HOME » NEWS » Entertainment » DUNIYA VIJAY AND SAMYUKTHA HEGDE SUPPORTS ZOMATO DELIVERY BOY KAMARAJ AE

Vijay-Samyuktha Hegde: ಜೊಮ್ಯಾಟೊ ಡೆಲಿವರಿ ಬಾಯ್​ ಕಾಮರಾಜ್​ಗೆ ಬೆಂಬಲವಾಗಿ ನಿಂತ ದುನಿಯಾ ವಿಜಯ್​-ಸಂಯುಕ್ತಾ ಹೆಗಡೆ

ಪರಿಣೀತಿ ಚೋಪ್ರಾ ಹಾಗೂ ಪ್ರಣೀತಾ ಸುಭಾಷ್​ ಕಾಮರಾಜ್​ ಪರ ಬೆಂಬಲ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಮಾಡಿ ಆರೋಪಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. ಇವರು ಟ್ವೀಟ್​ ಮಾಡಿರುವ ಬೆನ್ನಲ್ಲೇ ನಟ ದುನಿಯಾ ವಿಜಯ್​ ಹಾಗೂ ಸಂಯುಕ್ತಾ ಹೆಗಡೆ ಡೆಲಿವರಿ ಬಾಯ್​ ಪರ ನಿಂತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

Anitha E | news18-kannada
Updated:March 16, 2021, 12:33 PM IST
Vijay-Samyuktha Hegde: ಜೊಮ್ಯಾಟೊ ಡೆಲಿವರಿ ಬಾಯ್​ ಕಾಮರಾಜ್​ಗೆ ಬೆಂಬಲವಾಗಿ ನಿಂತ ದುನಿಯಾ ವಿಜಯ್​-ಸಂಯುಕ್ತಾ ಹೆಗಡೆ
ಕಾಮರಾಜ್​ ಪರ ನಿಂತ ದುನಿಯಾ ವಿಜಯ್​ ಹಾಗೂ ಸಂಯುಕ್ತಾ ಹೆಗಡೆ
  • Share this:
ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಜೊಮ್ಯಾಟೊ ಸಂಸ್ಥೆಯಲ್ಲಿ ಡಿಲೆವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ ಕಾಮರಾಜ್​ ಪರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ನೊಂದಿರುವ ವ್ಯಕ್ತಿ ಕಾಮರಾಜ್​ ಅವರಿಗೆ ನ್ಯಾಯ ಸಿಗಬೇಕೆಂದು ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದಲ್ಲಿ 'ಜಸ್ಟಿಸ್​ ಫಾರ್​ ಕಾಮರಾಜ್​' ಎಂಬ ಅಭಿಯಾನ ಆರಂಭಿಸಿದ್ದಾರೆ. ನಿನ್ನೆ ಸಂಜೆಯಷ್ಟೆ ಕಾಮರಾಜ್​ ಹಿತೇಶ್​ ಚಂದ್ರಾಣಿ ಅವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಕನ್ನಡಪರ ಹೋರಾಟಗಾರರು ಕಾಮರಾಜ್​ ಅವರಿಗೆ ಬೆಂಬಲ ನೀಡಿದ್ದು, ಅವರೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಕಾಮರಾಜ್​ ದೂರು ನೀಡಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಮರಾಜ್​ ಅವರ ಪರ ದನಿ ಎತ್ತುತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆಯಷ್ಟೆ ಪ್ರಣೀತಾ ಸುಭಾಷ್​ ಹಾಗೂ ಪರಿಣೀತಿ ಚೋಪ್ರಾ ಕಾಮರಾಜ್​ ಪರ ಟ್ವೀಟ್​ ಮಾಡುವ ಮೂಲಕ ಬೆಂಬಲ ಸೂಚಿಸಿದ್ದರು. ಈಗ ಮತ್ತಷ್ಟು ಮಂದಿ ಸೆಲೆಬ್ರಿಟಿಗಳು ಡೆಲಿವರಿ ಬಾಯ್​ ಪರ ದನಿ ಎತ್ತಿದ್ದಾರೆ. 

ಪರಿಣೀತಿ ಚೋಪ್ರಾ ಹಾಗೂ ಪ್ರಣೀತಾ ಸುಭಾಷ್​ ಕಾಮರಾಜ್​ ಪರ ಬೆಂಬಲ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಮಾಡಿ ಆರೋಪಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. ಇವರು ಟ್ವೀಟ್​ ಮಾಡಿರುವ ಬೆನ್ನಲ್ಲೇ ನಟ ದುನಿಯಾ ವಿಜಯ್​ ಹಾಗೂ ಸಂಯುಕ್ತಾ ಹೆಗಡೆ ಡೆಲಿವರಿ ಬಾಯ್​ ಪರ ನಿಂತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

Duniya Vijay, Samyuktha Hegde, sandalwood, Zomato, Zomato delivery boy Kamaraj, ದುನಿಯಾ ವಿಜಯ್​, ಸಂಯುಕ್ತಾ ಹೆಗಡೆ, ಜೊಮ್ಯಾಟೊ ಡೆಲಿವರಿ ಬಾಯ್​ ಕಾಮರಾಜ್​, ಸ್ಯಾಂಡಲ್​ವುಡ್​, Pranitha Subhash, Parineeti Chopra, Bollywood, Sandalwood, Zomato Delivery Boy, Kamaraj, zomato delivery boy case, Parineeti Chopra, Parineeti Chopra supports to Zomato Delivery boy Kamaraj, Pranitha supports to Zomato Delivery boy Kamaraj, ಜೊಮ್ಯಾಟೊ ಡೆಲಿವರಿ ಬಾಯ್, ಕಾಮರಾಜ್ ಪ್ರಕರಣ, ಜೊಮ್ಯಾಟೊ ಡೆಲಿವರಿ ಬಾಯ್ ಪರ ನಿಂತ ನೆಟ್ಟಿಗರು, ಜೊಮ್ಯಾಟೊ ಬಾಯ್ ಪರ ನಿಂತ ನಟಿ ಪರಿಣೀತಿ, ಕಾಮರಾಜ್ ಪರ ನಿಂತ ನಟಿ ಪ್ರಣೀತಾ, crime, crime news, banglore crime news, zomato, Zomato food delivery, ಜೊಮೋಟೋ, ಜೊಮೋಟೋ ಫುಡ್​ ಡೆಲಿವರಿ, ಅಪರಾಧ ಸುದ್ದಿ, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಇಂದಿನ ಅಪರಾಧ ಸುದ್ದಿ, Duniya Vijay and Samyuktha Hegde supports Zomato delivery boy Kamaraj ae
ಸಂಯುಕ್ತಾ ಹೆಗಡೆ ಇನ್​ಸ್ಟಾ ಸ್ಟೋರಿ


ಜೊಮ್ಯಾಟೊ ಕಂಪನಿ ಅವರು ಕಾಮರಾಜ್​ ಅವರನ್ನು ಕೆಲಸಕ್ಕೆ ಮತ್ತೆ ತೆಗೆದುಕೊಳ್ಳಬೇಕು. ಈ ಘಟನೆಯಿಂದ ಆಗಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಸಂಯುಕ್ತಾ ಹೆಗಡೆ ಆಗ್ರಹಿಸಿದ್ದಾರೆ.ದುನಿಯಾ ವಿಜಯ್​ ತಮ್ಮ ಫೇಸ್​ ಬುಕ್​ ಪುಟದಲ್ಲಿ ಕಾಮರಾಜ್​ ಅವರಿಗೆ ನ್ಯಾಯ ಸಿಗಬೇಕು. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ, ಆರೋಪಿಗೆ ಶಿಕ್ಷೆ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.

ಸುಮಾರು 4 ದಿನಗಳಿಂದ ಸುದ್ದಿಯಲ್ಲಿರುವ Zomato ಹುಡುಗ ಕಾಮರಾಜ್ ಪ್ರಕರಣವನ್ನು ತಿಳಿದುಕೊಂಡೆ.ಕರ್ನಾಟಕ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ...

Posted by Duniya Vijay on Monday, 15 March 2021

ಘಟನೆಯ ವಿವರ

ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ ಆಗಿರುವ ಹಿತೇಶ್ ಚಂದ್ರಾಣಿ ಎಂಬುವರು ಊಟಕ್ಕಾಗಿ ಜೊಮ್ಯಾಟೊ ಆ್ಯಪ್​ ಮೂಲಕ ಆರ್ಡರ್ ಮಾಡಿದ್ದಾರೆ.‌ ಆರ್ಡರ್ ನೀಡಿ ಅರ್ಧ ಗಂಟೆಯಾದರೂ ಪುಡ್ ಡೆಲಿವರಿಯಾಗದಿದ್ದರಿಂದ ಅಸಮಾಧಾನಗೊಂಡು ಮಹಿಳೆ ಆರ್ಡರ್ ರದ್ದು ಮಾಡಿದ್ದರು. ತಡವಾಗಿ ಡೆಲಿವರಿ ಬಾಯ್ ಕಾಮರಾಜ್ ಊಟ ತೆಗೆದುಕೊಂಡು ಮನೆ ಬಳಿ ಬಂದಿದ್ದಾರೆ. ಆರ್ಡರ್ ಕ್ಯಾನ್ಸಲ್ ಮಾಡಿದ್ದು ವಾಪಸ್ ತೆಗದುಕೊಂಡು ಹೋಗಿ ಎಂದು ಮಹಿಳೆ ತಿಳಿಸಿದ್ದಾರೆ. ಇದರಿಂದ ಕೋಪದಿಂದಲೇ ಊಟದ‌ ಪಾರ್ಸೆಲ್ ತೆಗೆದುಕೊಳ್ಳುವಂತೆ ಡೆಲಿವರಿ ಬಾಯ್ ಹೇಳಿದ್ದಾರೆ. ಆದರೆ ಮಹಿಳೆ ಮಾತ್ರ ಸ್ವೀಕರಿಸಿರಲಿಲ್ಲ. ಇದರಿಂದ ರೊಚ್ಚಿಗೆದ್ದು ಮನೆಗೆ ನುಗ್ಗಿ ಟೇಬಲ್ ಮೇಲೆ ಪಾರ್ಸೆಲ್‌ ಇಟ್ಟು 'ನಾನು‌ ನಿಮ್ಮ ಮನೆಯ ಗುಲಾಮನಲ್ಲ‌ ಎಂದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಕಾಮರಾಜ್ ಆಕೆಯ ಮುಖಕ್ಕೆ ಕೈಯಿಂದ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: Zomato-Kamaraj: ಜೊಮ್ಯಾಟೊ ಡೆಲಿವರಿ ಬಾಯ್​ ಕಾಮರಾಜ್​ ಪರ ದನಿ ಎತ್ತಿದ್ದ ಪ್ರಣೀತಾ ಸುಭಾಷ್​-ಪರಿಣೀತಿ ಚೋಪ್ರಾ..!

ಕಾಮರಾಜ್​ ಅವರ ಪ್ರಕಾರ ಇಂದ್ರಾಣಿ ಸಹ ಅವಾಚ್ಯ ಶಬ್ದಗಳಿಂದ ಬೈದಿದ್ದು, ಚಪ್ಪಲಿಯಿಂದ ಹೊಡೆದಿದ್ದಾರೆ. ನಾನು ಉಚಿತವಾಗಿ ಅಂದರೆ ಹಣ ಪಡೆಯದೆ ಊಟ ನೀಡಲಾಗುವುದಿಲ್ಲ ಎಂದಿದ್ದೇ ತಪ್ಪಾಯಿತು. ಘಟನೆ ನಡೆದ ಕೂಡಲೆ ಸಂಸ್ಥೆಯವರಿಗೆ ಎಲ್ಲ ಮಾಹಿತಿ ನೀಡಿದೆ ಎಂದಿದ್ದಾರೆ.

Published by: Anitha E
First published: March 16, 2021, 12:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories