HOME » NEWS » Entertainment » DUNIYA VIJAY PLAYING SILENT SUNILA CHARACTER IN SALAGA MOVIE

ರೌಡಿ ಸೈಲೆಂಟ್ ಸುನೀಲನಿಗೂ ಸಲಗಕ್ಕೂ ಲಿಂಕ್: ವೈರಲ್ ಆಗಿದೆ ಡಾಲಿ ಧನಂಜಯ್-ದುನಿಯಾ ವಿಜಯ್ ಫೋಟೋ

ಇದೀಗ ದುನಿಯಾ ಸೂರಿಯೊಂದಿಗೆ ಟಗರು ಚಿತ್ರದಲ್ಲಿ ಕೆಲಸ ಮಾಡಿದ ತಂಡವೇ ಸಲಗದಲ್ಲೂ ಒಟ್ಟಾಗಿದೆ. ಹೀಗಾಗಿ ದುನಿಮಾ ವಿಜಯ್ ನಿರ್ದೇಶನದ ಸಲಗ ಚಿತ್ರಕ್ಕೂ ಸೈಲೆಂಟ್ ಸುನೀಲನ ತೆರೆಮರೆಯ ಕಥೆಗೂ ಲಿಂಕ್ ಇದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

zahir | news18
Updated:May 31, 2019, 7:47 AM IST
ರೌಡಿ ಸೈಲೆಂಟ್ ಸುನೀಲನಿಗೂ ಸಲಗಕ್ಕೂ ಲಿಂಕ್: ವೈರಲ್ ಆಗಿದೆ ಡಾಲಿ ಧನಂಜಯ್-ದುನಿಯಾ ವಿಜಯ್ ಫೋಟೋ
ಒಂದು ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಲು ಇದಕ್ಕಿಂತ ಹೆಚ್ಚು ಕಸರತ್ತು ಮಾಡಬೇಕಿಲ್ಲ. ಹೀಗಾಗಿಯೇ ಬ್ಲ್ಯಾಕ್ ಕೋಬ್ರಾ ಫ್ಯಾನ್ಸ್ ಮತ್ತು ಡಾಲಿ ಅಭಿಮಾನಿಗಳು​ ಸಲಗನಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದರು.
  • News18
  • Last Updated: May 31, 2019, 7:47 AM IST
  • Share this:
ದುನಿಯಾ ವಿಜಯ್ ನಟಿಸಿ ನಿರ್ದೇಶಿಸುತ್ತಿರುವ 'ಸಲಗ' ಚಿತ್ರ ಆರಂಭದಲ್ಲೇ ಘೀಳಿಡಲಾರಂಭಿಸಿದೆ. ಚಿತ್ರದ ಫಸ್ಟ್​ ಮೇಕಿಂಗ್​ ಇದೀಗ ಭಾರೀ ಚರ್ಚೆಯೊಂದನ್ನು ಹುಟ್ಟು ಹಾಕಿದೆ. ಚಿತ್ರದಲ್ಲಿ 'ಡಾಲಿ' ಧನಂಜಯ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ, ದುನಿಯಾ ವಿಜಯ್ ಲೋಕಲ್ ರೌಡಿಯಾಗಿ ಅಬ್ಬರಿಸಲಿರುವುದು ಗೊತ್ತಿರುವ ವಿಷಯ. ಇದೀಗ ಇವರಿಬ್ಬರು ಕಾಣಿಸಿರುವ ಸನ್ನಿವೇಶದ ಫೋಟೋವೊಂದು 'ಸಲಗ' ಚಿತ್ರಕ್ಕೂ ರೌಡಿ ಶೀಟರ್​ ಸೈಲೆಂಟ್ ಸುನೀಲನ ಕಥೆಗೂ ಲಿಂಕ್ ಇದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಚಿತ್ರದ ಮೇಕಿಂಗ್ ಫೋಟೋವೊಂದು ರಿವೀಲ್ ಆಗಿದ್ದು, ಅದರಲ್ಲಿ ವಿಜಯ್‌ ಪೊಲೀಸ್‌ ಠಾಣೆ ಮುಂದೆ ನಿಂತು, ಖಾಕಿದಾರಿ 'ಡಾಲಿ'ಯನ್ನು ಗುರಾಯಿಸಿ ನೋಡುತ್ತಿದ್ದಾರೆ. ಇಂತಹದ್ದೇ ಸೀನ್​ವೊಂದು ಈ ಹಿಂದೆ ಎಲ್ಲೋ ನೋಡಿದ್ದೀನಿ ನೀವಂದುಕೊಂಡರೆ ನಿಮ್ಮ ಊಹೆ ಸರಿಯಾಗಿದೆ.

ಏಕೆಂದರೆ ಈ ಹಿಂದೆ ಲೋಕಸಭಾ ಚುನಾವಣೆಯ ಮುಂಜಾಗ್ರತೆಯ ಕ್ರಮವಾಗಿ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಬೆಂಗಳೂರಿನ ರೌಡಿ ಶೀಟರ್ ಗಳನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಈ ಖಡಕ್ ವಾರ್ನಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದರಲ್ಲೂ ರೌಡಿ ಶೀಟರ್ ಸೈಲೆಂಟ್ ಸುನೀಲ ಮತ್ತು ಸಿಸಿಬಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಡುವೆ ನಡೆದ ಸಂಭಾಷಣೆಯಂತೂ ನೋಡುಗರಿಗೆ ಹೊಸ ಅನುಭವ ನೀಡಿತ್ತು.

ಈ ವಿಡಿಯೋದಲ್ಲಿ ಸೈಲೆಂಟ್ ಸುನೀಲ ಪೊಲೀಸ್ ಆಯುಕ್ತರನ್ನು ಗುರಾಯಿಸಿಕೊಂಡು ನಿಂತಿದ್ದರು. ಈ ವೇಳೆ ಗದರಿಸಿದ ಅಲೋಕ್ ಕುಮಾರ್ ‘ಏನೋ ಗುರಾಯಿಸ್ತಿದ್ದೀಯಾ, ಕಣ್ಣು ಕೆಳಗೆ ಇಳಿಸೋ..ಎಂದೆಲ್ಲಾ ಚಳಿ ಬಿಡಿಸಿದ್ದರು. ಇದೀಗ ವೈರಲ್ ಆದ ಫೋಟೋ ಕೂಡ ಅದೇ ಮಾದರಿಯಲ್ಲಿದೆ. ಇಲ್ಲಿ ಅಲೋಕ್ ಕುಮಾರ್ ಜಾಗದಲ್ಲಿ ಡಾಲಿ ಧನಂಜಯ್ ಇದ್ದರೆ ಸೈಲೆಂಟ್ ಸುನೀಲನ ಸ್ಥಾನದಲ್ಲಿ ದುನಿಯಾ ವಿಜಯ್ ನಿಂತಿದ್ದಾರೆ. ಹೀಗಾಗಿ ಚಿತ್ರದ ಗುರಾಯಿಸುವಿಕೆ ದೃಶ್ಯಕ್ಕೂ ಸೈಲೆಂಟ್ ಸುನೀಲನ ನಿಜಜೀವನಕ್ಕೂ ಎಲ್ಲೋ ಲಿಂಕ್ ಇದೆ ಎನ್ನಲಾಗುತ್ತಿದೆ.

ಮೊದಲ ಚಿತ್ರ: ಸೈಲೆಂಟ್ ಸುನೀಲ- ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್,  ಎರಡನೇ ಚಿತ್ತ: ದುನಿಯಾ ವಿಜಯ್-ಡಾಲಿ ಧನಂಜಯ್


ಈ ಹಿಂದೊಮ್ಮೆ ಸೈಲೆಂಟ್ ಸುನೀಲನ ಕಥೆಯನ್ನು ದುನಿಯಾ ಸೂರಿ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ ಸಣ್ಣದೊಂದು ಟೀಸರ್​ ಅನ್ನು ಕೂಡ ಬಿಡುಗಡೆ ಮಾಡಿದ್ದರು. ಆದರೆ ಆ ಬಳಿಕ ಸುನೀಲನ ಕಥೆಯ ಬಗ್ಗೆ ಯಾವುದೇ ಸದ್ದು ಗದ್ದಲ ಇರಲಿಲ್ಲ.

ಇದೀಗ ದುನಿಯಾ ಸೂರಿಯೊಂದಿಗೆ 'ಟಗರು' ಚಿತ್ರದಲ್ಲಿ ಕೆಲಸ ಮಾಡಿದ ತಂಡವೇ 'ಸಲಗ'ದಲ್ಲೂ ಒಟ್ಟಾಗಿದೆ. ಹೀಗಾಗಿ ದುನಿಮಾ ವಿಜಯ್ ನಿರ್ದೇಶನದ 'ಸಲಗ' ಚಿತ್ರಕ್ಕೂ ಸೈಲೆಂಟ್ ಸುನೀಲನ ತೆರೆಮರೆಯ ಕಥೆಗೂ ಲಿಂಕ್ ಇದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಈ ಬಗ್ಗೆ ದುನಿಯಾ ವಿಜಯ್ ಅವರನ್ನು ಕೇಳಿದರೆ ಅವರೇಳಿದ್ದು ಯಾವುದೇ ಸಂಬಂಧವಿಲ್ಲ ಎಂಬ ಉತ್ತರ. ಇದು ಭೂಗತ ಜಗತ್ತಿನ ಕಥೆ ಹೌದು, ಆದರೆ ಸುನೀಲನ ಕಥೆಯಲ್ಲ ಎಂದು ವಿಜಯ್ ಹೇಳಿದ್ದಾರೆ. ಸದ್ಯ ಗಾಂಧಿನಗರದಲ್ಲಿ 'ಸಲಗ' ಮತ್ತು ಸೈಲೆಂಟ್​ ಸುನೀಲ ಹೆಸರುಗಳು ಜತೆಯಲ್ಲಿಯೇ ಓಡಾಡುತ್ತಿವೆ. ಇದರಲ್ಲಿ ನಿಜವಾಗ್ಲೂ ಸತ್ಯವಿದೆಯೇ ಎಂಬುದನ್ನು ತಿಳಿಯಲು ಪ್ರೇಕ್ಷಕರು ಚಿತ್ರ ಬಿಡುಗಡೆವರೆಗೆ ಕಾಯಬೇಕಿದೆ.

First published: May 31, 2019, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories