜಾಸ್ತಿನೇ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ದಾಡಿ ಬಿಟ್ಟು ಇನ್ನೂ ಬೇರೆ ರೀತಿನೆ ಕಾಣುತ್ತಿದ್ದಾರೆ.

ಆದರೆ ಈ ಲುಕ್ ಇನ್ನು ಕೆಲವು ದಿನಗಳಷ್ಟೇ ಯಾಕೆಂದ್ರೆ, ಆ ಸಿನಿಮಾ ಮುಗಿಸಿದ ಮೇಲೆ ಮತ್ತೆ ದೇಹ ದಂಡಿಸಿ ಎಂದಿನಂತೆ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಭೀಮ ಚಿತ್ರದ ಮೂರನೇ ಹಂತದ ಚಿತ್ರೀಕರಣಕ್ಕೂ ಹೊರಡಲಿದ್ದಾರೆ.

Duniya Vijya Acted Bheem Film Latest Updates
ಭೀಮ ಸಿನಿಮಾದ ವಿಶೇಷ ಪಾತ್ರ


ಈಗಾಗಲೇ ಭೀಮ ಚಿತ್ರದ ಮೊದಲ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ಸದ್ಯ ಮೂರನೇ ಹಂತದ ಚಿತ್ರೀಕರಣದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಇಲ್ಲೂ ಟಗರು ಮಾಸ್ತಿ ಇದ್ದಾರೆ. ಸಖತ್ ಡೈಲಾಗ್ ಅನ್ನೂ ಭೀಮನಿಗಾಗಿಯೇ ಬರೆಯುತ್ತಿದ್ದಾರೆ. ವೇಟ್ ಮಾಡಿ ಬಾಕಿ ಅಪ್​ಡೇಟ್ಸ್ ಕೊಡ್ತಾ ಇರುತ್ತೇವೆ.
First published: