ಸಂತೋಷ್‌ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಹೋದ Salaga: 300 ಚಿತ್ರಮಂದಿರಗಳಲ್ಲಿ 1,200 ಶೋಗಳು..!

ನಾಳೆ ಅಂದರೆ, ಅ.14ರಂದು ತ್ರಿವೇಣಿ ಚಿತ್ರಮಂದಿರದಲ್ಲಿ ಸಲಗ ಚಿತ್ರ ರಿಲೀಸ್ ಆಗ್ತಿದೆ. ಸಲಗ ಅಭಿಮಾನಿಗಳ‌ ಸಂಭ್ರಮ ಸಡಗರ ಎಲ್ಲವೂ ತ್ರಿವೇಣಿ ಚಿತ್ರಮಂದಿರದ ಆವರಣದಲ್ಲೇ ನಡೆಯಲಿದೆ. 300 ಚಿತ್ರಮಂದಿರಗಳಲ್ಲಿ 1200 ಶೋ ನಡೆಯಲಿದೆ.

ನಾಳೆ ತೆರೆ ಕಾಣಲಿದೆ ಸಲಗ ಸಿನಿಮಾ

ನಾಳೆ ತೆರೆ ಕಾಣಲಿದೆ ಸಲಗ ಸಿನಿಮಾ

  • Share this:
ದಸರಾ ಹಬ್ಬದ ಪ್ರಯುಕ್ತ ಎರಡು ಸಿನಿಮಾಗಳು ನಾಳೆ ರಿಲೀಸ್ ಆಗಲಿವೆ. ಒಂದು ದುನಿಯಾ ವಿಜಯ್ ಅವರ ಸಲಗ ಹಾಗೂ ಕಿಚ್ಚ ಸುದೀಪ್​ ನಟನೆಯ ಕೋಟಿಗೊಬ್ಬ 3 ಚಿತ್ರ. ಈ ಎರಡು ಚಿತ್ರತಂಡಗಳು ಸಿನಿಪ್ರಿಯರಿಗೆ ನವರಾತ್ರಿ ಹಬ್ಬದ ಉಡುಗೊರೆಯಾಗಿ ಸಿನಿಮಾಗಳನ್ನು ರಿಲೀಸ್ ಮಾಡುತ್ತಿವೆ. ಇನ್ನು ಈಗಾಗಲೇ ಚಿತ್ರತಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಲಾಗಿದ್ದು, ಈಗಾಗಲೇ ಕನ್ನಡದ ಒಂದು ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಕೊಂಚ ಈಗ  ನಿರಾಳವಾಗಿದೆ. ಈ ಎರಡೂ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಲಿವೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇನ್ನು ಮೆಜೆಸ್ಟಿಕ್​ನಲ್ಲಿರುವ ಚಿತ್ರಮಂದಿರಗಳಲ್ಲಿ ಮುಖ್ಯ ಥಿಯೇಟರ್​ ಎಂದೇ ಖ್ಯಾತವಾಗಿರುವ ಸಂತೋಷ್​ ಚಿತ್ರಮಂದಿರದಲ್ಲಿ ತಮ್ಮ ಚಿತ್ರಗಳು ಪ್ರದರ್ಶನ ಕಾಣಬೇಕೆಂದು ಎಲ್ಲ ಚಿತ್ರತಂಡಗಳು ಬಯಸುತ್ತವೆ. ಆದರೆ ಈ ಸಲ ಯಾವ ಸಿನಿಮಾಗೂ ಈ ಅವಕಾಶ ಸಿಕ್ಕಿಲ್ಲ. 

ನಾಳೆಯಿಂದ ರಾಜ್ಯದಾದ್ಯಂತ ಪ್ರೇಕ್ಷಕರೆದುರಿಗೆ ಬರಲಿದೆ ಸಲಗ. ದುನಿಯಾ ವಿಜಯ್ ಮೊದಲ ಸಲ ನಿರ್ದೇಶನ ಮಾಡಿ ನಟಿಸಿರುವ ಸಲಗ ಸಿನಿಮಾ ಸಂತೋಷ್​ ಚಿತ್ರಮಂದಿರದಲ್ಲಿ ತೆರೆ ಕಾಣಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಮುಖ್ಯ ಚಿತ್ರಮಂದಿರ ಸಂತೋಷ್​ನಿಂದ ಸಿನಿಮಾವನ್ನು ಶಿಫ್ಟ್ ಮಾಡಲಾಗಿದೆ. ಸಂತೋಷ್ ಚಿತ್ರಮಂದಿರದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ತಾಂತ್ರಿಕ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ.‌ ತಾಂತ್ರಿಕವಾಗಿ ದುರಸ್ಥಿಯಲ್ಲಿರೋ ಸಂತೋಷ್ ಬದಲಾಗಿ ಅದೇ ಕೆ.ಜಿ. ರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರವನ್ನು ಸಲಗ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ನಾಳೆ ಅಂದರೆ, ಅ.14ರಂದು ತ್ರಿವೇಣಿ ಚಿತ್ರಮಂದಿರದಲ್ಲಿ ಸಲಗ ಚಿತ್ರ ರಿಲೀಸ್ ಆಗ್ತಿದೆ. ಸಲಗ ಅಭಿಮಾನಿಗಳ‌ ಸಂಭ್ರಮ ಸಡಗರ ಎಲ್ಲವೂ ತ್ರಿವೇಣಿ ಚಿತ್ರಮಂದಿರದ ಆವರಣದಲ್ಲೇ ನಡೆಯಲಿದೆ. ತ್ರಿವೇಣಿ ಚಿತ್ರಮಂದಿರ ತಾಂತ್ರಿಕವಾಗಿ ನವೀಕರಣಗೊಂಡಿದ್ದು, 4K ಡಾಲ್ಬಿ ಅಟ್ಮಾಸ್ ಸೌಂಡಿಂಗ್ ಸಿಸ್ಟಮ್ ನ ಅಳವಡಿಸಲಾಗಿದೆ. 300 ಚಿತ್ರಮಂದಿರಗಳಲ್ಲಿ 1200 ಶೋ ನಡೆಯಲಿದೆ.

ಸಂತೋಷ್​ ಚಿತ್ರಮಂದಿರಲ್ಲಿ ರಾಜ್​ ಅವರ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಅವರ ಅಭಿನಯದ ಸಿನಿಮಾ ತೆರೆ ಕಂಡಿತ್ತು. ಮೊದಲ ದಿನವೇ ತಾಂತ್ರಿಕ ಸಮಸ್ಯೆಯಿಂದಾಗಿ ಸಿನಿಮಾ ಪ್ರದರ್ಶನವನ್ನು ರದ್ದು ಮಾಡಲಾಯಿತು.

ಇದನ್ನೂ ಓದಿ: Duniya Vijay: ಕೊರೋನಾದಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್​ ತಾಯಿ ವಿಧಿವಶ..!

ಇನ್ನು  ಸಲಗ ಸಿನಿಮಾಗೆ ಸೆನ್ಸಾರ್ ಮಂಡಳಿ ಹಸಿರು ನಿಶಾನೆ ತೋರಿದ ನಂತರ ಚಿತ್ರತಂಡ ಬೆಂಗಳೂರಿನಲ್ಲಿರುವ ಅಣ್ಣಮ್ಮ ದೇವಾಲಯಕ್ಕೆ ಭೇಟಿ ಕೊಟ್ಟು, ಸೆನ್ಸಾರ್​ ಮಂಡಳಿ ಕೊಟ್ಟಿದ್ದ ಪ್ರಮಾಣಪತ್ರವನ್ನು ಇಟ್ಟು ಪೂಜೆ ಮಾಡಿಸಿತ್ತು. ಈಗ ಸಿನಿಮಾಗ ರಿಲೀಸ್​ಗೆ ಒಂದು ದಿನ ಇರುವಾಗಲೇ ಚಿತ್ರತಂಡ ಮತ್ತೆ ತಿರುವಕ್ಕಾರೈನಲ್ಲಿರುವ ವಕ್ರಕಾಳಿ‌ ಅಮ್ಮನ್ ದರ್ಶನ ಪಡೆದು, ತಿರುವಣ್ಣಾಮಲೈ ದೇವಸ್ಥಾನದಲ್ಲಿ‌ ಪೂಜೆ ಸಲ್ಲಿಸಿದೆ.

ಈ ಹಿಂದೆಯೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಲಾಗಿತ್ತಾದರೂ ಸಲಗ ಸಿನಿಮಾ ರಿಲೀಸ್ ಆಗುವ ದಿನವೇ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ3 ಸಿನಿಮಾ ಸಹ ತೆರೆಕಾಣುವ ವಿಷಯ ಬಹಿರಂಗವಾಗಿತ್ತು. ಈ ಹಿನ್ನಲೆಯಲ್ಲಿ ಮತ್ತೆ ಹೊಸ ದಿನಾಂಕ ಪ್ರಕಟಿಬಹುದು ಅನ್ನೋ ನಿರೀಕ್ಷೆ ಪ್ರೇಕ್ಷಕರಲ್ಲಿತ್ತು. ಆದರೆ ಚಿತ್ರತಂಡ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಸಲಗ ಹಾಗೂ ಕೋಟಿಗೊಬ್ಬ 3 ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಅಕ್ಟೋಬರ್ 14ರಂದೇ ಸಿನಿಮಾ ರಿಲೀಸ್ ಮಾಡಲು ಎರಡೂ ಚಿತ್ರತಂಡಗಳ ಸಿದ್ಧತೆ ಮಾಡಿಕೊಂಡಿವೆ. ಇದು ಸ್ಯಾಂಡಲ್​ವುಡ್​ ಬಾಕ್ಸಾಫೀನ್​ನಲ್ಲಿ ಸ್ಟಾರ್ ವಾರ್ ಶುರು ಎಂಬಂತಾಗಿತ್ತು. ಆದರೆ ಈಗ ಕಿಚ್ಚ ಸುದೀಪ್ ಸಲಗ ಚಿತ್ರತಂಡಕ್ಕೆ ಶುಭಾಶಯ ಕೋರುವ ಮೂಲಕ ಸ್ಟಾರ್ ವಾರ್​ಗೆ ಅಂತ್ಯ ಹಾಡಿದ್ದರು.

ಇನ್ನು ಸಲಗ ಚಿತ್ರತಂಡ ಸಹ ಇದೇ ವಿಷಯವಾಗಿ ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಲಗ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಸಲಗ ಸಿನಿಮಾ ಅಕ್ಟೋಬರ್ 14 ರಂದು ತೆರೆ ಕಾಣಲಿದೆ. ಆ ದಿನವೇ ಸುದೀಪ್ ನಟನೆಯ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಲಿದೆ. ಇದು ಸ್ಟಾರ್ ವಾರ್ ಆಗೋದಿಲ್ಲ. ಸುದೀಪ್ ಅವರು ಮೊದಲಿನಿಂದಲೂ ನಮ್ಮ ತಂಡಕ್ಕೆ ಸಪೋರ್ಟಿವ್ ಆಗಿದ್ದಾರೆ. ಮೊದಲು ಸಲಗ ಸಿನಿಮಾನೇ ರಿಲೀಸಾಗಬೇಕು. 15 ದಿನಗಳು ಅಂತರ ನಮಗೆ ಬೇಕಿತ್ತು. ಆ ನಿಟ್ಟಿನಲ್ಲೇ ನಿರ್ಮಾಪಕರ ನಡುವೆ ಪ್ಲಾನ್ ಆಗಿತ್ತು. ಈ ಬಗ್ಗೆ ನಿರ್ಮಾಪಕ ಸೂರಪ್ಪಬಾಬು ನಮಗೆ ಹೇಳಿದ್ರು. ಆದರೆ ಈಗ ಅವರೇ ಡೇಟ್ ಅನೌನ್ಸ್ ಮಾಡಿದ್ದಾರೆ. ನಮ್ಮ ಸಿನಿಮಾ 14ನೇ ತಾರೀಖು ರಿಲೀಸಾಗೋದು ಪಕ್ಕಾ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Salaga: ದುಬಾರೆಯಲ್ಲಿ ಸ್ಯಾಂಡಲ್​ವುಡ್​ ಸಲಗ​: ಮಾವುತರ ಜತೆ ವಾಲಿಬಾಲ್​ ಆಡಿದ ದುನಿಯಾ ವಿಜಯ್​..!

ಸಲಗ ಸಿನಿಮಾದ ನಿರ್ದೇಶಕ ಹಾಗೂ ನಟ ದುನಿಯಾ ವಿಜಯ್ ಮಾತನಾಡಿ, ಇದು ಸಹೋದರರ ಸವಾಲ್ ಅಲ್ಲ, ಇದು ಸಹೋದರರ ಪ್ರೀತಿ. ಸುದೀಪ್ ನನ್ನ ಜೊತೆ ಒಡನಾಟ ಬಹಳ ಚೆನ್ನಾಗಿದೆ. ಫಸ್ಟ್ ಡೇ ಸಲಗ ಸಿನಿಮಾ ನೋಡೋದಾಗಿ ಸುದೀಪ್ ಹೇಳಿದ್ದರು. ಸುದೀಪ್​ಗೆ ಒಳ್ಳೆಯ ಮನಸ್ಸಿದೆ. ಮಾಧ್ಯಮದವರ ಸಹಕಾರ ಸಾಕಷ್ಟಿದೆ. ಮತ್ತೆ ಕೊರೋನಾ ಭಯ ಖಂಡಿತವಾಗಿಯೂ ಇಲ್ಲ. ಸಿಂಗಲ್ ಡೋಸ್ ವ್ಯಾಕ್ಸಿನ್ ತೆಗೆದುಕೊಂಡವರು ದಯವಿಟ್ಟು ಬರಲೇಬೇಡಿ. ಎಲ್ಲರೂ ದಯವಿಟ್ಟು ಡಬಲ್ ವ್ಯಾಕ್ಸಿನ್ ಹಾಕಿಸಿಕೊಂಡೇ ಬನ್ನಿ ಎಂದು ಮನವಿ ಮಾಡಿದ್ದರು. ಸಲಗ ಸಿನಿಮಾದಲ್ಲಿ ಡಾಲಿ ಧನಂಜಯ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಹಬ್ಬದ ಸಮಯದಲ್ಲಿ ಸಿನಿಪ್ರಿಯರಿಗೆ ಸಿನಿಮಾಗಳ ರಸದೌತಣ ಸಿಗೋದು ಗ್ಯಾರಂಟಿ ಆಗಿದೆ.

ಪ್ರಚಾರಕ್ಕಾಗಿ ದುಬಾರಿ ವೆಚ್ಚದಲ್ಲಿ ಸಾಂಗ್ ಶೂಟ್​

ಸಿನಿಮಾದ ಪ್ರಚಾರಕ್ಕೆಂದು ಒಂದು ಹಾಡನ್ನು ಚಿತ್ರೀಕರಿಸಲಾಗಿದೆ. ಪ್ರಚಾರದ ಹಾಡಲ್ಲಿ ಸಿದ್ದಿ ಜನರೊಟ್ಟಿಗೆ ಮಾಸ್ ಸ್ಟೈಲಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ದುಬಾರಿ ವೆಚ್ಚದಲ್ಲಿ ಸಿದ್ಧಗೊಳ್ಳುತ್ತಿರುವ ಹಾಡಿನಲ್ಲಿ 70 ಜನ‌ನೃತ್ಯ ಕಲಾವೊದರೊಂದಿಗೆ ಸಲಗ ವಿಜಯ್ ಸ್ಟೆಪ್ಸ್ ಹಾಕಿದ್ದಾರೆ. ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಶರಟನ್​ ಹೋಟೆಲ್​ ನಲ್ಲಿ ಸಲಗ ಪ್ರಮೋಷನಲ್‌ ಸಾಂಗ್ ಶೂಟಿಂಗ್ ನಡೆಸಲಾಗಿದೆ. 70ರಿಂದ 75 ಜನ ಸಿದ್ದಿ ಕಲಾವಿದರೊಂದಿಗೆ ವಿಶಿಷ್ಠ ಗೆಟಪ್ಪಿನಲ್ಲಿ‌ ಸಲಗ ವಿಜಯ್ ಮಿಂಚಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆಯ ಈ ಹಾಡಿಗೆ, ಕೊರಿಯೋಗ್ರಾಫರ್ ಮುರಳಿ‌ ಮಾಸ್ಟರ್ ನೇತೃತ್ವದಲ್ಲಿ ನೃತ್ಯ ಸಂಯೋಜನೆ ಮಾಡಲಾಗಿದೆ. ಸಲಗ ಚಿತ್ರದತಂಡ ಈ ಹಾಡಿನ ಮೂಲಕ ಪ್ರಚಾರದ ಕೆಲಸಕ್ಕೆ‌ ಕಿಕ್ ಸ್ಟಾರ್ಟ್ ಕೊಟ್ಟಿದ್ದರು.
Published by:Anitha E
First published: