Duniya Vijay: ಕೊನೆಗೂ ದುನಿಯಾ ವಿಜಯ್​ ತೆಲುಗು ಸಿನಿಮಾದ ಲುಕ್​ ರಿವೀಲ್​.. ಅಬ್ಬರಿಸೋಕೆ ರೆಡಿಯಾದ ರೆಡ್ಡಿಗಾರು!

ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ವಿಜಯ್​ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಿನಿಮಾ ಸೆಟ್​ಗೆ ಬ್ಲ್ಯಾಕ್​ ಕೋಬ್ರಾ ಎಂಟ್ರಿಯಾಗಿದ್ದರು. ಇದೀಗ ಆ ಸಿನಿಮಾದಲ್ಲಿ ದುನಿಯಾ ವಿಜಯ್​ ಯಾವ ಪಾತ್ರ ಮಾಡುತ್ತಿದ್ದಾರೆ ಅಂತ ರಿವೀಲ್​ ಆಗಿದೆ. ಈ ಲುಕ್​ ನೋಡಿ ದುನಿಯಾ ವಿಜಯ್​ ಫ್ಯಾನ್ಸ್​ ಫುಲ್​ ದಿಲ್​ಖುಷ್​ ಆಗಿದ್ದಾರೆ. 

ದುನಿಯಾ ವಿಜಯ್

ದುನಿಯಾ ವಿಜಯ್

  • Share this:
ದುನಿಯಾ ವಿಜಯ್(Duniya Vijay)​..  ದುನಿಯಾ ಸಿನಿಮಾ ಮೂಲಕ ನಾಯಕನಟನಾಗಿ ಎಂಟ್ರಿಯಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ‘ಸಲಗ’(Salaga) ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದವರು. ಸಲಗ ಸಿನಿಮಾದಲ್ಲಿ ನಟನೆ ಜೊತೆ ನಿರ್ದೇಶಕ(Director) ಜವಾಬ್ದಾರಿ ಹೊತ್ತು ದುನಿಯಾ ವಿಜಯ್​ ಸಕ್ಸಸ್​ ಆಗಿದ್ದಾರೆ. ಸ್ಯಾಂಡಲ್​ವುಡ್​(Sandalwood)ನಲ್ಲಿ ಕರಿಚಿರತೆ ಸಾಮರ್ಥ್ಯ ಏನು ಎಂಬುದನ್ನು ಸಲಗ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದಾರೆ. ಸಲಗ ಬಳಿಕ ‘ಭೀಮ’(Bhima) ಸಿನಿಮಾದಲ್ಲಿ ನಟಿಸುವ ಜೊತೆಗೆ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ ದುನಿಯಾ ವಿಜಯ್​. ಇದರ ಜೊತೆಗೆ ನಂದಮೂರಿ ಬಾಲಕೃಷ್ಣ(Nandamuri Balakrishna) ಸಿನಿಮಾದಲ್ಲಿ ವಿಜಯ್​ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಿನಿಮಾ ಸೆಟ್​ಗೆ ಬ್ಲ್ಯಾಕ್​ ಕೋಬ್ರಾ(Black Cobra) ಎಂಟ್ರಿಯಾಗಿದ್ದರು. ಇದೀಗ ಆ ಸಿನಿಮಾದಲ್ಲಿ ದುನಿಯಾ ವಿಜಯ್​ ಯಾವ ಪಾತ್ರ ಮಾಡುತ್ತಿದ್ದಾರೆ ಅಂತ ರಿವೀಲ್​ ಆಗಿದೆ. ಈ ಲುಕ್​ ನೋಡಿ ದುನಿಯಾ ವಿಜಯ್​ ಫ್ಯಾನ್ಸ್​ ಫುಲ್​ ದಿಲ್​ಖುಷ್​ ಆಗಿದ್ದಾರೆ. 

ಮುಸಲಿ ಮಡುಗು ಪ್ರತಾಪ್ ರೆಡ್ಡಿಯಾದ ದುನಿಯಾ ವಿಜಯ್​!

ಹೌದು, ಬಾಲಯ್ಯ ಅಭಿನಯದ 107ನೇ ಸಿನಿಮಾ ಕನ್ನಡದ ಮಫ್ತಿ ರಿಮೇಕ್​ ಅಂತ ಹೇಳಲಾಗುತ್ತಿತ್ತು. ಬಾಲಯ್ಯ ಅವರ ಲುಕ್​ ಮಫ್ತಿ ಸಿನಿಮಾದಲ್ಲಿ ಶಿವಣ್ಣ ಅಭಿನಯಿಸಿದ್ದ ಬೈರತಿ ರಣಗಲ್ಲು ಪಾತ್ರದಂತೆಯೇ ಕಾಣಿಸಿಕೊಂಡಿದ್ದರು. ಇದೀಗ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಕೊನೆಗೂ ರಿವೀಲ್ ಆಗಿದೆ. ದುನಿಯಾ ವಿಜಯ್​ ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎಂಬ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಮೊದಲಿನಿಂದಲೂ ಖಡಕ್​ ವಿಲನ್​ ರೋಲ್​ನಲ್ಲಿ ದುನಿಯಾ ವಿಜಯ್ ನಟಿಸುತ್ತಾರೆ ಅಂತ ಹೇಳಲಾಗುತ್ತಿತ್ತು. ಇದೀಗ ಅದು ಕನ್ಫರ್ಮ್ ಆಗಿದೆ.

ಧಮ್ ಎಳೆಯುತ್ತಾ ಖಡಕ್ ಲುಕ್​ ಕೊಟ್ಟ ವಿಜಯ್​!

ಹೌದು, ಚಿತ್ರತಂಡ ರಿಲೀಸ್​ ಮಾಡಿರುವ ಪೋಸ್ಟರ್​​ನಲ್ಲಿ ದುನಿಯಾ ವಿಜಯ್​ ಖಡಕ್​ ಆಗಿ ಕಾಣಿಸಿಕೊಂಡಿದ್ದಾರೆ. ಧಮ್​ ಎಳೆಯುತ್ತಾ ಖಡಕ್​ ಲುಕ್​ನಲ್ಲಿ ದುನಿಯಾ ವಿಜಯ್​ ಪೋಸ್​ ಕೊಟ್ಟಿದ್ದಾರೆ. ಟೈಗರ್​ ಪ್ರಭಾಕರ್​ರಂತೆ ಮಾಸ್(Mass)​ ಸಿನಿಮಾಗಳಿಗೆ ದುನಿಯಾ ವಿಜಯ್ ಟ್ರೇಡ್​ ಮಾರ್ಕ್ ಆದವರು. ಕನ್ನಡದಲ್ಲಿ ತಮ್ಮದೇ ಆದ ಟ್ರೆಂಡ್​ ಸೃಷ್ಟಿಸಿರುವ ದುನಿಯಾ ವಿಜಯ್​, ಟಾಲಿವುಡ್​ನಲ್ಲಿ ತಮ್ಮ ಸಾಮರ್ಥ್ಯ ತೋರಲು ಮುಂದಾಗಿದ್ದಾರೆ.

‘ಸಲಗ’ವನ್ನೇ ಗೆದ್ದು ‘ಭೀಮ'ನಾದ ವಿಜಯ್!

ದುನಿಯಾ ವಿಜಯ್ ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ಶಿವರಾತ್ರಿ ದಿನವೇ ದುನಿಯಾ ವಿಜಯ್ ತಮ್ಮ ಹೊಸ ಸಿನಿಮಾದ ಹೆಸರು ಘೋಷಿಸಿದ್ದಾರೆ. ತಮ್ಮ ಹೊಸ ಕನಸಿನ ಪ್ರಾಜೆಕ್ಟ್‌ಗೆ ‘ಭೀಮ’ ಅಂತ ಹೆಸರಿಟ್ಟಿದ್ದಾರೆ. ಕೆಣಕದಿದ್ರೆ ಕ್ಷೇಮ ಅಂತ ಅಡಿಬರಹ ಇಟ್ಟು, ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: 'ಸಲಗ'ವನ್ನೇ ಗೆದ್ದು ‘ಭೀಮ'ನಾದ ವಿಜಯ್! ಹುಷಾರ್.. ಇವರನ್ನ ಕೆಣಕದಿದ್ರೆ ನಿಮಗೇ ಕ್ಷೇಮ

ತೆಲುಗು ಸಿನಿಮಾ ಶೂಟಿಂಗ್​ ಬಳಿಕ ಭೀಮ ಚಿತ್ರದಲ್ಲಿ ಬ್ಯುಸಿ!

ಭೀಮ ಕುರುಕ್ಷೇತ್ರದ ತುಂಬ ಹೋರಾಟವನ್ನೇ ಮಾಡುತ್ತಿರುತ್ತಾನೆ. ಗುರುಗಳನ್ನು ನಂಬಿ ತನ್ನ ಕೆಲಸ ಮಾಡುತ್ತಾನೆ. ವಿದ್ಯಾವಂತ, ತಾಳ್ಮೆ ಇರುವಂಥವನು. ಆದರೆ ಅವನನ್ನು ಕೆಣಕಿದರೆ ಮಾತ್ರ ಸುಮ್ಮನಿರುವುದಿಲ್ಲ. ಈ ಸಿನಿಮಾದಲ್ಲಿಯೂ ನಾಯಕನಿಗೆ ಭೀಮನಂತಹ ಶಕ್ತಿ, ಯುಕ್ತಿ. ಹೋರಾಟದ ಗುಣದ ಜತೆಗೆ ತಾಳ್ಮೆಯೂ ಇರುತ್ತದೆ. ಹಾಗಾಗಿ ಈ ಸಿನಿಮಾಗೆ ಈ ಟೈಟಲ್‌ ಹೊಂದಿಕೆಯಾಗುತ್ತದೆ ಎಂದು ಅನ್ನಿಸಿದ್ದರಿಂದ ಇಟ್ಟಿದ್ದೇನೆ ಅಂತ ವಿಜಯ್ ಹೇಳಿದ್ದಾರೆ

ಇದನ್ನೂ ಓದಿ:  ಟಾಲಿವುಡ್​ನಲ್ಲೂ ಅಬ್ಬರಿಸೋಕೆ ರೆಡಿಯಾದ ರಿಷಬ್​ ಶೆಟ್ಟಿ! ತೆಲುಗು ಸಿನಿಮಾದ ಟ್ರೈಲರ್​ ರಿಲೀಸ್​

ತೆಲುಗು ಸಿನಿಮಾದ ಶೂಟಿಂಗ್​ ಬಳಿಕ ದುನಿಯಾ ವಿಜಯ್​ ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಡಲಿದ್ದಾರೆ. ಕನ್ನಡ ಸಿನಿರಸಿಕರಿಗೆ ಈಗಾಗಲೇ ‘ಸಲಗ’ನ ಆರ್ಭಟ ತೋರಿಸಿ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ‘ಭೀಮ’ನಾಗಿ ಯಾವ ರೀತಿ ಕಮಾಲ್​ ಮಾಡುತ್ತಾರೆ ಅಂತ ಕಾದು ನೋಡಬೇಕಿದೆ.
Published by:Vasudeva M
First published: