• Home
 • »
 • News
 • »
 • entertainment
 • »
 • Duniya Vijay: ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ! ಹಳೆ ಪ್ರಕರಣಕ್ಕೆ ಮರುಜೀವ

Duniya Vijay: ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ! ಹಳೆ ಪ್ರಕರಣಕ್ಕೆ ಮರುಜೀವ

ದುನಿಯಾ ವಿಜಯ್

ದುನಿಯಾ ವಿಜಯ್

ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ಸಂಬಂಧಿಸಿದ ಕೇಸ್ ಈಗ ರೀ ಓಪನ್ ಆಗಿದೆ. ಪಾನಿಪುರಿ ಕಿಟ್ಟಿ ಹಾಗೂ ಆತನ ಸಹೋದರ ಮಾರುತಿ ಗೌಡ ಮೇಲೆ FIR ದಾಖಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 • News18 Kannada
 • 2-MIN READ
 • Last Updated :
 • Bangalore, India
 • Share this:

ಸ್ಯಾಂಡಲ್​ವುಡ್ ನಟ ದುನಿಯಾ ವಿಜಯ್ (Duniya Vijay) ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆ ಪ್ರಕರಣಕ್ಕೆ ಈಗ ಮತ್ತೊಮ್ಮೆ ಜೀವ ಬಂದಿದೆ. ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ  (Panipuri Kitti) ಮೇಲೆ FIR ದಾಖಲಿಸಲಾಗಿದ್ದು ನಟ ದುನಿಯಾ ವಿಜಯ್ ಅವರು ದೂರು ಕೊಟ್ಟಿದ್ದರು. 2018 ರ ಪ್ರಕರಣ ಮತ್ತೆ ರೀ ಓಪನ್ (Re-open) ಆಗಿದ್ದು ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹೈಕೋರ್ಟ್ (Highcourt) ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ FIR ದಾಖಲಿಸಲಾಗಿದೆ. 23/09/2018 ರಂದು ನಡೆದಿದ್ದ ಗಲಾಟೆ ಪ್ರಕರಣ ಭಾರೀ ಸುದ್ದಿಯಾಗಿತ್ತು. ಎರಡೂ ತಂಡಗಳೂ (Team) ಪರಸ್ಪರ ಕೇಸ್ ದಾಖಲಿಸಿ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು.


ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಈ ಘಟನೆ ನಡೆದಿತ್ತು. ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಪಾನಿಪುರಿ ಕಿಟ್ಟಿ ಅವರ ಟೀಂ ಹಾಗೂ ದುನಿಯಾ ವಿಜಯ್ ಟೀಂಗೆ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ‌ ಗೌಡ ಅವರನ್ನು ವಿಜಯ್ ಅವರು ಕಾರಲ್ಲಿ ಕರೆದೊಯ್ದಿದ್ದರು. ಕಾರಿನಲ್ಲಿ ಮಾರುತಿಗೆ ಹಿಗ್ಗಮುಗ್ಗ ಥಳಿಸಿದ್ದ ವಿಜಯ್ ಅವರ ತಂಡ ಅವರ ಮೇಲೆ ಹಲ್ಲೆ ಮಾಡಿತ್ತು.
ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ಮಾರುತಿ ಗೌಡ ಅವರನ್ನು ವಾಪಸ್ ಕರೆತಂದು ಬಿಡಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಎರಡೂ ಕಡೆಯಿಂದಲೂ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು.


Kannada Actor Duniya Vijay Again loose his Weight
ನಯಾ ಲುಕ್ ಅಲ್ಲಿ ವಿಜಯ್ ಮಿಂಚಿಂಗ್


ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ದಾರೆ ಎಂದು‌ ವಿಜಯ್ ದೂರು ನೀಡಿದ್ದರು. ಪಾನಿಪುರಿ ಕಿಟ್ಟಿ ಅವರು ವಿಜಯ್ ಮೇಲೆ ಸೆಕ್ಷನ್ 307ರ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್ನಲ್ಲಿ ನಡೆಯುತ್ತಿದೆ.


ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಕ್ಲೋಸ್ ಮಾಡಲಾಗಿತ್ತು. ಸಾಕ್ಷ್ಯಗಳ ಕೊರತೆಯಿಂದ ಈ ಪ್ರಕರಣ ಕ್ಲೋಸ್ ಮಾಡಲಾಗಿತ್ತು. ಸದ್ಯ ಇನ್ನೊಮ್ಮೆ ಕೇಸ್ ಮಾಡಿ, ತನಿಖೆ ನಡೆಸಲು ಕೋರ್ಟ್ ಆದೇಶ ಕೊಟ್ಟಿದೆ. ಕೋರ್ಟ್ ಸೂಚನೆ ಮೇಲೆ ಪಾನಿಪುರಿ ಕಿಟ್ಟಿ ಹಾಗೂ ಆತನ ಸಹೋದರ ಮಾರುತಿ ಗೌಡ ಮೇಲೆ FIR ದಾಖಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


ಇದನ್ನೂ ಓದಿ: Aryan Khan: ಶಾರುಖ್ ಮಗನ ಹೊಸ ಬ್ಯುಸಿನೆಸ್! ವೋಡ್ಕಾ ಬ್ರ್ಯಾಂಡ್ ಲಾಂಚ್ ಮಾಡ್ತಾರಂತೆ ಆರ್ಯನ್


ಜಿಮ್ ಟ್ರೈನರ್ ಆಗಿದ್ದ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಮಾರುತಿ ಗೌಡ. ಅವನನ್ನು ವಿಜಯ್ ಕಾರಿನಲ್ಲಿ ಕರೆದೊಯ್ದು ಜಹಲ್ಲೆ ಮಾಡಿದ್ದ ವಿಚಾರ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವಿಚಾರವಾಗಿ ದುನಿಯಾ ವಿಜಯ್ ಅವರು ಎದುರು ಸಿಕ್ಕಾಗ ಪಾನಿಪುರಿ ಕಿಟ್ಟಿ ಪೊಲೀಸರ ಎದುರಲ್ಲೇ ದುನಿಯಾ ನಟನಿಗೆ ಡಿಚ್ಚಿ ಹೊಡೆದಿದ್ದರು. ಆದರೆ ನಟನಾಗಿ ಗುರುತಿಸಿಕೊಂಡು ವ್ಯಕ್ತಿಯೊಬ್ಬನನ್ನು ಅಪಹರಿಸಿ ಹಲ್ಲೆ ನಡೆಸಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು.


ಕಿಡ್ನಾಪ್ ಆರೋಪದ ಮೇಲೆ ವಿಜಯ್ ಮತ್ತು ಇತರ ಮೂವರನ್ನು ಪೊಲೀಸರು ಬಂಧಿಸಿದ್ದರು. ನಟ, ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ, ಮಾರುತಿ ಗೌಡ ಮತ್ತು ಇತರರ ವಿರುದ್ಧ ಪ್ರತಿದೂರು ದಾಖಲಿಸಿದ್ದರು. ಆದರೂ ಕಿಟ್ಟಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು, ಅದು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಿತು. ನಟ ಈ ಆದೇಶವನ್ನು ಪ್ರಶ್ನಿಸಿದ್ದರು. ಇತ್ತೀಚೆಗೆ ಮತ್ತೆ ಎಫ್‌ಐಆರ್ ದಾಖಲಿಸಲು ಹೈಕೋರ್ಟ್ ಸೂಚಿಸಿದೆ. ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ನಾವು ಕಿಟ್ಟಿ, ಗೌಡ ಮತ್ತು ಇತರರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Published by:Divya D
First published: