Duniya Vijay ಅಭಿನಯದ ಸಲಗ ಸಿನಿಮಾಗೆ ಸಿಕ್ತು ಎ ಪ್ರಮಾಣಪತ್ರ: ಅಕ್ಟೋಬರ್​14ಕ್ಕೆ ತೆರೆಗೆ..!

ಮಲ್ಲೇಶ್ವರಂನ SRV ಥಿಯೇಟರ್​ನಲ್ಲಿ ಸಲಗ ಚಿತ್ರವನ್ನ ವೀಕ್ಷಿಸಿ ಸೆನ್ಸಾರ್ ಬೋರ್ಡ್ ಅಧಿಕಾರಿಗಳು, ಸಲಗಕ್ಕೆ ಯಾವುದೇ ಕಟ್ಸ್ ಇಲ್ಲದೇ 'ಎ ' ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ರಿಲೀಸ್ ಖುಷಿಯಲ್ಲಿ ಸಲಗ ಚಿತ್ರತಂಡ

ರಿಲೀಸ್ ಖುಷಿಯಲ್ಲಿ ಸಲಗ ಚಿತ್ರತಂಡ

  • Share this:
ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಲಗ ತೆರೆಗೆ ಬರಲು ಸಜ್ಜಾಗಿದೆ. ಅದರಲ್ಲೂ ದುನಿಯಾ ವಿಜಯ್ ಅವರೇ ನಿರ್ದೇಶಿಸಿ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಸಾಕಷ್ಟು ವಿಷಯಗಳಿಂದಾಗಿ ಸಿನಿಮಾ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ. ಇನ್ನು ಹಂತ ಹಂತವಾಗಿ ತೆರೆಗೊಳ್ಳುತ್ತಿರುವ ಲಾಕ್​ಡೌನ್​ನಲ್ಲಿ ಚಿತ್ರಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅನುಮತಿ ನೀಡಿದ ನಂತರ ತೆರೆಕಾಣುತ್ತಿರುವ ಎರಡನೇ ಚಿತ್ರ ಇದಾಗಿದೆ. ಈ ಸಿನಿಮಾದ ಚಿತ್ರೀಕರಣ ಈ ಹಿಂದೆಯೇ ಮುಗಿದಿದ್ದು, ಲಾಕ್​ಡೌನ್​ ಹಾಗೂ ಕೊರೋನಾ ಕಾರಣದಿಂದಾಗಿ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಒಮ್ಮೆ ಶೇ.100ರಷ್ಟು ಆಸನ ಭರ್ತಿಗೆ ಅನುಮತಿ ನೀಡಿದ ಕೂಡಲೇ ಸ್ಯಾಂಡಲ್​ವುಡ್​ನಲ್ಲಿ ತೆರೆಗೆ ಬರಲು ಸಜ್ಜಾಗಿದ್ದ ಸಿನಿಮಾಗಳೆಲ್ಲ ರಿಲೀಸ್ ದಿನಂಕಾ ಪ್ರಕಟಿಸಿದವು. ಅವುಗಳಲ್ಲಿ ಸಲಗ ಸಿನಿಮಾ ಸಹ ಒಂದು. 

ಇತ್ತೀಚೆಗಷ್ಟೆ ಸಲಗ ಸಿನಿಮಾ ಸೆನ್ಸಾರ್ ಮಂಡಳಿ ಮುಂದೆ ಬಂದಿತ್ತು. ಇನ್ನು ಈ ಸಿನಿಮಾಗೆ ಯಾವ ಸರ್ಟಿಫಿಕೇಟ್ ಸಿಗಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಮಲ್ಲೇಶ್ವರಂನ SRV ಥಿಯೇಟರ್​ನಲ್ಲಿ ಸಲಗ ಚಿತ್ರವನ್ನ ವೀಕ್ಷಿಸಿ ಸೆನ್ಸಾರ್ ಬೋರ್ಡ್ ಅಧಿಕಾರಿಗಳು, ಸಲಗಕ್ಕೆ ಯಾವುದೇ ಕಟ್ಸ್ ಇಲ್ಲದೇ 'ಎ ' ಸರ್ಟಿಫಿಕೇಟ್ ಕೊಟ್ಟಿದ್ದಾರೆ.




ಇನ್ನು ಈ ಹಿಂದೆಯೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಲಾಗಿತ್ತಾದರೂ ಸಲಗ ಸಿನಿಮಾ ರಿಲೀಸ್ ಆಗುವ ದಿನವೇ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ ಸಿನಿಮಾ ಸಹ ತೆರೆಕಾಣುವ ವಿಷಯ ಬಹಿರಂಗವಾಗಿತ್ತು. ಈ ಹಿನ್ನಲೆಯಲ್ಲಿ ಮತ್ತೆ ಹೊಸ ದಿನಾಂಕ ಪ್ರಕಟಿಬಹುದು ಅನ್ನೋ ನಿರೀಕ್ಷೆ ಪ್ರೇಕ್ಷಕರಲ್ಲಿತ್ತು. ಆದರೆ ಚಿತ್ರತಂಡ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಸಲಗ ಹಾಗೂ ಕೋಟಿಗೊಬ್ಬ 3 ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಅಕ್ಟೋಬರ್ 14ರಂದೇ ಸಿನಿಮಾ ರಿಲೀಸ್ ಮಾಡಲು ಎರಡೂ ಚಿತ್ರತಂಡಗಳ ಸಿದ್ಧತೆ ಮಾಡಿಕೊಂಡಿವೆ. ಇದು ಸ್ಯಾಂಡಲ್​ವುಡ್​ ಬಾಕ್ಸಾಫೀನ್​ನಲ್ಲಿ ಸ್ಟಾರ್ ವಾರ್ ಶುರು ಎಂಬಂತಾಗಿತ್ತು. ಆದರೆ ಈಗ ಕಿಚ್ಚ ಸುದೀಪ್ ಸಲಗ ಚಿತ್ರತಂಡಕ್ಕೆ ಶುಭಾಶಯ ಕೋರುವ ಮೂಲಕ ಸ್ಟಾರ್ ವಾರ್ ಗೆ ಅಂತ್ಯ ಹಾಡಿದ್ದರು.

ಇದನ್ನೂ ಓದಿ: Salaga: ದುಬಾರೆಯಲ್ಲಿ ಸ್ಯಾಂಡಲ್​ವುಡ್​ ಸಲಗ​: ಮಾವುತರ ಜತೆ ವಾಲಿಬಾಲ್​ ಆಡಿದ ದುನಿಯಾ ವಿಜಯ್​..!

ಕಿಚ್ಚ ಸುದೀಪ್ ಅವರು ಟ್ವಿಟ್ ಮೂಲಕ ಸಲಗ ವಿಜಯ್ ಗೆ ಶುಭಾಶಯ ಹೇಳಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಹಾಗೂ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ದುನಿಯಾ ವಿಜಯ್ ಅವರಿಗೆ ಶುಭವಾಗಲಿ. ಸ್ಯಾಂಡಲ್ವುಡ್ ನ ಸುದೀರ್ಘ ಪಯಣಕ್ಕೆ ಸಲಗ ರಿಲೀಸ್ ಮುನ್ನುಡಿಯಾಗಲಿ ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದರು.

ಇನ್ನು ಸಲಗ ಚಿತ್ರತಂಡ ಸಹ ಇದೇ ವಿಷಯವಾಗಿ ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಲಗ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಸಲಗ ಸಿನಿಮಾ ಅಕ್ಟೋಬರ್ 14 ರಂದು ತೆರೆ ಕಾಣಲಿದೆ. ಆ ದಿನವೇ ಸುದೀಪ್ ನಟನೆಯ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಲಿದೆ. ಇದು ಸ್ಟಾರ್ ವಾರ್ ಆಗೋದಿಲ್ಲ. ಸುದೀಪ್ ಅವರು ಮೊದಲಿನಿಂದಲೂ ನಮ್ಮ ತಂಡಕ್ಕೆ ಸಪೋರ್ಟಿವ್ ಆಗಿದ್ದಾರೆ. ಮೊದಲು ಸಲಗ ಸಿನಿಮಾನೇ ರಿಲೀಸಾಗಬೇಕು. 15 ದಿನಗಳು ಅಂತರ ನಮಗೆ ಬೇಕಿತ್ತು. ಆ ನಿಟ್ಟಿನಲ್ಲೇ ನಿರ್ಮಾಪಕರ ನಡುವೆ ಪ್ಲಾನ್ ಆಗಿತ್ತು. ಈ ಬಗ್ಗೆ ನಿರ್ಮಾಪಕ ಸೂರಪ್ಪಬಾಬು ನಮಗೆ ಹೇಳಿದ್ರು. ಆದರೆ ಈಗ ಅವರೇ ಡೇಟ್ ಅನೌನ್ಸ್ ಮಾಡಿದ್ದಾರೆ. ನಮ್ಮ ಸಿನಿಮಾ 14ನೇ ತಾರೀಖು ರಿಲೀಸಾಗೋದು ಪಕ್ಕಾ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Duniya Vijay: ಕೊರೋನಾದಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್​ ತಾಯಿ ವಿಧಿವಶ..!

ಸಲಗ ಸಿನಿಮಾದ ನಿರ್ದೇಶಕ ಹಾಗೂ ನಟ ದುನಿಯಾ ವಿಜಯ್ ಮಾತನಾಡಿ, ಇದು ಸಹೋದರರ ಸವಾಲ್ ಅಲ್ಲ, ಇದು ಸಹೋದರರ ಪ್ರೀತಿ. ಸುದೀಪ್ ನನ್ನ ಜೊತೆ ಒಡನಾಟ ಬಹಳ ಚೆನ್ನಾಗಿದೆ. ಫಸ್ಟ್ ಡೇ ಸಲಗ ಸಿನಿಮಾ ನೋಡೋದಾಗಿ ಸುದೀಪ್ ಹೇಳಿದ್ದರು. ಸುದೀಪ್​ಗೆ ಒಳ್ಳೆಯ ಮನಸ್ಸಿದೆ. ಮಾಧ್ಯಮದವರ ಸಹಕಾರ ಸಾಕಷ್ಟಿದೆ. ಮತ್ತೆ ಕೊರೋನಾ ಭಯ ಖಂಡಿತವಾಗಿಯೂ ಇಲ್ಲ. ಸಿಂಗಲ್ ಡೋಸ್ ವ್ಯಾಕ್ಸಿನ್ ತೆಗೆದುಕೊಂಡವರು ದಯವಿಟ್ಟು ಬರಲೇಬೇಡಿ. ಎಲ್ಲರೂ ದಯವಿಟ್ಟು ಡಬಲ್ ವ್ಯಾಕ್ಸಿನ್ ಹಾಕಿಸಿಕೊಂಡೇ ಬನ್ನಿ ಎಂದು ಮನವಿ ಮಾಡಿದ್ದರು. ಸಲಗ ಸಿನಿಮಾದಲ್ಲಿ ಡಾಲಿ ಧನಂಜಯ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Published by:Anitha E
First published: