Duniya Vijay: ಬಾಲಯ್ಯನ ಎದುರು ತೊಡೆ ತಟ್ಟಲಿರುವ ಸ್ಯಾಂಡಲ್​ವುಡ್​ `ಸಲಗ’: ವಿಲನ್​ ಲುಕ್​ ರಿವೀಲ್​!

ಸಲಗ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ವಿಜಯ್ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ.

ದುನಿಯಾ ವಿಜಯ್​, ಬಾಲಯ್ಯ

ದುನಿಯಾ ವಿಜಯ್​, ಬಾಲಯ್ಯ

  • Share this:
ದುನಿಯಾ ವಿಜಯ್(Duniya Vijay)​..  ದುನಿಯಾ ಮೂಲಕ ನಾಯಕನಟನಾಗಿ ಎಂಟ್ರಿಯಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ‘ಸಲಗ’(Salaga) ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದವರು. ಸಲಗ ಸಿನಿಮಾದಲ್ಲಿ ನಟನೆ ಜೊತೆ ನಿರ್ದೇಶಕ(Director) ಜವಾಬ್ದಾರಿ ಹೊತ್ತು ದುನಿಯಾ ವಿಜಯ್​ ಸಕ್ಸಸ್​ ಆಗಿದ್ದಾರೆ. ಸ್ಯಾಂಡಲ್​ವುಡ್​(Sandalwood)ನಲ್ಲಿ ಕರಿಚಿರತೆ ಸಾಮರ್ಥ್ಯ ಏನು ಎಂಬುದನ್ನು ಸಲಗ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದಾರೆ. ಸಲಗ ಬಳಿಕ ದುನಿಯಾ ವಿಜಯ್‌ಗೆ ಮತ್ತೊಂದು ಅದೃಷ್ಟದ ಬಾಗಿಲು ತೆರೆದಿದೆ. ದುನಿಯಾ ವಿಜಯ್‌ ತೆಲುಗಿ(Telugu)ಗೆ ಎಂಟ್ರಿ ಕೊಡ್ತಿದ್ದಾರೆ. ಈ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿದೆ. ದುನಿಯಾ ವಿಜಯ್ ಸೈಡ್ ಆರ್ಟಿಸ್ಟ್​, ಜೂನಿಯರ್ ಆರ್ಟಿಸ್ಟ್​, ಫೈಟರ್​ ಆಗಿ ಸ್ಯಾಂಡಲ್​ವುಡ್​ನಲ್ಲಿ ನೆಲೆ ಕಂಡುಕೊಳ್ಳಲು ಹೋರಾಟ ನಡೆಸಿದವರು. ಟೈಗರ್​ ಪ್ರಭಾಕರ್​ರಂತೆ ಮಾಸ್(Mass)​ ಸಿನಿಮಾಗಳಿಗೆ ದುನಿಯಾ ವಿಜಯ್ ಟ್ರೇಡ್​ ಮಾರ್ಕ್ ಆದವರು. ಸಲಗ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸೆಕಂಡ್​ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಇದೀಗ ಹೊಸ ವಿಚಾರ ಏನಪ್ಪ ಅಂದರೆ, ದುನಿಯಾ ವಿಜಯ್​ ಟಾಲಿವುಡ್(Tollywood)​ ಅಖಂಡ(Akhanda)ನ ವಿರುದ್ಧ ತೊಡೆ ತಟ್ಟಲಿದ್ದಾರೆ.

ಬಾಲಯ್ಯನ ಎದುರು ದುನಿಯಾ ವಿಜಯ್​!

ಸಲಗ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ವಿಜಯ್ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್​ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ? ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದೆ. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ದುನಿಯಾ ವಿಜಯ್​ ಅವರ ಮುಂದಿನ ಟಾಲಿವುಡ್ ಸಿನಿಮಾದ ಲುಕ್​ ರಿವೀಲ್​ ಆಗಿದೆ. ಕರಿಚಿರತೆ ನ್ಯೂ ಲುಕ್​ ಕಂಡು ಫ್ಯಾನ್ಸ್​  ಫುಲ್​ ಥ್ರಿಲ್​ ಆಗಿದ್ದಾರೆ.



ಇದನ್ನು ಓದಿ: ಫಸ್ಟ್​ ಟೈಂ ಜ್ಯೋತಿಷಿ ಪಾತ್ರದಲ್ಲಿ ಪ್ರಭಾಸ್​: `ಟೈಟಾನಿಕ್​’ ಸಿನಿಮಾ ನೆನಪಿಸಿದ ರಾಧೆ-ಶ್ಯಾಮ್​ ಟ್ರೈಲರ್​!

ಬಿಳಿ ಗಡ್ಡ, ಮೀಸೆ ಬಿಟ್ಟ ‘ಸಲಗ’!

ನಟ ದುನಿಯಾ ವಿಜಯ್‌ ಅವರು ಇತ್ತೀಚೆಗೆ ಬಡವ ರಾಸ್ಕಲ್ ಚಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಜಯ್‌ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ದುನಿಯಾ ವಿಜಯ್‌ ಲುಕ್‌ ಸಿಕ್ಕಾಪಟ್ಟೆ ಬದಲಾಗಿದೆ. ದುನಿಯಾ ವಿಜಯ್‌ ಉದ್ದನೆಯ ಬಿಳಿ ಗಡ್ಡ, ಮೀಸೆ ಬಿಟ್ಟಿದ್ದಾರೆ. ಈ ಲುಕ್‌ ಅವರು ತೆಲುಗು ಚಿತ್ರಕ್ಕಾಗಿ ಮಾಡಿಕೊಂಡಿರುವುದು ಎಂದು ಎನ್ನಲಾಗಿದೆ. ಈ ಹಿಂದೆ ಮಾಸ್ತಿಗುಡಿ ಚಿತ್ರದಲ್ಲಿ ವಯಸ್ಸಾದವರ ಪಾತ್ರಕ್ಕಾಗಿ ದುನಿಯಾ ವಿಜಯ್​ ಬಿಳಿ ಗಡ್ಡ ಮೀಸಿ ಬಿಟ್ಟಿದ್ದರು. ಆದರೆ ಬಾರಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿದ್ದಾರೆ. ಇದು ಪಕ್ಕಾ ಆ ಪಾತ್ರಕ್ಕೆ ದುನಿಯಾ ವಿಜಯ್​ ಹೀಗೆ ರೆಡಿಯಾಗುತ್ತಿದ್ದಾರೆ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.



ಇದನ್ನು ಓದಿ: KGF 2 ಸಿನಿಮಾದ ಶೂಟಿಂಗ್​ ಕಂಪ್ಲೀಟ್​: 2016ರಲ್ಲಿ ಸಹಿ..ಇಂದು ಪ್ಯಾಕಪ್ ಎಂದ ಶ್ರೀನಿಧಿ ಶೆಟ್ಟಿ!

 ಖಳನಾಯಕನ ಪಾತ್ರದಲ್ಲಿ ವಿಜಯ್​ ಅಬ್ಬರ!

ಈ ಸಿನಿಮಾ ದುನಿಯಾ ವಿಜಯ್ ಸಿನಿಮಾ ಜರ್ನಿಯಲ್ಲಿ ವಿಭಿನ್ನ ಪ್ರಯೋಗ ಅಂತ ಹೇಳಬಹುದು. ಯಾಕೆಂದರೆ ವಿಜಯ್‌ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಎದುರಿಗೆ , ಕನ್ನಡದ ನಟ ದುನಿಯಾ ವಿಜಯ್ ಅಬ್ಬರಿಸಲಿದ್ದಾರೆ. ಈ ಸುದ್ದಿ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಾ ಇದೆ. ಆದರೆ ಚಿತ್ರ ತಂಡದಿಂದ ಅಧಿಕೃತ ಮಾಹಿತಿ ನೀಡುತ್ತಿಲ್ಲ. ದುನಿಯಾ ವಿಜಯ್​ ಅವರ ಲುಕ್​ ಕಂಡು ಅವರ ಫ್ಯಾನ್ಸ್ ಡಿಸೈಡ್​ ಮಾಡಿಕೊಂಡಿದ್ದಾರೆ.
Published by:Vasudeva M
First published: