Duniya Vijay: ಅ.10ಕ್ಕೆ ನಡೆಯಲಿದೆ Salaga ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮ..!

ಸಿನಿಮಾ ರಿಲೀಸ್​ಗೆ ನಾಲ್ಕು ದಿನ ಇರುವಾಗ ಚಿತ್ರತಂಡ ಪ್ರೀ-ರಿಲೀಸ್​ ಕಾರ್ಯಕ್ರಮ ಮಾಡಲು ನಿರ್ಧರಿಸಿದೆ. ಹೌದು, ಅಕ್ಟೋಬರ್ 14ರಂದು ಸಿನಿಮಾ ರಿಲೀಸ್ ಆಗುತ್ತಿದ್ದರೆ, ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ನಗರದ ಖಾಸಗಿ ಹೋಟೆಲ್​ನಲ್ಲಿ ಈ ಕಾರ್ಯಕ್ರಮ ಗ್ರ್ಯಾಂಡ್​ ಆಗಿ ನಡೆಯಲಿದೆ.

ಸಲಗ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ

ಸಲಗ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ

  • Share this:
ದುನಿಯಾ ವಿಜಯ್ (Duniya Vijay) ಮೊದಲ ಸಲ ನಿರ್ದೇಶಕರ ಕ್ಯಾಪ್​ ತೊಟ್ಟು ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಸಲಗ (Salaga Movie). ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ವೀಕ್ಷಕರಿಗೆ ಬಾಗಿಲು ತೆರೆದ ನಂತರವೇ ತಮ್ಮ ಸಿನಿಮಾ ರಿಲೀಸ್ ಮಾಡೋದು ಅಂತ ನಿರ್ಧರಿಸಿದ್ದ ಚಿತ್ರತಂಡ ಕಡೆಗೂ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಿದೆ. ಹೌದು, ದಸರಾ ಹಬ್ಬದ  (Festival)ಅಂಗವಾಗಿ ಅ.14ರಂದು ತೆರೆಗಪ್ಪಳಿಸುತ್ತಿದೆ ಈ ಸಲಗ. ಸಿನಿಮಾ ಪ್ರಚಾರ ಕಾರ್ಯ  (Salaga Movie Promotion) ಸಹ ಜೋರಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ತುಂಬಾ ಸಮಯದಿಂದಲೇ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದು, ದುನಿಯಾ ವಿಜಯ್ ಅಭಿಮಾನಿಗಳು ಸಲಗ ಕ್ರೇಜ್​ ಜೋರಾಗಿದೆ. ಆದರೆ ಇನ್ನೂ ಈ ಚಿತ್ರದ ಟ್ರೇಲರ್​ ರಿಲೀಸ್ ಆಗಿಲ್ಲ. 

ಇನ್ನು, ಸಿನಿಮಾ ರಿಲೀಸ್​ಗೆ ನಾಲ್ಕು ದಿನ ಇರುವಾಗ ಚಿತ್ರತಂಡ ಪ್ರೀ-ರಿಲೀಸ್​ ಕಾರ್ಯಕ್ರಮ ಮಾಡಲು ನಿರ್ಧರಿಸಿದೆ. ಹೌದು, ಅಕ್ಟೋಬರ್ 14ರಂದು ಸಿನಿಮಾ ರಿಲೀಸ್ ಆಗುತ್ತಿದ್ದರೆ, ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ನಗರದ ಖಾಸಗಿ ಹೋಟೆಲ್​ನಲ್ಲಿ ಈ ಕಾರ್ಯಕ್ರಮ ಗ್ರ್ಯಾಂಡ್​ ಆಗಿ ನಡೆಯಲಿದೆ.






ಈಗಾಗಲೇ ಸಲಗ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದು, ಅ.10ರಂದು ಸಂಜೆ 6ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್​. ಮಾಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಭಾಗಿಯಾಗಲಿದ್ದಾರೆ.

ದೇವಾಲಯದಲ್ಲಿ ಸೆನ್ಸಾರ್ ಸರ್ಟಿಫಿಕೇಟ್​ಗೆ ಪೂಜೆ ಮಾಡಿಸಿದ ಚಿತ್ರತಂಡ

ಸಲಗ ಸಿನಿಮಾ ರಿಲೀಸ್ ಸಂಭ್ರಮದಲ್ಲಿರುವ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ‌ಅನ್ನು ನಗರ ದೇವಿ ಅಣ್ಣಮ್ಮ ದೇವಿಯ ದೇವಾಲಯದಲ್ಲಿ ಇಟ್ಟು ಪೂಜೆ‌ ಸಲ್ಲಿಸಿದ್ದಾರೆ. ಸಲಗ ನಿರ್ದೇಶಕ ನಟ ವಿಜಯ್, ಪತ್ನಿ‌ಕೀರ್ತಿ, ಮಗ ಸಾಮ್ರಾಟ್ ಹಾಗೂ‌ ಚಿತ್ರದ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್ ಪೂಜೆಯಲ್ಲಿ ಭಾಗಿಯಾಗಿದ್ದರು.

ಇತ್ತೀಚೆಗಷ್ಟೆ ಸಲಗ ಸಿನಿಮಾ ಸೆನ್ಸಾರ್ ಮಂಡಳಿ ಮುಂದೆ ಬಂದಿತ್ತು. ಇನ್ನು ಈ ಸಿನಿಮಾಗೆ ಯಾವ ಸರ್ಟಿಫಿಕೇಟ್ ಸಿಗಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಮಲ್ಲೇಶ್ವರಂನ SRV ಥಿಯೇಟರ್​ನಲ್ಲಿ ಸಲಗ ಚಿತ್ರವನ್ನ ವೀಕ್ಷಿಸಿ ಸೆನ್ಸಾರ್ ಬೋರ್ಡ್ ಅಧಿಕಾರಿಗಳು, ಸಲಗಕ್ಕೆ ಯಾವುದೇ ಕಟ್ಸ್ ಇಲ್ಲದೇ 'ಎ ' ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: Salaga: ಕೈ ಅಲ್ಲ‌ಅಭಿಮಾನಿಯ ಎದೆಗಿಳಿದ ಸಲಗ: ದುನಿಯಾ ವಿಜಯ್​ ಫ್ಯಾನ್ಸ್​ಗಳ ಟ್ಯಾಟೂ‌ ಕ್ರೇಜ್..!

ಈ ಹಿಂದೆಯೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಲಾಗಿತ್ತಾದರೂ ಸಲಗ ಸಿನಿಮಾ ರಿಲೀಸ್ ಆಗುವ ದಿನವೇ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ3 ಸಿನಿಮಾ ಸಹ ತೆರೆಕಾಣುವ ವಿಷಯ ಬಹಿರಂಗವಾಗಿತ್ತು. ಈ ಹಿನ್ನಲೆಯಲ್ಲಿ ಮತ್ತೆ ಹೊಸ ದಿನಾಂಕ ಪ್ರಕಟಿಬಹುದು ಅನ್ನೋ ನಿರೀಕ್ಷೆ ಪ್ರೇಕ್ಷಕರಲ್ಲಿತ್ತು. ಆದರೆ ಚಿತ್ರತಂಡ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಸಲಗ ಹಾಗೂ ಕೋಟಿಗೊಬ್ಬ 3 ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಅಕ್ಟೋಬರ್ 14ರಂದೇ ಸಿನಿಮಾ ರಿಲೀಸ್ ಮಾಡಲು ಎರಡೂ ಚಿತ್ರತಂಡಗಳ ಸಿದ್ಧತೆ ಮಾಡಿಕೊಂಡಿವೆ. ಇದು ಸ್ಯಾಂಡಲ್​ವುಡ್​ ಬಾಕ್ಸಾಫೀನ್​ನಲ್ಲಿ ಸ್ಟಾರ್ ವಾರ್ ಶುರು ಎಂಬಂತಾಗಿತ್ತು. ಆದರೆ ಈಗ ಕಿಚ್ಚ ಸುದೀಪ್ ಸಲಗ ಚಿತ್ರತಂಡಕ್ಕೆ ಶುಭಾಶಯ ಕೋರುವ ಮೂಲಕ ಸ್ಟಾರ್ ವಾರ್​ಗೆ ಅಂತ್ಯ ಹಾಡಿದ್ದರು.



ಇನ್ನು ಸಲಗ ಚಿತ್ರತಂಡ ಸಹ ಇದೇ ವಿಷಯವಾಗಿ ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಲಗ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಸಲಗ ಸಿನಿಮಾ ಅಕ್ಟೋಬರ್ 14 ರಂದು ತೆರೆ ಕಾಣಲಿದೆ. ಆ ದಿನವೇ ಸುದೀಪ್ ನಟನೆಯ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಲಿದೆ. ಇದು ಸ್ಟಾರ್ ವಾರ್ ಆಗೋದಿಲ್ಲ. ಸುದೀಪ್ ಅವರು ಮೊದಲಿನಿಂದಲೂ ನಮ್ಮ ತಂಡಕ್ಕೆ ಸಪೋರ್ಟಿವ್ ಆಗಿದ್ದಾರೆ. ಮೊದಲು ಸಲಗ ಸಿನಿಮಾನೇ ರಿಲೀಸಾಗಬೇಕು. 15 ದಿನಗಳು ಅಂತರ ನಮಗೆ ಬೇಕಿತ್ತು. ಆ ನಿಟ್ಟಿನಲ್ಲೇ ನಿರ್ಮಾಪಕರ ನಡುವೆ ಪ್ಲಾನ್ ಆಗಿತ್ತು. ಈ ಬಗ್ಗೆ ನಿರ್ಮಾಪಕ ಸೂರಪ್ಪಬಾಬು ನಮಗೆ ಹೇಳಿದ್ರು. ಆದರೆ ಈಗ ಅವರೇ ಡೇಟ್ ಅನೌನ್ಸ್ ಮಾಡಿದ್ದಾರೆ. ನಮ್ಮ ಸಿನಿಮಾ 14ನೇ ತಾರೀಖು ರಿಲೀಸಾಗೋದು ಪಕ್ಕಾ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Salaga: ದುಬಾರಿ ವೆಚ್ಚದಲ್ಲಿ ಸಲಗ ಸಿನಿಮಾದ ಪ್ರಮೋಷನಲ್ ಸಾಂಗ್ ಶೂಟಿಂಗ್..!

ಸಲಗ ಸಿನಿಮಾದ ನಿರ್ದೇಶಕ ಹಾಗೂ ನಟ ದುನಿಯಾ ವಿಜಯ್ ಮಾತನಾಡಿ, ಇದು ಸಹೋದರರ ಸವಾಲ್ ಅಲ್ಲ, ಇದು ಸಹೋದರರ ಪ್ರೀತಿ. ಸುದೀಪ್ ನನ್ನ ಜೊತೆ ಒಡನಾಟ ಬಹಳ ಚೆನ್ನಾಗಿದೆ. ಫಸ್ಟ್ ಡೇ ಸಲಗ ಸಿನಿಮಾ ನೋಡೋದಾಗಿ ಸುದೀಪ್ ಹೇಳಿದ್ದರು. ಸುದೀಪ್​ಗೆ ಒಳ್ಳೆಯ ಮನಸ್ಸಿದೆ. ಮಾಧ್ಯಮದವರ ಸಹಕಾರ ಸಾಕಷ್ಟಿದೆ. ಮತ್ತೆ ಕೊರೋನಾ ಭಯ ಖಂಡಿತವಾಗಿಯೂ ಇಲ್ಲ. ಸಿಂಗಲ್ ಡೋಸ್ ವ್ಯಾಕ್ಸಿನ್ ತೆಗೆದುಕೊಂಡವರು ದಯವಿಟ್ಟು ಬರಲೇಬೇಡಿ. ಎಲ್ಲರೂ ದಯವಿಟ್ಟು ಡಬಲ್ ವ್ಯಾಕ್ಸಿನ್ ಹಾಕಿಸಿಕೊಂಡೇ ಬನ್ನಿ ಎಂದು ಮನವಿ ಮಾಡಿದ್ದರು. ಸಲಗ ಸಿನಿಮಾದಲ್ಲಿ ಡಾಲಿ ಧನಂಜಯ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಹಬ್ಬದ ಸಮಯದಲ್ಲಿ ಸಿನಿಪ್ರಿಯರಿಗೆ ಸಿನಿಮಾಗಳ ರಸದೌತಣ ಸಿಗೋದು ಗ್ಯಾರಂಟಿ ಆಗಿದೆ.

ಪ್ರಚಾರಕ್ಕಾಗಿ ದುಬಾರಿ ವೆಚ್ಚದಲ್ಲಿ ಸಾಂಗ್ ಶೂಟ್​

ಸಿನಿಮಾದ ಪ್ರಚಾರಕ್ಕೆಂದು ಒಂದು ಹಾಡನ್ನು ಚಿತ್ರೀಕರಿಸಲಾಗಿದೆ. ಪ್ರಚಾರದ ಹಾಡಲ್ಲಿ ಸಿದ್ದಿ ಜನರೊಟ್ಟಿಗೆ ಮಾಸ್ ಸ್ಟೈಲಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ದುಬಾರಿ ವೆಚ್ಚದಲ್ಲಿ ಸಿದ್ಧಗೊಳ್ಳುತ್ತಿರುವ ಹಾಡಿನಲ್ಲಿ 70 ಜನ‌ನೃತ್ಯ ಕಲಾವೊದರೊಂದಿಗೆ ಸಲಗ ವಿಜಯ್ ಸ್ಟೆಪ್ಸ್ ಹಾಕಿದ್ದಾರೆ. ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಶರಟನ್​ ಹೋಟೆಲ್​ ನಲ್ಲಿ ಸಲಗ ಪ್ರಮೋಷನಲ್‌ ಸಾಂಗ್ ಶೂಟಿಂಗ್ ನಡೆಸಲಾಗಿದೆ. 70ರಿಂದ 75 ಜನ ಸಿದ್ದಿ ಕಲಾವಿದರೊಂದಿಗೆ ವಿಶಿಷ್ಠ ಗೆಟಪ್ಪಿನಲ್ಲಿ‌ ಸಲಗ ವಿಜಯ್ ಮಿಂಚಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆಯ ಈ ಹಾಡಿಗೆ, ಕೊರಿಯೋಗ್ರಾಫರ್ ಮುರಳಿ‌ ಮಾಸ್ಟರ್ ನೇತೃತ್ವದಲ್ಲಿ ನೃತ್ಯ ಸಂಯೋಜನೆ ಮಾಡಲಾಗಿದೆ. ಸಲಗ ಚಿತ್ರದತಂಡ ಈ ಹಾಡಿನ ಮೂಲಕ ಪ್ರಚಾರದ ಕೆಲಸಕ್ಕೆ‌ ಕಿಕ್ ಸ್ಟಾರ್ಟ್ ಕೊಟ್ಟಿದ್ದರು.
Published by:Anitha E
First published: